೨೦೦೮ ರಿಂದ ೨೦೨೨ ರ ಕಾಲಾವಧಿಯಲ್ಲಿ ಶ್ರೀಸತ್ಶಕ್ತಿ (ಸೌ.) ಬಿಂದಾ ಸಿಂಗಬಾಳ ಇವರ ಛಾಯಾಚಿತ್ರಗಳಿಂದ ಅರಿವಾದ ಅವರ ದೈವೀ ಪ್ರವಾಸ !
೧. ಪ್ರಸ್ತುತ ಸಣ್ಣ ಕಲಿಯುಗದ ಕೊನೆಯಲ್ಲಿ ಮಿತಿ ಮೀರಿದ ಅಧರ್ಮ ನಾಶಕ್ಕಾಗಿ ಮತ್ತು ಧರ್ಮ ರಾಜ್ಯ (ಹಿಂದೂ ರಾಷ್ಟ್ರ) ಸ್ಥಾಪನೆಗಾಗಿ ಅವತಾರಗಳ ಜನ್ಮ ತ್ರೇತಾಯುಗಾಂತ್ಯದ ರಾಮಾವತಾರ ಮತ್ತು ದ್ವಾಪರ ಯುಗಾಂತ್ಯದ ಕೃಷ್ಣಾವತಾರ ಇವೆರಡೂ ಪೂರ್ಣಾವತಾರವಾಗಿತ್ತು. ಯಾವಾಗ ಅಧರ್ಮವು ಪರಮಾವಧಿ ತಲುಪಿದಾಗ ಅಧರ್ಮವನ್ನು ನಾಶ ಮಾಡಿ ಧರ್ಮಸಂಸ್ಥಾಪನೆಗಾಗಿ ಪ್ರತ್ಯಕ್ಷ ಈಶ್ವರನು ಅವತಾರ ತಾಳಬೇಕಾಗುತ್ತದೆ. ಪ್ರಸ್ತುತ ೪ ಲಕ್ಷ ವರ್ಷಗಳ ಕಲಿಯುಗದಲ್ಲಿ ೫ ಸಾವಿರ ವರ್ಷಗಳು ಮುಗಿದಿವೆ. ಆದ್ದರಿಂದ ಸದ್ಯ ಪೂರ್ಣಾವತಾರವಾಗುವುದು ಅಸಾಧ್ಯವಾಗಿದೆ. ಸದ್ಯ ಕಲಿಯುಗದಲ್ಲಿ ಒಂದು ಸಣ್ಣ (ಕೆಲವು ಸಾವಿರ ವರ್ಷಗಳ) ಕಲಿಯುಗವು ಮುಗಿದು ಒಂದು ಸಣ್ಣ ಸತ್ಯಯುಗವು ಬರುವ ಸಂಧಿಕಾಲವು ಪ್ರಾರಂಭವಾಗಿದೆ. ‘ಸದ್ಯ ಸಣ್ಣ ಕಲಿಯುಗದ ಅಧರ್ಮವನ್ನು ನಾಶಗೊಳಿಸಿ ಧರ್ಮ (ಹಿಂದೂ ರಾಷ್ಟ್ರ) ಸ್ಥಾಪಿಸಲು ಈಶ್ವರನು ಸನಾತನ ಸಂಸ್ಥೆಯ ೩ ಗುರುಗಳ ರೂಪದಲ್ಲಿ ಅವನ ಅಂಶಾವತಾರವೆಂದು ಜನ್ಮ ತಾಳಿದ್ದಾನೆ’, ಎಂದು ಸಪ್ತರ್ಷಿಗಳ ನಾಡಿಪಟ್ಟಿಗಳಿಂದ ಗಮನಕ್ಕೆ ಬಂದಿತು.
೨. ಪೂರ್ಣಾವತಾರಿ ವ್ಯಕ್ತಿಗಳ ಗುಣಗಳು ಬಾಲ್ಯದಿಂದಲೇ ಸಮಾಜದ ಮುಂದೆ ಬರುವುದು ಮತ್ತು ಅಂಶಾವತಾರಿ ವ್ಯಕ್ತಿಗಳ ಸಂದರ್ಭದಲ್ಲಿ ಈಶ್ವರನು ಅವರಿಂದ ಕಾರ್ಯವನ್ನು ಮಾಡಿಸಿಕೊಳ್ಳುವ ಸಮಯ ಬಂದಾಗಲೇ ಅವರಲ್ಲಿ ಈಶ್ವರೀತತ್ತ್ವವು ಪ್ರಕಟವಾಗುವುದು
ರಾಮ ಮತ್ತು ಶ್ರೀಕೃಷ್ಣ ಜನ್ಮ ತಾಳಿದ ನಂತರ ಅವರು ಅವತಾರವಾಗಿರುವರೆಂದು ಸಮಾಜಕ್ಕೆ ತಿಳಿಯದಿದ್ದರೂ, ಅವರ ಬಾಲಲೀಲೆಗಳು ಸಮಾಜಕ್ಕೆ ತಿಳಿಯತೊಡಗಿತು. ಬಾಲ್ಯದಲ್ಲಿಯೇ ಅವರಿಂದಾದ ಅಸುರರ ವಧೆಯು ಧರ್ಮಸಂಸ್ಥಾಪನೆಯ ಒಂದು ಭಾಗವೇ ಆಗಿತ್ತು. ಅಂದರೆ ಅವರ ಗುಣಗಳು ಬಾಲ್ಯದಿಂದಲೇ ಸಮಾಜದ ಮುಂದೆ ಬರತೊಡಗಿದವು. ಇದರ ವಿರುದ್ಧ ಅಂಶಾವತಾರ ದಲ್ಲಿ ಈಶ್ವರನ ಗುಣಗಳಿದ್ದರೂ, ಅವರು ತಮ್ಮ ಬಾಲ್ಯದಿಂದ ಜನರ ಮುಂದೆ ಬರುವುದಿಲ್ಲ. ಅಂಶಾವತಾರಿ ವ್ಯಕ್ತಿಗಳು ದೊಡ್ಡವರಾದ ನಂತರÀ ಅವರ ಬಗ್ಗೆ ಜನರಿಗೆ ತಿಳಿಯತೊಡಗುತ್ತದೆ. ಇದರ ಅರ್ಥ ಈಶ್ವರನು ಅವರಿಂದ ಕಾರ್ಯವನ್ನು ಮಾಡಿಸಿಕೊಳ್ಳುವ ಸಮಯ ಬಂದಾಗಲೇ ಅವರಲ್ಲಿನ ಈಶ್ವರೀ ತತ್ತ್ವವು ಪ್ರಕಟವಾಗತೊಡಗುತ್ತದೆ. ಅವರ ಗುಣಗಳು ಹೊಳೆಯುತ್ತವೆ. ಆಗ ಕೆಲವು ವರ್ಷಗಳ ಕಾಲಾವಧಿಯಲ್ಲಿ ಆ ವ್ಯಕ್ತಿಯ ರೂಪದಲ್ಲಾದ ಬದಲಾವಣೆ ಎಲ್ಲರಿಗೂ ಸ್ಪಷ್ಟವಾಗಿ ಕಂಡುಬರುತ್ತದೆ, ಹಾಗೆಯೇ ಅವರ ಕಾರ್ಯವೂ ಜನರ ಮುಂದೆ ಬರತೊಡಗುತ್ತದೆ.
ಅದೇ ರೀತಿ ಈ ಲೇಖನದಲ್ಲಿ ಶ್ರೀಸತ್ಶಕ್ತಿ (ಸೌ.) ಬಿಂದಾ ಸಿಂಗಬಾಳ ಇವರ ೨೦೦೮ ರಿಂದ ೨೦೨೨ ರ ಕಾಲಾವಧಿಯಲ್ಲಿನ ಛಾಯಾಚಿತ್ರಗಳಲ್ಲಿ ಹೇಗೆ ಬದಲಾಗುತ್ತಾ ಹೋಗಿದೆ, ಎಂಬುದನ್ನು ತೋರಿಸುವ ಛಾಯಾಚಿತ್ರಗಳು, ಹಾಗೆಯೇ ಅವರಲ್ಲಿನ ಯಾವ ಗುಣಗಳು ಕಾರ್ಯದ ಮೂಲಕ ಬೆಳಕಿಗೆ ಬಂದವು, ಎಂಬುದನ್ನು ಇಲ್ಲಿ ಕೊಡಲಾಗಿದೆ.
೩. ಶ್ರೀಸತ್ಶಕ್ತಿ (ಸೌ.) ಬಿಂದಾ ಸಿಂಗಬಾಳ ಇವರಲ್ಲಿನ ಸಾಧನೆಯಲ್ಲಿನ ಘಟಕಗಳಲ್ಲಿ ೨೦೦೮ ರಿಂದ ೨೦೨೨ ರ ಕಾಲಾವಧಿಯಲ್ಲಿ ಆದ ಬದಲಾವಣೆ
೩ ಅ. ಭಾವ, ಅಂತರ್ಮನಸ್ಸಿನಲ್ಲಿನ ಸಾಧನೆ, ಸಾಧನೆಯ ಬಗೆಗಿನ ತಳಮಳ, ಅಹಂ ಮತ್ತು ಕೆಟ್ಟ ಶಕ್ತಿಗಳ ತೊಂದರೆ ಈ ಘಟಕಗಳು : ವ್ಯಕ್ತಿಯಲ್ಲಿನ ಭಾವ, ಅಂತರ್ಮನಸ್ಸಿನ ಸಾಧನೆ, ಸಾಧನೆಯ ಬಗೆಗಿನ ತಳಮಳ ಮತ್ತು ಅಹಂ ಸಾಧನೆಯಲ್ಲಿನ ಈ ಘಟಕಗಳಿಂದ ನಡೆಯುತ್ತಿರುವ ಅವರ ಸಾಧನೆಯ ಪರೀಕ್ಷೆ ಯಾಗುತ್ತದೆ. ಸಾಧನೆಯನ್ನು ಮಾಡದಿರುವ ಸಾಮಾನ್ಯ ವ್ಯಕ್ತಿಯಲ್ಲಿ ಭಾವ, ಅಂತರ್ಮನದಲ್ಲಿನ ಸಾಧನೆ ಮತ್ತು ಸಾಧನೆಯ ಬಗೆಗಿನ ತಳಮಳ ಈ ಘಟಕಗಳು ಶೇ. ೦ ಇರುತ್ತವೆ, ಅಂದರೆ ಇರುವುದೇ ಇಲ್ಲ, ಹಾಗೆಯೇ ಹೆಚ್ಚು ಅಹಂ, ಅಂದರೆ ಅಹಂ ಶೇ. ೩೦ ರಷ್ಟಿರುತ್ತದೆ. ಪ್ರಸ್ತುತ ಕಲಿಯುಗದಲ್ಲಿ ಸಾಧನೆಯನ್ನು ಮಾಡುವ ವ್ಯಕ್ತಿಯಲ್ಲಿನ ಭಾವ, ಅಂತರ್ಮನಸ್ಸಿನಲ್ಲಿನ ಸಾಧನೆ ಮತ್ತು ಸಾಧನೆಗಾಗಿ ತಳಮಳ ಈ ಘಟಕಗಳ ಪ್ರಮಾಣ ಹೆಚ್ಚೆಂದರೆ ಶೇ. ೩೦ ರಷ್ಟಿರುತ್ತದೆ. ಇದರಿಂದ ಸಾಮಾನ್ಯ ವ್ಯಕ್ತಿಯು ಸಾಧನೆ ಮಾಡಿ ಈ ಮೂರು ಘಟಕಗಳನ್ನು ಶೇ. ೩೦ ರ ವರೆಗೆ ಹೆಚ್ಚಿಸುವುದು ಮತ್ತು ಅಹಂನ್ನು ಶೇ. ೩೦ ರಷ್ಟಿಂದÀ ಕಡಿಮೆ ಮಾಡುತ್ತ ಹೋಗಲು ಪ್ರಯತ್ನಿಸಬೇಕು. ಯಾವುದಾದರೊಬ್ಬ ವ್ಯಕ್ತಿಗಿರುವ ಕೆಟ್ಟ ಶಕ್ತಿಗಳ ತೊಂದರೆಯು ಪ್ರಾರಬ್ಧಕ್ಕನುಸಾರ ಇರುತ್ತದೆ. ಕೆಟ್ಟ ಶಕ್ತಿಗಳ ತೊಂದರೆಯು ಹೆಚ್ಚಾಗಿದ್ದರೆ, ಆ ತೊಂದರೆಯನ್ನು ದೂರಗೊಳಿಸಲು ನಮ್ಮ ಸಾಧನೆಯು ಖರ್ಚಾಗುತ್ತದೆ.
೩ ಆ ೧. ಶ್ರೀಸತ್ಶಕ್ತಿ (ಸೌ.) ಬಿಂದಾ ಸಿಂಗಬಾಳ ಇವರ ಶೇ. ೬೦ ಕ್ಕಿಂತಲೂ ಕಡಿಮೆ ಆಧ್ಯಾತ್ಮಿಕ ಮಟ್ಟವಿರುವುದು (೨೦೦೮ ರ ಛಾಯಾಚಿತ್ರ) : ಶ್ರೀಸತ್ಶಕ್ತಿ (ಸೌ.) ಬಿಂದಾ ಸಿಂಗಬಾಳ ಇವರಿಗೆ ಆ ಸಮಯದಲ್ಲಿ ಕೆಟ್ಟ ಶಕ್ತಿಗಳ ತೊಂದರೆ ತೀವ್ರವಿತ್ತ್ತು. ಆದ್ದರಿಂದ ಆ ಛಾಯಾಚಿತ್ರವನ್ನು ಹೆಚ್ಚು ಸಮಯ ನೋಡಲು ಆಗುವುದಿಲ್ಲ.
೩ ಆ ೨. ಶ್ರೀಸತ್ಶಕ್ತಿ (ಸೌ.) ಬಿಂದಾ ಸಿಂಗಬಾಳ ಇವರು ಶೇ. ೬೧ ರಷ್ಟು ಆಧ್ಯಾತ್ಮಿಕ ಮಟ್ಟ ತಲುಪುವುದು (೨೦೧೧ ರ ಛಾಯಾಚಿತ್ರ) : ಶ್ರೀಸತ್ಶಕ್ತಿ (ಸೌ.) ಬಿಂದಾ ಸಿಂಗಬಾಳ ಇವರು ಈ ಮೊದಲು ಇತರ ಸೇವೆಯನ್ನು ಮಾಡುತ್ತಿದ್ದರು. ಮುಂದೆ ಅವರು ಆಶ್ರಮದ ಸಾಧಕರ ಸಾಧನೆಯ ಜವಾಬ್ದಾರಿ ವಹಿಸ ತೊಡಗಿದರು. ಆದ್ದರಿಂದ ಅವರು ವ್ಯಷ್ಟಿ ಸ್ತರದ ಸಾಧನೆಯಿಂದ ಸಮಷ್ಟಿ ಸ್ತರದ ಸಾಧನೆಯ ಕಡೆಗೆ ಬಂದರು. ಆ ಸಮಯದಲ್ಲಿ ಅವರಿಂದ ಶೇ. ೨೫ ರಷ್ಟು ಸಮಷ್ಟಿ ಸಾಧನೆ ಆಗತೊಡಗಿತು. ಮೇಲಿನ ಕೋಷ್ಟಕ ದಿಂದ ಗಮನಕ್ಕೆ ಬರುವುದೇನೆಂದರೆ, ಆಗ ಅವರಲ್ಲಿನ ಅಹಂ ಹಾಗೂ ಕೆಟ್ಟ ಶಕ್ತಿಗಳ ತೊಂದರೆಯೂ ಸ್ವಲ್ಪ ಕಡಿಮೆ ಆಯಿತು. ಈ ಬದಲಾವಣೆ ಅವರ ಛಾಯಾಚಿತ್ರದಿಂದ ಗಮನಕ್ಕೆ ಬರುತ್ತವೆ.
೩ ಆ ೩. ಶ್ರೀಸತ್ಶಕ್ತಿ (ಸೌ.) ಬಿಂದಾ ಸಿಂಗಬಾಳ ಇವರು ಸಂತಪದವಿಯನ್ನು ತಲುಪುವುದು (೨೦೧೩ ರ ಛಾಯಾಚಿತ್ರ) : ಮುಂದೆ ಶ್ರೀಸತ್ಶಕ್ತಿ (ಸೌ.) ಬಿಂದಾ ಸಿಂಗಬಾಳ ಇವರು ಎಲ್ಲೆಡೆಯಲ್ಲಿನ ಸಾಧಕರ ಸಾಧನೆಯ ಜವಾಬ್ದಾರಿಯನ್ನು ತೆಗೆದುಕೊಳ್ಳತೊಡಗಿದರು. ಅವರು ಸಾಧಕರಿಗಾಗಿ ಸತ್ಸಂಗವನ್ನು ತೆಗೆದುಕೊಳ್ಳತೊಡಗಿದರು. ಸಾಧಕರ ಸಾಧನೆಯಲ್ಲಿನ ಅಡಚಣೆ ಗಳನ್ನು ನಿವಾರಿಸತೊಡಗಿದಾಗ ಅವರ ಸಮಷ್ಟಿ ಸಾಧನೆ ಶೇ. ೫೦ ರಷ್ಟು ಆಗತೊಡಗಿತು. ಆದ್ದರಿಂದ ಅವರಿಗೆ ಸಂತಪದವಿ ಪ್ರಾಪ್ತವಾಯಿತು. ಆ ಸಮಯದಲ್ಲಿ ಅವರ ಅಂತರ್ಮನಸ್ಸಿನ ಸಾಧನೆ, ಹಾಗೆಯೇ ಸಾಧನೆಯ ತಳಮಳವು ಹೆಚ್ಚಾಗಿತ್ತು. ಸಂತ ಪದವಿ ಪ್ರಾಪ್ತವಾದ ನಂತರ ಅವರಲ್ಲಿ ಆನಂದವು ಹೆಚ್ಚಾಯಿತು, ಹಾಗೆಯೇ ಅವರ ಮುಖದಲ್ಲಿ ತೇಜ ಹಾಗೂ ತ್ವಚೆ ಹಳದಿ ಆಗ ತೊಡಗಿತು. ಸಂತ ಪದವಿ ಪ್ರಾಪ್ತವಾದುದರಿಂದÀ ಕೆಟ್ಟ ಶಕ್ತಿಗಳ ತೊಂದರೆಯು ತುಂಬಾ ಕಡಿಮೆ ಆಗಿರುವುದು ಕೋಷ್ಟಕದಿಂದ ಮತ್ತು ಛಾಯಾಚಿತ್ರದಲ್ಲಿನ ಕಣ್ಣುಗಳಿಂದ ಗಮನಕ್ಕೆ ಬರುತ್ತದೆ.
೩ ಆ ೪. ಶ್ರೀಸತ್ಶಕ್ತಿ (ಸೌ.) ಬಿಂದಾ ಸಿಂಗಬಾಳ ಇವರು ಸದ್ಗುರು ಪದವಿಯನ್ನು ತಲುಪುವುದು (೨೦೧೬ ರ ಛಾಯಾಚಿತ್ರ) : ಮುಂದೆ ಶ್ರೀಸತ್ಶಕ್ತಿಯವರು ಎಲ್ಲೆಡೆಯ ಸಾಧಕರಿಗೆ ಸಾಧನೆಯ ಮಾರ್ಗದರ್ಶನ ಮಾಡುತ್ತಿರುವುದರಿಂದ ಸಾಧಕರ ಸಾಧನೆಯೂ ಹೆಚ್ಚಾಯಿತು. ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರಿಗೆ ಅಪೇಕ್ಷಿತ ಅಧ್ಯಾತ್ಮಪ್ರಸಾರದ ಕಾರ್ಯವು ಭಾರತ ಸಹಿತ ಜಗತ್ತಿನಾದ್ಯಂತ ಆಗತೊಡಗಿತು. ಈ ರೀತಿ ಶ್ರೀಸತ್ಶಕ್ತಿ (ಸೌ.) ಬಿಂದಾ ಸಿಂಗಬಾಳರ ಸಮಷ್ಟಿ ಸಾಧನೆಯು ಶೇ. ೭೫ ರಷ್ಟಾಗಿ ಅವರು ಸದ್ಗುರು ಪದವಿಯಲ್ಲಿ ವಿರಾಜಮಾನರಾದರು. ಆಗ ಅವರಲ್ಲಿನ ಸಾಧನೆಯ ತಳಮಳವು ಇನ್ನೂ ಹೆಚ್ಚಾಗಿ ಅಹಂ ತುಂಬಾ ಕಡಿಮೆ ಆಯಿತು. ಆ ಸಮಯದ ಅವರ ಛಾಯಾಚಿತ್ರದಿಂದ ಹೆಚ್ಚು ಪ್ರಮಾಣದಲ್ಲಿ ಆನಂದವು ಪ್ರಕ್ಷೇಪಿಸುತ್ತಿರುವುದು ಅರಿವಾಗುತ್ತದೆ, ಹಾಗೆಯೇ ಅವರಿಗೆ ಕೆಟ್ಟ ಶಕ್ತಿಗಳ ತೊಂದರೆಯು ಇಲ್ಲವಾದುದರಿಂದ ಅವರ ಕಣ್ಣುಗಳನ್ನು ಈಗ ಸಹಜವಾಗಿ ನೋಡಬಹುದು. ಅವರ ಮುಖವು ಇನ್ನೂ ಕಾಂತಿಯುತವಾಗಿರುವುದು ಸಹ ಗಮನಕ್ಕೆ ಬರುತ್ತದೆ.
೩ ಆ ೫. ಸಪ್ತರ್ಷಿಗಳು ‘ಶ್ರೀಸತ್ಶಕ್ತಿ’ ಎಂದು ಘೋಷಿಸುವುದು (೨೦೨೨ ರ ಛಾಯಾಚಿತ್ರ) : ಸಪ್ತರ್ಷಿಗಳು ೨೦೧೯ ರಲ್ಲಿ ಶ್ರೀಸತ್ಶಕ್ತಿ (ಸೌ.) ಬಿಂದಾ ಸಿಂಗಬಾಳ ಮತ್ತು ಶ್ರೀಚಿತ್ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರನ್ನು ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ‘ಆಧ್ಯಾತ್ಮಿಕ ಉತ್ತರಾಧಿಕಾರಿ’, ಎಂದು ಘೋಷಿಸಿದರು. ಆದ್ದರಿಂದ ಆ ಇಬ್ಬರಿಗೆ ವ್ಯಷ್ಟಿ ಸಾಧನೆ ಮಾಡಲು ಏನು ಉಳಿಯದಿರುವುದರಿಂದ ಅವರಿಂದ ಶೇ. ೧೦೦ ರಷ್ಟು ಸಮಷ್ಟಿ ಸಾಧನೆ ಆಗುತ್ತಿದೆ. ಅನಂತರ ಸಪ್ತರ್ಷಿಗಳು ೨೦೨೦ ರಲ್ಲಿ ಸೌ. ಬಿಂದಾ ಸಿಂಗಬಾಳ ಇವರಿಗೆ ‘ಶ್ರೀಸತ್ಶಕ್ತಿ’ ಮತ್ತು ಸೌ. ಅಂಜಲಿ ಗಾಡಗೀಳ ಇವರಿಗೆ ‘ಶ್ರೀಚಿತ್ಶಕ್ತಿ’ ಎಂಬ ಬಿರುದನ್ನು ನೀಡಿದರು. ೨೦೨೨ ರಲ್ಲಿನ ಶ್ರೀಸತ್ಶಕ್ತಿ (ಸೌ.) ಬಿಂದಾ ಸಿಂಗಬಾಳರ ಛಾಯಾಚಿತ್ರ ನೋಡಿದಾಗ ನಮಗೆ ಅವರಲ್ಲಿನ ‘ಶ್ರೀಸತ್ಶಕ್ತಿ’ ಈ ಅವತಾರತ್ವಕ್ಕೆ ಶೋಭಿಸುವಂತಹ ದೇವತ್ವ ಸಹಜವಾಗಿ ಕಂಡು ಬರುತ್ತದೆ. ಆ ಸಮಯದಲ್ಲಿ ಅವರಲ್ಲಿನ ಭಾವ, ಅಂತರ್ಮನದ ಸಾಧನೆ ಮತ್ತು ಸಾಧನೆಯ ತಳಮಳ ಈ ಘಟಕಗಳಿಂದ ಅತ್ಯುತ್ತಮ ಮಟ್ಟವನ್ನು ತಲುಪಿರುವುದು ಈ ಕೋಷ್ಟಕದಿಂದ ಗಮನಕ್ಕೆ ಬರುತ್ತದೆ. ಇದೇ ಅವರಲ್ಲಿನ ದೇವತ್ವ ! ಸಪ್ತರ್ಷಿಗಳು ಯಾವಾಗಲೂ ಅವರಲ್ಲಿನ ಶ್ರೀ ಮಹಾಲಕ್ಷ್ಮಿದೇವಿಯ ಅಂಶದ ಹಾಗೆಯೇ ಅವರ ಗುಣ ವೈಶಿಷ್ಟ್ಯಗಳ ಬಗ್ಗೆಯೂ ಪ್ರಶಂಸೆ ಮಾಡುತ್ತಾರೆ.
ಶ್ರೀಸತ್ಶಕ್ತಿ (ಸೌ.) ಬಿಂದಾ ಸಿಂಗಬಾಳ ಇವರ ಎಲ್ಲ ಛಾಯಾಚಿತ್ರಗಳನ್ನು ಸಾಲಾಗಿ ನೋಡಿದರೆ ನಮಗೆ ಅವರ ಪ್ರಗತಿ ಮತ್ತು ಅವರಲ್ಲಿ ಬಂದಿರುವ ಅವತಾರತ್ವವು ಸಹಜವಾಗಿ ಕಂಡು ಬರುತ್ತದೆ. ಅವತಾರತ್ವವು ವ್ಯಕ್ತವಾಗಿರುವ ಮತ್ತು ವೃದ್ಧಿಯಾಗಿರುವ ಅವರ ಕೊನೆಯ ಛಾಯಾಚಿತ್ರದ ಕಡೆಗೆ ನಾವು ಆಕರ್ಷಿಸುತ್ತೇವೆ ಮತ್ತು ಸಿಲುಕುತ್ತೇವೆ. ಇದೇ ಆ ದೇವತ್ವದ ಲಕ್ಷಣವಾಗಿದೆ !
೪. ಕೃತಜ್ಞತೆ
ಇವರಂತಹ ದೇವತ್ವವಿರುವ ವ್ಯಕ್ತಿಯ ಛಾಯಾಚಿತ್ರಗಳ ಬಗ್ಗೆ ಹೇಳಲು ಶರಣಾಗತಭಾವÀ ಬೇಕು. ಅದಕ್ಕಾಗಿ ನಾನು ಸೂಕ್ಷ್ಮಸ್ತರದ ಅಧ್ಯಯನಕ್ಕಾಗಿ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ, ಹಾಗೆಯೇ ಶ್ರೀಸತ್ಶಕ್ತಿ (ಸೌ.) ಬಿಂದಾ ಸಿಂಗಬಾಳರ ಚರಣಗಳಲ್ಲಿಯೂ ಶರಣಾದೆÀ; ಏಕೆಂದರೆ ಈ ಸೇವೆ ಅತ್ಯಂತ ಕಠಿಣವಾಗಿದೆ. ಆದರೂ ಸಹ ಗುರುಕೃಪೆಯಿಂದ ಅದು ನನಗೆ ಸಾಧ್ಯವಾಯಿತು, ಅದಕ್ಕಾಗಿ ನಾನು ಸನಾತನದ ಮೂವರು ಗುರುಗಳ ಚರಣಗಳಲ್ಲಿ ಕೋಟಿ ಕೋಟಿ ಕೃತಜ್ಞನಾಗಿದ್ದೇನೆ.’
– (ಸದ್ಗುರು) ಡಾ. ಮುಕುಲ ಗಾಡಗೀಳ, ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ, ಗೋವಾ. (೭.೧೦.೨೦೨೩)
ಸಪ್ತರ್ಷಿಗಳು ನಾಡಿಪಟ್ಟಿಗಳಲ್ಲಿ ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ, ಶ್ರೀಸತ್ಶಕ್ತಿ (ಸೌ.) ಬಿಂದಾ ನೀಲೇಶ ಸಿಂಗಬಾಳ ಮತ್ತು ಶ್ರೀಚಿತ್ಶಕ್ತಿ (ಸೌ.) ಅಂಜಲಿ ಮುಕುಲ ಗಾಡಗೀಳ ಇವರು ಸನಾತನ ಸಂಸ್ಥೆಯ ೩ ಗುರುಗಳು ಅವತಾರಸ್ವರೂಪ ಆಗಿರುವುದರ
ಬಗ್ಗೆ ಬಹಿರಂಗಪಡಿಸುವುದು
ಸಪ್ತರ್ಷಿಗಳು ಸನಾತನ ಸಂಸ್ಥೆಯ ೩ ಗುರುಗಳಾದ ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ, ಶ್ರೀಸತ್ಶಕ್ತಿ (ಸೌ.) ಬಿಂದಾ ನೀಲೇಶ ಸಿಂಗಬಾಳ ಮತ್ತು ಶ್ರೀಚಿತ್ಶಕ್ತಿ (ಸೌ.) ಅಂಜಲಿ ಮುಕುಲ ಗಾಡಗೀಳ ಇವರ ಗುಣವೈಶಿಷ್ಟ್ಯಗಳು ಮತ್ತು ಅವರ ಹಿಂದೂ ರಾಷ್ಟ್ರ ಸ್ಥಾಪನೆಯ ಕಾರ್ಯದ ಬಗ್ಗೆ ಅನೇಕ ನಾಡಿಪಟ್ಟಿಗಳಲ್ಲಿ ಉಲ್ಲೇಖಿಸಿದ್ದಾರೆ. ಆದ್ದರಿಂದ ‘ಈ ಮೂವರು ಹೇಗೆ ಅವತಾರಸ್ವರೂಪರಾಗಿದ್ದಾರೆ’, ಎಂಬುದು ಸನಾತನ ಸಂಸ್ಥೆಯ ನಮ್ಮೆಲ್ಲ ಸಾಧಕರಿಗೆ ತಿಳಿಯಿತು. ಈ ಮೂವರು ಗುರುಗಳಿಗೆ ಇಲ್ಲಿ ನೀಡಿದ ಬಿರುದನ್ನು ಸಪ್ತರ್ಷಿಗಳೇ ನೀಡಿದ್ದಾರೆ. ಇದರಿಂದ ‘ಡಾ. ಆಠವಲೆಯವರು ವಿಷ್ಣುಸ್ವರೂಪ ಮತ್ತು ಸೌ. ಬಿಂದಾ ನೀಲೇಶ ಸಿಂಗಬಾಳ ಮತ್ತು ಸೌ. ಅಂಜಲಿ ಮುಕುಲ ಗಾಡಗೀಳ ಇವರು ದೇವಿಸ್ವರೂಪರಾಗಿದ್ದಾರೆ’, ಎಂಬುದು ಗಮನಕ್ಕೆ ಬರುತ್ತದೆ. ಸಾಧಕರಿಗೆ ಇದರ ಬಗ್ಗೆ ಅನುಭೂತಿಯೂ ಬರುತ್ತವೆ.