ರಾಮನಾಥಿ (ಗೋವಾ) – ಸಪ್ತರ್ಷಿಗಳ ಆಜ್ಞೆಯಂತೆ ಕಾಶಿಯಲ್ಲಿ ಶ್ರೀ. ಧುಂಡಿರಾಜ ವಿನಾಯಕ ಗಣಪತಿಗೆ ಸನಾತನ ಸಂಸ್ಥೆಯ ಸಂಸ್ಥಾಪಕ ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ, ಶ್ರೀ ಸತ್ ಶಕ್ತಿ (ಸೌ.) ಬಿಂದಾ ನಿಲೇಶ ಸಿಂಗಬಾಳ ಮತ್ತು ಚಿತ್ ಶಕ್ತಿ (ಸೌ.) ಅಂಜಲಿ ಮುಕುಲ ಗಾಡಗಿಳ್ ಈ ೩ ಗುರುಗಳ ಹೆಸರಿನಿಂದ ಪೂಜೆ ಮಾಡಲಾಯಿತು. ಈ ಪೂಜೆ ದೇವಸ್ಥಾನದ ಅರ್ಚಕರಾದ ಶ್ರೀ. ಕನ್ನಯ್ಯಾಜಿ ಇವರು ನೆರವೇರಿಸಿದರು. ಈ ಸಮಯದಲ್ಲಿ ಶ್ರೀ. ಕನ್ನಯ್ಯಾಜಿ ಇವರು ‘ಕಾಶಿಯಲ್ಲಿ ಕಾಶಿ ವಿಶ್ವನಾಥನು ವಿರಾಜಮಾನ ಆಗುವುದಕ್ಕಾಗಿ ಯಾವೆಲ್ಲ ತೊಂದರೆಗಳು ಇದ್ದವು, ಅವೆಲ್ಲವೂ ಶ್ರೀ ಧುಂಡಿರಾಜ ವಿನಾಯಕನು ದೂರಗೊಳಿಸಿದನು. ಅದರಂತೆ ಹಿಂದೂ ರಾಷ್ಟ್ರ ಸ್ಥಾಪನೆಯಲ್ಲಿ ಬರುವ ಸೂಕ್ಷ್ಮದಲ್ಲಿನ ಅಡಚಣೆಗಳು ದೂರವಾಗಬೇಕು’, ಎಂದು ಪ್ರಾರ್ಥನೆ ಮಾಡಿದರು.
ಶ್ರೀ ಧುಂಡಿರಾಜ ವಿನಾಯಕನ ಕುರಿತು ಮಾಹಿತಿ ಮತ್ತು ಅದರ ಮಹತ್ವ !
‘ಕಾಶಿ (ಉತ್ತರಪ್ರದೇಶ) ಇಲ್ಲಿ ಸಾವಿರಾರು ದೇವಸ್ಥಾನಗಳು ಇವೆ. ಅದರಲ್ಲಿ ೫೬ ಗಣೇಶನ ದೇವಸ್ಥಾನಗಳು ಇವೆ. ಈ ೫೬ ಗಣೇಶರಲ್ಲಿ ಶ್ರೀ ಧುಂಡಿರಾಜ ವಿನಾಯಕ ವಿಶೇಷವಾಗಿದ್ದಾನೆ. ಕಾಶಿಯ ಪ್ರದಕ್ಷಣೆ ಮಾಡಿದ ನಂತರ ಶ್ರೀ ಧುಂಡಿರಾಜ ವಿನಾಯಕನ ದರ್ಶನ ಪಡೆಯಬೇಕು ಎಂದು ಹೇಳಲಾಗುತ್ತದೆ. ಕಾಶಿ ವಿಶ್ವನಾಥನ ಪ್ರವೇಶದ್ವಾರದ ಬಳಿ ಈ ಶ್ರೀ ಗಣೇಶ ವಿರಾಜಮಾನನಾಗಿದ್ದಾನೆ. ಶ್ರೀ ಗಣೇಶನ ಆಜ್ಞೆಯಿಂದ ರಾಜ ದಿವೋದಾಸ ವಾನಪ್ರಸ್ಥಾಶ್ರಮಕ್ಕೆ ಹೋದ ನಂತರ ಭಗವಾನ್ ವಿಶ್ವಕರ್ಮನು ಕಾಶಿಕ್ಷೇತ್ರದ ಪುನರ್ನಿರ್ಮಾಣ ಮಾಡಿದನು. ಬಳಿಕ ಅಲ್ಲಿ ಭಗವಾನ್ ಶಿವ ಎಲ್ಲಾ ದೇವಗಳ ಸಹಿತ ಮಂದರಾಚಲ ಪರ್ವತದಿಂದ ಕಾಶಿ ಕ್ಷೇತ್ರಕ್ಕೆ ವಾಸಕ್ಕೆ ಬಂದನು. ಕಾಶಿ ಕ್ಷೇತ್ರದಲ್ಲಿ ಅವರು ‘ಕಾಶೀ ವಿಶ್ವನಾಥ’ ಆದರು. ಕಾಶಿಕ್ಷೇತ್ರದಲ್ಲಿ ಪ್ರವೇಶ ಮಾಡಿದ ನಂತರ ವಿಶ್ವನಾಥನು ಮೊದಲು ಶ್ರೀ ಗಣೇಶನ ಸ್ತುತಿ ಮಾಡಿದನು. ಅವನು ಧುಂಡಿರಾಜ ಸ್ತೋತ್ರ ಪಠಣ ಮಾಡಿದನು, ”ಇಲ್ಲಿ ಶ್ರೀ ಗಣೇಶ ಧುಂಡಿರಾಜ ಹೆಸರಿನಿಂದ ಪ್ರಸಿದ್ಧನಾಗುವವನು. ಯಾವ ಭಕ್ತರು ಕಾಶಿ ವಿಶ್ವನಾಥನ ದರ್ಶನ ಪಡೆಯುವ ಮೊದಲು ಧುಂಡಿರಾಜ ವಿನಾಯಕನ ದರ್ಶನ ಮತ್ತು ಪೂಜೆ ಮಾಡುವರು, ಅವರಿಗೆ ನನ್ನ (ವಿಶ್ವನಾಥರ ಭಕ್ತನಿಗೆ) ಸಂಪೂರ್ಣ ಆಶೀರ್ವಾದ ಲಭಿಸುವುದು.” ಅದರ ನಂತರ ಶ್ರೀ ಗಣೇಶ ೫೬ ರೂಪಗಳಲ್ಲಿ ಕಾಶಿ ಕ್ಷೇತ್ರದಲ್ಲಿ ವಿರಾಜಮಾನನಾದನು.
ಕಾಶಿ ವಿಶ್ವನಾಥನು ಭಕ್ತರಿಗೆ ವಲಿಯುವನು; ಅದರೆ ಅವನು ಕಾಶಿ ಕ್ಷೇತ್ರಕ್ಕೆ ಬರುವುದಕ್ಕಾಗಿ ಕಾರ್ಯ ಮಾಡಿರುವ ಶ್ರೀ ಧುಂಡಿರಾಜ ಗಣೇಶನು ಕೂಡ ಭಕ್ತ ವತ್ಸಲನಾಗಿದ್ದಾನೆ. ಶ್ರೀ ಧುಂಡಿರಾಜ ಗಣೇಶನ ದರ್ಶನ ಪಡೆಯದೆ ಕಾಶಿ ಯಾತ್ರೆ ಪೂರ್ಣವಾಗುವುದಿಲ್ಲ ಎಂದು ಈ ಗಣೇಶನ ಮಹಾತ್ಮೆಯಲ್ಲಿದೆ.’