ದೀರ್ಘಕಾಲದ ವರೆಗೆ ಕೆಲಸ ಮಾಡುವವರಿಗೆ ಹೃದಯಾಘಾತ ಹಾಗೂ ಪಾರ್ಶ್ವವಾಯುವಿನ ಅಪಾಯ ಹೆಚ್ಚು ! – ವಿಶ್ವ ಆರೋಗ್ಯ ಸಂಸ್ಥೆ

ನವ ದೆಹಲಿ – ದೀರ್ಘಕಾಲದ ವರೆಗೆ ಕೆಲಸ ಮಾಡುವವರಿಗೆ ಹೃದಯಾಘಾತ ಹಾಗೂ ಪಾರ್ಶ್ವವಾಯುವಿನಂತಹ ಗಂಭೀರ ಅನಾರೋಗ್ಯದ ಅಪಾಯವು ಹೆಚ್ಚಾಗುವ ಸಾಧ್ಯತೆಯಿದೆ, ಎಂದು ವಿಶ್ವ ಆರೋಗ್ಯ ಸಂಸ್ಥೆಯು ತನ್ನ ವರದಿಯಲ್ಲಿ ತಿಳಿಸಿದೆ. ‘ಎನ್ಹಂಯರಮೆಂಟ್ ಇಂಟರನ್ಯಾಶನಲ್’ ನಿಯತಕಾಲಿಕೆಯಲ್ಲಿ ಮುದ್ರಿಸಲಾದ ವಿಶ್ವ ಆರೋಗ್ಯ ಸಂಘಟನೆ ಹಾಗೂ ‘ಇಂಟರನ್ಯಾಶನಲ್ ಲೆಬರ ಆರ್ಗನೈಜೇಶನ್’ ಇವರ ಅಧ್ಯಯನಕ್ಕನುಸಾರ ೨೦೧೬ ರಲ್ಲಿ ದೀರ್ಘಕಾಲದ ವರೆಗೆ ಕೆಲಸ ಮಾಡುವುದರಿಂದ ಪಾರ್ಶ್ವವಾಯು ಮತ್ತು ಹೃದಯಾಘಾತದ ಅನಾರೋಗ್ಯದಿಂದ ೭ ಲಕ್ಷ ೪೫ ಸಾವಿರ ಜನರು ಸಾವಿಗೀಡಾಗಿದ್ದರು.

೧. ಈ ಅಧ್ಯಯನಕ್ಕನುಸಾರ ೨೦೧೬ ರಲ್ಲಿ ವಾರದಲ್ಲಿ ಕಡಿಮೆ ಪಕ್ಷ ೫೫ ಗಂಟೆ ಕೆಲಸ ಮಾಡಿದ್ದರಿಂದ ೩ ಲಕ್ಷ ೯೮ ಸಾವಿರ ಜನರು ಪಾರ್ಶ್ವವಾಯುವಿನಿಂದ ಮತ್ತು ೩ ಲಕ್ಷ ೪೭ ಸಾವಿರ ಜನರು ಹೃದಯಾಘಾತದಿಂದ ಮೃತಪಟ್ಟಿದ್ದರು.

. ಈ ವರದಿಯ ಪ್ರಕಾರ ಹೆಚ್ಚು ಕಾಲ ಕೆಲಸ ಮಾಡುವುದರಿಂದ ಪುರುಷರ ಮೇಲೆ ಜಾಸ್ತಿ ಪರಿಣಾಮವಾಗುತ್ತದೆ. ಅದರಂತೆ ೪೫ ರಿಂದ ೭೪ ವಯಸ್ಸಿನೊಳಗಿನ ಪುರುಷರು ಪ್ರತಿ ವಾರದಲ್ಲಿ ೫೫ ಗಂಟೆಕ್ಕಿಂತ ಹೆಚ್ಚು ಕೆಲಸ ಮಾಡುತ್ತಿದ್ದರು, ಅವರ ಸಾವಿನ ಸಂಖ್ಯೆ ಶೇ. ೭೨ ರಷ್ಟು ನೊಂದಾಯಿಸಲ್ಪಟ್ಟಿದೆ.