ಪೂ. ಡಾ. ಓಂ ಉಲಗನಾಥನ್ ಇವರ ಮಾಧ್ಯಮದಿಂದ ಸಪ್ತರ್ಷಿಗಳು ಗುರುಪೂರ್ಣಿಮೆಯ ನಿಮಿತ್ತ ಸಾಧಕರಿಗೆ ನೀಡಿದ ಸಂದೇಶ !
`ಸನಾತನ ಸಂಸ್ಥೆಯ ಮೂರು ಮೋಕ್ಷಗುರುಗಳು, ಅಂದರೆ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ, ಶ್ರೀಸತ್‌ಶಕ್ತಿ (ಸೌ.) ಬಿಂದಾ ನೀಲೇಶ ಸಿಂಗಬಾಳ ಮತ್ತು ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಮುಕುಲ ಗಾಡಗೀಳ, ಇವರು ಸಗುಣ ರೂಪದಲ್ಲಿನ ಈಶ್ವರನ ಅವತಾರವೇ ಆಗಿದ್ದಾರೆ. ಸೂರ್ಯನಿಂದ ಪೃಥ್ವಿಗೆ ಬರುವ ಕಿರಣಗಳಲ್ಲಿ `ಅತಿನೀಲ ಕಿರಣಗಳು (Ultraviolet Rays)’ ಮಾನವನಿಗೆ ಎಲ್ಲಕ್ಕಿಂತ ಹೆಚ್ಚು ಹಾನಿ ಮಾಡುತ್ತವೆ. ಈಶ್ವರನಿರ್ಮಿತ ಪೃಥ್ವಿಯಲ್ಲಿರುವ ಪ್ರಾಣವಾಯುವಿನ ಪದರುಗಳಿಂದಾಗಿ ಈ ಕಿರಣಗಳು ಪೃಥ್ವಿಯ ವರೆಗೆ ಅಷ್ಟು ತೀವ್ರತೆಯಿಂದ ತಲುಪುವುದಿಲ್ಲ. ಆದುದರಿಂದ ಮನುಷ್ಯ ಮತ್ತು ಪ್ರಾಣಿಮಾತ್ರರ ರಕ್ಷಣೆಯಾಗುತ್ತದೆ. ಸನಾತನ ಸಂಸ್ಥೆಯ ಈ ಮೂರು ಮೋಕ್ಷಗುರುಗಳು ಕೆಟ್ಟ ಶಕ್ತಿಗಳಿಂದ ಸಾಧಕರಿಗಾಗುವ ತೊಂದರೆಗಳನ್ನು ಮೊದಲು ತಮ್ಮ ಮೇಲೆ ತೆಗೆದುಕೊಳ್ಳುತ್ತಾರೆ ಮತ್ತು ಅವುಗಳನ್ನು ಜೀರ್ಣಿಸಿಕೊಳ್ಳುತ್ತಾರೆ. ಈ ಮೂರೂ ಗುರುಗಳು ಕೆಟ್ಟ ಶಕ್ತಿಗಳ ದಾಳಿಗಳನ್ನು ಹಿಮ್ಮೆಟಿಸುತ್ತಾರೆ. ಸನಾತನದ ಸದ್ಗುರುಗಳು, ಸಂತರು ಮತ್ತು ಸಾಧಕರಿಗೆ ಕೆಟ್ಟ ಶಕ್ತಿಗಳು ಸ್ವಲ್ಪ ಮಟ್ಟಿಗೆ ತೊಂದರೆಗಳನ್ನು ನೀಡುತ್ತವೆ. `ಧರ್ಮಸಂಸ್ಥಾಪನೆ ಮಾಡುವುದು’, ಎಂದರೆ ಸೂಕ್ಷ್ಮದಲ್ಲಿನ ಕೆಟ್ಟ ಶಕ್ತಿಗಳ ತೀವ್ರ ದಾಳಿಗಳನ್ನು ಜೀರ್ಣಿಸಿಕೊಳ್ಳುವುದಾಗಿದೆ ! ಕಲಿಯುಗದಲ್ಲಿ ಅವತಾರಗಳ ಈ ನಿಜವಾದ ಕಾರ್ಯವು ಸಮಾಜ ಮತ್ತು ಸಾಧಕರಿಂದ ಗುಪ್ತವಾಗಿರುತ್ತದೆ; ಏಕೆಂದರೆ ಕೆಟ್ಟ ಶಕ್ತಿಗಳು ಕಣ್ಣುಗಳಿಗೆ ಕಾಣಿಸುವುದಿಲ್ಲ. ಗುರುದೇವರಂತಹ ಅವತಾರಿ ಪುರುಷರು `ಗುರು’ವಾಗಿ ಲಭಿಸಿರುವುದು, ಸನಾತನದ ಸಾಧಕರ ಭಾಗ್ಯವಾಗಿದೆ. ಧರ್ಮಸಂಸ್ಥಾಪನೆಗಾಗಿ ವೈಕುಂಠದಿಂದ ಪೃಥ್ವಿಗೆ ಬಂದಿರುವ ಸನಾತನದ ಮೂರು ಮೋಕ್ಷಗುರುಗಳ ಗುಣವರ್ಣನೆಯನ್ನು ಪಂಚಮಹಾಭೂತಗಳು ಮತ್ತು ನಿಸರ್ಗ ಇವುಗಳೂ ಮಾಡುತ್ತವೆ.
೨೦೨೪ ರಿಂದ ಈ ಸಂದೇಶವನ್ನು ಮಹರ್ಷಿಗಳು ಸಾಧಕರವರೆಗೆ ತಲುಪಿಸುತ್ತಿದ್ದಾರೆ. ಶ್ರೀವಿಷ್ಣುವಿನ ಅವತಾರವಾಗಿರುವ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ಭೂಮಿಯಲ್ಲಿನ ಗೋಮಂತಕ ಪ್ರದೇಶದಲ್ಲಿ (ಗೋವಾದಲ್ಲಿ) ಭೂವೈಕುಂಠರೂಪಿ ಸನಾತನದ ಆಶ್ರಮದಲ್ಲಿ ವಿರಾಜಮಾನರಾಗಿದ್ದಾರೆ.
ಅವರ ಓರ್ವ ಆಧ್ಯಾತ್ಮಿಕ ಉತ್ತರಾಧಿಕಾರಿ `ಶ್ರೀಸತ್‌ಶಕ್ತಿ’ ಇವರು ಭೂವೈಕುಂಠದಲ್ಲಿದ್ದು ಅವರು ಆ (ರಾಮನಾಥಿ ಆಶ್ರಮ ಮತ್ತು ಅಲ್ಲಿರುವ) ಸಾಧಕರ ಪರಿಪಾಲನೆ ಮಾಡುತ್ತಿದ್ದಾರೆ ಮತ್ತು ಇನ್ನೋರ್ವ ಆಧ್ಯಾತ್ಮಿಕ ಉತ್ತರಾಧಿಕಾರಿ `ಶ್ರೀಚಿತ್‌ಶಕ್ತಿ’ ಇವರು ದಕ್ಷಿಣ ಭಾರತದ `ಭೂಕೈಲಾಸ’ವೆಂದು ಪ್ರಸಿದ್ಧವಾಗಿರುವ ಕಾಂಚಿ ಕ್ಷೇತ್ರದಲ್ಲಿ ವಿರಾಜಮಾನರಾಗಿದ್ದಾರೆ. ಗ್ರಹಗತಿಯ ಆಚೆಗೆ ಹೋಗಿ ಸಾಧಕರಿಗಾಗಿ ಹಗಲಿರುಳು ಶ್ರಮಿಸುತ್ತಿರುವ, ಕೆಟ್ಟ ಶಕ್ತಿಗಳೊಂದಿಗೆ ಹೋರಾಡಿ ಸಾಧಕರ ರಕ್ಷಣೆಯನ್ನು ಮಾಡುವ, ಸಾಧಕರ ಪ್ರಾರಬ್ಧಭೋಗವನ್ನು ಸುಡುವ ಮತ್ತು ಅವರ ವಿಹಂಗಮಮಾರ್ಗದಿಂದ ಆಧ್ಯಾತ್ಮಿಕ ಉನ್ನತಿಯನ್ನು ಮಾಡಿಸಿಕೊಳ್ಳುವ ಸನಾತನ ಸಂಸ್ಥೆಯ ಮೂರೂ ಮೋಕ್ಷಗುರುಗಳಿಗೆ ಗುರುಪೂರ್ಣಿಮೆ ನಿಮಿತ್ತ ನಮ್ಮಿಂದ (ಸಪ್ತರ್ಷಿಗಳಿಂದ) ತ್ರಿವಾರ ವಂದನೆಗಳು !’
– ಸಪ್ತರ್ಷಿಗಳು (ಪೂ. ಡಾ. ಓಂ ಉಲಗನಾಥನ್ ಇವರ ಮಾಧ್ಯಮದಿಂದ (೧೩.೭.೨೦೨೪, ಬೆಳಗ್ಗೆ ೧೦.೩೦))
* ಕೆಟ್ಟ ಶಕ್ತಿ: ವಾತಾವರಣದಲ್ಲಿ ಉತ್ತಮ ಹಾಗೂ ಕೆಟ್ಟ ಎರಡೂ ಶಕ್ತಿಗಳು ಕಾರ್ಯನಿರತವಾಗಿರುತ್ತವೆ. ಒಳ್ಳೆಯ ಶಕ್ತಿ ಒಳ್ಳೆಯ ಕಾರ್ಯಕ್ಕಾಗಿ ಮಾನವನಿಗೆ ಸಹಾಯ ಮಾಡುತ್ತವೆ ಹಾಗೂ ಕೆಟ್ಟ ಶಕ್ತಿಗಳು ಅವನಿಗೆ ತೊಂದರೆ ಕೊಡುತ್ತವೆ. ಹಿಂದಿನ ಕಾಲದಲ್ಲಿ ಋಷಿಮುನಿಗಳ ಯಜ್ಞಗಳಲ್ಲಿ ರಾಕ್ಷಸರು ವಿಘ್ನಗಳನ್ನು ತಂದಿರುವ ಅನೇಕ ಕಥೆಗಳು ವೇದ -ಪುರಾಣಗಳಲ್ಲಿ ಇರುತ್ತವೆ. ‘ಅಥರ್ವವೇದದಲ್ಲಿ ಅನೇಕ ಕಡೆಗಳಲ್ಲಿ ಕೆಟ್ಟ ಶಕ್ತಿ. ಉದಾ. ಅಸುರರು, ರಾಕ್ಷಸರು, ಪಿಶಾಚಿ ಇವರ ಪ್ರತಿಬಂಧದ ಮಂತ್ರಗಳನ್ನು ಹೇಳಲಾಗಿದೆ. ಕೆಟ್ಟ ಶಕ್ತಿಗಳ ತೊಂದರೆಯ ನಿವಾರಣೆಗಾಗಿ ವಿವಿಧ ಆಧ್ಯಾತ್ಮಿಕ ಉಪಾಯಗಳನ್ನು ವೇದ ಮತ್ತು ಧರ್ಮಗ್ರಂಥಗಳಲ್ಲಿ ಹೇಳಲಾಗಿದೆ |