`ಗುರುಕೃಪಾಯೋಗ’ ಎಂಬ ಸಹಜಸಾಧ್ಯ ಸಾಧನಾಮಾರ್ಗದ ನಿರ್ಮಿತಿಯನ್ನು ಮಾಡಿ ಮಾನವರಿಗೆ ಆತ್ಮೋದ್ಧಾರದ ರಾಜಮಾರ್ಗವನ್ನು ತೋರಿಸಿದ ಪರಾತ್ಪರ ಗುರು ಡಾ. ಆಠವಲೆಯವರ ಚರಣಗಳಲ್ಲಿ ಕೃತಜ್ಞತೆಗಳು !

ಇಂದಿನ ವಿಜ್ಞಾನಯುಗದಲ್ಲಿ ಸಾಮಾನ್ಯ ವ್ಯಕ್ತಿಯು ದೇವರು, ಧರ್ಮ, ಅಧ್ಯಾತ್ಮ, ಸಾಧನೆ ಇವುಗಳಿಂದ ದೂರ ಹೋಗುತ್ತಿದ್ದಾನೆ. ಇಂತಹ ಸಮಯದಲ್ಲಿ ಪರಾತ್ಪರ ಗುರು ಡಾ. ಜಯಂತ ಆಠವಲೆಯವರು ಸರ್ವ ಸಾಮಾನ್ಯರಿಗೆ ತಿಳಿಯುವಂತಹ ಭಾಷೆಯಲ್ಲಿ ಸಹಜ ಸುಲಭವಾದ `ಗುರುಕೃಪಾಯೋಗ’ ಎಂಬ ಸಾಧನೆಯ ಯೋಗಮಾರ್ಗವನ್ನು ನಿರ್ಮಿಸಿದ್ದಾರೆ. ಭೌತಿಕತೆಯಿಂದ ಇಂದಿನ ವಿಜ್ಞಾನವಾದಿ ಸಮಾಜವು ದಿನದಿಂದ ದಿನಕ್ಕೆ ಹೆಚ್ಚು ಸ್ವಾರ್ಥಿ, ಸ್ವಕೇಂದ್ರಿತ, ಕರ್ತವ್ಯವಿಮುಖ ಮತ್ತು ಅಹಂಕಾರಿಯಾಗುತ್ತಿದೆ. ತದ್ವಿರುದ್ಧ ಗುರುಕೃಪಾಯೋಗಾನುಸಾರ ಸಾಧನೆಯನ್ನು ಮಾಡುವ ಸಾಧಕರು ಮಾತ್ರ ತ್ಯಾಗ, ನಮ್ರತೆ, ವ್ಯಾಪಕತೆ ಮುಂತಾದ ದೈವೀ ಗುಣಗಳ ಆಧಾರದಲ್ಲಿ ಶೀಘ್ರಗತಿಯಲ್ಲಿ ಈಶ್ವರಪ್ರಾಪ್ತಿಯ ದಿಶೆಯಲ್ಲಿ ಮಾರ್ಗಕ್ರಮಣ ಮಾಡುತ್ತಿದ್ದಾರೆ.

ಶ್ರೀಸತ್‌ಶಕ್ತಿ (ಸೌ.) ಬಿಂದಾ ನೀಲೇಶ ಸಿಂಗಬಾಳ

೧. ಇತರ ಸಾಧನಾಮಾರ್ಗಗಳಲ್ಲಿನ ಕಠಿಣತೆ !

`ಗುರುಕೃಪಾಯೋಗ’ ಅಸ್ತಿತ್ವದಲ್ಲಿ ಬರುವ ಮೊದಲು ಜ್ಞಾನಯೋಗ, ಧ್ಯಾನಯೋಗ, ಹಠಯೋಗ, ಕರ್ಮಯೋಗ ಶಕ್ತಿಪಾತಯೋಗ ಇತ್ಯಾದಿ ಅನೇಕ ಸಾಧನಾಮಾರ್ಗಗಳು ಅಸ್ತಿತ್ವದಲ್ಲಿದ್ದವು; ಆದರೆ ಆ ಮಾಧ್ಯಮಗಳಿಂದ ಈಶ್ವರಪ್ರಾಪ್ತಿಯನ್ನು ಮಾಡಿಕೊಳ್ಳುವುದು ಕಲಿಯುಗದ ಮನುಷ್ಯನಿಗೆ ಕಠಿಣವಾಗಿದೆ.

೧ ಅ. ಜ್ಞಾನಯೋಗ : ಕಲಿಯುಗದಲ್ಲಿ ಮನುಷ್ಯನ ಬುದ್ಧಿಯು ಅಷ್ಟು ಪ್ರಬುದ್ಧವಲ್ಲದ ಕಾರಣ ಜ್ಞಾನಯೋಗಕ್ಕನುಸಾರ ಸಾಧನೆಯನ್ನು ಮಾಡುವುದು ಸಾಧ್ಯವಿಲ್ಲ ಮತ್ತು ಈ ಮಾರ್ಗದಿಂದ ಸಾಧನೆಯನ್ನು ಕಲಿಸುವ ಗುರುಗಳು ಸಿಗುವುದೂ ಕಠಿಣವಾಗಿದೆ.

೧ ಆ. ಧ್ಯಾನಯೋಗ : ಈ ಯೋಗಮಾರ್ಗಕ್ಕನುಸಾರ ಸಾಧನೆ ಯನ್ನು ಮಾಡಲು ಏಕಾಂತದಲ್ಲಿ ಗಂಟೆಗಟ್ಟಲೇ ಧ್ಯಾನಾವಸ್ಥೆಯಲ್ಲಿ ಕುಳಿತುಕೊಳ್ಳಬೇಕಾಗುತ್ತದೆ. ಅನಂತರ ಎಲ್ಲಿಯಾದರೂ ಕೆಲವು ನಿಮಿಷಗಳ ಕಾಲ ಧ್ಯಾನ ತಗಲುತ್ತದೆ. ಸದ್ಯ ವಾತಾವರಣವೇ ರಜ-ತಮಯುಕ್ತವಾಗಿರುವುದರಿಂದ ಧ್ಯಾನಯೋಗದ ಮೂಲಕವೂ ಆಧ್ಯಾತ್ಮಿಕ ಪ್ರಗತಿಯನ್ನು  ಮಾಡಿಕೊಳ್ಳುವುದು ಕಠಿಣವಾಗಿದೆ.

೧ ಇ. ಕರ್ಮಯೋಗ : ಕರ್ಮಯೋಗದಲ್ಲಿ ನಿರಪೇಕ್ಷಭಾವದಿಂದ ಕರ್ಮಗಳನ್ನು ಮಾಡಬೇಕಾಗುತ್ತದೆ; ಆದರೆ ಇಂದು ಸ್ವಾರ್ಥ ಎಷ್ಟು ಮಿತಿಮೀರಿದೆಯೆಂದರೆ, ಕರ್ಮಮಾರ್ಗದ ಸಾಧನೆಯನ್ನು ಮಾಡುವುದು ಅತ್ಯಂತ ಕಠಿಣವಾಗಿದೆ.

೧ ಈ. ಭಕ್ತಿಯೋಗ : ಭಕ್ತಿಯೋಗಕ್ಕನುಸಾರ ಸಾಧನೆಯನ್ನು ಮಾಡಲು ವ್ಯಕ್ತಿಯ ಆಧ್ಯಾತ್ಮಿಕ ಮಟ್ಟವು ಮೊದಲಿನಿಂದಲೇ ಚೆನ್ನಾಗಿರುವುದು, ಅಂದರೆ ಆ ವ್ಯಕ್ತಿಯಲ್ಲಿ ದೇವರ ಬಗ್ಗೆ ಭಾವವಿರುವುದು ಆವಶ್ಯಕವಾಗಿದೆ. ಭಾವ ಇಲ್ಲದಿದ್ದರೆ ಭಕ್ತಿ ಮಾರ್ಗವು ಸುಲಭವಾಗಿದ್ದರೂ ಆಧ್ಯಾತ್ಮಿಕ ಪ್ರಗತಿಯಾಗುವುದಿಲ್ಲ. ಮಹಾರಾಷ್ಟ್ರದಲ್ಲಿನ ಭಕ್ತಿಮಾರ್ಗದ ಸಂತರಾದ ಸಂತ ತುಕಾರಾಮ, ಸಂತ ಏಕನಾಥ, ಸಂತ ಜನಾಬಾಯಿ ಮುಂತಾದವರಲ್ಲಿ ಜನ್ಮದಿಂದಲೇ ಈಶ್ವರಪ್ರಾಪ್ತಿಯ ಅನನ್ಯ ಭಾವವಿತ್ತು. ಹಾಗಾಗಿ ಅವರು ಭಕ್ತಿಮಾರ್ಗಕ್ಕನುಸಾರ ಸಾಧನೆಯನ್ನು ಮಾಡಿ ಅತ್ಯುಚ್ಚ ಮಟ್ಟದ ಸಂತರಾದರು. ಸರ್ವಸಾಮಾನ್ಯರಿಗೆ ಈ ಮಾರ್ಗವೂ ಸುಲಭವಾಗಿಲ್ಲ.

೨. `ಗುರುಕೃಪಾಯೋಗ’ ಸುಲಭ ಸಾಧನಾಮಾರ್ಗ

ಮೇಲಿನ ಎಲ್ಲ ಸಾಧನೆಯ ಮಾರ್ಗಗಳಿಗಿಂತ ಪರಾತ್ಪರ ಗುರು ಡಾ. ಜಯಂತ ಆಠವಲೆಯವರು ಹೇಳಿದ `ಗುರುಕೃಪಾಯೋಗ’ ಸಾಧನಾಮಾರ್ಗವು ಸಾಮಾನ್ಯ ವ್ಯಕ್ತಿಗಳಿಗೆ ಹತ್ತಿರದ್ದೆನಿಸುತ್ತದೆ. ಇದರ ಮುಖ್ಯ ಕಾರಣವೆಂದರೆ `ಎಷ್ಟು ವ್ಯಕ್ತಿಗಳೋ ಅಷ್ಟು ಪ್ರಕೃತಿಗಳು ಮತ್ತು ಅಷ್ಟೇ ಸಾಧನೆಯ ಮಾರ್ಗಗಳು’ ಎಂಬುದು ಗುರು ಕೃಪಾಯೋಗದ ಮುಖ್ಯ ಸಿದ್ಧಾಂತವಾಗಿದೆ. ಆದುದರಿಂದ ಗುರು ಕೃಪಾಯೋಗಕ್ಕನುಸಾರ ಸಾಧನೆಯನ್ನು ಮಾಡುವ ವ್ಯಕ್ತಿಗಳು ತಮ್ಮ ಪ್ರಕೃತಿಗನುಸಾರ ಸಂಸಾರದಲ್ಲಿದ್ದು ಅಥವಾ ಸಂಸಾರವನ್ನು ತ್ಯಜಿಸಿ ಸಾಧನೆಯನ್ನು ಮಾಡಬಹುದು. ಹಾಗೆಯೇ ಗುರು ಕೃಪಾಯೋಗದಲ್ಲಿ ಅಂತರ್ಮನದ ಸಾಧನೆಗೆ ಮಹತ್ವವಿರುವುದ ರಿಂದ ಸಾಧಕರಿಗೆ `ಶೌಚ-ಅಶೌಚ, ಆಹಾರ’ ಇತ್ಯಾದಿ ಯಾವುದೇ ಬಂಧನಗಳಿರುವುದಿಲ್ಲ. ಹಾಗೆಯೇ ಈಶ್ವರನೊಂದಿಗೆ ಅನುಸಂಧಾನವನ್ನು ಉಳಿಸಿಕೊಳ್ಳಲು ವಿವಿಧ ಮಾರ್ಗಗಳಿಂದ ಸತತವಾಗಿ ಪ್ರಯತ್ನಿಸುವುದು, ಇಂದಿನ ಮನುಷ್ಯನಿಗೆ ಸಾಧ್ಯವಿದೆ.

೩. ಪೂರ್ಣವೇಳೆ ಸಾಧನೆ ಮಾಡಲಿರುವವರಿಗೆ ಆಶ್ರಮ ಲಭ್ಯ

ಸಂಸಾರವನ್ನು ತ್ಯಜಿಸಿ ಪೂರ್ಣವೇಳೆ ಸಾಧನೆಯನ್ನು ಮಾಡಲು ಇಚ್ಛಿಸುವವರಿಗಾಗಿ ಪರಾತ್ಪರ ಗುರು ಡಾ. ಆಠವಲೆಯವರು ಸನಾತನದ ಆಶ್ರಮಗಳನ್ನು ನಿರ್ಮಿಸಿದ್ದಾರೆ. ಈ ಆಶ್ರಮಗಳಲ್ಲಿ ಸಾಧಕರಿಗೆ ಗಣಕೀಯಯಂತ್ರ ಮುಂತಾದ ಸಾಹಿತ್ಯಗಳು, ನಿವಾಸವ್ಯವಸ್ಥೆ, ಭೋಜನವ್ಯವಸ್ಥೆ ಇತ್ಯಾದಿ ಎಲ್ಲ ಸೌಲಭ್ಯಗಳನ್ನು ಲಭ್ಯ ಮಾಡಿಕೊಟ್ಟಿದ್ದಾರೆ. ಸಾಧಕರಿಗೆ ಈ ಸಾಧನ ಸೌಲಭ್ಯಗಳನ್ನು ಪ್ರಾಪ್ತಮಾಡಿಕೊಳ್ಳಲು ಯಾವುದೇ ಕಷ್ಟ ಪಡಬೇಕಾಗುವುದಿಲ್ಲ.

೪. ಸಾಧಕರಿಗಾಗುವ ಕೆಟ್ಟ ಶಕ್ತಿಗಳ ತೊಂದರೆಗಳನ್ನು ಪರಾತ್ಪರ ಗುರು ಡಾ. ಆಠವಲೆಯವರು ತಮ್ಮ ಮೇಲೆ ತೆಗೆದುಕೊಳ್ಳುವುದು

ಗುರುಕೃಪಾಯೋಗಾನುಸಾರ ವ್ಯಷ್ಟಿ ಸಾಧನೆ ಮತ್ತು ಸಮಷ್ಟಿ ಸಾಧನೆಯನ್ನು ಮಾಡುವ ಸಾಧಕರ ಮೇಲೆ ಕೆಟ್ಟ ಶಕ್ತಿಗಳು ಮೇಲಿಂದ ಮೇಲೆ ಆಕ್ರಮಣಗಳನ್ನು ಮಾಡುತ್ತಿರುತ್ತವೆ. ಈ ಆಕ್ರಮಣಗಳನ್ನು ಪರಾತ್ಪರ ಗುರು ಡಾ. ಆಠವಲೆಯವರು ತಮ್ಮ ಮೇಲೆ ತೆಗೆದುಕೊಂಡಿದ್ದಾರೆ. `ಗುರುಕೃಪಾಯೋಗಾನುಸಾರ ಸಾಧನೆಯನ್ನು ಮಾಡುವ ಸಾಧಕರ ಕಾಳಜಿಯನ್ನು ಶ್ರೀ ಗುರುದೇವರು ತೆಗೆದುಕೊಳ್ಳುತ್ತಾರೆ’, ಎಂಬುದು ಸಾಧಕರಿಗೆ ಆಗಾಗ ಅನುಭವಕ್ಕೆ ಬರುತ್ತಿದೆ.

೫. `ಗುರುಕೃಪಾಯೋಗ’ವೇ ರಾಜಯೋಗ !

ಪರಾತ್ಪರ ಗುರು ಡಾಕ್ಟರರು `ಗುರುಕೃಪಾಯೋಗ’ವನ್ನು ಕೇವಲ ರಚಿಸಿಲ್ಲ, `ಅದನ್ನು ಆದರ್ಶ ಪದ್ಧತಿಯಿಂದ ಹೇಗೆ ಆಚರಣೆಯಲ್ಲಿ ತರಬೇಕು ಎಂಬುದನ್ನೂ ಅವರು ತೋರಿಸಿಕೊಟ್ಟಿದ್ದಾರೆ. ಆದುದರಿಂದ ಸಾವಿರಾರು ಸಾಧಕರು ಇತರ ಯಾವುದೇ ಸಹಾಯವಿಲ್ಲದೇ ಸಾಧನೆಯನ್ನು ಮಾಡಿ ಈಶ್ವರಪ್ರಾಪ್ತಿಯ ದಿಕ್ಕಿನಲ್ಲಿ ಮಾರ್ಗಕ್ರಮಣವನ್ನು ಮಾಡುತ್ತಿದ್ದಾರೆ.

೬. ಪರಾತ್ಪರ ಗುರು ಡಾ. ಆಠವಲೆಯವರ ಕುರಿತು ಕೃತಜ್ಞತೆ ಮತ್ತು ಪ್ರಾರ್ಥನೆ !

ಅಖಿಲ ಮನುಕುಲದ ಉದ್ಧಾರಕ್ಕಾಗಿ `ಗುರುಕೃಪಾಯೋಗ’ ದಂತಹ `ರಾಜಯೋಗ’ವನ್ನು ನಿರ್ಮಿಸಿದ ಅದ್ವಿತೀಯ ಪರಾತ್ಪರ ಗುರು ಡಾ. ಆಠವಲೆಯವರಿಗೆ ಸನಾತನ ಪರಿವಾರದ ಸಾಧಕರಿಂದ ಕೋಟಿ ಕೋಟಿ ನಮಸ್ಕಾರಗಳು ! ಪರಾತ್ಪರ ಗುರು ಡಾ. ಆಠವಲೆಯವರ ಬಗ್ಗೆ ಕೃತಜ್ಞತೆಯನ್ನು ವ್ಯಕ್ತಪಡಿಸಲು ಶಬ್ದಗಳು ಕಡಿಮೆ ಬೀಳುತ್ತವೆ. `ಸಾಧನೆಯನ್ನು ಮಾಡಿ ಪ್ರತಿಯೊಬ್ಬ ಮನುಷ್ಯನು ಈಶ್ವರಪ್ರಾಪ್ತಿಯನ್ನು ಮಾಡಿಕೊಳ್ಳುವುದು’, ಇದುವೇ ಅವರ ಬಗೆಗಿನ ನಿಜವಾದ ಕೃತಜ್ಞತೆಯಾಗಿದೆ !

– ಶ್ರೀಸತ್‌ಶಕ್ತಿ (ಸೌ.) ಬಿಂದಾ ನೀಲೇಶ ಸಿಂಗಬಾಳ.

* ಕೆಟ್ಟ ಶಕ್ತಿ: ವಾತಾವರಣದಲ್ಲಿ ಉತ್ತಮ ಹಾಗೂ ಕೆಟ್ಟ ಎರಡೂ ಶಕ್ತಿಗಳು ಕಾರ್ಯನಿರತವಾಗಿರುತ್ತವೆ. ಒಳ್ಳೆಯ ಶಕ್ತಿ ಒಳ್ಳೆಯ ಕಾರ್ಯಕ್ಕಾಗಿ ಮಾನವನಿಗೆ ಸಹಾಯ ಮಾಡುತ್ತವೆ ಹಾಗೂ ಕೆಟ್ಟ ಶಕ್ತಿಗಳು ಅವನಿಗೆ ತೊಂದರೆ ಕೊಡುತ್ತವೆ. ಹಿಂದಿನ ಕಾಲದಲ್ಲಿ ಋಷಿಮುನಿಗಳ ಯಜ್ಞಗಳಲ್ಲಿ ರಾಕ್ಷಸರು ವಿಘ್ನಗಳನ್ನು ತಂದಿರುವ ಅನೇಕ ಕಥೆಗಳು ವೇದ -ಪುರಾಣಗಳಲ್ಲಿ ಇರುತ್ತವೆ. ‘ಅಥರ್ವವೇದದಲ್ಲಿ ಅನೇಕ ಕಡೆಗಳಲ್ಲಿ ಕೆಟ್ಟ ಶಕ್ತಿ. ಉದಾ. ಅಸುರರು, ರಾಕ್ಷಸರು, ಪಿಶಾಚಿ ಇವರ ಪ್ರತಿಬಂಧದ ಮಂತ್ರಗಳನ್ನು ಹೇಳಲಾಗಿದೆ. ಕೆಟ್ಟ ಶಕ್ತಿಗಳ ತೊಂದರೆಯ ನಿವಾರಣೆಗಾಗಿ ವಿವಿಧ ಆಧ್ಯಾತ್ಮಿಕ ಉಪಾಯಗಳನ್ನು ವೇದ ಮತ್ತು ಧರ್ಮಗ್ರಂಥಗಳಲ್ಲಿ ಹೇಳಲಾಗಿದೆ.