ಎಲ್ಲ ಹಿಂದೂ ಯುವತಿಯೂ ನೋಡಲೇಬೇಕಾದ ಚಲನಚಿತ್ರ ‘ದಿ ಕೇರಳ ಸ್ಟೋರಿ’ ! – ಸಂಸದೆ ಸಾಧ್ವಿ ಪ್ರಜ್ಞಾ ಸಿಂಗ್

ಸಂಸದೆ ಸಾಧ್ವಿ ಪ್ರಜ್ಞಾ ಸಿಂಗ್

ಭೋಪಾಲ್ (ಮಧ್ಯಪ್ರದೇಶ) – ‘ಲವ್ ಜಿಹಾದ್’ ಹೆಸರಿನಲ್ಲಿ ಯುವತಿಯರನ್ನು ವಂಚಿಸಲಾಗುತ್ತಿದೆ. ಅವರನ್ನು ಅದರಲ್ಲಿ ಸಿಲುಕಿಸುತ್ತಾರೆ. ನಂತರ ಅವರೊಂದಿಗೆ ಘಟಿಸುವ ಘಟನೆಗಳು ಭಯಾನಕವಾಗಿರುತ್ತವೆ. ‘ದಿ ಕೇರಳ ಸ್ಟೋರಿ’ ಈ ಚಲನಚಿತ್ರವನ್ನು ಪ್ರತಿ ಹೆಣ್ಣುಮಗಳು, ಯುವತಿ ಮತ್ತು ಮಹಿಳೆ ನೋಡಬೇಕು. ಇದರಿಂದ ಅವರು ಅಂತಹ ವಿಷಯಗಳಿಂದ ತಮ್ಮನ್ನು ತಾವು ರಕ್ಷಿಸಿಕೊಳ್ಳಬಹುದು, ಜೊತೆಗೆ ತಮ್ಮ ಕುಟುಂಬ ಮತ್ತು ಮಕ್ಕಳನ್ನು ರಕ್ಷಿಸಬಹುದು ಎಂದು ಇಲ್ಲಿನ ಭಾಜಪದ ಸಂಸದೆ ಸಾಧ್ವಿ ಪ್ರಜ್ಞಾ ಸಿಂಗ್ ಅವರು ಹೇಳಿದ್ದಾರೆ.

‘ದಿ ಕೇರಳ ಸ್ಟೋರಿ’ಯಲ್ಲಿ ತೋರಿಸಿರುವುದು ಕೇರಳದಲ್ಲಿ ಮಾತ್ರವಲ್ಲ, ಭೋಪಾಲ್‌ನಲ್ಲಿಯೂ ನಡೆಯುತ್ತಿದೆ. ಇಂತಹ ಹಲವು ದೂರುಗಳು ನಮಗೆ ಬಂದಿವೆ. ಈ ಬಗ್ಗೆ ಈ ಹಿಂದೆಯೇ ಮಾತನಾಡಿದ್ದೇನೆ. ಲವ್ ಜಿಹಾದ್ ಮೂಲಕ ಭಯೋತ್ಪಾದನೆಯ ಸಂಚು ಬಿತ್ತಲಾಗುತ್ತಿದೆ. ಅವರನ್ನು ಭಾರತದ ವಿರುದ್ಧ ಎತ್ತಿಕಟ್ಟುವ ಸಂಚು ಮಾಡಲಾಗುತ್ತಿದೆ. ಅಂತಹ ವಿಷಯಗಳನ್ನು ಭಾರತದಲ್ಲಿ ದೇಶದ್ರೋಹಿಗಳು ರಕ್ಷಿಸುತ್ತಾರೆ. ಲವ್ ಜಿಹಾದ್‌ನ ಬಲೆಗೆ ಹಿಂದೂ ಹುಡುಗಿಯರಷ್ಟೇ ಅಲ್ಲ, ಹುಡುಗರೂ ಸಿಕ್ಕಿಬಿದ್ದಿದ್ದಾರೆ. ಅವರನ್ನು ಭಯೋತ್ಪಾದನೆಗೆ ತಳ್ಳಲಾಗುತ್ತದೆ. ಹಿಂದೂ ಹುಡುಗಿಯರು ಮತ್ತು ಹುಡುಗರನ್ನು ಮತಾಂತರಗೊಳಿಸುತ್ತಿದ್ದಾರೆ, ಎಂದೂ ಸಾಧ್ವಿ ಪ್ರಜ್ಞಾ ಸಿಂಗ್ ಅವರು ಹೇಳಿದ್ದಾರೆ.