ಶ್ರೀಸತ್‌ಶಕ್ತಿ (ಸೌ.) ಬಿಂದಾ ನೀಲೇಶ ಸಿಂಗಬಾಳ ಇವರು ಸಾಧಕರಿಗೆ ಮಾಡಿದ ಮಾರ್ಗದರ್ಶನ !

ಶ್ರೀಸತ್‌ಶಕ್ತಿ (ಸೌ.) ಬಿಂದಾ ನೀಲೇಶ ಸಿಂಗಬಾಳ

ಕೆಲವು ಜಿಲ್ಲೆಗಳಿಂದ ರಾಮನಾಥಿ ಆಶ್ರಮಕ್ಕೆ ಬಂದ ಅಧ್ಯಾತ್ಮ ಪ್ರಚಾರದ ಸೇವೆಯನ್ನು ಮಾಡುವ ಕೆಲವು ಸಾಧಕರೊಂದಿಗೆ ೨೯.೯.೨೦೨೩ ರಂದು ಶ್ರೀಸತ್‌ಶಕ್ತಿ (ಸೌ.) ಬಿಂದಾ ನೀಲೇಶ ಸಿಂಗಬಾಳ ಇವರು ಅನೌಪಚಾರಿಕವಾಗಿ ಮಾತನಾಡಿದರು. ಆ ಸಮಯದಲ್ಲಿ ಸಾಧಕರು ಅವರಿಗೆ ಕೇಳಿದ ಪ್ರಶ್ನೆಗಳನ್ನು ಮತ್ತು ಅವರು ಸಾಧಕರಿಗೆ ನೀಡಿದ ಉತ್ತರಗಳನ್ನು ಇಲ್ಲಿ ಕೊಡಲಾಗಿದೆ.

೧. ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ಕಲಿಸಿದ ಸಾಧನೆಯನ್ನು (ಗುರುಕೃಪಾಯೋಗಾನುಸಾರ ಸಾಧನೆ) ಯಾವುದೇ ವಯಸ್ಸಿನಲ್ಲಿ ಮತ್ತು ಯಾವುದೇ ಸ್ಥಿತಿಯಲ್ಲಿ ಮಾಡಬಹುದು

೧ ಅ. ಮೊದಲ ಸಾಧಕಿ : ನನಗೆ ನನ್ನಿಂದ ತುಂಬಾ ಅಪೇಕ್ಷೆಗಳು ಇರುತ್ತವೆ, ಉದಾ : ನನಗೆ ಮೊದಲಿನಂತೆ ಸೇವೆಯನ್ನು ಮಾಡಲು ಬರಬೇಕು; ಆದರೆ ಅದಕ್ಕಾಗಿ ಕೃತಿಯ ಸ್ಥರದಲ್ಲಿ ನನ್ನ ಪ್ರಯತ್ನಗಳು ಆಗುವುದಿಲ್ಲ.

ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ : ಏನಾದರೂ ಶಾರೀರಿಕ ಅಡಚಣೆಗಳು ಇವೆಯಾ ?

ಮೊದಲ ಸಾಧಕಿ : ಹೌದು ಇವೆ, ಹಾಗೆಯೇ ನನಗೆ ಮೊದಲಿನಂತೆ ಕಷ್ಟಪಡಲು ಈಗ ಆಗುವುದಿಲ್ಲ.

ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ : ನೀವು ಇಲ್ಲಿ ಆಶ್ರಮದಲ್ಲಿ ಏನು ಕಲಿತಿರಿ ? ಏನು ಮಾಡಬೇಕು ? ಹೇಳಿರಿ

ಮೊದಲ ಸಾಧಕಿ : ಗುರುಗಳು ಶಕ್ತಿಯನ್ನು ಕೊಡುತ್ತಾರೆ. ನಾವು ಶ್ರದ್ಧೆಯನ್ನಿಟ್ಟು ಪ್ರಯತ್ನ ಮಾಡಬೇಕು.

ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ : ಮನಸ್ಸಿನಲ್ಲಿ ಅಪೇಕ್ಷೆಗಳಿದ್ದರೆ, ನಾವು ಏನು ಮಾಡುತ್ತೇವೆಯೋ ಅದರ ಆನಂದ ಪಡೆಯಲು ಸಾಧ್ಯವಾಗುವುದಿಲ್ಲ. ಸಾಧನೆ ಆನಂದಪ್ರಾಪ್ತಿಗಾಗಿ ಇದೆ. ಸದ್ಯದ ಪರಿಸ್ಥಿತಿಯಲ್ಲಿ ಏನು ಸಾಧ್ಯವೋ ಅದನ್ನು ಮಾಡಿರಿ. ಅದಕ್ಕಾಗಿ ಸ್ವಯಂಸೂಚನೆಗಳನ್ನು ನೀಡಿರಿ. ‘ನನಗೆ ಆಗುವುದಿಲ್ಲ’ ಎಂಬ ನಕಾರಾತ್ಮಕ ವಿಚಾರ ಬೇಡ. ನಾವು ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ಕಲಿಸಿದ ಸಾಧನೆಯನ್ನು ಯಾವುದೇ ವಯಸ್ಸಿನಲ್ಲಿ ಮತ್ತು ಯಾವುದೇ ಸ್ಥಿತಿಯಲ್ಲಿ ಮಾಡಬಹುದು.

ಕು. ಮೇಘಾ ಚವ್ಹಾಣ

೨. ಇತರರನ್ನು ಬದಲಾಯಿಸಲು ಸಾಧ್ಯವಿಲ್ಲ, ಪರಿಸ್ಥಿತಿಯನ್ನು ಸ್ವೀಕರಿಸಿ ಪ್ರಯತ್ನಿಸಿದರೆ, ಮನಸ್ಸಿಗೆ ತೊಂದರೆ ಆಗುವುದಿಲ್ಲ.

೨ ಅ. ಎರಡನೆಯ ಸಾಧಕಿ : ನಾವು ಕೆಲವು ಸಾಧಕಿಯರು ಪರಸ್ಪರರ ಸಹಾಯದಿಂದ ಸೇವೆಯನ್ನು ಮಾಡುತ್ತೇವೆ; ಆದರೆ ಕೆಲವೊಮ್ಮೆ ಸಹಾಯ ಇಲ್ಲದಿದ್ದರೆ, ಯಾರೂ ಜೊತೆಯಲ್ಲಿ ಬರದಿದ್ದರೆ, ಸೇವೆಗೆ ಅಡ್ಡಿಯಾಗುತ್ತದೆ. ನಾನು ಸಾಧಕಿಗೆ ‘ನಿಮ್ಮ ಸಮಯಕ್ಕನುಸಾರ ಸೇವೆಗೆ ಹೋಗೋಣ’ ಎಂದು ಹೇಳುತ್ತೇನೆ; ಆದರೆ ಹಾಗೆ ಆಗುವುದಿಲ್ಲ.

ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ : ಇದರಲ್ಲಿ ನಿಮ್ಮ ಮನಸ್ಸಿನ ಅಡಚಣೆಯನ್ನು ಪರಿಹರಿಸಬೇಕು. ನಾವು ಇತರರನ್ನು ಬದಲಾಯಿಸಲು ಸಾಧ್ಯವಿಲ್ಲ. ದೇವರಿಗೆ ಏನು ಅಪೇಕ್ಷಿತವಿದೆ ? ಆ ಸಾಧಕರ ಸ್ಥಿತಿಯನ್ನು ಅರ್ಥ ಮಾಡಿಕೊಂಡು ನೀವೇನು ಮಾಡಬಹುದು, ಅದನ್ನು ನಿಮ್ಮ ಸೇವೆಯ ಜವಾಬ್ದಾರಿ ಇರುವ ಸಾಧಕರಿಗೆ ವಿಚಾರಿಸಿ ಮಾಡಬಹುದು. ಪರಿಸ್ಥಿತಿಯನ್ನು ಸ್ವೀಕರಿಸಿ ಮುಂದೆ ಹೋಗಿ. ಪರಿಸ್ಥಿತಿಯನ್ನು ಬದಲಾಯಿಸುವುದು ಸಾಧನೆ ಅಲ್ಲ. ಅರ್ಥ ಮಾಡಿಕೊಂಡು ಮಾಡಿದರೆ ಮನಸ್ಸಿಗೆ ತೊಂದರೆ ಆಗುವುದಿಲ್ಲ. ಕೊನೆಗೆ ಪ್ರಸಾರ ಮಾಡುವವರು ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರೇ ಆಗಿದ್ದಾರೆ. !

೩. ಸಾಧಕರು ಸಾಧನೆಯ ಪ್ರಯತ್ನ, ಅಂದರೆ ವ್ರತ ಮಾಡುವ ಸಂದರ್ಭದಲ್ಲಿ ಮಾಡಿದ ಮಾರ್ಗದರ್ಶನ

೩ ಅ. ಮೂರನೇ ಸಾಧಕಿ : ಸಾಧಕರು ಈಗ ಸಾಧನೆಯ ಪ್ರಯತ್ನ, ಅಂದರೆ ಒಂದು ವ್ರತವನ್ನೇ ತೆಗೆದುಕೊಳ್ಳಬೇಕು ಎಂದು ಶಿಬಿರದಲ್ಲಿ ಹೇಳಲಾಯಿತು. ನಾನು ಕೂಡ ಸಾಧನೆಯ ಅಂತಹ ವ್ರತವನ್ನು ತೆಗೆದುಕೊಂಡಿದ್ದೇನೆ. ಶಿಬಿರದ ನಂತರ ನಾನು ಸೇವೆಗಾಗಿ ಆಶ್ರಮದಲ್ಲಿ ಉಳಿದುಕೊಂಡೆ. ಈಗ ಕೆಲ ದಿನಗಳ ನಂತರ ಮತ್ತೆ ಜಿಲ್ಲೆಗೆ ಹೋಗುತ್ತೇನೆ. ಅಲ್ಲಿಗೆ ಹೋದ ನಂತರ ಪ್ರಯತ್ನಗಳು ಆಗಬಹುದೇ ? ನನ್ನೊಳಗೆ ಅಷ್ಟು ಶಕ್ತಿ ಇಲ್ಲ ಎಂದು ವಿಚಾರ ಮಾಡುತ್ತಿದ್ದೆ; ಆದರೆ ಈಗ ನೀವು ಹೇಳಿದಂತೆ ಜಿಲ್ಲೆಗೆ ಹೋದ ನಂತರ ಏನು ಪ್ರಯತ್ನ ಮಾಡಬೇಕು ಎಂಬುದರ ನಿಯೋಜನೆ ಮಾಡುತ್ತೇನೆ.

ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ

ಅ. ಮನಸ್ಸು ಇರುವವರೆಗೆ ಮನಸ್ಸಿನ ಕೆಲಸ ನಡೆಯುತ್ತಿರುತ್ತದೆ. ಅದರಲ್ಲಿ ಅನುಮಾನ, ಆಲೋಚನೆ, ಪ್ರತಿಕ್ರಿಯೆ, ಪ್ರಶ್ನೆ ಎಲ್ಲವೂ ಬರುತ್ತವೆ. ನಮ್ಮ ಸಾಧನೆ ಏನು ? ಆ ವಿಚಾರಕ್ಕೆ ನಾನು ಸರಿಯಾದ ದೃಷ್ಟಿಕೋನವನ್ನು ನೀಡಿದ್ದೇನೆಯೇ ? ಬರುವ ಪ್ರಶ್ನೆಗಳ ಬಗ್ಗೆ ನಾನು ಕೇಳಿಕೊಂಡಿದ್ದೇನೆಯೇ ? ಎಂದು ನೋಡಬೇಕು.

ಆ. ಆನಂದವು ಫಲಪ್ರಾಪ್ತಿಯಲ್ಲಿಲಲ್. ಅದು ನಿರಪೇಕ್ಷತೆಯಿಂದ ಪ್ರಯತ್ನ ಮಾಡುವುದರಲ್ಲಿದೆ. ಹೀಗೆಯೇ ಪ್ರಯತ್ನ ಮಾಡುತ್ತಾ ಹೋದರೆ ‘ಯಾವಾಗ ಫಲ ಸಿಕ್ಕಿತು’ ಎಂಬುದೂ ತಿಳಿಯುವುದಿಲ್ಲ.

ಇ. ಈ ವರ್ಷದ ಶಿಬಿರದಲ್ಲಿ ಎಲ್ಲರೂ ಸೇವೆಯನ್ನು ಮಾಡುತ್ತಾರೆ; ಆದರೆ ವ್ಯಷ್ಟಿ ಸೇವೆಯಲ್ಲಿ ರಿಯಾಯಿತಿ ತೆಗೆದುಕೊಳ್ಳುತ್ತಾರೆ ಎಂದು ಹೇಳಿದ್ದಾರೆ. ಈಗ ವ್ರತ ಎಂದು ಪ್ರಯತ್ನ ಮಾಡಲು ಹೇಳಿದ್ದಾರೆ. ಪ್ರಯತ್ನದಲ್ಲಿ ಕಡಿಮೆ ಬೀಳಬಾರದು ಎಂದು ಶಿಕ್ಷಾ ಪದ್ಧತಿಯನ್ನು ಉಪಯೋಗಿಸಬೇಕು.

ಈ. ವೇಳಾಪಟ್ಟಿಯನ್ನು ಮಾಡಿ ಧ್ಯೇಯವನ್ನಿಟ್ಟು ಪ್ರಯತ್ನ ಮಾಡ ಬೇಕು ಮತ್ತು ವರದಿಯನ್ನು ಕೊಡಬೇಕು. ದಿನದಲ್ಲಿ ೩ ಬಾರಿ ಸ್ವತಃ ವರದಿಯನ್ನು ತೆಗೆದುಕೊಳ್ಳಬೇಕು. ಆಗ ‘ಈಶ್ವರಪ್ರಾಪ್ತಿಗಾಗಿ ನಾನು ಏನು ಮಾಡಿದೆ ? ಎಲ್ಲಿ ಕಡಿಮೆ ಬಿದ್ದೆ ?’ ಎಂಬುದನ್ನು ನೋಡಬೇಕು. ಒಂದು ದಿನವೂ ಕೂಡ ಅಮೂಲ್ಯವಾಗಿದೆ.. ಅದನ್ನು ವ್ಯರ್ಥ ಮಾಡಬೇಡಿ. ಯಾರಿಗೆ ವ್ಯಷ್ಟಿ ಸಾಧನೆಯ ಪ್ರಯತ್ನವನ್ನು ಮಾಡಬೇಕು ಎಂದು ಅನಿಸುವುದಿಲ್ಲವೋ, ಅವರು ಅದಕ್ಕಾಗಿ ಸ್ವಯಂಸೂಚನೆಗಳನ್ನು ತೆಗೆದುಕೊಳ್ಳಬೇಕು.

(ಎಲ್ಲಾ ಅಂಶಗಳ ದಿನಾಂಕ : ೨೯.೯.೨೦೨೩)