‘ಶ್ರೀಸತ್ಶಕ್ತಿ (ಸೌ.) ಬಿಂದಾ ನೀಲೇಶ ಸಿಂಗಬಾಳರು ಎಲ್ಲ ಸಾಧಕರಿಗೆ ತಮ್ಮ ವಾಣಿ, ವಿಚಾರ ಮತ್ತು ಕೃತಿಗಳ ಮೂಲಕ ‘ಪ್ರತಿಯೊಂದು ಕೃತಿ ಮತ್ತು ವಿಚಾರವು ಪ್ರತಿಯೊಂದು ಹಂತದಲ್ಲಿ ಹೇಗೆ ಯೋಗ್ಯ ಇರಬೇಕು ?’ ಎಂಬುದನ್ನು ನಿರಂತರವಾಗಿ ಕಲಿಸುತ್ತಿದ್ದಾರೆ. ಆದ್ದರಿಂದ ನಾವು ಅವರ ಚರಣಗಳಲ್ಲಿ ಕೋಟಿ ಕೋಟಿ ಕೃತಜ್ಞತೆಗಳನ್ನು ಸಲ್ಲಿಸುತ್ತಿದ್ದೇವೆ. ಶ್ರೀಸತ್ಶಕ್ತಿ (ಸೌ.) ಬಿಂದಾ ಸಿಂಗಬಾಳರನ್ನು ‘ಸಂತ’ರೆಂದು ಘೋಷಣೆ ಮಾಡಿದಾಗ ಪೂ. ಪೃಥ್ವಿರಾಜ ಹಜಾರೆ (ಸನಾತನದ ೨೫ ನೇ ಸಂತರು, ವ. ೬೫ ವರ್ಷ) ಇವರು ಅವರನ್ನು ‘ನಡೆದಾಡುವ ಗ್ರಂಥ’, ಎಂದು ಸಂಬೋಧಿಸಿದ್ದರು. ಈ ವಾಕ್ಯ ನಿಜವಾಗಿಯೂ ಯೋಗ್ಯವಾಗಿದೆ ಎಂಬುದು ಈ ಮುಂದಿನ ಉದಾಹರಣೆಗಳಿಂದ ಗಮನಕ್ಕೆ ಬರುತ್ತದೆ. ‘ಪ್ರತಿಯೊಂದು ಚಿಕ್ಕ-ಪುಟ್ಟ ವಿಷಯಗಳಿಂದಲೂ ಸಾಧನೆಯಾಗಬೇಕೆಂದು ಶ್ರೀಸತ್ಶಕ್ತಿ (ಸೌ.) ಬಿಂದಾ ಸಿಂಗಬಾಳರು ಪದೇ ಪದೇ ಹೇಳಿರುವ ಅಂಶಗಳು ಮತ್ತು ಅವರ ಅಲೌಕಿಕ ಗುಣವೈಶಿಷ್ಟ್ಯಗಳನ್ನು ಮುಂದೆ ಕೊಡಲಾಗಿದೆ.
೧. ‘ವಸ್ತುಗಳನ್ನು ಭಾವಪೂರ್ಣವಾಗಿ ಹೇಗೆ ಜೋಪಾನ ಮಾಡಬೇಕು ?’ ಎಂಬುದನ್ನು ಕಲಿಸುವುದು
ಶ್ರೀಸತ್ಶಕ್ತಿ (ಸೌ.) ಬಿಂದಾ ಸಿಂಗಬಾಳರು ವೈಯಕ್ತಿಕ ಉಪಯೋಗದ ಸಣ್ಣ ಸಣ್ಣ ವಸ್ತುಗಳನ್ನು ‘ಭಾವಪೂರ್ಣವಾಗಿ ಹೇಗೆ ಜೋಪಾನ ಮಾಡಬೇಕು ?’ ಎಂಬುದನ್ನು ನಮಗೆ ಕಲಿಸಿದರು, ಉದಾ. ರುಮಾಲನ್ನು ಹೇಗೆ ಮಡಚಬೇಕು, ಬಟ್ಟೆಗಳನ್ನು ಹೇಗೆ ಮಡಚಬೇಕು, ಬಟ್ಟೆಗಳನ್ನು ಹೇಗೆ ಜೋಪಾನ ಮಾಡಬೇಕು ?’ ಹಾಗೂ ಮಳೆಗಾಲದ ಬೂಟ್ ಅಥವಾ ಚಪ್ಪಲಿಗಳನ್ನು ಅಟ್ಟದ ಮೇಲೆ ಅವು ಹಾಳಾಗದಂತೆ ಹಾಗೂ ಮುಂದಿನ ವರ್ಷ ಪುನಃ ಉಪಯೋಗಿಸಲು ಆಗುವಂತೆ ಹೇಗೆ ಪ್ಯಾಕ್ ಮಾಡಿಡಬೇಕು ಇತ್ಯಾದಿ !
೨. ‘ತಾಯಿಯನ್ನು ‘ಸಾಧಕಿ’ ಎಂದು ತಿಳಿದು ಅವಳೊಂದಿಗೆ ಮಾತನಾಡಬೇಕು’, ಎಂದು ಹೇಳುವುದು
ಒಮ್ಮೆ ಶ್ರೀಸತ್ಶಕ್ತಿ (ಸೌ.) ಬಿಂದಾ ಸಿಂಗಬಾಳರು ನನ್ನ ತಾಯಿಗೆ (ಸೌ. ಅಂಜಲಿ ಅಜಯ ಜೋಶಿಯವರಿಗೆ) ಕೇಳಿದರು, ”ನಿಮ್ಮ ಮತ್ತು ಪ್ರಿಯಾಂಕಾಳ ನಡುವೆ ಮಾತುಕತೆ ನಡೆಯುತ್ತದೆಯೆ ?” ಆಗ ತಾಯಿಯು ಮುಂದಿನಂತೆ ಹೇಳಿದಳು, ”ಹೌದು, ನಾನು ಅವಳನ್ನು ಸಂಪರ್ಕಿಸುತ್ತೇನೆ; ಆದರೆ ಕೆಲವೊಮ್ಮೆ ಅವಳ ಪಕ್ಕದಲ್ಲಿ ಇತರ ಸಾಧಕಿಯರಿದ್ದರೆ, ಅವಳು ಅವರೊಂದಿಗೆ ಮಾತಾಡುತ್ತಿರುತ್ತಾಳೆ. ಸ್ವಲ್ಪ ಸಮಯದ ನಂತರ ಅವಳು ನನಗೆ, ”ಅಮ್ಮ, ನನಗೆ ಒಂದು ಸೇವೆ ಬಂದಿದೆ, ನಾನು ಆ ಮೇಲೆ ನಿನ್ನೊಂದಿಗೆ ಮಾತನಾಡುತ್ತೇನೆ’’ ಎಂದು ಹೇಳುತ್ತಾಳೆ. ತಾಯಿ ಇದನ್ನು ಮೋಜಿಗಾಗಿ ಹೇಳಿದ್ದಳು; ಆದರೆ ಅದರಿಂದ ನಾನು ಅಂತರ್ಮುಖಳಾದೆ. ‘ತಾಯಿಯೊಂದಿಗೆ ಮಾತನಾಡಲು ಪ್ರಾಧಾನ್ಯತೆ ನೀಡುವುದಿಲ್ಲ’, ಎಂಬುದನ್ನು ನಾನು ಯಾವತ್ತೂ ಗಮನಿಸಿರಲಿಲ್ಲ, ಇದು ಕೂಡ ನನ್ನಿಂದಾದ ತಪ್ಪು. ಶ್ರೀಸತ್ಶಕ್ತಿ (ಸೌ.) ಬಿಂದಾ ಸಿಂಗಬಾಳರು ನನಗೆ ಮೃದುವಾಗಿ ಈ ತಪ್ಪಿನ ಬಗ್ಗೆ ಅರಿವು ಮಾಡಿಕೊಟ್ಟರು. ತಾಯಿಯನ್ನೂ ‘ಸಾಧಕಿ’ ಎಂದು ತಿಳಿದು ಅವಳೊಂದಿಗೆ ಮಾತನಾಡಬೇಕು’, ಎನ್ನುವ ಗಾಂಭೀರ್ಯ ನನ್ನ ಮನಸ್ಸಿನಲ್ಲಿರಲಿಲ್ಲ. ಅವರು ‘ನನಗೆ ಸಾಧನೆಯೆಂದು ತಾಯಿಯನ್ನು ಹೇಗೆ ನೋಡಬೇಕು ?’, ಎಂಬುದನ್ನು ಕಲಿಸಿದರು.
೩. ಶ್ರೀಸತ್ಶಕ್ತಿ (ಸೌ.) ಬಿಂದಾ ಸಿಂಗಬಾಳರ ಗುಣವೈಶಿಷ್ಟ್ಯಗಳು
೩ ಅ. ಸತತ ಕಲಿಯುವ ಸ್ಥಿತಿಯಲ್ಲಿರುವುದು ಹಾಗೂ ಸಾಧಕರ ಸಾಧನೆಯಲ್ಲಿನ ಅಡಚಣೆಗಳಿಗೆ ಸಾಕಷ್ಟು ಸಮಯ ನೀಡಿ ಅವುಗಳನ್ನು ನಿವಾರಿಸುವುದು : ಶ್ರೀಸತ್ಶಕ್ತಿ (ಸೌ.) ಬಿಂದಾ ಸಿಂಗಬಾಳರು ಸಾಧಕರ ಸಾಧನೆಯ ಚಿಕ್ಕ-ಪುಟ್ಟ ಅಡಚಣೆಗಳಿಗೂ ಸಾಕಷ್ಟು ಸಮಯ ನೀಡಿ ಅವುಗಳನ್ನು ನಿವಾರಿಸುತ್ತಾರೆ. ಎಷ್ಟೇ ಗಡಿಬಿಡಿ ಇದ್ದರೂ ಅವರು ಹೊರಗಿನಿಂದ ಬಂದ ಸಾಧಕರನ್ನು ಭೇಟಿಯಾಗುತ್ತಾರೆ. ಸಾಧಕರನ್ನು ನೋಡಿ ಹಾಗೂ ಭೇಟಿಯಾಗಿ ಅವರಿಗೆ ಅತ್ಯಾನಂದ ಆಗುತ್ತದೆ. ‘ಸಾಧಕರನ್ನು ಭೇಟಿಯಾಗುವುದರಲ್ಲಿ ಎಷ್ಟು ಆನಂದವಿದೆ, ಈ ಸಾಧಕರಿಂದ ತುಂಬಾ ಕಲಿಯುವ ವಿಷಯಗಳು ಇರುತ್ತವೆ’, ಎಂದು ಅವರು ಹೇಳುತ್ತಾರೆ. ಇದರಿಂದ ‘ನಾವು ಕೂಡ ಸಾಧಕರಿಂದ ಕಲಿಯಬೇಕು ?’, ಎಂಬುದು ನನಗೆ ಅರಿವಾಯಿತು.
೩ ಆ. ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರಿಗೆ ಅಪೇಕ್ಷಿತ ಸೇವೆ ಆಗಬೇಕೆಂಬ ತೀವ್ರ ತಳಮಳ : ಒಮ್ಮೆ ನಾನು ಶ್ರೀಸತ್ಶಕ್ತಿ (ಸೌ.) ಬಿಂದಾ ಸಿಂಗಬಾಳರೊಂದಿಗೆ ಸೇವೆ ಮಾಡುತ್ತಿದ್ದೆ, ಆಗ ಅವರು ನನಗೆ, ”ನಾನು ತುಂಬಾ ಕಡಿಮೆ ಬೀಳುತ್ತೇನೆ, ನನಗೆ ಇನ್ನೂ ತುಂಬಾ ಪ್ರಯತ್ನ ಮಾಡಬೇಕು” ಎಂದು ಹೇಳಿದರು. ಅವರ ಮಾತುಗಳಿಂದ ನನಗೆ ಅವರಲ್ಲಿನ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರಿಗೆ ಇಷ್ಟವಾಗುವ ಸೇವೆ ಆಗಬೇಕೆಂಬ ತೀವ್ರ ತಳಮಳವಿದೆ ಎಂದು ಅರಿವಾಯಿತು.
೩ ಇ. ಅಹಂಶೂನ್ಯತೆ : ಶ್ರೀಸತ್ಶಕ್ತಿ (ಸೌ.) ಬಿಂದಾ ಸಿಂಗಬಾಳ ಇವರು ಯಾವುದಾದರು ಸತ್ಸಂಗ ತೆಗೆದುಕೊಂಡ ನಂತರ ಕೊನೆಯಲ್ಲಿ. ”ಇಷ್ಟರವರೆಗೆ ಸತ್ಸಂಗದಲ್ಲಿ ಏನೆಲ್ಲ ಹೇಳಿದೆನೊ, ಅದರಲ್ಲಿ ನನ್ನದೇನಾದರೂ ತಪ್ಪಾಗಿದ್ದರೆ ಹೇಳಿರಿ” ಎಂದು ಹೇಳುತ್ತಾರೆ. ಇದರಿಂದ ಅವರ ಅಹಂಶೂನ್ಯತೆಯ ಅರಿವಾಗುತ್ತದೆ.
೩ ಈ. ಸೂಕ್ಷ್ಮದ ವಿಷಯ ತಿಳಿಯುವ ಕ್ಷಮತೆ ಇದ್ದುದರಿಂದ ಸಾಧಕಿ ಮನಸ್ಸಿನಲ್ಲಿ ಮಾಡಿದ ಆತ್ಮನಿವೇದನೆ ಶ್ರೀಸತ್ಶಕ್ತಿ (ಸೌ.) ಸಿಂಗಬಾಳರಿಗೆ ತಲುಪಿ ಅವರು ಸ್ಥೂಲದಲ್ಲಿ ಉತ್ತರ ನೀಡುವುದು :
ಒಮ್ಮೆ ನಾನು ಶ್ರೀಸತ್ಶಕ್ತಿ (ಸೌ.) ಸಿಂಗಬಾಳರ ಕೋಣೆಗೆ ಹೋಗಿದ್ದೆ. ಆಗ ಅವರು ಕಡತಗಳನ್ನು ಓದುತ್ತಿದ್ದರು. ಒಂದು ಪ್ರಸಂಗದಲ್ಲಿ ನನಗೆ ಬಹಳ ಬೇಸರವೆನಿಸಿತ್ತು, ನಾನು ಅವರ ಚರಣಗಳಲ್ಲಿ ಕುಳಿತು ಮನಸ್ಸಿನಲ್ಲಿಯೇ ಆತ್ಮನಿವೇದನೆ ಮಾಡಲು ಆರಂಭಿಸಿದೆ. ನಾನು ಮನಸ್ಸಿನಲ್ಲಿಯೆ ‘ನನಗೆ ತುಂಬಾ ಬೇಸರವೆನಿಸುತ್ತಿದೆ, ನಾನು ಏನು ಮಾಡಲಿ ?’
ಎನ್ನುವಷ್ಟರಲ್ಲಿಯೆ ಅವರು ಓದುವುದನ್ನು ನಿಲ್ಲಿಸಿ ನನ್ನತ್ತ ನೋಡುತ್ತಾ, ಏನಾಗಿದೆಯೊ, ಅದರ ಬಗ್ಗೆ ವಿಚಾರ ಮಾಡಬೇಡ”, ಎಂದು ಹೇಳಿ ಅವರು ಪುನಃ ಕಡತವನ್ನು ಓದುವುದರಲ್ಲಿ ಮಗ್ನರಾದರು.
೩ ಉ. ಶ್ರೀಸತ್ಶಕ್ತಿ (ಸೌ.) ಸಿಂಗಬಾಳ ಇವರು ಒಂದೇ ಸಮಯದಲ್ಲಿ ಸ್ಥೂಲ ಮತ್ತು ಸೂಕ್ಷ್ಮ ಹೀಗೆ ಎರಡೂ ಸ್ತರದಲ್ಲಿ ಅನೇಕ ವಿಷಯಗಳನ್ನು ಮಾಡುವುದು : ಶ್ರೀಸತ್ಶಕ್ತಿ (ಸೌ.) ಸಿಂಗಬಾಳರು ಬಹಳಷ್ಟು ಬಾರಿ ಭಾವಸ್ಥಿತಿಯಲ್ಲಿರುತ್ತಾರೆ, ಅಂದರೆ ಅವರ ಸಮಷ್ಟಿ ಕಾರ್ಯ ನಡೆಯುತ್ತಿದ್ದರೂ, ಅವರ ದೃಷ್ಟಿ ಶೂನ್ಯ ದಲ್ಲಿರುತ್ತದೆ. ಆಗ ‘ಅವರು ವಿಶ್ವಮನಸ್ಸು ಮತ್ತು ವಿಶ್ವಬುದ್ಧಿಯಲ್ಲಿನ ವಿಚಾರಗಳನ್ನು ಗ್ರಹಣ ಮಾಡುತ್ತಿರುತ್ತಾರೆ’, ಎಂದು ನನಗೆ ಅನಿಸುತ್ತದೆ. ಆಂತರ್ಯದಿಂದ ಅವರಿಗೆ ಈಶ್ವರನೊಂದಿಗೆ ಅನುಸಂಧಾನವಿರುತ್ತದೆ ಹಾಗೂ ಅದೇ ವೇಳೆಗೆ ಸ್ಥೂಲದಲ್ಲಿ ಅವರ ಸಮಷ್ಟಿ ಕಾರ್ಯ ವೇಗವಾಗಿ ನಡೆಯುತ್ತಿರುತ್ತದೆ’, ಎಂಬುದು ನನ್ನ ಗಮನಕ್ಕೆ ಬಂದಿತು.
೩ ಊ. ಸಾಧಕಿಗೆ ಒಂದು ಗಂಭೀರ ತಪ್ಪಿಗಾಗಿ ಕೋಪಗೊಂಡ ನಂತರ ಸ್ವಲ್ಪ ಸಮಯದ ನಂತರ ಅವಳ ಕ್ಷಮೆ ಕೇಳುವ ಶ್ರೀಸತ್ಶಕ್ತಿ (ಸೌ.) ಸಿಂಗಬಾಳ ! : ಒಮ್ಮೆ ನನ್ನಿಂದಾದ ಒಂದು ಗಂಭೀರ ತಪ್ಪಿನಿಂದಾಗಿ ಶ್ರೀಸತ್ಶಕ್ತ್ತಿ (ಸೌ.) ಸಿಂಗಬಾಳ ಇವರು ನನ್ನ ಮೇಲೆ ಕೋಪಗೊಂಡರು. ನಂತರ ಒಂದು ಸೇವೆಗಾಗಿ ನಾನು ಅವರ ಬಳಿಗೆ ಹೋಗಬೇಕಾಗಿತ್ತು. ಆಗ ‘ನನ್ನಿಂದ ಇಷ್ಟು ಗಂಭೀರ ತಪ್ಪಾಗಿದೆ. ಈಗ ನಾನು ಅವರ ಬಳಿ ಹೇಗೆ ಹೋಗುವುದು ?’,
ಎನ್ನುವ ವಿಚಾರದಿಂದ ನನಗೆ ಅವರ ಬಳಿ ಹೋಗುವ ಧೈರ್ಯ ವಾಗುತ್ತಿರಲಿಲ್ಲ. ಆಗ ನಾನು ದೇವರಲ್ಲಿ ಪ್ರಾರ್ಥನೆ ಮಾಡಿ ಅವರ ಬಳಿ ಹೋದೆನು. ಅವರ ಸಮೀಪ ಹೋದತಕ್ಷಣ ಅವರು ನನಗೆ, ”ನನ್ನನ್ನು ಕ್ಷಮಿಸು, ನಾನು ನಿನ್ನ ಮೇಲೆ ತುಂಬಾ ಕೋಪಗೊಂಡೆ” ಎಂದು ಹೇಳಿದರು. ಆಗ ನನ್ನ ಕಣ್ಣುಗಳಿಂದ ಅಶ್ರು ಬಂದವು. ಆಗ ನನ್ನಲ್ಲಿ ಎಷ್ಟು ದೊಡ್ಡ ಅಹಂ ಇದೆ ಎಂದು ಅನಿಸಿತು. ಗುರುಗಳಲ್ಲಿಗೆ ಹೋಗುವಾಗ ಮನಸ್ಸಿನಲ್ಲಿ ಪ್ರತಿಷ್ಠೆಯ
ವಿಚಾರ ಬರುತ್ತಿತ್ತು; ಆದರೆ ನನ್ನ ಗುರುಗಳು ನನಗೆ ಪ್ರತಿ ಯೊಂದು ಕೃತಿಯಿಂದ ಕಲಿಸುತ್ತಾರೆ ಹಾಗೂ ನನ್ನ ಅಹಂನ್ನು ಹೊರಹಾಕುತ್ತಾರೆ’ ಎನಿಸಿತು.
– ಸೌ. ಪ್ರಿಯಾಂಕಾ ಚೇತನ ರಾಜಹಂಸ
(ಆಧ್ಯಾತ್ಮಿಕ ಮಟ್ಟ ಶೇ. ೬೮, ವ. ೩೭ ವರ್ಷ) ಬಾಂದೋಡಾ, ಫೋಂಡಾ, ಗೋವಾ. (೧೮.೯.೨೦೨೩) (ಮುಂದುವರಿಯುವುದು)