೧೨ ಜ್ಯೋತಿರ್ಲಿಂಗಗಳಲ್ಲಿ ಪ್ರಥಮವಾಗಿರುವ ಮೂಲ ಸೋಮನಾಥ ಜ್ಯೋತಿರ್ಲಿಂಗದ ದಿವ್ಯ ಅಂಶಗಳು ಸನಾತನ ಸಂಸ್ಥೆಗೆ ಸಮರ್ಪಣೆ !

ತಂಜಾವೂರಿನ ವೇದಪ್ರಚಾರರತ್ನ ವೇದಕುಲಪತಿ ಜಿ.ಕೆ. ಸೀತಾರಾಮನ್ ಗುರೂಜಿ ಇವರು ಮೂಲ ಸೋಮನಾಥ ಜ್ಯೋತಿರ್ಲಿಂಗದ ದಿವ್ಯ ಅಂಶಗಳ ಪೈಕಿ ೪ ದಿವ್ಯ ಅಂಶಗಳನ್ನು ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಧರ್ಮಸಂಸ್ಥಾಪನೆಯ ಕಾರ್ಯಕ್ಕಾಗಿ ಸಮರ್ಪಿಸಿದರು !

ಯಜ್ಞಗಳನ್ನು ಆಯೋಜಿಸುವಲ್ಲಿ ಸಚ್ಚಿದಾನಂದ ಪರಬ್ರಹ್ಮ ಡಾಕ್ಟರರ ವ್ಯಾಪಕ ಉದ್ದೇಶ !

ಯಜ್ಞ ನಡೆಯುವ ಸ್ಥಳದಲ್ಲಿ ಅಲ್ಲಿನ ಸಾಧಕರಿಗೆ ಚೈತನ್ಯದ ಲಾಭವಾಗುತ್ತದೆ. ಯಜ್ಞದಿಂದ ನಿರ್ಮಾಣವಾಗುವ ಸಾತ್ತ್ವಿಕ ಲಹರಿಗಳಿಂದಾಗಿ ಸಾಧಕರ ಆಧ್ಯಾತ್ಮಿಕ ತೊಂದರೆಗಳು ಕಡಿಮೆಯಾಗಲು ಸಹಾಯವಾಗುತ್ತದೆ.

ಜ್ಞಾನಮೂರ್ತಿ, ನಿರ್ಗುಣ ತತ್ತ್ವದ ನಿತ್ಯ ಅನುಭವ ನೀಡುವ ಮತ್ತು ಬ್ರಹ್ಮಾನಂದದಲ್ಲಿ ಮಗ್ನರಾಗಿರುವ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ

ಸಚ್ಚಿದಾನಂದ ಪರಬ್ರಹ್ಮ ಡಾಕ್ಟರರು ಯಾವಾಗಲೂ ಸತ್-ಚಿತ್-ಆನಂದ ಈ ಸ್ಥಿತಿಯಲ್ಲಿರುತ್ತಾರೆ. ಆದ್ದರಿಂದ ಅವರಿಗೆ ತಮ್ಮ ಸ್ಥೂಲದೇಹದ ಅರಿವು ಇರುವುದಿಲ್ಲ. ಅವರಿಗೆ ಕೇವಲ ಚೈತನ್ಯದ ಅರಿವು ಇರುತ್ತದೆ.

ಸಚ್ಚಿದಾನಂದ ಪರಬ್ರಹ್ಮ ಗುರುದೇವರು ೩೦ ವರ್ಷಗಳ ಹಿಂದೆ ನೀಡಿದ ಆಶೀರ್ವಚನದ ಅನುಭೂತಿಯನ್ನು ಸಾಧಕರು ಪ್ರತಿಕ್ಷಣವೂ ಪಡೆಯುತ್ತಿದ್ದಾರೆ !

ಈ ವಚನದ ಮೂಲಕ ಗುರುದೇವರು ೩೦ ವರ್ಷಗಳ ಹಿಂದೆಯೇ ಸಾಧಕರಿಗೆ ತಮ್ಮ ನಿರ್ಗುಣ ತತ್ತ್ವದ ಅನುಭವವನ್ನು ನೀಡಿದ್ದರು. ಇಂದು ಜಗತ್ತಿನ ಯಾವುದೇ ಮೂಲೆಯಲ್ಲಿರುವ ಸಾಧಕನು ಅತ್ಯಂತ ತಳಮಳದಿಂದ ಮತ್ತು ಆರ್ತತೆಯಿಂದ ಗುರುದೇವರನ್ನು ಕರೆದರೆ, ಅವರು ಒಂದು ಕ್ಷಣವೂ ತಡ ಮಾಡದೇ ಅವರು ಅವನ ಸಹಾಯಕ್ಕೆ ಧಾವಿಸಿ ಬರುತ್ತಾರೆ.

‘ಶ್ರೀ ಗುರುಗಳ ಮೇಲಿನ ಶ್ರದ್ಧೆ’ಯೇ ಭವಸಾಗರ ದಾಟಲು ಏಕೈಕ ಮೂಲಮಂತ್ರ

‘ಇಂತಹ ಸರ್ವವ್ಯಾಪಿ, ನಿರ್ಗುಣ ಮತ್ತು ಅಗಾಧ ಸ್ವರೂಪರಾಗಿರುವ ಶ್ರೀ ಗುರುಗಳ ಮೇಲೆ ಮೆರುಪರ್ವತದಂತಹ ಅಚಲ ಶ್ರದ್ಧೆಯನ್ನಿಟ್ಟು ಕೊನೆಯ ಶ್ವಾಸದ ವರೆಗೆ ಅವರ ಬೋಧನೆಯಂತೆ ನಡೆಯುತ್ತೇವೆ !’, ಎಂದು ಸಂಕಲ್ಪ ಮಾಡೋಣ.

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ವಿವಿಧ ಕೃತಿಗಳಿಂದ ಪ್ರಕ್ಷೇಪಿಸುವ ಸ್ಪಂದನಗಳ ಅಧ್ಯಯನ

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಈ ಕೃತಿಯು ಎಲ್ಲಕ್ಕಿಂತ ಸತ್ವಗುಣಿ ಆಗಿತ್ತು. ಯಾರಿಗೆ ನಾವು ಆರತಿ ಮಾಡುತ್ತೇವೆಯೋ, ಅವರ ಬಳಿ ಈಶ್ವರೀಯ ತತ್ತ್ವವು ಬರುತ್ತದೆ ಎಂಬುದು ಇದರಿಂದ ಗಮನಕ್ಕೆ ಬರುತ್ತದೆ.

ರಾಷ್ಟ್ರ ರಕ್ಷಣೆಗಾಗಿ ಮುಂಬಯಿನಲ್ಲಿ ನಡೆದ ‘ಶ್ರೀ ರಾಜಮಾತಂಗಿ ಮಹಾಯಜ್ಞ’!

ಮುಂಬಯಿನಲ್ಲಿ ಯಜ್ಞ ಮುಕ್ತಾಯವಾದ ಕೂಡಲೇ ರಾಮನಾಥಿಯಲ್ಲಿರುವ ಸನಾತನದ ಆಶ್ರಮ ಪರಿಸರದಲ್ಲಿ ಗುಡುಗು ಮಿಂಚುಗಳೊಂದಿಗೆ ಮಳೆ ಸುರಿಯಿತು, ವರುಣರಾಜ ಮತ್ತು ದೇವತೆಗಳು ಈ ರೂಪದಲ್ಲಿ ಸನಾತನಕ್ಕೆ ಆಶೀರ್ವಾದ ನೀಡಿದರೋ ಎಂಬಂತಿತ್ತು.

ಶ್ರೀ ರಾಜಮಾತಂಗಿ ಮಹಾಯಜ್ಞವು ನಿರ್ವಿಘ್ನವಾಗಿ ನೆರವೇರಲು ಶ್ರೀ ಸಿದ್ಧಿವಿನಾಯಕನ ಚರಣಗಳಲ್ಲಿ ಸನಾತನ ಸಂಸ್ಥೆಯ ಧರ್ಮಪ್ರಚಾರಕ ಸದ್ಗುರುಗಳು ಮತ್ತು ಸಂತರಿಂದ ಪ್ರಾರ್ಥನೆ !

ಈ ಸಂದರ್ಭದಲ್ಲಿ ಡಾ. ಸದ್ಗುರುಗಳು ಮತ್ತು ಸಂತರು ಅಠವಳೆ ಅವರ ಉತ್ತಮ ಆರೋಗ್ಯ, ವಿಪತ್ತುಗಳಿಂದ ಸಾಧಕರ ರಕ್ಷಣೆ, ಹಿಂದೂ ರಾಷ್ಟ್ರದ ಶೀಘ್ರ ಸ್ಥಾಪನೆ, ಶ್ರೀ ಸಿದ್ಧಿವಿನಾಯಕರು ಯಜ್ಞದಲ್ಲಿ ಪಾಲ್ಗೊಳ್ಳುವುದು, ರಾಜಮಾತಂಗಿ ಮಹಾಯಜ್ಞದ ಸುಗಮ ನಿರ್ವಹಣೆ, ದೇಶದ ರಕ್ಷಣೆ ಮತ್ತು ಜನರ ಉತ್ತಮ ಆರೋಗ್ಯಕ್ಕಾಗಿ ಪ್ರಾರ್ಥಿಸಿದರು.

ರಾಷ್ಟ್ರದ ಏಳಿಗೆಗಾಗಿ ಇಂದು ಮುಂಬಯಿಯಲ್ಲಿ ನಡೆಯಲಿದೆ ಶ್ರೀ ರಾಜಮಾತಂಗಿ ಮಹಾಯಜ್ಞ!

ಶ್ರೀ ರಾಜಮಾತಂಗಿ ಮಹಾಯಜ್ಞದ ನೇರ ಪ್ರಸಾರ ನೋಡಲು ಈ ಕೆಳಗಿನ ಲೀಂಕ್ ಅನ್ನು ಕ್ಲಿಕ್ ಮಾಡಿರಿ !

♦ Youtube.com/@SanatanSanstha
♦ SanatanRashtraShankhnad.in/events/shri-rajamatangi-mahayajna

ಸನಾತನದ ಆಶ್ರಮ ರಾಮನಾಥಿಯಲ್ಲಿ ಭಾವಪೂರ್ಣ ವಾತಾವರಣದಲ್ಲಿ ಶ್ರೀ ಚಂಡಿ ಹೋಮ ಸಂಪನ್ನ

‘ಹಿಂದೂ ರಾಷ್ಟ್ರವು ಆದಷ್ಟು ಬೇಗ ಸ್ಥಾಪನೆಯಾಗಲಿ, ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಅವರಿಗೆ ಉತ್ತಮ ಆರೋಗ್ಯ ಲಭಿಸಲಿ ಮತ್ತು ಸಾಧಕರ ಸಾಧನೆ ಉತ್ತಮವಾಗಿ ನಡೆದು ಅವರ ರಕ್ಷಣೆಯಾಗಲಿ’ ಎಂಬ ಉದ್ದೇಶದಿಂದ ಸನಾತನ ಆಶ್ರಮದಲ್ಲಿ ಶ್ರೀ ಚಂಡಿ ಹೋಮವು ನೆರವೇರಿತು.