‘ಕೊರೊನಾದ ‘ಡೆಲ್ಟಾ’ ಪ್ರಕಾರ ೧೦೪ ದೇಶಗಳಿಗೆ ಹರಡಿದೆ – ವಿಶ್ವ ಆರೋಗ್ಯ ಸಂಸ್ಥೆ

ಜೆನೆವಾ (ಸ್ವಿಟ್ಜಲ್ರ್ಯಾಂಡ್) – ಕೊರೊನಾದ ‘ಡೆಲ್ಟಾ’ ಪ್ರಕಾರ ಜಗತ್ತಿನಾದ್ಯಂತ ಸುಮಾರು ೧೦೪ ದೇಶಗಳಿಗೆ ಹರಡಿದೆ ಮತ್ತು ಅದು ಜಗತ್ತಿನಾದ್ಯಂತ ಹರಡಬಹುದು. ಈ ವಿಧದ ಕೊರೊನಾವು ವಿಶ್ವದಲ್ಲೇ ಹೆಚ್ಚು ಬಲಶಾಲಿ ರೋಗಾಣು ಆಗುವ ಸಾಧ್ಯತೆಯಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯಸ್ಥ ಡಾ. ಟ್ರೆಡೋಸ್ ಘೆಬ್ರೆಸಸ್ ಇವರು ಮಾಹಿತಿಯನ್ನು ನೀಡಿದ್ದಾರೆ. ಈ ರೀತಿಯ ಕೊರೊನಾದಿಂದ ಸಾವು ಮತ್ತು ಸೋಂಕುಗಳ ಹೆಚ್ಚಳಕ್ಕೆ ಕಾರಣವಾಗುತ್ತಿದೆ. `ಡೆಲ್ಟಾ’ ವಿಧದ ಕೊರೊನಾವು ಭಾರತದಲ್ಲಿ ಮೊದಲಿಗೆ ಕಂಡುಬಂದಿತ್ತು.