ಅಖಂಡ ಮತ್ತು ನಿಷ್ಠೆಯಿಂದ ಗುರುಸೇವೆ ಮಾಡುವ ಶ್ರೀಸತ್ಶಕ್ತಿ (ಸೌ.) ಬಿಂದಾ ನೀಲೇಶ ಸಿಂಗಬಾಳ ಇವರ ಅವತಾರಿ ಕಾರ್ಯ

(ಎಡದಿಂದ) ಸದ್ಗುರು ನೀಲೇಶ ಸಿಂಗಬಾಳ, ಶ್ರೀಸತ್ಶಕ್ತಿ (ಸೌ.) ಬಿಂದಾ ನೀಲೇಶ ಸಿಂಗಬಾಳ ಮತ್ತು ಶ್ರೀ. ಸೋಹಮ್ ಸಿಂಗಬಾಳ

‘ಭೂದೇವಿ’ ಮತ್ತು ‘ಶ್ರೀದೇವಿ’ ಇವರು ಶ್ರೀವಿಷ್ಣುವಿನ ಎರಡು ಶಕ್ತಿಗಳಾಗಿದ್ದಾರೆ ! ಸಪ್ತರ್ಷಿಗಳು ಜೀವನಾಡಿಪಟ್ಟಿಯ ಮಾಧ್ಯಮ ದಿಂದ ಅನೇಕ ಬಾರಿ ‘ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಇವರು ಶ್ರೀವಿಷ್ಣುವಿನ ಅವತಾರವಾಗಿದ್ದಾರೆ’ ಎಂದು ಹೇಳಿದ್ದಾರೆ. ಶ್ರೀಸತ್ಶಕ್ತಿ (ಸೌ.) ಬಿಂದಾ ನೀಲೇಶ ಸಿಂಗಬಾಳ ಇವರು ಭೂದೇವಿಯ ಮತ್ತು ಶ್ರೀಚಿತ್ಶಕ್ತಿ (ಸೌ.) ಅಂಜಲಿ ಮುಕುಲ ಗಾಡಗೀಳ ಇವರು ಶ್ರೀದೇವಿಯ ಅವತಾರವಾಗಿದ್ದಾರೆ. ದ್ವಾಪರಯುಗದಲ್ಲಿ ಶ್ರೀವಿಷ್ಣುವು ಶ್ರೀಕೃಷ್ಣನ ಅವತಾರವನ್ನು ತಾಳಿದ್ದನು. ಆಗ ಭೂದೇವಿಯು ‘ಸತ್ಯಭಾಮೆ’ಯ ರೂಪದಲ್ಲಿ ಪೃಥ್ವಿಯಲ್ಲಿ ಅವತರಿಸಿದ್ದಳು ಮತ್ತು ಶ್ರೀದೇವಿಯು ‘ರುಕ್ಮಿಣಿ’ಯ ರೂಪದಲ್ಲಿ ಪೃಥ್ವಿಯಲ್ಲಿ ಅವತರಿಸಿದ್ದಳು. ದ್ವಾಪರಯುಗದಲ್ಲಿ ‘ಸತ್ಯಭಾಮೆ’ಯ ರೂಪದಲ್ಲಿ ಅವತರಿಸಿದ್ದ ಭೂದೇವಿಯು ಈಗ ‘ಶ್ರೀಸತ್ಶಕ್ತಿ’ಯ ರೂಪದಲ್ಲಿ ಸನಾತನದ ಸಾಧಕರಿಗಾಗಿ ಬಂದಿದ್ದಾಳೆ.’ ಸರ್ವಪಿತೃ (ಮಹಾಲಯ) ಅಮಾವಾಸ್ಯೆಯಂದು ಶ್ರೀಸತ್ಶಕ್ತಿ ಇವರ ಜನ್ಮತಿಥಿ (೫೭ ನೇ ಹುಟ್ಟುಹಬ್ಬ) ಇದೆ. ಆ ನಿಮಿತ್ತ ಅವರ ಅವತಾರೀ ಕಾರ್ಯದ ಬಗ್ಗೆ ಸ್ವಲ್ಪ ಮಟ್ಟಿಗೆ ತಿಳಿದುಕೊಳ್ಳೋಣ.

ಶ್ರೀ. ವಿನಾಯಕ ಶಾನಭಾಗ

ಶ್ರೀಸತ್ಶಕ್ತಿ (ಸೌ.) ಬಿಂದಾ ಸಿಂಗಬಾಳರ ಆತ್ಮಸ್ವರೂಪ ‘ಶ್ರೀ ಮಹಾಲಕ್ಷ್ಮಿಯು ಕಮಲಾಸನದ ಮೇಲೆ ಅಖಂಡ ಸಮಾಧಿ ಸ್ಥಿತಿಯಲ್ಲಿರುತ್ತಾಳೆ. ಇದು ಶ್ರೀಸತ್ಶಕ್ತಿ (ಸೌ.) ಬಿಂದಾ ನೀಲೇಶ ಸಿಂಗಬಾಳ ಇವರ ಆತ್ಮಸ್ವರೂಪವಾಗಿದೆ. ಅವರು ಸಚ್ಚಿದಾನಂದ ಸ್ವರೂಪಿಣಿಯಾಗಿದ್ದಾರೆ. ಅವರು ಶ್ರೀವಿಷ್ಣುವಿನ ಪ್ರಕಟ ಶಕ್ತಿಯಾಗಿದ್ದಾರೆ. ಎಲ್ಲ ದೇವತೆಗಳು, ಋಷಿಮುನಿಗಳು, ಯೋಗಿ, ಮಹಾಪುರುಷರು, ಮನುಷ್ಯರು ಮತ್ತು ಜೀವಸೃಷ್ಟಿಗಳು ಪೂಜೆಯನ್ನು ಮಾಡುವ ಆ ಭೂದೇವಿ ಸ್ವರೂಪ ಆ ಶ್ರೀಸತ್ಶಕ್ತಿ (ಸೌ.) ಬಿಂದಾ ಸಿಂಗಬಾಳ ಇವರು ಸನಾತನದ ಸಾಧಕರ ಪಾಲನೆಪೋಷಣೆ ಮಾಡುವ ‘ಮೋಕ್ಷಗುರು’ಗಳಾಗಿದ್ದಾರೆ. ಸಾಕ್ಷಾತ್ ಶಕ್ತಿಸ್ವರೂಪಿಣಿಯಾದ ಜಗನ್ಮಾತೆಗೆ ಅವರ ಅವತಾರೀ ಧಾರಣೆಯ ತಿಥಿಯ ನಿಮಿತ್ತ ಸನಾತನದ ಎಲ್ಲ ಸಾಧಕರ ವತಿಯಿಂದ ಕೋಟಿ ಕೋಟಿ ವಂದನೆಗಳು !’

೧. ಸೃಷ್ಟಿಯ ರಹಸ್ಯವನ್ನು ಅರಿತಿರುವ ಸಪ್ತರ್ಷಿಗಳು ಶ್ರೀಸತ್ಶಕ್ತಿ (ಸೌ.) ಬಿಂದಾ ಸಿಂಗಬಾಳ ಇವರ ಬಗ್ಗೆ ನಾಡಿಪಟ್ಟಿಗಳಲ್ಲಿ ಲಕ್ಷಗಟ್ಟಲೆ ಪುಟಗಳಲ್ಲಿ ಬರೆದಿಡಲಾಗಿದೆ

ಪೃಥ್ವಿಯಲ್ಲಿ ಸುಮಾರು ೮೦೦ ಕೋಟಿ ಮಾನವ ಜೀವಗಳಿವೆ. ಈ ಎಲ್ಲ ಮಾನವ ಜೀವಗಳ ಬಗ್ಗೆ ಋಷಿ-ಮಹರ್ಷಿಗಳು ಬರೆದಿಡಲಿಲ್ಲ. ಮಹರ್ಷಿಗಳು ಶ್ರೀಸತ್ಶಕ್ತಿ (ಸೌ.) ಬಿಂದಾ ನೀಲೇಶ ಸಿಂಗಬಾಳ ಇವರನ್ನು ‘ಭೂದೇವಿ’, ‘ಶ್ರೀಸತ್ಶಕ್ತಿ’ ಮತ್ತು ‘ಶ್ರೀ ಮಹಾಲಕ್ಷ್ಮಿ’ ಎಂದು ಉಲ್ಲೇಖಿಸಿದ್ದಾರೆ. ಸಪ್ತರ್ಷಿಗಳು ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಬಗ್ಗೆ ಸಾವಿರಾರು ನಾಡಿಪಟ್ಟಿಗಳಲ್ಲಿ ಲಕ್ಷಗಟ್ಟಲೆ ಪುಟಗಳನ್ನು ಬರೆದಿದ್ದಾರೆ. ಅದೇ ರೀತಿ ಸಪ್ತರ್ಷಿಗಳು ಗುರುದೇವರ ಇಬ್ಬರು ಆಧ್ಯಾತ್ಮಿಕ ಉತ್ತರಾಧಿಕಾರಿಗಳಾದ ಶ್ರೀಸತ್ಶಕ್ತಿ (ಸೌ.) ಬಿಂದಾ ನೀಲೇಶ ಸಿಂಗಬಾಳ ಮತ್ತು ಶ್ರೀಚಿತ್ಶಕ್ತಿ (ಸೌ.) ಅಂಜಲಿ ಮುಕುಲ ಗಾಡಗೀಳರ ಬಗ್ಗೆಯೂ ಲಕ್ಷಗಟ್ಟಲೆ ಪುಟ ಬರೆದಿದ್ದಾರೆ.

ಸನಾತನ ಸಂಸ್ಥೆಗಾಗಿ ಇದು ಭಾಗ್ಯದ ವಿಷಯವಾಗಿದೆ. ಏಕೆಂದರೆ, ಭೂದೇವಿಯ ಅವತಾರವಾಗಿರುವ ಶ್ರೀಸತ್ಶಕ್ತಿಯ ಬಗ್ಗೆ ಸಪ್ತರ್ಷಿಗಳು ತೆಗೆದ ಗೌರವೋದ್ಗಾರ, ಹಾಗೆಯೇ ಅವರ ಸ್ಥೂಲ ಮತ್ತು ಸೂಕ್ಷ್ಮ ಕಾರ್ಯದ ಬಗ್ಗೆ ಹೇಳಿದ ಅಂಶಗಳು ‘ಸಪ್ತರ್ಷಿ ಜೀವನಾಡಿಪಟ್ಟಿ’ ಮೂಲಕ ಪೃಥ್ವಿಯಲ್ಲಿ ಲಭ್ಯವಾಗಿವೆ.

೨. ಅಖಂಡ ಗುರುಸ್ಮರಣೆ ಮಾಡುತ್ತ ಗುರುಸೇವೆಯಲ್ಲಿ ಮಗ್ನರಾಗಿರುವ ಸರ್ವೋತ್ತಮ ಶಿಷ್ಯಮೂರ್ತಿ ಎಂದರೆ ಶ್ರೀಸತ್ಶಕ್ತಿ (ಸೌ.) ಬಿಂದಾ ಸಿಂಗಬಾಳ !
ಶ್ರೀಸತ್ಶಕ್ತಿ (ಸೌ.) ಬಿಂದಾ ಸಿಂಗಬಾಳ ಇವರು ಅಧ್ಯಾತ್ಮ ಪ್ರಸಾರದ ಮಾಧ್ಯಮದಿಂದ ಸೇವೆಯನ್ನು ಆರಂಭಿಸಿದರು. ಆಗ ‘ಸಂತರು’, ‘ಸದ್ಗುರು’ ಹೀಗೆ ಆಧ್ಯಾತ್ಮಿಕ ಉನ್ನತಿಯ ಹಂತಗಳನ್ನು ತಲುಪುತ್ತ ಸೌ. ಬಿಂದಾ ಸಿಂಗಬಾಳ ಇವರು ಸನಾತನ ಧರ್ಮದ ಸಂಸ್ಥಾಪನೆಗಾಗಿ ಪೃಥ್ವಿಯಲ್ಲಿ ಅವತರಿಸಿರುವ ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆಯವರ ‘ಆಧ್ಯಾತ್ಮಿಕ ಉತ್ತರಾಧಿಕಾರಿ’ ಆಗುವರೆಂದು ಯಾರೂ ಊಹಿಸಿರಲಿಲ್ಲ ! ಅಖಂಡ ಗುರುಸ್ಮರಣೆ ಮತ್ತು ‘ಶ್ರೀ ಗುರುಗಳ ಮನೋಗತ ವನ್ನರಿತು ಭಾವದಿಂದ ಸೇವೆ ಮಾಡಿ ಕಠಿಣದಲ್ಲಿನ ಕಠಿಣ ಪ್ರಸಂಗ ಗಳಲ್ಲಿ ಅವರು ಪರಾತ್ಪರ ಗುರು ಡಾ. ಆಠವಲೆಯವರ ಮನಸ್ಸನ್ನು ಗೆದ್ದಿದ್ದಾರೆ. ಇದರ ಉದಾಹರಣೆಗಳು ಮುಂದಿನಂತಿವೆ.

೨ ಅ. ಶ್ರೀಸತ್ಶಕ್ತಿ (ಸೌ.) ಬಿಂದಾ ಸಿಂಗಬಾಳ ಇವರು ಪರಾತ್ಪರ ಗುರು ಡಾಕ್ಟರರಿಗೆ ಅಪೇಕ್ಷಿತವಿರುವ ರೀತಿಯಲ್ಲಿ ಸಾಧಕರಿಂದ ವ್ಯಷ್ಟಿ-ಸಮಷ್ಟಿ ಸಾಧನೆಯನ್ನು ಸುವ್ಯವಸ್ಥಿತವಾಗಿ ಮಾಡಿಸಿಕೊಳ್ಳುವುದು : ಸಾಧಕರ ಆಧ್ಯಾತ್ಮಿಕ ಉನ್ನತಿಯಾಗಲು ಗುರುದೇವರು ಸನಾತನ ಸಂಸ್ಥೆಯನ್ನು ಸ್ಥಾಪಿಸಿದರು. ಗುರುದೇವರು ಸಾಧಕರಿಗೆ ವ್ಯಷ್ಟಿ ಮತ್ತು ಸಮಷ್ಟಿ ಸಾಧನೆಯನ್ನು ಕಲಿಸಿದರು ಮತ್ತು ಸಾವಿರಾರು ಸಾಧಕರಿಂದ ಅದನ್ನು ಮಾಡಿಸಿಕೊಂಡರು. ಗುರುದೇವರು ಮಾಡಿದ ಮಾರ್ಗದರ್ಶನಕ್ಕನುಸಾರ ಶ್ರೀಸತ್ಶಕ್ತಿ (ಸೌ.) ಸಿಂಗಬಾಳ ಇವರು ಸಾಧಕರ ವ್ಯಷ್ಟಿ-ಸಮಷ್ಟಿ ಸಾಧನೆಯನ್ನು ಸುವ್ಯವಸ್ಥಿತವಾಗಿ ಮಾಡಿಸಿಕೊಂಡಿದ್ದಾರೆ. ಕಳೆದ ಅನೇಕ ವರ್ಷಗಳಿಂದ ಸಾಧನೆ ಯನ್ನು ಮಾಡುತ್ತಿರುವ ಸಾಧಕರು, ಸಂತರು ಮತ್ತು ಸದ್ಗುರು ಗಳಲ್ಲಿ ಸಂಘಟಿತ ಭಾವವನ್ನು ಸ್ಥಿರವಾಗಿರಿಸುವುದು, ಸಾಧಕರಿಗೆ ಸಾಧನೆಯ ಮುಂದಿನ ಹಂತಕ್ಕೆ ಹೋಗಲು ಆವಶ್ಯಕವಾದ ಬದಲಾವಣೆಯನ್ನು ಮಾಡಿಕೊಳ್ಳಲು ಅವರಿಗೆ ಪ್ರೋತ್ಸಾಹ ನೀಡುವುದು, ಸಾಧಕರ ಜೀವನದ ಸುಖ-ದುಃಖಗಳ ಪ್ರಸಂಗ ಗಳಲ್ಲಿ ಭಾಗವಹಿಸಿ ಅವರ ಸಾಧನೆಯಲ್ಲಿನ ಉತ್ಸಾಹವನ್ನು ಉಳಿಸಿಕೊಳ್ಳುವುದು, ಸಾಧಕರು ಮತ್ತು ಸಂತರಾದ ಸಾಧಕರಲ್ಲಿ ಪರಸ್ಪರರಲ್ಲಿ ಗೌರವಭಾವವನ್ನಿಡುವುದು, ಹಾಗೆಯೇ ಕಲಿಯುವ ವೃತ್ತಿಯನ್ನು ಉಳಿಸಿಡುವುದು. ಈ ರೀತಿಯಲ್ಲಿ ಶ್ರೀಸತ್ಶಕ್ತಿ (ಸೌ.) ಸಿಂಗಬಾಳ ಇವರು ಸಂಸ್ಥೆಯ ಸ್ತರದಲ್ಲಿ ಸಾಧಕರ ವ್ಯಷ್ಟಿ-ಸಮಷ್ಟಿ ಸಾಧನೆಯನ್ನು ಸುವ್ಯವಸ್ಥಿತವಾಗಿ ಮಾಡಿಸಿಕೊಂಡಿದ್ದಾರೆ.

೨ ಆ. ‘ಭಕ್ತಿಸತ್ಸಂಗ’ಗಳ ಮಾಧ್ಯಮದಿಂದ ಹೆಚ್ಚೆಚ್ಚು ಸಾಧಕರಲ್ಲಿ ಈಶ್ವರಪ್ರಾಪ್ತಿಗಾಗಿ ಆವಶ್ಯಕ ಭಾವವನ್ನು ಜಾಗೃತಗೊಳಿಸುವುದು : ಗುರುದೇವರು ಯಾವಾಗಲೂ, ”ಈಶ್ವರಪ್ರಾಪ್ತಿಗಾಗಿ ಸಾಧಕರಲ್ಲಿ ‘ತಳಮಳ’, ‘ಭಾವ’ ಮತ್ತು ‘ಶ್ರದ್ಧೆ’ ಈ ೩ ಗುಣಗಳು ಅತ್ಯಂತ ಆವಶ್ಯಕವಾಗಿವೆ” ಎಂದಿದ್ದಾರೆ. ‘ಎಲ್ಲರಲ್ಲಿ ಭಾವ ಇರುತ್ತದೆ’, ಮತ್ತು ‘ಭಾವವಿದ್ದರೂ, ಅದು ಸತತವಾಗಿ ಜಾಗೃತವಾಗಿರುತ್ತದೆ’, ಎಂದೇನಿಲ್ಲ. ಕಳೆದ ೭ ವರ್ಷಗಳಿಂದ ಶ್ರೀಸತ್ಶಕ್ತಿ (ಸೌ.) ಬಿಂದಾ ಸಿಂಗಬಾಳ ಇವರು ಎಲ್ಲೆಡೆಯ ಸಾಧಕರಿಗಾಗಿ ‘ಭಕ್ತಿಸತ್ಸಂಗ’ಗಳನ್ನು ತೆಗೆದುಕೊಂಡು ಅವರು ಹೆಚ್ಚೆಚ್ಚು ಸಾಧಕರಲ್ಲಿ ಈಶ್ವರ ಮತ್ತು ಗುರುಗಳ ಬಗ್ಗೆ ಭಾವವನ್ನು ಜಾಗೃತ ಮಾಡಿ ಅದನ್ನು ಉಳಿಸಿ ಕೊಳ್ಳಲು ಪ್ರಯತ್ನಿಸಿದರು.

೩. ಪ್ರತಿಯೊಂದು ಯುಗದಲ್ಲಿ ಅಖಂಡವಾಗಿ ಮನುಕುಲದ ಕಾಳಜಿಯನ್ನು ವಹಿಸುವ ಶ್ರೀವಿಷ್ಣುವಿನ ಶಕ್ತಿ ಭೂದೇವಿಯು ರಾಮನಾಥಿಯ (ಗೋವಾ) ಸನಾತನದ ಆಶ್ರಮದಲ್ಲಿದ್ದು ಸಾವಿರಾರು ಸಾಧಕರ ಕಾಳಜಿಯನ್ನು ವಹಿಸುತ್ತಿದ್ದಾರೆ

ಶ್ರೀವಿಷ್ಣುವಿನ ಪ್ರತಿಯೊಂದು ಅವತಾರಕ್ಕೆ ಪೂರಕವಾಗಿರುವ ಮತ್ತು ಶ್ರೀವಿಷ್ಣುವಿನ ಜೊತೆಗೆ ಅವತಾರ ತಾಳಿ ಪೃಥ್ವಿಗೆ ಬರುವ ಭೂದೇವಿಗೆ ಪ್ರತಿಯೊಂದು ಯುಗದಲ್ಲಿ ತನ್ನ ಮಕ್ಕಳ (ಮನುಕುಲದ) ಕಾಳಜಿ ಅನಿಸುತ್ತಿತ್ತು. ಇಂದು ಶ್ರೀವಿಷ್ಣುವಿನ ಶಕ್ತಿ ಯಾಗಿರುವ ಅದೇ ಭೂದೇವಿಯು ಮನುಷ್ಯರೂಪವನ್ನು ಧರಿಸಿ ರಾಮನಾಥಿ (ಗೋವಾ) ಸನಾತನದ ಆಶ್ರಮದಲ್ಲಿ ವಾಸಿಸುತ್ತಿದ್ದಾಳೆ. ಅವಳು ಸನಾತನದ ಎಲ್ಲೆಡೆಯ ಸಾವಿರಾರು ಸಾಧಕರ ಕಾಳಜಿ ಯನ್ನು ವಹಿಸುತ್ತಿದ್ದಾಳೆ. ತನ್ನ ಕುಟುಂಬದವರಿಗಿಂತ ಸಾಧಕರ ಕುಟುಂಬಕ್ಕಾಗಿ ‘ಶ್ರೀಸತ್ಶಕ್ತಿ (ಸೌ.) ಸಿಂಗಬಾಳ ಇವರು ಎಷ್ಟು ಕಷ್ಟವನ್ನು ಅನುಭವಿಸುತ್ತಿದ್ದಾರೆ’, ಎಂಬುದರ ಬಗ್ಗೆ ಸ್ವಲ್ಪ ಮಟ್ಟಿಗೆ ಅಂದಾಜು ಸಿಗಲಿ’, ಎಂಬುದಕ್ಕಾಗಿ ಕೆಲವು ವಿಷಯಗಳನ್ನು ಇಂದು ಇಲ್ಲಿ ಸ್ಪಷ್ಟಪಡಿಸುತ್ತೇನೆ.

೩ ಅ. ಸಾಧಕರ ಆಧ್ಯಾತ್ಮಿಕ ತೊಂದರೆಗಳನ್ನು ದೂರಗೊಳಿಸಲು ನಿರಂತರವಾಗಿ ಶ್ರಮಪಡುವುದರಿಂದ ಸೂಕ್ಷ್ಮದಿಂದಾಗುವ ಕೆಟ್ಟ ಶಕ್ತಿ ಗಳ ಆಕ್ರಮಣಗಳು ! : ‘ಹಿಂದೂ ರಾಷ್ಟ್ರದ ಸ್ಥಾಪನೆಯಾಗಬೇಕು’, ಎಂದು ಹಗಲು-ರಾತ್ರಿ ಶ್ರಮಪಡುತ್ತಿರುವ ಸನಾತನದ ಸೇವಾ ಭಾವಿ ಸಾಧಕರ ಮೇಲೆ ಸಪ್ತಪಾತಾಳದಲ್ಲಿನ ಕೆಟ್ಟ ಶಕ್ತಿಗಳು ಹಗಲು-ರಾತ್ರಿ ಆಕ್ರಮಣ ಮಾಡುತ್ತಿವೆ. ಗುರುದೇವರು ಕೆಟ್ಟ ಶಕ್ತಿಗಳೊಂದಿಗೆ ಹೋರಾಡಿ ಸನಾತನದ ಸಾವಿರಾರು ಸಾಧಕರ ಆಧ್ಯಾತ್ಮಿಕ ತೊಂದರೆಗಳನ್ನು ದೂರಗೊಳಿಸಿದ್ದಾರೆ. ಅವರಂತೆಯೇ ಅವರ ಆಧ್ಯಾತ್ಮಿಕ ಉತ್ತರಾಧಿಕಾರಿಗಳಾದ ಶ್ರೀಸತ್ಶಕ್ತಿ (ಸೌ.) ಬಿಂದಾ ಸಿಂಗಬಾಳ ಮತ್ತು ಶ್ರೀಚಿತ್ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರಿಬ್ಬರೂ ಸಾಧಕರಿಗಾಗಿ ಶ್ರಮಪಡುತ್ತಿದ್ದಾರೆ. ಈ ಬಗ್ಗೆ ಸಪ್ತರ್ಷಿಗಳು ಜೀವನಾಡಿಪಟ್ಟಿಯಲ್ಲಿ ಮುಂದಿನಂತೆ ಬರೆದಿದ್ದಾರೆ, ‘ಶ್ರೀಸತ್ಶಕ್ತಿ ಮತ್ತು ಶ್ರೀಚಿತ್ಶಕ್ತಿ ಇವರ ಮೇಲೆ ಸೂಕ್ಷ್ಮದಿಂದಾಗುವ ಕೆಟ್ಟ ಶಕ್ತಿಗಳ ಆಕ್ರಮಣಗಳ ಪ್ರಮಾಣವು ದಿನೇದಿನೇ ಹೆಚ್ಚಾಗುತ್ತಿದೆ. ಈ ಆಕ್ರಮಣಗಳ ಸ್ಥೂಲದಲ್ಲಿನ ಪರಿಣಾಮವೆಂದು ರಕ್ತದೊತ್ತಡ ಹೆಚ್ಚಾಗುವುದು, ತಲೆಸುತ್ತುವುದು, ನಿರ್ಧರಿಸಿದ ಮುಖ್ಯ ಸೇವೆ ಪೂರ್ಣ ಮಾಡುವ ಬದಲು ಒಮ್ಮಿಂದೊಮ್ಮೆಲೆ ಸಂಭವಿಸುವ ಅಡಚಣೆಗಳ ನಿವಾರಣೆಗಾಗಿ ಸಮಯ ನೀಡಬೇಕಾಗುವುದು, ಮಲಗಿದ್ದಾಗ ‘ಯಾರೋ ಕುತ್ತಿಗೆ ಹಿಚುಕುತ್ತಿದ್ದಾರೆ’, ಎಂದು ಅರಿವಾಗುವುದು, ಒಂದು ಮಗ್ಗಲಿನಿಂದ ಇನ್ನೊಂದು ಮಗ್ಗಲಿಗೆ ಹೊರಳುವಾಗ ತುಂಬಾ ತೊಂದರೆ ಎನಿಸುವುದು, ಉಸಿರು ಕಟ್ಟಿದಂತಾಗುವುದು, ವಾತಾವರಣದಲ್ಲಿ ತೀವ್ರ ಪ್ರಮಾಣದಲ್ಲಿ ಒತ್ತಡ ಎನಿಸುವುದು, ಕಣ್ಣುಗಳನ್ನು ತೆರೆಯಲು ಬರದಿರುವುದು, ಅಸಹನೀಯ ನಿದ್ದೆ ಬಂದು ಮಲಗಬೇಕು ಎಂದೆನಿಸುವುದು, ಮಲಗಿ ಎದ್ದ ನಂತರ ಕಣ್ಣುಗಳನ್ನು ತೆರೆಯಲು ಕಷ್ಟವಾಗುವುದು, ಯಾರನ್ನಾದರೂ ಕರೆಯಬೇಕೆಂದರೆ ಬಾಯಿಯಿಂದ ಧ್ವನಿ ಬರದಿರುವುದು ಮುಂತಾದ ತೊಂದರೆಗಳಾಗುತ್ತಿವೆ. ಅನೇಕ ಬಾರಿ ಕೆಟ್ಟ ಕನಸುಗಳು ಬೀಳುವುದು, ಕನಸಿನಲ್ಲಿ ಸುಟ್ಟ ಶವಗಳು ಕಾಣಿಸುವುದು, ಅಸ್ಥಿಪಂಜರಗಳು ಅಥವಾ ತಲೆಬುರುಡೆಗಳು ಕಾಣಿಸುವುದು, ಈ ರೀತಿಯೂ ತೊಂದರೆಯಾಗುತ್ತಿವೆ (ಶ್ರೀಸತ್ಶಕ್ತಿ ಮತ್ತು ಶ್ರೀಚಿತ್ಶಕ್ತಿ ಇವರಿಗೆ ಇದುವರೆಗೆ ಈ ರೀತಿಯ ಅನೇಕ ಅನುಭವಗಳು ಬಂದಿವೆ. – ಸಂಕಲನಕಾರರು) ಸಾಮಾನ್ಯ ಸಾಧಕನಿಗೆ ಹೀಗಾದರೆ, ಅವನು ಭ್ರಮಿಷ್ಟ ಅಥವಾ ಹುಚ್ಚನಾಗಬಹುದು.’

– ಸಪ್ತರ್ಷಿಗಳು (ಪೂ. ಡಾ. ಓಂ ಉಲಗನಾಥನ್ ಇವರ ಮಾಧ್ಯಮದಿಂದ, ೧೭.೮.೨೦೨೩, ಸಪ್ತರ್ಷಿ ಜೀವನಾಡಿಪಟ್ಟಿ ವಾಚಕರು ಕ್ರ. ೨೨೯)

೩ ಆ. ಶ್ರೀಸತ್ಶಕ್ತಿ (ಸೌ.) ಬಿಂದಾ ಸಿಂಗಬಾಳ ಇವರ ಕುಟುಂಬ ದವರ ಮೇಲೆ ಕೆಟ್ಟ ಶಕ್ತಿಗಳ ಆಕ್ರಮಣವಾಗುತ್ತಿದ್ದರೂ ಅವರು ಆ ಬಗ್ಗೆ ದೂರದಿರುವುದು : ಶ್ರೀಸತ್ಶಕ್ತಿ (ಸೌ.) ಬಿಂದಾ ಸಿಂಗಬಾಳ ಇವರ ಕುಟುಂಬದವರ ಮೇಲೆಯೂ ಕೆಟ್ಟ ಶಕ್ತಿಗಳಿಂದ ಸತತ ವಾಗಿ ಆಕ್ರಮಣಗಳಾಗುತ್ತಿವೆ; ಆದರೆ ಆ ಬಗ್ಗೆ ಅವರು ಎಂದಿಗೂ ಹೇಳಲಿಲ್ಲ.

೧. ಶ್ರೀಸತ್ಶಕ್ತಿ (ಸೌ.) ಸಿಂಗಬಾಳ ಇವರ ಪತಿ ಸದ್ಗುರು ನೀಲೇಶ ಸಿಂಗಬಾಳ ಇವರಿಗೆ ಕಳೆದ ೨ ವರ್ಷಗಳಿಂದ ಅನೇಕ ಶಾರೀರಿಕ ತೊಂದರೆಗಳಾಗುತ್ತಿವೆ. ಅವರ ವೈದ್ಯಕೀಯ ಪರೀಕ್ಷಣೆಯನ್ನು ಮಾಡಿದ ನಂತರ ‘ಎಲ್ಲ ಸರಿಯಿದೆ’, ಎಂದು ಹೇಳಲಾಗುತ್ತದೆ. ಏನು ಕಾರಣವಿಲ್ಲದಾಗ ಎದೆ ನೋವಾಗುವುದು, ಹೊಟ್ಟೆಯಲ್ಲಿ ತೀವ್ರ ವೇದನೆ ಆಗುವುದು ಮುಂತಾದ ತೊಂದರೆಗಳಾಗುತ್ತಿರುವಾಗಲೂ ಅವರು ವಾರಣಾಸಿ ಸೇವಾಕೇಂದ್ರದಲ್ಲಿದ್ದು ಧರ್ಮಪ್ರಸಾರದ ಸೇವೆಯನ್ನು ಮಾಡುತ್ತಿದ್ದಾರೆ.

೨. ಸುಪುತ್ರ ಶ್ರೀ. ಸೋಹಮ್ ಇವರಿಗೆ ನಿದ್ರೆ ಬರದಿರುವುದು, ಊಟ ಸೇರದಿರುವುದು, ಮಲಗಿ ಏಳುವಾಗ ತೊಂದರೆಯಾಗುವುದು, ಆಗಾಗ ಆಗುವ ಹಲ್ಲುಗಳ ತೊಂದರೆಯಿಂದ ಊಟ ಮಾಡುವಾಗ ತೊಂದರೆಯಾಗುವುದು, ಹಲ್ಲುಗಳಿಗೆ ಸಂಬಂಧಿಸಿದ ಕಾಯಿಲೆಗಳು ಬೇಗ ವಾಸಿಯಾಗದಿರುವುದು ಮುಂತಾದ ತೊಂದರೆಗಳಾಗುತ್ತಿವೆ.

೩. ಶ್ರೀಸತ್ಶಕ್ತಿ (ಸೌ.) ಸಿಂಗಬಾಳ ಇವರ ಅತ್ತೆ ಪೂ. (ಶ್ರೀಮತಿ) ಸುಧಾ ಸಿಂಗಬಾಳ ಮತ್ತು ತಾಯಿ ಪೂ. (ಶ್ರೀಮತಿ) ಮುಳ್ಯೆ ಅಜ್ಜಿಯವರಿಗೂ ವರ್ಷವಿಡೀ ಅನೇಕ ಶಾರೀರಿಕ ತೊಂದರೆಗಳಾದವು. ಈ ರೀತಿ ತೊಂದರೆಗಳಿದ್ದರೂ ಶ್ರೀಸತ್ಶಕ್ತಿ (ಸೌ.) ಸಿಂಗಬಾಳವರು ತಮ್ಮ ಕುಟುಂಬದವರನ್ನು ಗುರುಚರಣಗಳಲ್ಲಿ ಅರ್ಪಿಸಿದರು. ಪರಿವಾರದಲ್ಲಿನ ಸದಸ್ಯರಿಗೆ ಆವಶ್ಯಕವಿದ್ದಷ್ಟು ಸಮಯ ಕೊಟ್ಟು ಸಾಧಕರ ಸಾಧನೆಯಲ್ಲಿನ ಅಡಚಣೆಗಳನ್ನು ದೂರಗೊಳಿಸಲು ಎಲ್ಲ ಸಮಯವನ್ನು ಕೊಡುತ್ತಾರೆ.

೪. ಕೃತಜ್ಞತೆಗಳು
ಇಂದು ಶ್ರೀಸತ್ಶಕ್ತಿ (ಸೌ.) ಬಿಂದಾ ಸಿಂಗಬಾಳ ಇವರು ಆಗಾಗ ಮಾಡಿದ ಮಾರ್ಗದರ್ಶನಕ್ಕನುಸಾರ ಎಲ್ಲೆಡೆ ಸಾಧಕರು ಕೃತಿ ಮಾಡುವುದು, ಇದೇ ಅವರ ಚರಣಗಳಲ್ಲಿ ಮಾಡಿದ ನಿಜವಾದ ಕೃತಜ್ಞತೆಯಾಗುವುದು !

– ಶ್ರೀ. ವಿನಾಯಕ ಶಾನಭಾಗ (ಈಗಿನ ಆಧ್ಯಾತ್ಮಿಕ ಮಟ್ಟ ಶೇ. ೬೮, ವಯಸ್ಸು ೪೧ ವರ್ಷ), ಚೆನ್ನೈ, ತಮಿಳುನಾಡು. (೨.೧೦.೨೦೨೩)