ಬೆಳಗಾವಿಯಲ್ಲಿ ಮಹಾರಾಷ್ಟ್ರ ಏಕೀಕರಣ ಸಮಿತಿಗೆ ಒಂದು ಸ್ಥಾನ ಕೂಡ ಇಲ್ಲ : ನಿಪ್ಪಾಣಿಯಲ್ಲಿ ಭಾಜಪದ ಶಶಿಕಲಾ ಜೊಲ್ಲೆ ಜಯಭೇರಿ !

ಬೆಳಗಾವಿ ಜಿಲ್ಲೆಯಲ್ಲಿ ೧೯ ಸ್ಥಾನಗಳಲ್ಲಿ ೧೧ ಮತದಾರ ಕೇಂದ್ರಗಳಲ್ಲಿ ಕಾಂಗ್ರೆಸ್ ಜಯ ಗಳಿಸಿದೆ. ಭಾಜಪದ ಪ್ರಮುಖ ವಿಜಯ ಸಾಧಿಸಿರುವ ಅಭ್ಯರ್ಥಿಯಲ್ಲಿ ಬೆಳಗಾವಿ ದಕ್ಷಿಣದ ಅಭಯ ಪಾಟೀಲ, ಖಾನಾಪುರದ ವಿಠಲ ಹಲಗೆಕರ ಹಾಗೂ ಗೋಕಾಕ ದಲ್ಲಿ ರಮೇಶ ಜಾರಕಿಹೊಳಿ ಇವರ ಸಮಾವೇಶವಿದೆ.

ಕಾಂಗ್ರೆಸ್ ಗೆ ಸ್ಪಷ್ಟ ಬಹುಮತ !

ರಾಜ್ಯದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಸ್ಪಷ್ಟ ಬಹುಮತ ಪಡೆದಿದ್ದು, ಭಾಜಪ ಹೀನಾಯ ಸೋಲು ಕಂಡಿದೆ. ಮೇ 10 ರಂದು ಮತದಾನ ನಡೆದ ಬಳಿಕ ಮೇ 13 ರಂದು ಮತ ಎಣಿಕೆ ಕಾರ್ಯ ನಡೆಯಿತು.

ಮೇ 14 ರಂದು ತೇಲಂಗಾಣದಲ್ಲಿ ಹಿಂದೂ ಏಕತಾ ಯಾತ್ರೆಯ ಆಯೋಜನೆ

ತೇಲಂಗಾಣದ ಭಾಜಪ ಪ್ರದೇಶಾಧ್ಯಕ್ಷ ಬಂಡಿ ಸಂಜಯ ಕುಮಾರ ಇವರು ಮೇ 14 ರಂದು ಕರೀಮ್ ನಗರದಲ್ಲಿ ಹಿಂದೂ ಏಕತಾ ಯಾತ್ರೆಯನ್ನು ನಡೆಸುವುದಾಗಿ ತಿಳಿಸುತ್ತಾ, `ದಿ ಕೇರಳ ಸ್ಟೋರಿ’ ಚಲನಚಿತ್ರದ ಕಲಾವಿದರನ್ನು ಮತ್ತು ನಿರ್ಮಾಪಕರನ್ನು ಸ್ವಾಗತಿಸಲು ಉತ್ಸುಕರಾಗಿದ್ದಾರೆಂದು ಹೇಳಿದ್ದಾರೆ.

ಎಲ್ಲ ಹಿಂದೂ ಯುವತಿಯೂ ನೋಡಲೇಬೇಕಾದ ಚಲನಚಿತ್ರ ‘ದಿ ಕೇರಳ ಸ್ಟೋರಿ’ ! – ಸಂಸದೆ ಸಾಧ್ವಿ ಪ್ರಜ್ಞಾ ಸಿಂಗ್

ಇದರಿಂದ ಅವರು ಅಂತಹ ವಿಷಯಗಳಿಂದ ತಮ್ಮನ್ನು ತಾವು ರಕ್ಷಿಸಿಕೊಳ್ಳಬಹುದು, ಜೊತೆಗೆ ತಮ್ಮ ಕುಟುಂಬ ಮತ್ತು ಮಕ್ಕಳನ್ನು ರಕ್ಷಿಸಬಹುದು ಎಂದು ಇಲ್ಲಿನ ಭಾಜಪದ ಸಂಸದೆ ಸಾಧ್ವಿ ಪ್ರಜ್ಞಾ ಸಿಂಗ್ ಅವರು ಹೇಳಿದ್ದಾರೆ.

ಉತ್ತರ ಪ್ರದೇಶದಲ್ಲಿ ‘ದಿ ಕೇರಳ ಸ್ಟೋರಿ’ ಚಿತ್ರಕ್ಕೆ ಟ್ಯಾಕ್ಸ್ ಫ್ರೀ !

ಮಧ್ಯಪ್ರದೇಶದ ನಂತರ ಇದೀಗ ಉತ್ತರ ಪ್ರದೇಶದ ಭಾಜಪ ಸರಕಾರ ‘ದಿ ಕೇರಳ ಸ್ಟೋರಿ’ ಚಿತ್ರಕ್ಕೆ ಟ್ಯಾಕ್ಸ್ ಫ್ರೀ ಮಾಡಿದೆ. ಮೇ ೧೨ ರಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ತಮ್ಮ ಸಂಪುಟದ ಸಚಿವರೊಂದಿಗೆ ಚಲನಚಿತ್ರ ವೀಕ್ಷಿಸಲಿದ್ದಾರೆ.

ಗೋವಾದಲ್ಲಿ ಶ್ರೀರಾಮಸೇನೆಯನ್ನು ವಿರೋಧಿಸುವ ಭಾಜಪವು ಹನುಮಾನ ಚಾಲೀಸಾದ ಪಠಣ ಮಾಡುತ್ತಿದೆ ! – ಕರ್ನಾಟಕದಲ್ಲಿನ ಕಾಂಗ್ರೆಸ್ ನೇತಾರರಾದ ಡಿ.ಕೆ. ಶಿವಕುಮಾರ

ಗೋವಾದಲ್ಲಿ ಭಾಜಪದ ಸರಕಾರವಿದ್ದರೂ ಅಲ್ಲಿ ಶ್ರೀರಾಮಸೇನೆಗೆ ಪ್ರವೇಶವಿಲ್ಲ.

ಉತ್ತರ ಪ್ರದೇಶ ಸರಕಾರದ ಆದೇಶಕ್ಕೆ ವಿರೋಧ ವ್ಯಕ್ತಪಡಿಸುವ ಅರ್ಜಿಯನ್ನು ಅಲಹಾಬಾದ ಉಚ್ಚ ನ್ಯಾಯಾಲಯವು ತಿರಸ್ಕರಿಸಿದೆ !

ಉತ್ತರಪ್ರದೇಶದಲ್ಲಿನ ಭಾಜಪ ಸರಕಾರವು ರಾಮನವಮಿ ಮತ್ತು ಚೈತ್ರ ನವರಾತ್ರಿಯ ಸಮಯದಲ್ಲಿ ಧಾರ್ಮಿಕ ಕಾರ್ಯಕ್ರಮದ ಆಯೋಜನೆಗಾಗಿ ಪ್ರತಿಯೊಂದು ಜಿಲ್ಲೆಗೆ ೧ ಲಕ್ಷ ರೂಪಾಯಿ ಸಹಾಯ ನೀಡುವ ಆದೇಶ ನೀಡಿದ್ದು. ಇದನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಅಲಹಾಬಾದ್ ಉಚ್ಚ ನ್ಯಾಯಾಲಯವು ತಿರಸ್ಕರಿಸಿದೆ.

ಪುರಿ (ಓರಿಸ್ಸಾ) ಇಲ್ಲಿಯ ಪ್ರಸಿದ್ಧ ಜಗನ್ನಾಥ ದೇವಸ್ಥಾನದ ಖಜಾನೆಯನ್ನು ತೆರೆಯಿರಿ ! – ಭಾಜಪ ಮತ್ತು ಕಾಂಗ್ರೆಸ್ ಪಕ್ಷಗಳ ಕೋರಿಕೆ

ಜಗನ್ನಾಥ ದೇವಸ್ಥಾನದ ರತ್ನಗಳಿಂದ ತುಂಬಿರುವ ಖಜಾನೆ 39 ವರ್ಷಗಳಿಂದ ಮುಚ್ಚಿದೆ. 1984 ರಲ್ಲಿ ಅದನ್ನು ಕೊನೆಯದಾಗಿ ತೆರೆಯಲಾಗಿತ್ತು. ಈ ಖಜಾನೆಯಲ್ಲಿ 150 ಕೇಜಿ ಬಂಗಾರ ಮತ್ತು 258 ಕೇಜಿ ಬೆಳ್ಳಿಯಿದೆ.

ತಮಿಳುನಾಡು ಸರಕಾರವು ರಾಜ್ಯದ ೧೦೦ ದೇವಸ್ಥಾನಗಳಲ್ಲಿ ಭಕ್ತರಿಗೆ ಉಪಹಾರ ನೀಡುವ ಯೋಜನೆ !

ರಾಜ್ಯದಲ್ಲಿ ಭಾಜಪದ ನೆಲೆ ಹೆಚ್ಚಾಗುತ್ತಿರುವುದರಿಂದ ಆಡಳಿತಾರೂಢ ಹಿಂದೂ ವಿರೋಧಿ ಪಕ್ಷವಾಗಿರುವ ಡಿಎಂಕೆ ಸದ್ಯ ಹಿಂದೂಗಳನ್ನು ಸಂತುಷ್ಟಗೊಳಿಸಲು ಯತ್ನಿಸುತ್ತಿದೆ. ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್‌ರವರ ಸರಕಾರ ಇದೇ ಮೊದಲ ಬಾರಿಗೆ ರಾಜ್ಯದ ೧೦೦ ದೊಡ್ಡ ದೇವಸ್ಥಾನಗಳಲ್ಲಿ ಭಕ್ತರಿಗೆ ಉಪಾಹಾರ ವ್ಯವಸ್ಥೆ ಮಾಡಲು ಮುಂದಾಗಿದೆ.

ರಾಜ್ಯದ ವಿಧಾನಸಭೆಯ ಚುನಾವಣೆ ಭಾಜಪದ ಘೋಷಣಾಪತ್ರ ಬಿಡುಗಡೆ

ರಾಜ್ಯದ ವಿಧಾನಸಭೆ ಚುನಾವಣೆಗೆ ಭಾಜಪವು ತನ್ನ ಘೋಷಣಾ ಪತ್ರವನ್ನು ಬಿಡುಗಡೆ ಮಾಡಿದೆ. ಇದರಲ್ಲಿ ಅಧಿಕಾರಕ್ಕೆ ಬಂದರೆ ಸಮಾನ ನಾಗರಿಕ ಕಾನೂನು ನಿರ್ಮಿಸಲು ಸಮಿತಿ ಸ್ಥಾಪನೆ ಮಾಡುವುದರೊಂದಿಗೆ ಯುಗಾದಿ, ಗಣೇಶ ಚತುರ್ಥಿ, ಮತ್ತು ದೀಪಾವಳಿ ಹಬ್ಬದ ಸಂದರ್ಭದಲ್ಲಿ ಉಚಿತ ಗ್ಯಾಸ್ ಸಿಲಿಂಡರ್ ಬಡತನದ ರೇಖೆಗಿಂತ ಕೆಳಗಿರುವ ಕುಟುಂಬಗಳಿಗೆ ಪ್ರತಿದಿನ ಅರ್ಧ ಲೀಟರ್ ನಂದಿನಿ ಹಾಲು ನೀಡುವುದಾಗಿ ಭರವಸೆ ನೀಡಿದೆ.