ತಮಿಳುನಾಡು ಸರಕಾರವು ರಾಜ್ಯದ ೧೦೦ ದೇವಸ್ಥಾನಗಳಲ್ಲಿ ಭಕ್ತರಿಗೆ ಉಪಹಾರ ನೀಡುವ ಯೋಜನೆ !

ತಮಿಳುನಾಡಿನಲ್ಲಿ ಭಾಜಪದ ತಳಹದಿ ಹೆಚ್ಚಾಗುತ್ತಿರುವುದರಿಂದ ಆಡಳಿತಾರೂಢ ಡಿಎಂಕೆಯ ಹಿಂದೂಗಳ ಬಗೆಗಿನ ನಿಲುವಿನಲ್ಲಿ ಬದಲಾವಣೆ !

ಸಾಂದರ್ಭಿಕ ಚಿತ್ರ

ಚೆನ್ನೈ (ತಮಿಳುನಾಡು) – ರಾಜ್ಯದಲ್ಲಿ ಭಾಜಪದ ನೆಲೆ ಹೆಚ್ಚಾಗುತ್ತಿರುವುದರಿಂದ ಆಡಳಿತಾರೂಢ ಹಿಂದೂ ವಿರೋಧಿ ಪಕ್ಷವಾಗಿರುವ ಡಿಎಂಕೆ ಸದ್ಯ ಹಿಂದೂಗಳನ್ನು ಸಂತುಷ್ಟಗೊಳಿಸಲು ಯತ್ನಿಸುತ್ತಿದೆ. ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್‌ರವರ ಸರಕಾರ ಇದೇ ಮೊದಲ ಬಾರಿಗೆ ರಾಜ್ಯದ ೧೦೦ ದೊಡ್ಡ ದೇವಸ್ಥಾನಗಳಲ್ಲಿ ಭಕ್ತರಿಗೆ ಉಪಾಹಾರ ವ್ಯವಸ್ಥೆ ಮಾಡಲು ಮುಂದಾಗಿದೆ. ರಾಜ್ಯದ ಈ ೧೦೦ ದೇವಸ್ಥಾನಗಳಲ್ಲಿ ಪ್ರತಿದಿನ ಒಂದೂವರೆ ಲಕ್ಷಕ್ಕೂ ಹೆಚ್ಚು ಭಕ್ತರು ಬರುತ್ತಾರೆ. ಇವುಗಳಲ್ಲಿ ಕಾಂಚೀಪುರಂನಲ್ಲಿರುವ ಕಾಮಾಕ್ಷಿ ದೇವಸ್ಥಾನ ಮತ್ತು ಮಧುರೈನ ಮೀನಾಕ್ಷಿ ದೇವಸ್ಥಾನವೂ ಸೇರಿದೆ. ದೇವಸ್ಥಾನಗಳಿಂದ ನಡೆಸುತ್ತಿರುವ ಸುಮಾರು ೩ ಲಕ್ಷ ಶಾಲೆಗಳಲ್ಲಿ ಮಧ್ಯಾಹ್ನದ ಊಟವನ್ನು ಸರಕಾರ ಆರಂಭಿಸಿದೆ.

೧. ಇದಲ್ಲದೇ ಕಳೆದ ೨ ವರ್ಷಗಳಲ್ಲಿ ರಾಜ್ಯದ ೪೪ ಸಾವಿರ ದೇವಸ್ಥಾನಗಳಿಗೆ ಸೇರಿದ ೪ ಸಾವಿರದ ೫೦೦ ಎಕರೆ ಭೂಮಿಯನ್ನು ಸರಕಾರ ಒತ್ತುವರಿಯನ್ನು ತೆರವು ಮಾಡಿದೆ. ಈ ಜಮೀನಿನ ಮೌಲ್ಯ ೪ ಸಾವಿರದ ೨೦೦ ಕೋಟಿ ಎಂದು ಹೇಳಲಾಗಿದೆ. (ಈ ಹಿಂದೆಯು ರಾಜ್ಯದಲ್ಲಿ ಡಿಎಂಕೆ ಸರಕಾರವಿದ್ದಾಗ ಅವರು ಇದನ್ನು ಆಗ ಏಕೆ ಮಾಡಲಿಲ್ಲ ? ಇದರಿಂದ ಅವರು ತಮ್ಮ ರಾಜಕೀಯ ಹಿತಾಸಕ್ತಿಗಳನ್ನು ಮಾತ್ರ ಸಾಧಿಸುತ್ತಿರುವುದು ತೋರಿಸುತ್ತದೆ ! – ಸಂಪಾದಕರು)

೨. ೧ ಸಾವಿರ ವರ್ಷಗಳಷ್ಟು ಹಳೆಯದಾದ ದೇವಸ್ಥಾನಗಳ ಜೀರ್ಣೋದ್ಧಾರಕ್ಕಾಗಿ ೩೪೦ ಕೋಟಿ ರೂಪಾಯಿಗಳ ನಿಧಿಯನ್ನು ಡಿಎಂಕೆ ಸರಕಾರ ಮಂಜೂರು ಮಾಡಿದೆ.

೩. ಹೀಗಿದ್ದರೂ ಸರಕಾರ ಭರವಸೆ ನೀಡಿದರೂ ದೇವಸ್ಥಾನದ ಸಿಬ್ಬಂದಿಗಳ ವೇತನದಲ್ಲಿ ಅಗತ್ಯವಿರುವಷ್ಟು ಹೆಚ್ಚಳವಾಗಿಲ್ಲ ಎಂದು ಕಾಂಚೀಪುರಂ ದೇವಸ್ಥಾನದ ಪ್ರಧಾನ ಅರ್ಚಕ ನಟರಾಜ ಶಾಸ್ತ್ರಿ ಹೇಳಿದರು.

೪. ರಾಜಕೀಯ ವಿಶ್ಲೇಷಕ ಸುಮಂತ ರಾಮಣ ಇವರು, ”ಡಿಎಂಕೆ ಸರಕಾರ ಮೊದಲ ಬಾರಿಗೆ ಹಿಂದೂಗಳ ಹಿತಾಸಕ್ತಿ ಸಾಧಿಸಲು ಪ್ರಯತ್ನಿಸುತ್ತಿದೆ. ಇದಕ್ಕೆ ಭಾಜಪದ ಮತಗಳಿಕೆ ನಿರಂತರವಾಗಿ ಹೆಚ್ಚುತ್ತಿರುವುದು ಪ್ರಮುಖ ಕಾರಣ. ಎಐಡಿಎಂಕೆ ಪಕ್ಷದಲ್ಲಿ ಒಳ ಜಗಳಗಳು ನಡೆಯುತ್ತಲೆ ಇರುತ್ತವೆ. ಕಾಂಗ್ರೆಸ್ ಇಲ್ಲಿ ಡಿಎಂಕೆ ಮೇಲೆ ಅವಲಂಬಿಸಿದೆ. ರಾಜ್ಯದಲ್ಲಿ ಪ್ರಧಾನಿ ಮೋದಿ ಅವರ ಜನಪ್ರಿಯತೆಯೇ ಭಾಜಪದ ದೊಡ್ಡ ಆಧಾರವಾಗಿದೆ ಎಂದು ಹೇಳಿದರು.

ಈ ರೀತಿ ಭಾಜಪದ ಜನ ಬೆಂಬಲ ಹೆಚ್ಚುತ್ತಿದೆ !

೨೦೨೧ ರ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಭಾಜಪಗೆ ಶೇ. ೨.೬ ರಷ್ಟು ಮತಗಳನ್ನು ಗಳಿಸಿತ್ತು. ವಿಧಾನಸಭೆಯಲ್ಲಿ ಭಾಜಪದ ೪ ಶಾಸಕರನ್ನು ಹೊಂದಿದೆ. ಇದಕ್ಕೆ ಹೋಲಿಸಿದರೆ, ೨೦೨೨ ರಲ್ಲಿ ನಡೆದ ನಗರ ಸ್ಥಳೀಯ ಸ್ವರಾಜ್ಯ-ಸಂಸ್ಥೆಯ ಚುನಾವಣೆಯಲ್ಲಿ ಭಾಜಪದ ಮತಗಳು ಶೇಕಡಾವಾರು ಹೆಚ್ಚಾಗಿ ೫.೪೧ ಕ್ಕೆ ಏರಿತು. ಮೊದಲ ಬಾರಿಗೆ ಭಾಜಪದ ೩೦೮ ಅಭ್ಯರ್ಥಿಗಳು ಗೆದ್ದಿದ್ದಾರೆ. ಕಳೆದ ನಗರ ಸ್ವರಾಜ್ಯ ಚುನಾವಣೆಯಲ್ಲಿ ಭಾಜಪ ಕೇವಲ ೧೮ ಸ್ಥಾನಗಳನ್ನು ಪಡೆದಿತ್ತು. ಆಗ ಭಾಜಪವು ೩.೪ ಶೇಕಡಾ ಮತಗಳು ಪಡೆದಿತ್ತು.

ಸಂಪಾದಕೀಯ ನಿಲುವು

ಡಿಎಂಕೆ ಮೂಲತಃ ಹಿಂದೂ ವಿರೋಧಿ ಪಕ್ಷವಾಗಿದ್ದು, ಅದಕ್ಕೆ ಮತ ಹಾಕದಿರುವುದು ತಮಿಳುನಾಡಿನ ಹಿಂದೂಗಳ ಹಿತಾಸಕ್ತಿಯಾಗಿದೆ. ಅಂದರೆ, ಕಳೆದ ಅನೇಕ ದಶಕಗಳಿಂದ ಅಲ್ಲಿನ ದ್ರವಿಡ ಚಳವಳಿಯ ಸೈದ್ಧಾಂತಿಕ ಛಾಪು ಅಲ್ಲಿನ ಹಿಂದೂಗಳ ಮೇಲೂ ಇದೆ. ಆದ್ದರಿಂದ ಅವರಿಗೆ ಧರ್ಮಶಿಕ್ಷಣ ನೀಡುವುದರಿಂದಲೇ ಡಿಎಂಕೆ ನೆಲೆ ಕಡಿಮೆಯಾಗುವುದು ಎಂಬುದನ್ನು ನೆನಪಿನಲ್ಲಿಡಿ !