ಬೆಳಗಾವಿ – ಮರಾಠಿ ನಾಗರೀಕರ ಮೇಲೆ ನಡೆಯುವ ಅನ್ಯಾಯದ ಅಂಶಗಳ ಬಗ್ಗೆ ಹೋರಾಡುವ ಮಹಾರಾಷ್ಟ್ರ ಏಕೀಕರಣ ಸಮಿತಿಗೆ ಬೆಳಗಾವಿ ಜಿಲ್ಲೆಯಲ್ಲಿ ಒಂದು ಸ್ಥಾನ ಕೂಡ ದೊರತ್ತಿಲ್ಲ. ಏಕೀಕರಣ ಸಮಿತಿಯ ರಮಾಕಾಂತ ಕೊಂಡುಸ್ಕರ ಇವರಿಗೆ ೬೪ ಸಾವಿರ ಮತಗಳು ದೊರೆತಿದೆ. ನಿಪ್ಪಾಣಿಯ ಹಾಲಿ ಸಚಿವೆ ಶಾಸಕಿ ಶಶಿಕಲಾ ಜೊಲ್ಲೆ ಇವರು ೯ ಸಾವಿರ ೮೭೬ ಮತಗಳಿಂದ ಗೆಲವು ಸಾಧಿಸಿದ್ದಾರೆ. ಈ ಸ್ಥಳದಲ್ಲಿ ರಾಷ್ಟ್ರೀಯ ಕಾಂಗ್ರೆಸ್ಸಿನ ಅಧ್ಯಕ್ಷ ಶರದ ಪವಾರ ಇವರು ಉತ್ತಮ ಪಾಟೀಲ ಇವರ ಪರ ಪ್ರಚಾರ ನಡೆಸಿದ್ದರು.
೧. ಬೆಳಗಾವಿ ಜಿಲ್ಲೆಯಲ್ಲಿ ೧೯ ಸ್ಥಾನಗಳಲ್ಲಿ ೧೧ ಮತದಾರ ಕೇಂದ್ರಗಳಲ್ಲಿ ಕಾಂಗ್ರೆಸ್ ಜಯ ಗಳಿಸಿದೆ. ಭಾಜಪದ ಪ್ರಮುಖ ವಿಜಯ ಸಾಧಿಸಿರುವ ಅಭ್ಯರ್ಥಿಯಲ್ಲಿ ಬೆಳಗಾವಿ ದಕ್ಷಿಣದ ಅಭಯ ಪಾಟೀಲ, ಖಾನಾಪುರದ ವಿಠಲ ಹಲಗೆಕರ ಹಾಗೂ ಗೋಕಾಕ ದಲ್ಲಿ ರಮೇಶ ಜಾರಕಿಹೊಳಿ ಇವರ ಸಮಾವೇಶವಿದೆ. ಬೆಳಗಾವಿ ಗ್ರಾಮಾಂತರದಲ್ಲಿ ಕಾಂಗ್ರೆಸ್ಸಿನ ಅಭ್ಯರ್ಥಿ ಲಕ್ಷ್ಮಿ ಹೆಬ್ಬಾಳಕರ ಇವರು ಗೆಲುವು ಸಾಧಿಸಿದ್ದಾರೆ.
೨. ಅಥಣಿಯಿಂದ ಬಸವರಾಜ ಬೊಮ್ಮಾಯಿ ಸರಕಾರದ ಉಪ ಮುಖ್ಯಮಂತ್ರಿಯಾಗಿರುವ ಲಕ್ಷ್ಮಣ ಸವದಿ ಇವರಿಗೆ ಟಿಕೆಟ್ ನಿರಾಕರಿಸಲಾಗಿತ್ತು. ಅವರು ಕಾಂಗ್ರೆಸ್ಸಿಗೆ ಸೇರಿ ಚುನಾವಣೆ ಎಲ್ಲಿ ಸ್ಪರ್ಧಿಸಿ ಜಯಗಳಿಸಿದ್ದಾರೆ.