ಕುರುಕ್ಷೇತ್ರ (ಹರಿಯಾಣ) – ಸಪ್ತರ್ಷಿಗಳ ಆಜ್ಞೆಯಂತೆ ಗೋವಾದ ರಾಮನಾಥಿಯಲ್ಲಿನ ಸನಾತನ ಸಂಸ್ಥೆಯ ಆಶ್ರಮದಲ್ಲಿ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಆಧ್ಯಾತ್ಮಿಕ ಉತ್ತರಾಧಿಕಾರಿಗಳಲ್ಲೊಬ್ಬರಾದ ಶ್ರೀಸತ್‌ಶಕ್ತಿ (ಸೌ.) ಬಿಂದಾ ನೀಲೇಶ ಸಿಂಗಬಾಳ ಹಾಗೂ ಕುರುಕ್ಷೇತ್ರದಲ್ಲಿನ ಶ್ರೀ ಕಾತ್ಯಾಯನೀದೇವಿಯ ದೇವಸ್ಥಾನದಲ್ಲಿ ಇನ್ನೊರ್ವ ಉತ್ತರಾಧಿಕಾರಿ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಮುಕುಲ ಗಾಡಗೀಳರ ವಂದನೀಯ ಉಪಸ್ಥಿತಿಯಲ್ಲಿ ‘ಚಾಮುಂಡಾ ಹೋಮ’ ನೆರವೇರಿತು. ಈ ಹೋಮವನ್ನು ೨೧ ಜುಲೈ ೨೦೨೪ ರಂದು ಅಂದರೆ ಗುರುಪೂರ್ಣಿಮೆಯ ನಿಮಿತ್ತ ಮಾಡಲಾಯಿತು. ಶ್ರೀ ಕಾತ್ಯಾಯನೀದೇವಿಯ ದೇವಸ್ಥಾನದಲ್ಲಿ ಚಾಮುಂಡಾ ಹೋಮವನ್ನು ಮಾಡುವ ಮೊದಲು ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರು ದೇವಿಯ ದರ್ಶನವನ್ನು ಭಾವಪೂರ್ಣವಾಗಿ ಪಡೆಯುತ್ತ ‘ಮುಂಬರುವ ಮೂರನೇ ಮಹಾಯುದ್ಧದಲ್ಲಿ ಎಲ್ಲೆಡೆ ಇರುವ ಸಾಧಕರ ರಕ್ಷಣೆಯಾಗಬೇಕು’ ಎಂದು ಪ್ರಾರ್ಥನೆ ಮಾಡಿದರು. ಅದರೊಂದಿಗೆ ಕುರುಕ್ಷೇತ್ರದಲ್ಲಿರುವ ಅಕ್ಷಯ ವಟವೃಕ್ಷದ ಭಾವಪೂರ್ಣ ದರ್ಶನವನ್ನು ಪಡೆಯುವಾಗ ಮೇಲಿನ ಪ್ರಾರ್ಥನೆ ಮಾಡಿದರು. (ಈ ವಟವೃಕ್ಷದ ಕೆಳಗೆ ಭಗವಾನ ಶ್ರೀಕೃಷ್ಣರು ಅರ್ಜುನನಿಗೆ ಭಗವದ್ಗೀತೆಯನ್ನು ಬೋಧಿಸಿದ್ದರು.)
ಕುರುಕ್ಷೇತ್ರದಲ್ಲಿರುವ ಸಾಧಕ ಕುಟುಂಬದವರಾದ ಶ್ರೀ. ಶ್ರೀನಿವಾಸ ದುಧಗಾಂವಕರ, ಅವರ ಪತ್ನಿ ಸೌ. ಸಂಪದಾ ದುಧಗಾಂವಕರ ಹಾಗೂ ಸುಪುತ್ರ ಕು. ಸ್ವರೂಪ ದುಧಗಾಂವಕರ ರವರು ೨-೩ ದಿನಗಳಿಂದ ಚಾಮುಂಡಾ ಹವನಕ್ಕಾಗಿ ಎಲ್ಲ ಪೂರ್ವಸಿದ್ಧತೆಗಳನ್ನು ಮಾಡಿದರು.
ಕುರುಕ್ಷೇತ್ರದಲ್ಲಿನ ಚಾಮುಂಡಾ ಹೋಮದ ವೈಶಿಷ್ಟ್ಯಪೂರ್ಣ ಕ್ಷಣಚಿತ್ರಗಳು !
೧. ಬ್ರಹ್ಮಸರೋವರದಲ್ಲಿನ ಶ್ರೀ ಕಾತ್ಯಾಯನಿ ದೇವಸ್ಥಾನದಲ್ಲಿ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರ ಆಗಮನವಾಗುತ್ತಲೇ ಮಹಂತ ಪೂ. ಬಲರಾಮ ಗೌತಮಗುರೂಜಿ ಯವರು ಶ್ರೀಚಿತ್‌ಶಕ್ತಿಯವರ ಕುಂಕುಮವನ್ನು ನೋಡಿ ‘ನಾನು ಅನೇಕ ಬಾರಿ ಕೊಲ್ಹಾಪುರ ಶ್ರೀಮಹಾಲಕ್ಷ್ಮಿ ದೇವಿಯ ದರ್ಶನಕ್ಕೆ ಹೋಗಿದ್ದೆನು; ಆದರೆ ಇಂದು ಕೊಲ್ಹಾಪುರದ ಶ್ರೀಮಹಾಲಕ್ಷ್ಮಿದೇವಿಯು ಮಾತೆಯ (ಶ್ರೀಚಿತ್‌ಶಕ್ತಿ (ಸೌ.) ಗಾಡಗೀಳರ) ರೂಪದಲ್ಲಿ ಆಗಮಿಸುತ್ತಿದ್ದಾರೆ, ಎಂದು ಹೇಳಿದರು.
೨. ಚಾಮುಂಡಾ ಹವನ ನಡೆಯತ್ತಿರುವಾಗ ಮಹಂತ ಪೂ. ಬಲರಾಮ ಗೌತಮಗುರೂಜಿ ಹಾಗೂ ಇನ್ನೂ ೪ ವೇದಮೂರ್ತಿಗಳು ಉಪಸ್ಥಿತರಿದ್ದರು. ಸಂಕಲ್ಪ ಮಾಡಿಸಿಕೊಳ್ಳುವಾಗ ಪೂ. ಬಲರಾಮ ಗೌತಮಗುರೂಜಿಯವರು, ‘ಮಾತೆಯು ಇಂದಿನ ಕಾಲದ ಝಾನ್ಸಿ ರಾಣಿ ಲಕ್ಷ್ಮೀಬಾಯಿಯಂತೆ ಕಾಣಿಸುತ್ತಿದ್ದಾರೆ’, ಎಂದು ಹೇಳಿದರು.
೩. ಚಾಮುಂಡಾ ಹವನ ನಡೆಯುತ್ತಿರುವಾಗ ನೂರಾರು ಕಪ್ಪು ಇರುವೆಗಳು ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳರ ಹತ್ತಿರ ಬಂದವು. ಇದನ್ನು ನೋಡಿ ಮಹಂತ ಪೂ. ಬಲರಾಮ ಗೌತಮಗುರೂಜಿಯವರು, ‘ಕಪ್ಪು ಇರುವೆಗಳು ರಾಹು ಗ್ರಹದ ಅಂದರೆ ವಿಕೃತಿಯ ಪ್ರತೀಕವಾಗಿವೆ. ಸಿಹಿ ಪದಾರ್ಥ ಅಥವಾ ಇತರ ಯಾವುದೇ ಕಾರಣವಿಲ್ಲದಿರುವಾಗಲೂ ಇರುವೆಗಳು ಬರುವುದು, ಇದು ತಮ್ಮ ಮೇಲೆ (ಸನಾತನ ಸಂಸ್ಥೆಯ ಮೇಲೆ) ಜಾರಣ-ಮಾರಣ ತಂತ್ರ ಮಾಡಿರುವುದರ ಲಕ್ಷಣವಾಗಿದೆ. ನಿಮ್ಮ ಸುತ್ತಲೂ ಸಂರಕ್ಷಣಾ ಕವಚವು ಇರುವುದರಿಂದಲೇ ನಿಮ್ಮ ಸೀರೆಯ ಮೇಲೆ ಒಂದು ಇರುವೆಯೂ ಹತ್ತಲಿಲ್ಲ’, ಎಂದು ಹೇಳಿದರು.
೪. ಚಾಮುಂಡಾ ಹವನವು ಪೂರ್ಣವಾದ ನಂತರ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳರೊಂದಿಗೆ ಮಾತನಾಡುವಾಗ ಮಹಂತ ಪೂ. ಬಲರಾಮ ಗೌತಮಗುರೂಜಿಯವರು, ಮಾತೆ. ನಿಮ್ಮನ್ನು ನೋಡಿ ನೀವು ಹಿಂದಿನ ಜನ್ಮದಲ್ಲಿ ಒಂದು ಗುಹೆಯಲ್ಲಿ ವಾಸಿಸುತ್ತಿದ್ದೀರಿ, ಆ ಜನ್ಮವೂ ದೈವೀಜನ್ಮವಾಗಿತ್ತು ಎಂದು ಅನಿಸುತ್ತದೆ, ಎಂದು ಹೇಳಿದರು.
೫. ದೇವಿಯ ಗರ್ಭಗುಡಿಯಲ್ಲಿ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳರು ಕೈ ಜೋಡಿಸಿದಾಗ ಹೊರಗಿನಿಂದ ಯಾರೋ ಒಬ್ಬರು ಶಂಖನಾದ ಮಾಡಿದರು. ಆಗ ‘ಕುರುಕ್ಷೇತ್ರವು ಯುದ್ಧಭೂಮಿಯಾಗಿದೆ. ಈ ಶಂಖನಾದವು ಕುರುಕ್ಷೇತ್ರದಲ್ಲಿ ಆದ ಶಂಖನಾದವಾಗಿದೆ’, ಎಂದು ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರಿಗೆ ಅರಿವಾಯಿತು.
೬. ದೇವಿಯ ಚರಣಗಳಲ್ಲಿ ೧೮ ನೇ ಶತಮಾನದಿಂದ ಪ್ರಾಚೀನವಾದ ಖಡ್ಗವನ್ನು ಇಡಲಾಗಿದೆ. ಈ ಖಡ್ಗವನ್ನು ದೇವಿಯ ಚರಣಗಳಿಂದ ಎಂದಿಗೂ ಸರಿಸವುದಿಲ್ಲ. ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳರವರು ದೇವಿಯ ಚರಣಗಳಲ್ಲಿ ಪ್ರಾರ್ಥಿಸಿದ ನಂತರ ಅಲ್ಲಿ ಉಪಸ್ಥಿತರಿದ್ದ ಅರ್ಚಕರು ದೇವಿಯ ಚರಣಗಳಲ್ಲಿರುವ ಖಡ್ಗವನ್ನು ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳರ ಹಣೆಗೆ ದೇವಿಯ ಆಶೀರ್ವಾದವೆಂದು ಸ್ಪರ್ಶ ಮಾಡಿಸಿದರು.
ಶ್ರೀಕುರುಕ್ಷೇತ್ರದ ಅಪಾರ ಮಹಿಮೆ !
ಮಹಾಭಾರತ ಯುದ್ಧದ ಮೊದಲು ಕುರುಕ್ಷೇತ್ರವನ್ನು ‘ಬ್ರಹ್ಮಕ್ಷೇತ್ರ’, ‘ಭೃಗುಕ್ಷೇತ್ರ’ ಎಂದು ಕರೆಯಲಾಗುತ್ತಿತ್ತು. ಕುರು ರಾಜನಿಂದಾಗಿ ಇದಕ್ಕೆ ‘ಕುರುಕ್ಷೇತ್ರ’ ಎಂಬ ಹೆಸರು ಬಂದಿತು. ಮಹಾಭಾರತದಲ್ಲಿ ಮಹರ್ಷಿ ವ್ಯಾಸರು ಕುರುಕ್ಷೇತ್ರವನ್ನು ‘ಧರ್ಮಕ್ಷೇತ್ರ’ ಎಂದು ಕರೆದಿದ್ದಾರೆ. ಏಕೆಂದರೆ ಈ ಭೂಮಿಯಲ್ಲಿ ನಡೆದ ಯುದ್ಧವು ಕೇವಲ ಕೌರವ-ಪಾಂಡವರ ಯುದ್ಧವಾಗಿರದೇ ಅದು ಧರ್ಮ-ಅಧರ್ಮದ ಯುದ್ಧವಾಗಿತ್ತು. ಮಹಾಭಾರತ ಯುದ್ಧವು ಧರ್ಮದ ನ್ಯಾಯತೀರ್ಪು ನೀಡುವ ಯುದ್ಧವಾಗಿತ್ತು. ಧರ್ಮ-ಅಧರ್ಮದ ಯುದ್ಧದಲ್ಲಿ ಧರ್ಮದ ವಿಜಯ ವಾಗಿದ್ದರಿಂದಲೇ ಕುರುಕ್ಷೇತ್ರಕ್ಕೆ ‘ಧರ್ಮಕ್ಷೇತ್ರ’ ಎಂದು ಕರೆಯಲಾಗಿದೆ. ಮಹಾಭಾರತ ಯುದ್ಧವು ಮಾರ್ಗಶಿರ ಶುಕ್ಲ ಏಕಾದಶಿಯಂದು ಆರಂಭವಾಯಿತು. ಯುದ್ಧದ ಮೊದಲನೇ ದಿನ ಅಂದರೆ ಏಕಾದಶಿಯಂದು ಶ್ರೀಕೃಷ್ಣನು ಕುರುಕ್ಷೇತ್ರದ ಯುದ್ಧಭೂಮಿಯಲ್ಲಿ ಅರ್ಜುನನಿಗೆ ‘ಭಗವದ್ಗೀತೆ’ಯನ್ನು ಹೇಳಿದನು. ಶ್ರೀಕೃಷ್ಣನು ಗೀತೆಯ ಮಾಧ್ಯಮದಿಂದ ಮೋಕ್ಷದ ಮಾರ್ಗವನ್ನು ತೋರಿಸಿದ್ದರಿಂದ ಮಾರ್ಗಶಿರ ಶುಕ್ಲ ಏಕಾದಶಿಯಂದು ‘ಮೋಕ್ಷದಾ ಏಕಾದಶಿ’ ಎಂದು ಕರೆಯಲಾಗುತ್ತದೆ. ಕುರುಕ್ಷೇತ್ರದಲ್ಲಿ ಪ್ರತಿವರ್ಷ ಮೋಕ್ಷದಾ ಏಕಾದಶಿಯಂದು ‘ಗೀತಾ ಮಹೋತ್ಸವ’ವನ್ನು ಆಚರಿಸಲಾಗುತ್ತದೆ. ಶ್ರೀಕೃಷ್ಣನು ಮಹಾಭಾರತ ಯುದ್ಧಕ್ಕಾಗಿ
ಕುರುಕ್ಷೇತ್ರವನ್ನು ಏಕೆ ಆಯ್ಕೆ ಮಾಡಿದನು ?
ಕುರುಕ್ಷೇತ್ರದ ಭೂಮಿಯು ‘ಕುರು’ ಹೆಸರಿನ ರಾಜನ ಭೂಮಿಯಾಗಿತ್ತು. ‘ಕುರು’ರಾಜನು ಧರ್ಮಾಚರಣೆಯಿಂದ ರಾಜ್ಯವಾಳಿದ್ದನು. ಕುರುಕ್ಷೇತ್ರದ ಭೂಮಿಯು ಧರ್ಮರಕ್ಷಣೆಗಾಗಿ ಪ್ರಸಿದ್ಧವಾಗಬೇಕು ಎಂಬುದು ಕುರು ರಾಜನ ಇಚ್ಛೆಯಾಗಿತ್ತು. ಕುರು ರಾಜನು ಇದಕ್ಕಾಗಿ ಕಠಿಣ ತಪಸ್ಸು ಮಾಡಿದನು. ಅವನ ತಪಸ್ಸಿನಿಂದಾಗಿ ದೇವತೆಗಳು ಪ್ರಸನ್ನರಾದರು. ಇದೇ ಸಮಯದಲ್ಲಿ ಕುರು ರಾಜನಿಗೆ ಇಂದ್ರನಿಂದ ‘ಕುರುಕ್ಷೇತ್ರದ ಭೂಮಿಯಲ್ಲಿ ಯುದ್ಧ ಮಾಡುತ್ತ ಸಾವನ್ನಪ್ಪುವವರಿಗೆ ಸ್ವರ್ಗ ಪ್ರಾಪ್ತಿಯಾಗುತ್ತದೆ’ ಎಂಬ ವರದಾನ ದೊರೆಯಿತು. ಈ ರಹಸ್ಯವು ಜಗದ್ಗುರು ಭಗವಾನ ಶ್ರೀಕೃಷ್ಣನಿಗೆ ತಿಳಿದಿದ್ದರಿಂದಲೇ ಶ್ರೀಕೃಷ್ಣನು ಧರ್ಮಯುದ್ಧಕ್ಕಾಗಿ ‘ಕುರುಕ್ಷೇತ್ರ’ದ ಆಯ್ಕೆ ಮಾಡಿದರು.
(ಆಧಾರ : ಕೃಷ್ಣ ಜಾಲತಾಣ)