ಸತತವಾಗಿ ೧೦ ವರ್ಷ ಪ್ರತಿದಿನ ೧೭ ನಿಮಿಷ ಸ್ಮಾರ್ಟ್‍ಫೋನ್ ಬಳಸಿದರೆ ಕ್ಯಾನ್ಸರ್ ಆಗುವ ಸಾಧ್ಯತೆ ಶೇ. ೬೦ ರಷ್ಟಿದೆ! – ಸಂಶೋಧಕರ ಸಂಶೋಧನೆ

ವಿಜ್ಞಾನವು ಎಷ್ಟೇ ಹೊಸಹೊಸ ಸಂಶೋಧನೆ ಮಾಡಿದರೂ ಮತ್ತು ‘ಅದರಿಂದ ಮಾನವರಿಗೆ ಲಾಭವಾಗುತ್ತಿದೆ’ ಎಂದು ಹೇಳಿದರೂ ಪ್ರತ್ಯಕ್ಷದಲ್ಲಿ ಅಪಾಯವೇ ಆಗುತ್ತದೆ, ಎಂಬುದು ಬೆಳಕಿಗೆ ಬರುತ್ತಿದೆ, ಎಂಬುದನ್ನು ಗಮನದಲ್ಲಿಟ್ಟುಕೊಳ್ಳಿ !

ಕ್ಯಾಲಿಫೋರ್ನಿಯಾ (ಅಮೇರಿಕಾ) – ಅಮೇರಿಕಾದ ವಿಜ್ಞಾನಿಗಳ ಪ್ರಕಾರ, ಸ್ಮಾರ್ಟ್‍ಫೋನ್‍ಅನ್ನು ಸತತವಾಗಿ ೧೦ ವರ್ಷಗಳ ಕಾಲ ಪ್ರತಿದಿನ ೧೭ ನಿಮಿಷ ಉಪಯೋಗಿಸಿದರೆ ಕ್ಯಾನ್ಸರ್ ಆಗುವ ಸಾಧ್ಯತೆ ಶೇ. ೬೦ ರಷ್ಟು ಹೆಚ್ಚಾಗುತ್ತದೆ. ಇದನ್ನು ಸಂಚಾರವಾಣಿ(ಮೊಬೈಲ್) ಮತ್ತು ಮಾನವ ಇವುಗಳ ಬಗ್ಗೆ ೪೬ ಪ್ರಕಾರದ ಸಂಶೋಧನೆಯನ್ನು ಮಾಡಲಾಯಿತು. ಕ್ಷ-ಕಿರಣದಿಂದ ಶರೀರದ ಮೇಲಾಗುವ ಪರಿಣಾಮದ ಬಗ್ಗೆ ಸಂಶೋಧನೆಯನ್ನು ಮಾಡಲು ನೀಡಿದ್ದ ಆರ್ಥಿಕ ಸಹಾಯವನ್ನು ಅಮೇರಿಕಾದ ಆಡಳಿತ ೧೯೯೦ ರಲ್ಲಿಯೇ ನಿಲ್ಲಿಸಿತ್ತು. ಆದ್ದರಿಂದ ಇದರ ಬಗ್ಗೆ ಹೆಚ್ಚು ಸಂಶೋಧನೆ ನಡೆಸಲು ಆಗಲಿಲ್ಲ. ಈಗ ಮತ್ತೊಮ್ಮೆ ಈ ವಿಷಯದ ಬಗ್ಗೆ ಸಂಶೋಧನೆ ಆರಂಭಿಸಲಾಗಿದೆ.

೧. ಸಂಶೋಧನೆಯನ್ನು ಮಾಡುವ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದ ವಿಜ್ಞಾನಿಗಳ ಪ್ರಕಾರ, ಸಂಚಾರವಾಣಿಯಿಂದ ಹೊರಸೂಸುವ ‘ಸಿಗ್ನಲ್’ನಿಂದ ವ್ಯಕ್ತಿಯ ‘ಡಿ.ಎನ್.ಎ’ಯ ರಚನೆಯಲ್ಲಿ ಬದಲಾವಣೆ ಆಗುತ್ತದೆ. ಇದರಿಂದ ಸಾವು ಕೂಡಾ ಸಂಭವಿಸಬಹುದು.’ ಇನ್ನೊಂದು ಕಡೆ ಅಮೇರಿಕಾದ ‘ಫುಡ್ ಅಂಡ್ ಡ್ರಗ್ ಆಡ್‍ಮಿನಿಸ್ಟ್ರೇಶನ್’ ಇವರು ‘ಸಂಚಾರವಾಣಿಯಿಂದ ಹೊರಸೂಸುವ ಕ್ಷ-ಕಿರಣದಿಂದ ಆರೋಗ್ಯದ ಮೇಲೆ ಪರಿಣಾಮ ಆಗುತ್ತದೆ’, ಎಂಬುದನ್ನು ನಿರಾಕರಿಸಿದೆ.

೨. ಕ್ಯಾಲಿಪೋರ್ನಿಯಾದ ವಿಶ್ವವಿದ್ಯಾಲಯದ ವಿಜ್ಞಾನಿಗಳು ಅಮೇರಿಕ, ಸ್ವಿಡನ್, ಬ್ರಿಟನ್, ಜಪಾನ್, ದಕ್ಷಿಣ ಕೋರಿಯಾ ಮತ್ತು ನ್ಯೂಜಿಲ್ಯಾಂಡ್‍ನಲ್ಲಿ ಈ ಸಂಶೋಧನೆಯನ್ನು ಮಾಡಲಾಯಿತು. ೨೦೨೦ ರಲ್ಲಿ ಜಗತ್ತಿನಾದ್ಯಂತ ಶೇ. ೯೫ ರಷ್ಟು ಮನೆಗಳಲ್ಲಿ ಒಂದಾದರೂ ಸಂಚಾರವಾಣಿ ಇದ್ದೇ ಇರುತ್ತದೆ. ಜನರು ಸಂಚಾರವಾಣಿಯನ್ನು ಬಿಟ್ಟು ಲ್ಯಾಂಡ್‍ಲೈನ್ ಅನ್ನು ಉಪಯೋಗಿಸಬೇಕು. ಸಂಚಾರವಾಣಿಯನ್ನು ಶರೀರದಿಂದ ದೂರವಿಡಬೇಕು.
ವೈರ್‍ಲೆಸ್ ಯಂತ್ರ ಕ್ಷ-ಕಿರಣ ಶಕ್ತಿಯ ವೇಗವನ್ನು ಹೆಚ್ಚಿಸುತ್ತದೆ. ಅದರಿಂದ ಶರೀರದ ಮೇಲೆ ಹೆಚ್ಚು ದುಷ್ಪರಿಣಾಮ ಆಗುತ್ತಿರುತ್ತದೆ.