ರಾಮನಾಥಿಯಲ್ಲಿನ ಸನಾತನ ಸಂಸ್ಥೆಯ ಆಶ್ರಮದಲ್ಲಿ ಶ್ರೀಸತ್‌ಶಕ್ತಿ (ಸೌ.) ಬಿಂದಾ ನೀಲೇಶ ಸಿಂಗಬಾಳ ಮತ್ತು ಕುರುಕ್ಷೇತ್ರದ ಶ್ರೀ ಕಾತ್ಯಾಯನಿದೇವಿ ದೇವಸ್ಥಾನದಲ್ಲಿ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಮುಕುಲ ಗಾಡಗೀಳ ಇವರ ವಂದನೀಯ ಉಪಸ್ಥಿತಿಯಲ್ಲಿ ನೆರವೇರಿದ ಹೋಮ !
ರಾಮನಾಥಿ (ಗೋವಾ) / ಕುರುಕ್ಷೇತ್ರ (ಹರಿಯಾಣಾ) – ಸಪ್ತರ್ಷಿಗಳ ಆಜ್ಞೆಯಂತೆ ಗೋವಾದ ರಾಮನಾಥಿಯ ಸನಾತನ ಸಂಸ್ಥೆಯ ಆಶ್ರಮದಲ್ಲಿ ಮತ್ತು ಕುರುಕ್ಷೇತ್ರ (ಹರಿಯಾಣಾ)ದಲ್ಲಿ ‘ಚಾಮುಂಡಾ ಹೋಮ’ ವನ್ನು ಮಾಡಲಾಯಿತು. ರಾಮನಾಥಿಯಲ್ಲಿನ ಸನಾತನ ಸಂಸ್ಥೆಯ ಆಶ್ರಮದಲ್ಲಿ ಶ್ರೀಸತ್‌ಶಕ್ತಿ (ಸೌ.) ಬಿಂದಾ ನೀಲೇಶ ಸಿಂಗಬಾಳ ಮತ್ತು ಬ್ರಹ್ಮಸರೋವರ, ಕುರುಕ್ಷೇತ್ರದಲ್ಲಿನ ಶ್ರೀ ಕಾತ್ಯಾಯನಿದೇವಿ ದೇವಸ್ಥಾನದಲ್ಲಿ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಮುಕುಲ ಗಾಡಗೀಳ ಇವರ ವಂದನೀಯ ಉಪಸ್ಥಿತಿ ಯಲ್ಲಿ ‘ಚಾಮುಂಡಾ ಹೋಮ’ವು ನೆರವೇರಿತು. ಈ ಎರಡೂ ಸ್ಥಳಗಳಲ್ಲಿ ಹೋಮಗಳು ಮಧ್ಯಾಹ್ನ ೧೨ ರಿಂದ ೧ ಈ ಸಮಯದಲ್ಲಿ ನೆರವೇರಿದವು. ಈ ಎರಡೂ ಹೋಮಗಳ ಸಮಯದಲ್ಲಿ ‘ಮೂರನೇ ವಿಶ್ವಯುದ್ಧದಲ್ಲಿ ಎಲ್ಲೆಡೆಯ ಸಾಧಕರ ರಕ್ಷಣೆಯಾಗಲಿ’, ಎಂಬ ಪ್ರಾರ್ಥನೆಯನ್ನು ಮಾಡ ಲಾಯಿತು. ರಾಮನಾಥಿಯ ಸನಾತನ ಸಂಸ್ಥೆಯ ಆಶ್ರಮದಲ್ಲಿ ಹೋಮದ ಪೌರೋಹಿತ್ಯವನ್ನು ಸನಾತನ ಸಂಸ್ಥೆಯ ಪುರೋಹಿತ ಪಾಠಶಾಲೆಯ ಶ್ರೀ. ಅಮರ ಜೋಶಿ ಮತ್ತು ಶ್ರೀ. ಸಿದ್ದೇಶ ಕರಂದೀಕರ ಇವರು ಮಾಡಿದರು. ಅದೇ ರೀತಿ ಬ್ರಹ್ಮಸರೋವರ, ಕುರುಕ್ಷೇತ್ರದಲ್ಲಿ ಶ್ರೀ ಕಾತ್ಯಾಯನಿದೇವಿ ಪೀಠದ ಮಹಂತ ಪೂ. ಬಲರಾಮ ಗೌತಮಗುರುಜಿಯವರು ಚಾಮುಂಡಾ ಹವನವನ್ನು ಮಾಡಿಸಿಕೊಂಡರು.
ಗುರುಪೂರ್ಣಿಮೆಯ ದಿನ ಚಾಮುಂಡಾಯಾಗವನ್ನು ಮಾಡುವ ವಿಷಯದಲ್ಲಿ ಸಪ್ತರ್ಷಿಗಳು ಹೇಳಿದ ಅಂಶಗಳು೭ ಜುಲೈ ೨೦೨೪ ರಂದು ಚೆನ್ನೈನಲ್ಲಿ ನಡೆದ ೨೪೬ ನೇ ಸಪ್ತರ್ಷಿಗಳ ಜೀವನಾಡಿಪಟ್ಟಿವಾಚನದಲ್ಲಿ ಮಹರ್ಷಿಗಳು, ‘೨೦೨೪ ರ ಗುರುಪೂರ್ಣಿಮೆಯ ನಂತರ ಗ್ರಹಗತಿಗನುಸಾರ ಭೂಮಿಯ ಮೇಲೆ ಮೂರನೇ ವಿಶ್ವಯುದ್ಧದ ಚಿಹ್ನೆಗಳು ಕಾಣಿಸತೊಡಗುತ್ತವೆ. ಈ ಕಾಲಾವಧಿಯಲ್ಲಿ ಪೃಥ್ವಿಯಲ್ಲಿ ವಿವಿಧ ಪ್ರದೇಶಗಳಲ್ಲಿ ಯುದ್ಧಜನ್ಯ ಸ್ಥಿತಿ ಉತ್ಪನ್ನವಾಗಲಿದೆ. ಮುಂದೆ ನಡೆಯಲಿರುವ ಮೂರನೇ ವಿಶ್ವಯುದ್ಧದಲ್ಲಿ ಎಲ್ಲೆಡೆಯ ಸಾಧಕರ ರಕ್ಷಣೆಯಾಗಲು ಯಜ್ಞ-ಯಾಗಗಗಳ ಆವಶ್ಯಕತೆ ಇದೆ. ಇದಕ್ಕಾಗಿ ೨೧ ಜುಲೈ ೨೦೨೪ ಈ ದಿನದಂದು ಗುರುಪೂರ್ಣಿಮೆಯ ದಿನ ಶ್ರೀಸತ್‌ಶಕ್ತಿ (ಸೌ.) ಬಿಂದಾ ನೀಲೇಶ ಸಿಂಗಬಾಳ ಮತ್ತು ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರು ಚಾಮುಂಡಾದೇವಿಯ ಸಲುವಾಗಿ ಯಜ್ಞ ಮಾಡಬೇಕು. ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರು ಮಹಾಭಾರತ ಯುದ್ಧ ನಡೆದ ಕುರುಕ್ಷೇತ್ರದ ಯುದ್ಧಭೂಮಿಗೆ ಹೋಗಿ ಮಧ್ಯಾಹ್ನ ೧೨ ರಿಂದ ೧ ಈ ಮುಹೂರ್ತದ ಸಮಯದಲ್ಲಿ, ಮತ್ತು ಶ್ರೀಸತ್‌ಶಕ್ತಿ (ಸೌ.) ಬಿಂದಾ ನೀಲೇಶ ಸಿಂಗಬಾಳ ಇವರು ಗೋವಾದ, ರಾಮನಾಥಿಯಲ್ಲಿನ ಸನಾತನ ಆಶ್ರಮದಲ್ಲಿ ಅದೇ ಸಮಯದಲ್ಲಿ ‘ಚಾಮುಂಡಾ ಹೋಮ’ವನ್ನು ಮಾಡಬೇಕು’, ಎಂದು ಹೇಳಿದ್ದರು. |