ಉತ್ತರ ಪ್ರದೇಶ ಸರಕಾರದ ಆದೇಶಕ್ಕೆ ವಿರೋಧ ವ್ಯಕ್ತಪಡಿಸುವ ಅರ್ಜಿಯನ್ನು ಅಲಹಾಬಾದ ಉಚ್ಚ ನ್ಯಾಯಾಲಯವು ತಿರಸ್ಕರಿಸಿದೆ !

ರಾಮನವಮಿ ಮತ್ತು ಚೈತ್ರ ನವರಾತ್ರಿಯ ಸಮಯದಲ್ಲಿ ಧಾರ್ಮಿಕ ಕಾರ್ಯಕ್ರಮಕ್ಕೆ ಪ್ರತಿ ಜಿಲ್ಲೆಗೆ ೧ ಲಕ್ಷ ರೂಪಾಯಿ ನೀಡುವ ಪ್ರಕಾರಣ

ಅಲಹಾಬಾದ ಉಚ್ಚ ನ್ಯಾಯಾಲಯ

ಪ್ರಯಾಗರಾಜ (ಉತ್ತರಪ್ರದೇಶ) – ಉತ್ತರಪ್ರದೇಶದಲ್ಲಿನ ಭಾಜಪ ಸರಕಾರವು ರಾಮನವಮಿ ಮತ್ತು ಚೈತ್ರ ನವರಾತ್ರಿಯ ಸಮಯದಲ್ಲಿ ಧಾರ್ಮಿಕ ಕಾರ್ಯಕ್ರಮದ ಆಯೋಜನೆಗಾಗಿ ಪ್ರತಿಯೊಂದು ಜಿಲ್ಲೆಗೆ ೧ ಲಕ್ಷ ರೂಪಾಯಿ ಸಹಾಯ ನೀಡುವ ಆದೇಶ ನೀಡಿದ್ದು. ಇದನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಅಲಹಾಬಾದ್ ಉಚ್ಚ ನ್ಯಾಯಾಲಯವು ತಿರಸ್ಕರಿಸಿದೆ. ಈ ಹಿಂದೆ ಉಚ್ಚ ನ್ಯಾಯಾಲಯದ ಸಮನ್ವಯ ಪೀಠದಿಂದ ಈ ಸಂದರ್ಭದಲ್ಲಿನ ಅರ್ಜಿಯನ್ನು ತಿರಸ್ಕರಿಸಿತ್ತು. ಈ ನಿರ್ಣಯಕ್ಕೆ ಆವಾಹನ ನೀಡಲಾಗಿತ್ತು.

ಉಚ್ಚ ನ್ಯಾಯಾಲಯವು, ಸರಕಾರದ ಪ್ರವಾಸೋದ್ಯಮ ಇಲಾಖೆಯಿಂದ ಈ ಕುರಿತಾದ ಆದೇಶ ನೀಡಲಾಗಿತ್ತು. ಈ ಆದೇಶ ವಿವಿಧ ಅಭಿವೃದ್ಧಿ ಕಾರ್ಯ ಹಾಗೂ ದೇವಸ್ಥಾನಕ್ಕಾಗಿ ಮತ್ತು ಮೂಲಭೂತ ಸೌಲಭ್ಯದ ಅಭಿವೃದ್ಧಿಯ ಪ್ರಚಾರಕ್ಕಾಗಿ ನೀಡಲಾಗಿತ್ತು, ಎಂಬುದು ಗಮನಕ್ಕೆ ಬರುತ್ತದೆ. ಯಾವುದೇ ದೇವಸ್ಥಾನಕ್ಕೆ ಅಥವಾ ಅರ್ಚಕರಿಗೆ ಈ ಹಣ ನೀಡಲಾಗಿಲ್ಲ ಎಂದು ಹೇಳಿದೆ.