ಮನೆಯಲ್ಲಿ ಮಹತ್ವದ ಔಷಧಿ ವನಸ್ಪತಿಗಳ ತೋಟಗಾರಿಕೆಯನ್ನು ಹೇಗೆ ಮಾಡಬೇಕು ?

ಅಸಂಖ್ಯಾತ ಔಷಧೀಯ ವನಸ್ಪತಿಗಳಿವೆ. ಇಂತಹ ಸಮಯದಲ್ಲಿ ಮನೆಯಲ್ಲಿ ಯಾವ ವನಸ್ಪತಿಗಳನ್ನು ಬೆಳೆಸಬೇಕು ? ಎನ್ನುವ ಪ್ರಶ್ನೆ ಮೂಡಬಹುದು. ಪ್ರಸ್ತುತ ಲೇಖನ ಮಾಲೆಯಲ್ಲಿ ಕೆಲವು ಮಹತ್ವದ ಔಷಧಿ ವನಸ್ಪತಿಗಳನ್ನು ಮನೆಗಳಲ್ಲಿ ಹೇಗೆ ಬೆಳೆಸಬೇಕು ? ಎನ್ನುವ ಮಾಹಿತಿಯನ್ನು ನೀಡಲಾಗಿದೆ. ೨೨/೪೨ ನೇ ಸಂಚಿಕೆಯಲ್ಲಿ ನಾವು ತುಳಸಿ, ಔಡಲ ಇವುಗಳ ಕುರಿತು ಮಾಹಿತಿಯನ್ನು ನೋಡಿದೆವು. ಇಂದು ಈ ಲೇಖನದ ಮುಂದಿನ ಭಾಗವನ್ನು ನೀಡುತ್ತಿದ್ದೇವೆ.

ಈ ಲೇಖನದ ಹಿಂದಿನ ಭಾಗವನ್ನು ಓದಲು ಇಲ್ಲಿ ಕ್ಲಿಕ್ ಮಾಡಿ:  https://sanatanprabhat.org/kannada/45196.html

ಸಂಕಲನಕಾರರು : ಶ್ರೀ ಮಾಧವ ರಾಮಚಂದ್ರ ಪರಾಡಕರ ಮತ್ತು ವೈದ್ಯ ಮೇಘರಾಜ ಮಾಧವ ಪರಾಡಕರ, ಸನಾತನ ಆಶ್ರಮ, ರಾಮನಾಥಿ, ಗೋವಾ.

ಮಾರ್ಗದರ್ಶಕರು : ಡಾ. ದಿಗಂಬರ ನಭು ಮೋಕಾಟ, ಸಹಾಯಕ ಪ್ರಾಧ್ಯಾಪಕರು, ವನಸ್ಪತಿಶಾಸ್ತ್ರ ವಿಭಾಗ, ಸಾವಿತ್ರಿಬಾಯಿ ಫುಲೆ ಪುಣೆ ವಿದ್ಯಾಪೀಠ, ಪುಣೆ ಮತ್ತು ಪ್ರಮುಖ ನಿರ್ದೇಶಕರು, ಕ್ಷೇತ್ರೀಯ ಸಹಸುವಿಧಾ ಕೇಂದ್ರ, ಪಶ್ಚಿಮ ವಿಭಾಗ, ರಾಷ್ಟ್ರೀಯ ಔಷಧಿ ವನಸ್ಪತಿ ಮಂಡಳ, ಆಯುಷ ಮಂತ್ರಾಲಯ, ಭಾರತ ಸರಕಾರ.

೩. ಅಮೃತಬಳ್ಳಿ (ಗುಳವೇಲ)

೩ ಅ. ಮಹತ್ವ : ಇದರ ಗುಣಗಳಿಗೆ ಅಂತ್ಯವೇ ಇಲ್ಲ. ಕೊರೊನಾದ ಸಮಯದಲ್ಲಿ ಅಮೃತಬಳ್ಳಿಯ ಮಹತ್ವವು ಎಲ್ಲರಿಗೂ ತಿಳಿಯಿತು. ಜ್ವರದಿಂದ ದಮ್ಮಿನವರೆಗೆ (ಅಸ್ತಮಾ) ಹೆಚ್ಚಿನ ರೋಗಗಳಲ್ಲಿ ಇದರಿಂದ ಲಾಭವಾಗುತ್ತದೆ. ಅಮೃತಬಳ್ಳಿಯು ಉತ್ತಮ ಶಕ್ತಿವರ್ಧಕವಾಗಿದೆ. ಹಾಲು ಕೊಡುವ ಪ್ರಾಣಿಗಳಿಗೆ ಅಮೃತ ಬಳ್ಳಿಯನ್ನು ತಿನ್ನಿಸಿದರೆ ಅವುಗಳ ಹಾಲು ಹೆಚ್ಚಾಗುತ್ತದೆ. ಇದನ್ನು ಹೆಚ್ಚು ಪ್ರಮಾಣದಲ್ಲಿ ಬೆಳೆಸಬೇಕು.

ಅಮೃತಬಳ್ಳಿ ಕತ್ತರಿಸಿದಾಗ ಕಾಣುವ ಚಕ್ರಾಕಾರ ಭಾಗ

೩ ಆ. ಪರಿಚಯ : ರಸ್ತೆಯ ಮೇಲಿನಿಂದ ಹೋಗು-ಬರುವಾಗ ಮಳೆಗಾಲದ ದಿನಗಳಲ್ಲಿ ಕೆಲವು ಗಿಡಗಳ ಮೇಲೆ ಹಳದಿಯಂತಹ ಹಸಿರು ಬಣ್ಣದ ೨ – ೩ ಮಿಲಿಮೀಟರ್ ವ್ಯಾಸದ  ತಂತಿಗಳು ಜೋತಾಡುವುದು ಕಾಣಿಸುತ್ತದೆ. ಈ ತಂತಿಗಳು ಅಮೃತಬಳ್ಳಿಯದ್ದಾಗಿರುತ್ತವೆ. ಇವುಗಳ ಹೊರಬದಿಯ ಸಿಪ್ಪೆ ಬೂದು ಬಣ್ಣದ್ದಾಗಿರುತ್ತದೆ ಮತ್ತು ಸಿಪ್ಪೆಯ ಮೇಲೆ ಗುಳ್ಳೆಗಳಂತೆ ಉಬ್ಬುಗಳಿರುತ್ತವೆ. ಇವುಗಳಿಗೆ ಆಂಗ್ಲ ಭಾಷೆಯಲ್ಲಿ ‘ಲೆಂಟಿಸೆಲ್ಸ್ (lenticels) ಎನ್ನುತ್ತಾರೆ. ಇವುಗಳ ಕಾಂಡವನ್ನು ಕುಟ್ಟಿದಾಗ ಮೇಲಿನ ಬೂದು ಬಣ್ಣದ ಸಿಪ್ಪೆ ಬೇರೆಯಾಗುತ್ತದೆ ಮತ್ತು ಒಳಗಿನ ಹಸಿರು ಬಣ್ಣದ ಸಿಪ್ಪೆ ಕಾಣಿಸತೊಡಗುತ್ತದೆ. ಅದರ ತಿರುಳು ಹಳದಿ ಬಣ್ಣದ್ದಾಗಿರುತ್ತದೆ. ಅಮೃತಬಳ್ಳಿಯ ಕಾಂಡವನ್ನು ಹರಿತವಾದ ಶಸ್ತ್ರದಿಂದ ‘ಅಡ್ಡ ತುಂಡು (ಕ್ರಾಸ್ ಸೆಕ್ಶನ್) ಮಾಡಿದರೆ ಒಳಗೆ ಚಕ್ರಾಕಾರ ಭಾಗವು ಕಾಣಿಸುತ್ತದೆ. (ಛಾಯಾಚಿತ್ರ ನೋಡಬಹುದು) ಹಸಿ ಅಮೃತಬಳ್ಳಿಯನ್ನು ಕೊಯ್ದರೆ (ಕತ್ತರಿಸಿದರೆ) ಅದರಿಂದ ಪಾರದರ್ಶಕ ನೀರಿನಂತೆ ದ್ರವವು ಸೋರುತ್ತದೆ. ಈ ದ್ರವವು ಸ್ವಲ್ಪ ಕಹಿ ಇರುತ್ತದೆ.

೩ ಇ. ಅಮೃತಬಳ್ಳಿಯನ್ನು ಬೆಳೆಸುವುದು : ಅಮೃತ ಬಳ್ಳಿಯ ಕಾಂಡವನ್ನು ಕೊಯ್ದು ಭೂಮಿಯ ಮೇಲಿಟ್ಟರೆ ಮತ್ತು ಅದಕ್ಕೆ ಪೋಷಕ ವಾತಾವರಣ ದೊರಕಿದರೆ, ಅದರಿಂದ ಬಳ್ಳಿಯು ಹುಟ್ಟುತ್ತದೆ. ಕೊಯ್ದು ಎಸೆದ ಅಮೃತಬಳ್ಳಿಯಿಂದಲೂ ಪುನಃ ಬಳ್ಳಿಯು ತಯಾರಾಗುತ್ತದೆ, ಆದುದರಿಂದ ಅದಕ್ಕೆ ‘ಛಿನ್ನರೂಹಾ (ಛಿನ್ನ – ಕೊಯ್ದ ನಂತರ, ರೂಹಾ -ಪುನಃ ಹುಟ್ಟುವ) ಎಂಬ ಸಂಸ್ಕೃತ ಹೆಸರು ಸಹ ಇದೆ. ಅಮೃತಬಳ್ಳಿಯ ಕಾಂಡದ ಗೇಣುದ್ದ ತುಂಡುಗಳನ್ನು ಮಣ್ಣಿನಲ್ಲಿ ನೆಟ್ಟಗೆ ಹೂಳಬೇಕು. ಕಾಂಡವನ್ನು ಕೊಯ್ಯುವಾಗ ಬೇರುಗಳ ಕಡೆಗಿನ ಬದಿಯನ್ನು ಓರೆಯಾಗಿ ಕೊಯ್ಯಬೇಕು.

ಈ ಓರೆಯಾಗಿ ಕತ್ತರಿಸಿದ ಭಾಗವನ್ನು ಪೇಟೆಯಲ್ಲಿ ಸಿಗುವ ‘ರೂಟೆಕ್ಸ್ ಪುಡಿಯಲ್ಲಿ ಮುಳುಗಿಸಿ ಮಣ್ಣಿನಲ್ಲಿ ನೆಟ್ಟರೆ ಕಾಂಡಕ್ಕೆ ಬೇಗನೆ ಬೇರುಗಳು ಒಡೆಯುತ್ತವೆ. (ಯಾವುದೇ ವನಸ್ಪತಿಯ ರೆಂಬೆಗಳಿಂದ (ಕಾಂಡಗಳಿಂದ) ಗಿಡಗಳನ್ನು ಬೆಳೆಸುವುದಿದ್ದರೆ ಈ ರೀತಿ ರೂಟೆಕ್ಸ್ ಪೌಡರನ್ನು ಉಪಯೋಗಿಸಿದರೆ ರೆಂಬೆಗಳಿಗೆ ಬೇಗನೆ ಬೇರುಗಳು ಒಡೆಯುತ್ತವೆ ಮತ್ತು ಅವು ಚೆನ್ನಾಗಿ ಬೆಳೆಯುವ ಸಾಧ್ಯತೆಯೂ ಹೆಚ್ಚಾಗುತ್ತದೆ.)  ಬೇಲಿಗಳ ಮೇಲೆ, ಮಾಳಿಗೆಯ ಸರಳುಗಳ ಮೇಲೆ, ಮಾವು, ಕಹಿಬೇವು ಇವುಗಳಂತಹ ವೃಕ್ಷಗಳ ಮೇಲೆ ಈ ಬಳ್ಳಿಯನ್ನು ಬಿಡಬೇಕು. ಈ ಬಳ್ಳಿಯನ್ನು ವಿಷಕಾರಿ ವೃಕ್ಷಗಳ ಮೇಲೆ (ಉದಾ ಕಾಜರಾ, ಹೆಮ್ಮೂಷ್ಟಿ (ಒಂದು ಬಗೆಯ ವಿಷಕಾರಿ ಗಿಡಗಳು) ಬಿಡಬಾರದು ; ಏಕೆಂದರೆ ಹಾಗೆ ಮಾಡಿದರೆ ಆ ವೃಕ್ಷಗಳ ವಿಷಕಾರಿ ಗುಣವು ಅಮೃತಬಳ್ಳಿಯಲ್ಲಿಯೂ ಬರುತ್ತದೆ. (ಮುಂದುವರಿಯವುದು)