ಫಾದರ್ ಸ್ಟ್ಯಾನ ಸ್ವಾಮಿ ನಿಧನದ ಬಗ್ಗೆ ಅಳಲು ತೋಡಿಕೊಳ್ಳುವವರು ಇತರ ಕೈದಿಗಳ ಆರೋಗ್ಯದ ಬಗ್ಗೆ ಗಮನ ಯಾವಾಗ ಹರಿಸುವರು ? – ಹಿಂದೂ ವಿಧಿಜ್ಞ ಪರಿಷದ್

ನ್ಯಾಯವಾದಿ ವೀರೇಂದ್ರ ಇಚಲಕರಂಜೀಕರ

ಇತ್ತೀಚೆಗೆ ನಿಧನರಾದ ಫಾದರ್ ಸ್ಟ್ಯಾನ ಸ್ವಾಮಿ ಅವರನ್ನು ಭಾರತದ ಪ್ರಧಾನಿ ಮಾ. ನರೇಂದ್ರ ಮೋದಿಯವರನ್ನು ಹತ್ಯೆಗೈಯ್ಯುವ ಸಂಚು ರೂಪಿಸಿದ ಆರೋಪದಲ್ಲಿ ರಾಷ್ಟ್ರೀಯ ತನಿಖಾ ದಳವು (ಎನ್‌ಐಎ) ಬಂಧಿಸಿತ್ತು. ನಕ್ಸಲವಾದಕ್ಕೆ ಸಹಾಯ ಮಾಡುವುದು ಮತ್ತು ಕಾನೂನುಬಾಹಿರ ಕೃತ್ಯಗಳನ್ನು ಮಾಡಿದ ಗಂಭೀರ ಆರೋಪಗಳು ಅವರ ಮೇಲಿತ್ತು. ಅವರ ನಿಧನಕ್ಕೆ ಅನೇಕರು ಶೋಕ ವ್ಯಕ್ತಪಡಿಸಿದ್ದಾರೆ. ಕೆಲವು ದೊಡ್ಡ ನಾಯಕರು ರಾಷ್ಟ್ರಪತಿಗೆ ಪತ್ರಗಳನ್ನು ಬರೆದಿದ್ದಾರೆ. ಫಾದರ್ ಸ್ಟ್ಯಾನ ಸ್ವಾಮಿ ಇವರು ಸಮರ್ಪಕವಾದ ವೈದ್ಯಕೀಯ ಚಿಕಿತ್ಸೆ ಪಡೆಯುತ್ತಿದ್ದರು. ಅಲ್ಲದೇ ಅವರನ್ನು ಚರ್ಚ್ ನಡೆಸುವ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ಉಚ್ಚ ನ್ಯಾಯಾಲಯವು ವಿಶೇಷ ಅನುಮತಿಯನ್ನೂ ನೀಡಿತ್ತು. ಹಾಗಿದ್ದರೂ ಅವರ ಮರಣದ ನಂತರ ರಾಜಕೀಯ ನಡೆಯುತ್ತಿರುವುದು ಬಹಳ ದುರದೃಷ್ಟಕರ. ವಾಸ್ತವದಲ್ಲಿ ಇದು ಜೈಲಿನಲ್ಲಿರುವ ಇತರ ಕೈದಿಗಳ ಆರೋಗ್ಯದ ಸಮಸ್ಯೆಯನ್ನು ಹುಟ್ಟುಹಾಕುತ್ತದೆ. ಫಾದರ್ ಸ್ಟ್ಯಾನ ಸ್ವಾಮಿಯಂತಹ ಇತರ ಎಷ್ಟು ಕೈದಿಗಳ ವಿಷಯದಲ್ಲಿ ಈ ತಥಾಕಥಿತ ಪ್ರಗತಿಪರರು, ಜಾತ್ಯತೀತವಾದಿಗಳು ಮತ್ತು ನಾಯಕರು ಗಮನ ನೀಡುತ್ತಾರೆ ? ಆರ್ಥರ್ ರೋಡ್ ಕಾರಾಗೃಹದಲ್ಲಿ ನಾಲಾಸೋಪರಾ ಪ್ರಕರಣದ ಆರೋಪಿಗಳಾದ ಸುಧನ್ವಾ ಗೊಂಧಳೇಕರ್ ಮತ್ತು ಗಣೇಶ ಮಿಸ್ಕಿನ್ ಇವರಿಗೆ ಚಿಕಿತ್ಸೆ ದೊರೆಯಬೇಕೆಂದು ಅರ್ಜಿ ಸಲ್ಲಿಸಿದ ನಂತರವೂ ಅವರತ್ತ ಏಕೆ ಗಮನ ನೀಡುತ್ತಿಲ್ಲ? ಇಂತಹ ಪ್ರಕರಣಗಳಲ್ಲಿ ತಥಾಕಥಿತ ಪ್ರಗತಿಪರರು ಮತ್ತು ಜಾತ್ಯತೀತ ಗುಂಪು ಏಕೆ ಮೌನವಾಗಿರುತ್ತವೆ ? ಈ ಕೈದಿಗಳಿಗೂ ಫಾದರ್ ಸ್ಟ್ಯಾನ ಸ್ವಾಮಿಯಂತೆ ಚಿಕಿತ್ಸೆ ಪಡೆಯಲು ಅವಕಾಶ ನೀಡಬೇಕು ಎಂದು ಹಿಂದೂ ವಿಧಿಜ್ಞ ಪರಿಷದ್‌ನ ರಾಷ್ಟ್ರೀಯ ಅಧ್ಯಕ್ಷ ವೀರೇಂದ್ರ ಇಚಲಕರಂಜಿಕರ್ ಒತ್ತಾಯಿಸಿದ್ದಾರೆ.

ಆರ್ಥರ್ ರೋಡ್ ಜೈಲಿನಲ್ಲಿರುವ ನಾಲಾಸೋಪರಾ ಪ್ರಕರಣದ ಆರೋಪಿ ಸುಧನ್ವಾ ಗೊಂಧಳೇಕರ್ ಇವರ ಎರಡೂ ಕಡೆಯ ಹಲ್ಲುಗಳು ಹುಳುಕಾಗಿದ್ದು ಅವರಿಗೆ ಚಿಕಿತ್ಸೆಯೂ ದೊರೆಯುತ್ತಿಲ್ಲ. ಕಳೆದ ಎರಡು ತಿಂಗಳಿನಿಂದ ಅವರು ಗಂಭೀರ ಸ್ಥಿತಿಯಲ್ಲಿದ್ದು, ಚಿಕಿತ್ಸೆ ಪಡೆಯುವವರೆಗೂ ತಿನ್ನಲು ಸಾಧ್ಯವಾಗುತ್ತಿಲ್ಲ. ಮತ್ತೊಂದೆಡೆ, ಮತ್ತೊಬ್ಬ ಆರೋಪಿ ಗಣೇಶ ಮಿಸ್ಕಿನ್ ಇವರು ‘ವೆರಿಕೋಸ್ ವೇನ್ಸ್’ನ ತೊಂದರೆಯಿಂದ ಬಳಲುತ್ತಿದ್ದಾರೆ. ಅವರಿಗೂ ಪೂರ್ಣ ಚಿಕಿತ್ಸೆ ದೊರೆಯುತ್ತಿಲ್ಲ. ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರೂ ಅವರಿಗೆ ಇನ್ನೂ ಚಿಕಿತ್ಸೆ ಲಭ್ಯವಾಗಿಲ್ಲ. ಫಾದರ್ ಸ್ಟ್ಯಾನ ಅವರ ನಿಧನಕ್ಕೆ ಸಂತಾಪ ಸೂಚಿಸುವವರು ಅಂತಹ ಕೈದಿಗಳ ಸಮಸ್ಯೆಗಳನ್ನು ಪರಿಹರಿಸಲು ಮುಂದೆ ಬರುತ್ತಾರೆಯೇ ? ಅಥವಾ ಇದು ಸಾವನ್ನು ಮುಂಡಿಟ್ಟುಕೊಂಡು ನಡೆಸಲಾಗುತ್ತಿರುವ ರಾಜಕಾರಣವೇ? ಈ ವ್ಯವಸ್ಥೆಯು ಯಾವಾಗ ಎಚ್ಚರಗೊಳ್ಳುತ್ತದೆ ಮತ್ತು ಸಮಾನ ನ್ಯಾಯವನ್ನು ಒದಗಿಸುತ್ತದೆ ? ಎಂದು ಹಿಂದೂ ವಿಧಿಜ್ಞ ಪರಿಷದ್ ಪ್ರಶ್ನಿಸಿದೆ.

ಕೈದಿಗಳಿಗೆ ಸರಿಯಾದ ಚಿಕಿತ್ಸೆ ದೊರೆಯಬೇಕು ಮತ್ತು ಅವರ ಪ್ರಕರಣಗಳನ್ನು ಬೇಗನೆ ವಿಲೇವಾರಿ ಮಾಡಬೇಕು. ದಾಭೋಲಕರ್ ಕೊಲೆ ಪ್ರಕರಣದಲ್ಲಿ ಕಳೆದ ಆರು ವರ್ಷಗಳಿಂದ ಸೆರೆಮನೆಯಲ್ಲಿರುವ ಅಮಾಯಕ ಡಾ. ವೀರೇಂದ್ರಸಿಂಹ ತಾವ್ಡೆ ಅವರ ದುಃಖವು ಫಾದರ್ ಸ್ಟ್ಯಾನ ಸ್ವಾಮಿಯ ದುಃಖಕ್ಕಿಂತ ಕಡಿಮೆಯಿಲ್ಲ. ಇದನ್ನು ಸಹ ಪರಿಗಣಿಸಬೇಕು ಎಂದು ನಾವು ಭಾವಿಸುತ್ತೇವೆ ಎಂದು ಹಿಂದೂ ವಿಧಿಜ್ಞ ಪರಿಷದ್ ಹೇಳಿದೆ.