ಪುರಿ (ಓರಿಸ್ಸಾ) ಇಲ್ಲಿಯ ಪ್ರಸಿದ್ಧ ಜಗನ್ನಾಥ ದೇವಸ್ಥಾನದ ಖಜಾನೆಯನ್ನು ತೆರೆಯಿರಿ ! – ಭಾಜಪ ಮತ್ತು ಕಾಂಗ್ರೆಸ್ ಪಕ್ಷಗಳ ಕೋರಿಕೆ

ಖಜಾನೆಯ ಕೀಲಿಕೈ ಕಳೆದುಹೋಗಿದೆಯೆಂದು ರಾಜ್ಯ ಸರಕಾರದ ಹೇಳಿಕೆ !

ಪುರಿ (ಓರಿಸ್ಸಾ) ಪ್ರಸಿದ್ಧ ಜಗನ್ನಾಥ ದೇವಸ್ಥಾನ

ಪುರಿ (ಓರಿಸ್ಸಾ) – ಇಲ್ಲಿಯ ಜಗನ್ನಾಥ ದೇವಸ್ಥಾನದ ರತ್ನಗಳಿಂದ ತುಂಬಿರುವ ಖಜಾನೆ 39 ವರ್ಷಗಳಿಂದ ಮುಚ್ಚಿದೆ. 1984 ರಲ್ಲಿ ಅದನ್ನು ಕೊನೆಯದಾಗಿ ತೆರೆಯಲಾಗಿತ್ತು. ಈ ಖಜಾನೆಯಲ್ಲಿ 150 ಕೇಜಿ ಬಂಗಾರ ಮತ್ತು 258 ಕೇಜಿ ಬೆಳ್ಳಿಯಿದೆ. ಖಜಾನೆಯನ್ನು ತೆರೆದು ಲೆಕ್ಕ ಪರಿಶೋಧಕರಿಂದ ತಪಾಸಣೆ ನಡೆಸಬೇಕು ಎಂದು ಭಾಜಪ ಮತ್ತು ಕಾಂಗ್ರೆಸ್ ಪಕ್ಷಗಳು ಕೋರಿವೆ. ಓರಿಸ್ಸಾ ಉಚ್ಚ ನ್ಯಾಯಾಲಯವೂ ಈ ಪ್ರಕರಣದಲ್ಲಿ ರಾಜ್ಯ ಸರಕಾರದಿಂದ ಜುಲೈ 10 ರ ವರೆಗೆ ಉತ್ತರ ಕೋರಿದೆ. ಖಜಾನೆಯನ್ನು ತೆರೆಯದಿರುವ ಹಿಂದೆ ರತ್ನ ಭಂಡಾರದ ಒಳಗಿನ ಕೋಣೆಯ ಕೀಲಿಕೈ ಕಳೆದುಹೋಗಿದೆಯೆಂದು ರಾಜ್ಯ ಸರಕಾರ ಕಾರಣ ನೀಡುತ್ತಿದೆ.

ಸಂಪಾದಕರ ನಿಲುವು

ಸರಕಾರೀಕರಣದ ದುಷ್ಪರಿಣಾಮ ! ಇಂತಹ ಬೇಜವಾಬ್ದಾರಿಯಿಂದ ಉತ್ತರ ನೀಡುವ ಬಿಜು ಜನತಾದಳದ ಸರಕಾರವನ್ನು ಕೂಡಲೇ ವಜಾಗೊಳಿಸಬೇಕು !

ದೇವಸ್ಥಾನವನ್ನು ಸರಕಾರದ ವಶಕ್ಕೆ ಒಪ್ಪಿಸುವುದು ಎಂದರೆ ಹಸುವನ್ನು ಕಟುಕನ ವಶಕ್ಕೆ ಒಪ್ಪಿಸಿದಂತೆ ಇದೆ ಎಂಬುದು ಹಿಂದೂಗಳು ಎಂದು ಅರ್ಥ ಮಾಡಿಕೊಳ್ಳುವರು ? ದೇಶಾದ್ಯಂತವಿರುವ ದೇವಸ್ಥಾನಗಳನ್ನು ಸರಕಾರೀಕರಣದಿಂದ ಮುಕ್ತಗೊಳಿಸಲು ಹಿಂದೂಗಳು ನ್ಯಾಯೋಚಿತ ಮಾರ್ಗದಿಂದ ಪ್ರಭಾವಯುತವಾಗಿ ಹೋರಾಡಲು ಪ್ರಯತ್ನಿಸಬೇಕು !