ಕೊರೊನಾದ ಮೂರನೇ ಅಲೆಯು ಅಕ್ಟೋಬರ್ ಮತ್ತು ನವೆಂಬರ್ ನಲ್ಲಿ ಗರಿಷ್ಠ ಮಟ್ಟಕ್ಕೆ ತಲುಪಬಹುದು ! – ತಜ್ಞರ ಅಂದಾಜು

ಭಾರತೀಯರು ಕೊರೊನಾದ ನಿಯಮಗಳನ್ನು ಪಾಲಿಸದಿದ್ದರೆ ಕೊರೊನಾದ ೩ ನೇ ಅಲೆಯು ಅಕ್ಟೋಬರ್ ಮತ್ತು ನವೆಂಬರ್ ತಿಂಗಳಲ್ಲಿ ಗರಿಷ್ಠ ಮಟ್ಟವನ್ನು ತಲುಪಬಹುದು; ಆದರೆ ಎರಡನೇ ಅಲೆಯಲ್ಲಿ ಪ್ರತಿದಿನ ಎಷ್ಟು ರೋಗಿಗಳ ಸಂಖ್ಯೆ ನಮೂದಾಗಿತ್ತೋ ಅದರ ತುಲನೆಯಲ್ಲಿ ಮೂರನೇ ಅಲೆಯಲ್ಲಿ ಕೊರೊನಾ ರೋಗಿಗಳ ಸಂಖ್ಯೆ ಕಡಿಮೆಯಾಗುವ ಸಾಧ್ಯತೆಯಿದೆ ಎಂದು ಕೊರೊನಾದ ಕುರಿತು ಸರಕಾರಿ ಗುಂಪಿನ ವಿಜ್ಞಾನಿಯು ಹೇಳಿದ್ದಾರೆ.

‘ಗಂಗಾಜಲ’ದಿಂದ ಕೊರೊನಾ ಸೋಂಕಿಗೆ ಉಪಚರಿಸಲು ಮಾನ್ಯತೆ ನೀಡಿರಿ!- ಅಲಹಾಬಾದ ಉಚ್ಚ ನ್ಯಾಯಾಲಯದಲ್ಲಿ ಮನವಿ.

ಬನಾರಸ್ ಹಿಂದೂ ವಿಶ್ವವಿದ್ಯಾಲಯದ ನ್ಯೂರೋಲಜಿ ವಿಭಾಗದ ಪ್ರಾಧ್ಯಾಪಕ ವಿಜಯ ನಾಥ ಮಿಶ್ರಾ ಇವರು ಮಾತನಾಡುತ್ತಾ, ವರ್ಷ ೧೮೯೬ ರಲ್ಲಿ ಕಾಲರಾ ಮಹಾಮಾರಿಯ ಸಮಯದಲ್ಲಿ ಡಾ. ಹ್ಯಾಕಿಂಗ ಇವರು ಒಂದು ಸಂಶೋಧನೆಯನ್ನು ನಡೆಸಿದ್ದರು. ಅದರಲ್ಲಿ ಗಂಗಾನದಿಯ ನೀರನ್ನು ಕುಡಿಯುವ ಜನರಿಗೆ ಕಾಲರಾ ಬರುವುದಿಲ್ಲ ಎಂದು ಕಂಡು ಬಂದಿತ್ತು.

ಜಂಕ್ ಫುಡ್‍ನಿಂದ ಆರೋಗ್ಯದ ಮೇಲಾಗುವ ಪರಿಣಾಮದ ಬಗ್ಗೆ ಟ್ವಿಟರ್ ನಲ್ಲಿ ಆಗಿದ್ದ #NoJunkFood_StayHealthy ಟ್ರೆಂಡ್ ಮೂರನೇ ಸ್ಥಾನದಲ್ಲಿ !

ಇತ್ತೀಚೆಗೆ ‘ಫೈನಾನ್ಶಿಯಲ್ ಟೈಮ್ಸ್’ ಪ್ರಕಟಿಸಲಾದ ವಾರ್ತೆಯಲ್ಲಿ ಜಗತ್ತಿನಾದ್ಯಂತ ಆಹಾರಗಳನ್ನು ತಯಾರಿಸುವ ಸಂಸ್ಥೆ `ನೆಸ್ಲೆ’ಯು, ‘ತನ್ನ ಶೇ. ೬೦ ರಷ್ಟು ಆಹಾರವು ಜಂಕ ಫುಡ್ ಈ ಶ್ರೇಣಿಯಲ್ಲಿ ಬರುತ್ತದೆ ಮತ್ತು ಅದು ಆರೋಗ್ಯಕ್ಕೆ ಹಾನಿಕರ’ ಎಂದು ಹೇಳಿದೆ. ಇಂದು ಜಂಕ ಫುಡ್ ಜನಪ್ರಿಯ ಆಹಾರವಾಗಿದೆ. ಅನೇಕ ವಿದೇಶಿ ಸಂಸ್ಥೆಗಳು ಜಂಕ್ ಫುಡ್‍ಅನ್ನು ಮಾರಾಟ ಮಾಡುತ್ತಿದ್ದು ಅದನ್ನು ತಿಂದು ಭಾರತಿಯರ ಆರೋಗ್ಯದ ಮೇಲೆ ಪರಿಣಾಮವಾಗುತ್ತಿದೆ.

‘ವಿದೇಶಿ ಜಂಕ ಫುಡ್ : ಪೋಷಣೆಯೋ ಅಥವಾ ಆರ್ಥಿಕ ಶೋಷಣೆಯೋ ?’ ಈ ಕುರಿತು ವಿಶೇಷ ಚರ್ಚಾಕೂಟ !

‘ಜಂಕ ಫುಡ್’ಗೆ ಆಯುರ್ವೇದದಲ್ಲಿ ‘ವಿರುದ್ಧಅನ್ನ’ ಎಂದು ಹೇಳಲಾಗಿದೆ. ಪಾನಕ, ಎಳನೀರು ಇವುಗಳಂತಹ ಭಾರತೀಯ ಪೇಯಗಳನ್ನು ಕುಡಿಯುವ ಬದಲು ಆರೋಗ್ಯಕ್ಕೆ ಹಾನಿಕರವಾಗಿರುವ ಕೋಲ್ಡಡ್ರಿಂಕ್ಸ್‌ಗೆ ನಾವು ಬಲಿಯಾಗುತ್ತಿದ್ದೇವೆ. ಮ್ಯಾಗಿ, ಬಿಸ್ಕತ್ತು ಸೇರಿದಂತೆ ಹಲವಾರು ಸೀಲ್ಡ್ ಪ್ಯಾಕೇಟ್‌ನಲ್ಲಿ ಬರುವ ಆಹಾರಗಳ ಹೊದಿಕೆಯ ಮೇಲೆ ಪ್ರೋಟೀನ್, ಕ್ಯಾಲೋರಿಗಳು ಮುಂತಾದ ಅನೇಕ ಒಳ್ಳೆಯ ವಿಷಯಗಳಿವೆ ಎಂದು ವಿದೇಶಿ ಮತ್ತು ದೇಶೀಯ ಸಂಸ್ಥೆಗಳು ಹೇಳಿಕೊಳ್ಳುತ್ತವೆ.

ಈಶ್ವರನು ಮಾನವನ ಅಹಂಕಾರಕ್ಕೆ ಪೆಟ್ಟು ಕೊಟ್ಟ ಅನುಭವವನ್ನು ನೀಡುವ ಕೊರೊನದ ಎರಡೆನೆಯ ಅಲೆ !

ಈಶ್ವರನು ಮನುಷ್ಯನಲ್ಲಿನ ಅಹಂಕಾರವನ್ನು ನಾಶ ಮಾಡಲು ನಿಸರ್ಗದ ಬೆತ್ತವನ್ನು ಹೇಗೆ ಉಪಯೋಗಿಸುತ್ತಾನೆ ಎಂದು ಗಮನದಲ್ಲಿಟ್ಟು ಮತ್ತು ಮುಂದೆ ಬರುವ ದೊಡ್ಡ ಆಪತ್ಕಾಲದ ಜಾಡನ್ನು ಗುರುತಿಸಿ ಮನುಷ್ಯನು ಇನ್ನಾದರೂ ಜಾಣನಾಗಿ ಸ್ವರಕ್ಷಣೆಗಾಗಿ ಧರ್ಮಾಚರಣೆ ಮಾಡಬೇಕು ಮತ್ತು ಸಾಧನೆಯನ್ನು ಮಾಡಬೇಕು.

ಲಸಿಕೆಯ ಎರಡೂ ಡೋಸ್ ಗಳನ್ನು ತೆಗೆದುಕೊಂಡ ಬಳಿಕ ಕೊರೋನಾ ಬಂದರೂ ಆಸ್ಪತ್ರೆಗೆ ದಾಖಲಾಗುವ ಸಾಧ್ಯತೆ ಅತೀ ಕಡಿಮೆ !- ಭಾರತೀಯ ವೈದ್ಯಕೀಯ ಸಂಶೋಧನಾ ಪರಿಷತ್ತು.

ದೇಶದಲ್ಲಿ ಕೊರೋನಾ ಲಸಿಕೆಯ ಎರಡೂ ಡೋಸ್ಗಳನ್ನು ತೆಗೆದುಕೊಂಡಿರುವ ಶೇ. ೭೬ ರಷ್ಟು ನಾಗರಿಕರಲ್ಲಿ ಕೊರೋನಾ ಸೋಂಕು ತಗುಲಿರುವ ಪ್ರಕರಣಗಳು ಕಂಡು ಬಂದಿವೆ; ಆದರೆ ಇಂತಹವರು ಆಸ್ಪತ್ರೆಗೆ ದಾಖಲಾಗಬೇಕಾದ ಸಾಧ್ಯತೆ ಬಹಳ ಕಡಿಮೆ ಪ್ರಮಾಣದಲ್ಲಿದೆ.

ಪ್ರಸಿದ್ದಿ ಮಾಧ್ಯಮಗಳು ಕೊರೋನಾದ ಬಗ್ಗೆ ತಪ್ಪಾದ ಮಾಹಿತಿಯನ್ನು ಹಬ್ಬಿಸುತ್ತಿರುವುದರಿಂದ ಜನರಲ್ಲಿ ಆತಂಕದ ವಾತಾವರಣವಿದೆ !

ಒಂದು ವೇಳೆ ಪ್ರಸಿದ್ದಿ ಮಾಧ್ಯಮಗಳು ತಪ್ಪಾದ ಮಾಹಿತಿಯನ್ನು ಹಬ್ಬಿಸುತ್ತಿವೆ ಎಂದಾದರೆ, ತೆಲಂಗಾಣಾ ಸರಕಾರವು ಈ ಬಗ್ಗೆ ಏಕೆ ಕ್ರಮ ಕೈಗೊಳ್ಳುತ್ತಿಲ್ಲ : ಅಥವಾ ರಾವ್ ಅವರು ನಿರಾಧಾರ ಆರೋಪವನ್ನು ಮಾಡುತ್ತಿದ್ದಾರೆಯೇ ?

ಕೊರೊನಾ ಬಿಕ್ಕಟ್ಟಿನಿಂದಾಗಿ ಈ ವರ್ಷ ಅಮರನಾಥ ಯಾತ್ರೆ ರದ್ದು !

ಕೊರೊನಾದ ಎರಡನೇ ಅಲೆಯ ಪರಿಣಾಮದಿಂದ ಈ ವರ್ಷವೂ ಕಾಶ್ಮೀರದ ಅಮರನಾಥ ಯಾತ್ರೆ ರದ್ದುಗೊಳಿಸಲು ನಿರ್ಧಾರವನ್ನು ಉಪರಾಜ್ಯಪಾಲ ಮನೋಜ ಸಿನ್ಹಾ ಇವರು ತೆಗೆದುಕೊಂಡಿದ್ದಾರೆ. ‘ಜನರ ಆರೋಗ್ಯಕ್ಕೆ ಆದ್ಯತೆ ನೀಡಿರುವುದರಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ’, ಎಂದು ಸಿನ್ಹಾ ರವರು ಹೇಳಿದರು

ಕೊರೋನಾ ವಿರುದ್ಧದ ಹೋರಾಟದಲ್ಲಿ ಯೋಗವೊಂದೇ ಆಶಾಕಿರಣ ! – ಪ್ರಧಾನಿ ನರೇಂದ್ರ ಮೋದಿ

ಕೊರೋನಾದ ಈ ಕಷ್ಟದ ಸಮಯದಲ್ಲಿ ಜನರಲ್ಲಿ ಯೋಗದ ಬಗ್ಗೆ ಆಸಕ್ತಿ ಹುಟ್ಟಿದೆ. ಆದ್ದರಿಂದ ಜನರಲ್ಲಿ ಕೊರೊನಾದ ವಿರುದ್ಧ ಹೋರಾಡುವ ವಿಶ್ವಾಸವನ್ನು ಹೆಚ್ಚಿಸಿದೆ. ಯೋಗದ ಬಗ್ಗೆ ಪ್ರಪಂಚದಾದ್ಯಂತ ಸಂಶೋಧನೆ ನಡೆಯುತ್ತಿದೆ. ರೋಗನಿರೋಧಕ ವ್ಯವಸ್ಥೆಯ ಮೇಲೆ ಯೋಗದಿಂದಾಗುವ ಸಕಾರಾತ್ಮಕ ಪರಿಣಾಮಗಳ ಬಗ್ಗೆಯೂ ಸಂಶೋಧನೆ ನಡೆಸಲಾಗುತ್ತಿದೆ ಎಂದು ಹೇಳಿದರು.

ಆಯುರ್ವೇದ ಔಷಧಿಗಳಿಂದ ೭ ದಿನಗಳಲ್ಲಿ ಗುಣಮುಖರಾಗುತ್ತಿರುವ ಕೊರೋನಾ ರೋಗಿಗಳು ! – ಸಂಶೋಧಕರ ಸಂಶೋಧನೆ

ಈ ತಂಡ ನಡೆಸಿದ ತನಿಖೆಯಲ್ಲಿ, ‘ಆಯುಷ್ – 64’ ಎಂಬ ಔಷಧವು ಕೊರೋನಾದ ಪ್ರಾಥಮಿಕ ಲಕ್ಷಣಗಳನ್ನು ಹೊಂದಿರುವವರ ಮೇಲೆ ಉತ್ತಮ ಪರಿಣಾಮ ಬೀರುತ್ತದೆ ಎಂದು ತಿಳಿದುಬಂದಿದೆ. ಈ ಔಷಧಿ ಪ್ರಾಥಮಿಕ ರೋಗಲಕ್ಷಣಗಳನ್ನು ಹೊಂದಿರುವ ರೋಗಿಗಳನ್ನು ೭ ದಿನಗಳಲ್ಲಿ ಗುಣಪಡಿಸಿತು. ಈ ನಿಟ್ಟಿನಲ್ಲಿ ಈವರೆಗೆ ೧೨೨ ರೋಗಿಗಳನ್ನು ಅಧ್ಯಯನ ಮಾಡಲಾಗಿದೆ.