ತುಮಕೂರಿನ ಅರೆಯೂರಿನಲ್ಲಿ ಶ್ರೀ ವೈದ್ಯನಾಥೇಶ್ವರ ಶಿವನ ದರ್ಶನ ಪಡೆದಾಗ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರಿಗೆ ಬಂದ ಅನುಭೂತಿಗಳು !

ಗುರುಪೂರ್ಣಿಮೆಯ ಪಾವನ ದಿನದಂದು ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರಿಂದ ಶ್ರೀ ವೈದ್ಯನಾಥೇಶ್ವರನ ದೇವಸ್ಥಾನದ ದರ್ಶನ !

‘ಸಪ್ತರ್ಷಿಗಳು ಜೀವನಾಡಿಪಟ್ಟಿಯ ಮಾಧ್ಯಮದಿಂದ ಗುರುಪೂರ್ಣಿಮೆಯ ದಿನ (೨೩.೭.೨೦೨೧ ರಂದು) ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಇವರು ಗೋವಾದ ರಾಮನಾಥಿಯ ಸನಾತನದ ಆಶ್ರಮದಲ್ಲಿ ಮಹರ್ಷಿಗಳ ಆಜ್ಞೆಯಂತೆ ಸಿದ್ಧಪಡಿಸಿದ ಪ್ರತಿಮೆಯ ಪೂಜೆಯನ್ನು ಮಾಡಬೇಕು ಮತ್ತು ಅದೇ ಸಮಯದಲ್ಲಿ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳರವರು ತುಮಕೂರು ಜಿಲ್ಲೆಯ ಅರೆಯೂರು ಗ್ರಾಮದಲ್ಲಿರುವ ಶ್ರೀ ವೈದ್ಯನಾಥೇಶ್ವರ ಶಿವನ ದರ್ಶನವನ್ನು ಪಡೆಯಬೇಕು, ಆ ಸಮಯದಲ್ಲಿ ಅವರು ಶಿವಲಿಂಗದ ಮೇಲೆ ಅಭಿಷೇಕವನ್ನು ಮಾಡಬೇಕು ಮತ್ತು ಶಿವಲಿಂಗದ ಪೂಜೆಯನ್ನು ಮಾಡಬೇಕು ಹಾಗೂ ವೇದಗಳಲ್ಲಿನ ‘ಚಮಕಮ್ ಎಂಬ ಮಂತ್ರವನ್ನು ಕೇಳಬೇಕು, ಹಾಗೆಯೇ ಎಲ್ಲಡೆಯ ಸನಾತನದ ಸಾಧಕರ ಶಾರೀರಿಕ ಆರೋಗ್ಯಕ್ಕಾಗಿ ಶಿವನಲ್ಲಿ ಪ್ರಾರ್ಥನೆಯನ್ನು ಮಾಡಬೇಕು, ಎಂದು ಆಜ್ಞೆಯನ್ನು ಮಾಡಿದ್ದರು.

ಶ್ರೀ ವೈದ್ಯನಾಥೇಶ್ವರನಲ್ಲಿನ ಶಿವಲಿಂಗ ಮತ್ತು ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರಿಗೆ ಸಪ್ತರ್ಷಿಗಳು ನೀಡಿದ ಸ್ಪಟಿಕದ ಶಿವಲಿಂಗ (ಗೋಲಾಕಾರದಲ್ಲಿ ದೊಡ್ಡದ್ದಾಗಿ ತೋರಿಸಲಾಗಿದೆ)

೧. ಶ್ರೀ ವೈದ್ಯನಾಥೇಶ್ವರನ ದರ್ಶನವು

ದೈವೀ ನಿಯೋಜನೆ ಆಗಿರುವುದರ ಅನುಭೂತಿ ಸಪ್ತರ್ಷಿಗಳ ಆಜ್ಞೆಯಂತೆ ೨೩.೭.೨೦೨೧ ರ ಗುರುಪೂರ್ಣಿಮೆಯ ದಿನ ಬೆಳಗ್ಗೆ ೧೦.೩೦ ಗಂಟೆಗೆ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳರವರು ಶ್ರೀ ವೈದ್ಯನಾಥೇಶ್ವರ ದೇವಸ್ಥಾನವನ್ನು ತಲುಪಿದರು. ಆ ಸಮಯದಲ್ಲಿ ಶಿವಲಿಂಗದ ಮೇಲೆ ಅಭಿಷೇಕ ನಡೆದಿತ್ತು. ಸ್ವಲ್ಪ ಸಮಯದ ನಂತರ ಅರ್ಚಕರು ವೇದಗಳಲ್ಲಿನ ‘ಚಮಕಮ್ ಎಂಬ ಮಂತ್ರವನ್ನು ಹೇಳಿದರು. ಆಗ ನಮ್ಮೆಲ್ಲ ಸಾಧಕರಿಗೆ ‘ಇದೆಲ್ಲವೂ ದೈವೀ ಆಯೋಜನೆಯಂತೆ ನಡೆದಿದೆ, ಎಂಬ ಅನುಭೂತಿಯು ಬಂದಿತು.

ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ

೨. ಕೊರೊನಾದಂತಹ ವಿಷಾಣುಗಳಿಂದ ಸಾಧಕರ ರಕ್ಷಣೆಯಾಗಲೆಂದು ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳರವರು ಶ್ರೀ ವೈದ್ಯನಾಥೇಶ್ವರನಲ್ಲಿ ಪ್ರಾರ್ಥಿಸುವುದು

‘ಆಪತ್ಕಾಲವು ಆರಂಭವಾಗಿರುವುದರಿಂದ ಸಾಧಕರಿಗೆ ವೈದ್ಯನಾಥ ಶಿವನ ಆಶೀರ್ವಾದದ  ಆವಶ್ಯಕತೆಯಿದೆ; ಎಂದು ಸಪ್ತರ್ಷಿಗಳು ಶ್ರೀಚಿತ್‌ಶಕ್ತಿ  (ಸೌ.) ಅಂಜಲಿ ಗಾಡಗೀಳರವರನ್ನು ಗುರುಪೂರ್ಣಿಮೆಯ ದಿನ ಶ್ರೀ ವೈದ್ಯನಾಥೇಶ್ವರನ ದೇವಸ್ಥಾನಕ್ಕೆ ಕಳುಹಿಸಿದರು, ಎಂದು ನನಗೆ ಅರಿವಾಯಿತು. ‘ಕೊರೊನಾದಂತಹ ವಿಷಾಣುಗಳಿಂದ ಎಲ್ಲ ಸಾಧಕರ ರಕ್ಷಣೆಯಾಗಬೇಕು, ಎಂದು ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳರವರು ಶ್ರೀ ವೈದ್ಯನಾಥೇಶ್ವರ ಶಿವನಲ್ಲಿ ಪಾರ್ಥನೆ ಮಾಡಿದರು.

ಶ್ರೀ. ವಿನಾಯಕ ಶಾನಭಾಗ

೩. ದೇವಸ್ಥಾನದ ವಿಶ್ವಸ್ಥರು ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳರ ಇವರನ್ನು ಸನ್ಮಾನಿಸುವುದು

ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರಿಗೆ ಶಾಲು ಹೊದಿಸಿ, ಹಾರವನ್ನು ಹಾಕಿ ಅವರ ಸನ್ಮಾನವನ್ನು ಮಾಡುತ್ತಿರುವ ಶ್ರೀ ವೈದ್ಯನಾಥೇಶ್ವರ ದೇವಸ್ಥಾನದ ವಿಶ್ವಸ್ಥರು
ವಿಶ್ವಸ್ಥರು ಸನ್ಮಾನ ಮಾಡಿದ ನಂತರದ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರ ಒಂದು ಭಾವಮುದ್ರೆ

೪. ಗಮನಾರ್ಹ ಅಂಶಗಳು

೪ ಅ. ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರು ಚತುಶ್ಚಕ್ರ ವಾಹನದಿಂದ ದೇವಸ್ಥಾನದ ಎದುರಿಗೆ ಬಂದನಂತರ ಪುಷ್ಪವೃಷ್ಟಿ ಆದಂತೆ ಮಳೆ ಬಂದಿತು. ಇದರ ಬಗ್ಗೆ ಮಹರ್ಷಿಗಳಿಗೆ ಹೇಳಿದಾಗ ಅವರು, ‘ಇದು ವರುಣದೇವರ ಆಶೀರ್ವಾದವೇ ಆಗಿದೆ, ಎಂದು ಹೇಳಿದರು.

೪ ಆ. ಈ ಸಮಯದಲ್ಲಿ ದೇವಸ್ಥಾನದ ಎಲ್ಲ ವಿಶ್ವಸ್ಥರು ಉಪಸ್ಥಿತರಿದ್ದರು. ಅವರು ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳರವರಿಗೆ ದೇವರ ಎದುರು ಕುಳಿತುಕೊಳ್ಳಲು ಎಲ್ಲ ವ್ಯವಸ್ಥೆಯನ್ನು ಮಾಡಿದ್ದರು.

ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರಿಗೆ ಮಹರ್ಷಿಗಳು ಸ್ಪಟಿಕದ ಶಿವಲಿಂಗವನ್ನು ಕೊಟ್ಟಿದ್ದಾರೆ. ಈ ಶಿವಲಿಂಗವು ಕಳೆದ ೬ ಪೀಳಿಗೆಗಳಿಂದ ಪೂ. ಡಾ. ಓಂ ಉಲಗನಾಥನಜಿಯವರ ಮನೆತನದ ಪೂಜೆಯಲ್ಲಿತ್ತು. ಶಿವಲಿಂಗವನ್ನು ವಿಶ್ವಸ್ಥರಿಗೆ ತೋರಿಸಿದ ನಂತರ ಅವರು ಅದನ್ನು ಶ್ರೀ ವೈದ್ಯನಾಥೇಶ್ವರ ಶಿವಲಿಂಗದ ಹತ್ತಿರದಲ್ಲಿಟ್ಟು ಅರ್ಚಕರಿಗೆ ಆ ಶಿವಲಿಂಗದ ಮೇಲೆ ಅಭಿಷೇಕವನ್ನು ಮಾಡಲು ಹೇಳಿದರು.

೫. ಅನುಭೂತಿಗಳು

೫ ಅ. ದೇವಸ್ಥಾನದಲ್ಲಿ ದೇವರ ಮುಂದೆ ಕುಳಿತುಕೊಂಡಾಗ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರಿಗೆ ಶಿವಲಿಂಗದಲ್ಲಿ ನೃತ್ಯ ಮಾಡುತ್ತಿರುವ ಸಾಕ್ಷಾತ್ ಶಿವನ ದರ್ಶನವು ಮೊದಲ ಬಾರಿಯೇ ಆಯಿತು. ಅವರಿಗೆ ಶಿವನ ಬಣ್ಣವು ಪಚ್ಚೆಯಂತೆ ಕಾಣಿಸಿತು. ಅವರಿಗೆ, “ಶಿವನ ಆರತಿ ಆಗುತ್ತಿರುವಾಗ ಶಿವನು ನೃತ್ಯವನ್ನು ಮಾಡುತ್ತಿದ್ದಾನೆ ಮತ್ತು ನಾನು ಪಾರ್ವತಿಯಾಗಿ ಆ ನೃತ್ಯವನ್ನು ನೋಡುತ್ತಿದ್ದೇನೆ, ಎಂದು ಅರಿವಾಯಿತು. ಸ್ವಲ್ಪ ಸಮಯದ ನಂತರ ‘ನಾನು ಕಾಳಿಮಾತೆಯಾಗಿದ್ದೇನೆ, ಎಂದು ಅರಿವಾಯಿತು. ಕಾಳಿಮಾತೆಯು ನೃತ್ಯವನ್ನು ಮಾಡುತ್ತಿರುವಾಗ ಅವಳ ಕೊರಳಲ್ಲಿನ ರುಂಡ ಮಾಲೆಯು ಅಲುಗಾಡುತ್ತಿರುವುದು ಅರಿವಾಗುತ್ತಿತ್ತು. ‘ನನ್ನ ಒಂದು ರೂಪವು ಕಾಳಿಮಾತೆಯ ರೂಪದಲ್ಲಿ ನೃತ್ಯ ಮಾಡುತ್ತಿದ್ದು ಇನ್ನೊಂದು ರೂಪವು ಆ ನೃತ್ಯವನ್ನು ನೋಡುತ್ತಿದೆ, ಎಂದು ಕೆಲವು ಕ್ಷಣ ಅರಿವಾಯಿತು, ಎಂದು ಹೇಳಿದರು. ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳರವರು ಈ ಅನುಭೂತಿಗಳನ್ನು ನಮಗೆ ಹೇಳಿದರು. ಆಗ ಸಹಸಾಧಕ ಶ್ರೀ. ವಿನೀತ ದೇಸಾಯಿಯವರು, ‘ದೇವಸ್ಥಾನದಿಂದ ೩೦ ಕಿ.ಮೀ. ದೂರದಲ್ಲಿ ಕುಣಿಗಲ್ ಎಂಬ ಊರಿದೆ  ಕುಣಿಗಲ್ ಇದು ಶಿವನ ನೃತ್ಯಕ್ಷೇತ್ರವಾಗಿದೆ. ಕನ್ನಡದಲ್ಲಿ ‘ಕುಣಿ ಎಂದರೆ ‘ನೃತ್ಯ ಮತ್ತು ‘ಗಲ್ ಎಂದರೆ ‘ಕಲ್ಲು. ಪ್ರಾಚೀನ ಕಾಲದಲ್ಲಿ ಒಮ್ಮೆ ಶಿವ-ಪಾರ್ವತಿಯರು ಇಲ್ಲಿ ಬಂದಿದ್ದರು. ಅವರು ಈ ಕ್ಷೇತ್ರದಲ್ಲಿ ನೃತ್ಯವನ್ನು ಮಾಡಿರುವುದರಿಂದ ಈ ಗ್ರಾಮಕ್ಕೆ ‘ನರ್ತನಪುರಿ ಎಂಬ ಹೆಸರು ಬಿದ್ದಿದೆ. ಊರಿನ ಕೆರೆಯಲ್ಲಿನ ನೀರಿನ ಮಟ್ಟ ಹೆಚ್ಚಾದಾಗ, ಕೆರೆಯಲ್ಲಿನ ಕಲ್ಲುಗಳು ಮೇಲೆ-ಕೆಳಗೆ ಆಗುತ್ತಿರುವುದು ಕಾಣಿಸುತ್ತಿತ್ತು. ಇದರ ಮೇಲಿನಿಂದ ಜನರು ‘ಕುಣಿಗಲ್ ಅಂದರೆ ‘ನೃತ್ಯ ಮಾಡುವ ಕಲ್ಲು ಎಂದು ಊರಿಗೆ ಹೆಸರು ಇಟ್ಟರು, ಎಂದು ಹೇಳಿದರು. ಅನಂತರ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರಿಗೆ ಶಿವಲಿಂಗದಲ್ಲಿ ನೃತ್ಯವನ್ನು ಮಾಡುವ ಶಿವನ ದರ್ಶನ ಏಕೆ ಆಯಿತು, ಎಂಬುದರ ಕಾರ್ಯಕಾರಣಭಾವ ಗಮನಕ್ಕೆ ಬಂದಿತು.

೫ ಆ. ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳರವರು ಶ್ರೀ ವೈದ್ಯನಾಥೇಶ್ವರನ ದೇವಸ್ಥಾನದೊಳಗೆ ಹೋದ ನಂತರ ಅವರಿಗೆ ಸೂಕ್ಷ್ಮದಲ್ಲಿ ಸುತ್ತಮುತ್ತಲು ಸಾವಿರಾರು ನಾಗಗಳ ದರ್ಶನವಾಯಿತು. ವಿಶ್ವಸ್ಥರರು, “ದೇವಸ್ಥಾನದ ಹತ್ತಿರವೇ ಭೂಮಿಯ ಕೆಳಗೆ ಒಂದು ಶಿವಲಿಂಗ (‘ಹಾಲು ರಾಮೇಶ್ವರ)ವಿದೆ. ಅಲ್ಲಿನ ಒಂದು ದೈವೀ ನಾಗವು ಆಗಾಗ ಶ್ರೀ ವೈದ್ಯನಾಥೇಶ್ವರನ ದರ್ಶನಕ್ಕೆ ಬರುತ್ತದೆ. ದೇವಸ್ಥಾನದಲ್ಲಿ ಮಡಿ-ಮೈಲಿಗೆಗಳನ್ನು ಸರಿಯಾಗಿ ಪಾಲಿಸದಿದ್ದರೆ ಅಥವಾ ಏನಾದರೂ ತಪ್ಪಾಗಿದ್ದರೆ, ಅದು ದೇವಸ್ಥಾನದ ಮುಖ್ಯ ಪ್ರವೇಶದ್ವಾರದ ಬಳಿ ಬಂದು ಕುಳಿತುಕೊಳ್ಳುತ್ತದೆ ಮತ್ತು ಯಾರನ್ನೂ ಒಳಗೆ ಬಿಡುವುದಿಲ್ಲ, ಎಂದು ಹೇಳಿದರು. – ಶ್ರೀ. ವಿನಾಯಕ ಶಾನಭಾಗ, ಬೆಂಗಳೂರು, ಕರ್ನಾಟಕ. (೨೬.೭.೨೦೨೧)

ಶ್ರೀ ವೈದ್ಯನಾಥೇಶ್ವರ ಶಿವನ ದೇವಸ್ಥಾನದ ಇತಿಹಾಸ, ಅರೆಯೂರಿನಲ್ಲಿನ ಶಿವನಿಗೆ ‘ಶ್ರೀ ವೈದ್ಯನಾಥೇಶ್ವರ ಎಂಬ ಹೆಸರು ಬರುವುದರ ಹಿಂದಿನ ಕಾರಣ

ಸಾವಿರಾರು ವರ್ಷಗಳ ಹಿಂದೆ ಹಿಮಾಲಯದಿಂದ ಬಂದಿರುವ ದಧಿಚಿಋಷಿಗಳು ಈ ಸ್ಥಳದಲ್ಲಿ ಒಂದು ಆಶ್ರಮವನ್ನು ಕಟ್ಟಿದ್ದರು. ಈ ಆಶ್ರಮದಲ್ಲಿ ಅವರು ಒಂದು ಜ್ಯೋತಿರ್ಲಿಂಗವನ್ನು ಸಹ ಸ್ಥಾಪಿಸಿದ್ದರು. ಈ ಆಶ್ರಮದಲ್ಲಿ ದಧಿಚಿಋಷಿಗಳು ಇತರ ಋಷಿಗಳೊಂದಿಗೆ ದೈವೀ ವನಸ್ಪತಿಗಳಿಂದ ಔಷಧಗಳನ್ನು ತಯಾರಿಸುತ್ತಿದ್ದರು. ಆದುದರಿಂದ ಇಲ್ಲಿನ ಶಿವನಿಗೆ ‘ಶ್ರೀ ವೈದ್ಯನಾಥೇಶ್ವರ ಎಂಬ ಹೆಸರು ಬಿದ್ದಿದೆ.

ಒಂದು ಸಾವಿರ ವರ್ಷಗಳಿಗಿಂತಲೂ ಹೆಚ್ಚು ಪ್ರಾಚೀನವಾಗಿರುವ ಚೋಳ ರಾಜರ ಕಾಲದ ದೇವಸ್ಥಾನ!

ಈ ದೇವಸ್ಥಾನವು ತುಮಕೂರು ಜಿಲ್ಲೆಯಲ್ಲಿನ ‘ಅರೆಯೂರು ಎಂಬ ನಿಸರ್ಗರಮ್ಯ ಗ್ರಾಮಲ್ಲಿದೆ. ಈಗಿನ ಈ ದೇವಸ್ಥಾನವು ಚೋಳ ರಾಜರ ಕಾಲದಲ್ಲಿ ನದ್ದಾಗಿದ್ದು ಅದು ಒಂದು ಸಾವಿರ ವರ್ಷಗಳಿಗಿಂತಲೂ ಹೆಚ್ಚು ಪ್ರಾಚೀನವಾಗಿದೆ. ಇಲ್ಲಿನ ಶಿವಲಿಂಗದ ವೈಶಿಷ್ಟ್ಯವೆಂದರೆ ಅದರ ಮುಂದೆ ದೀಪವನ್ನು ಹಚ್ಚಿದ ನಂತರ ದೀಪದ ಜ್ಯೋತಿಯು ಶಿವಲಿಂಗದ ಮೇಲೆ ಕಾಣಿಸುತ್ತದೆ. ಈ ಅರ್ಥದಿಂದಲೂ ಸ್ಥಳೀಯ ಜನರು ಈ ಶಿವಲಿಂಗಕ್ಕೆ ‘ಜ್ಯೋತಿರ್ಲಿಂಗ ಎಂದು ಕರೆಯುತ್ತಾರೆ.

ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳರನ್ನು ನೋಡಿದಾಗ ದೇವಸ್ಥಾನದ ಓರ್ವ ವಿಶ್ವಸ್ಥರಿಗೆ ‘ಅವರ ರೂಪದಲ್ಲಿ ಸಾಕ್ಷಾತ್ ಕೊಲ್ಹಾಪುರದ ಶ್ರೀ ಮಹಾಲಕ್ಷ್ಮೀ ದೇವಿಯೇ ದೇವಸ್ಥಾನದಲ್ಲಿ ಬಂದಿದ್ದಾಳೆ, ಎಂದೆನಿಸುವುದು

ವಿಶ್ವಸ್ಥರರ ವತಿಯಿಂದ ದೇವಸ್ಥಾನದ ಹೊಸ ರಾಜಗೋಪುರಕ್ಕಾಗಿ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರ ಹಸ್ತದಿಂದ ಅರ್ಪಣೆಯನ್ನು ನೀಡುತ್ತಿರುವ ಕ್ಷಣ ಮತ್ತು ಅವರೊಂದಿಗೆ ಇತರ ಗೌರವಾನ್ವಿತರು

‘ಶ್ರೀ ವೈದ್ಯನಾಥೇಶ್ವರನ ಪೂಜೆಯಾದ ನಂತರ ದೇವಸ್ಥಾನದ ಓರ್ವ ವಿಶ್ವಸ್ಥರು ನಮಗೆ, “ಇಂದು ನಾನು ಮತ್ತು ನನ್ನ ಪತ್ನಿ ದೇವಸ್ಥಾನದ ಹೊಸ ರಾಜಗೋಪುರಕ್ಕಾಗಿ (ದೇವಸ್ಥಾನದ ಪೂರ್ವದಿಕ್ಕಿಗಿರುವ ಮುಖ್ಯ ಪ್ರವೇಶದ್ವಾರಕ್ಕಾಗಿ) ಒಂದು ಕಲಶವನ್ನು ಅರ್ಪಣೆ ಮಾಡುವುದೆಂದು ನಿಶ್ಚಯಿಸಿದ್ದೆವು. ನಾವು ದೇವಸ್ಥಾನಕ್ಕೆ ಬಂದಾಗ ಅವರ ಕಡೆಗೆ (ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳರವರ ಕಡೆಗೆ) ನೋಡಿದೆವು. ಆಗ ನನಗೆ, ‘ಸಾಕ್ಷಾತ್ ಕೊಲ್ಹಾಪುರದ ಶ್ರೀ ಮಹಾಲಕ್ಷ್ಮೀದೇವಿಯೇ ಇಂದು ನಮ್ಮ ದೇವಸ್ಥಾನಕ್ಕೆ ಬಂದಿದ್ದಾಳೆ ಮತ್ತು ದೇವಸ್ಥಾನದ ರಾಜಗೋಪುರಕ್ಕಾಗಿ ಅರ್ಪಣೆಯನ್ನು ಅವರ ಹಸ್ತದಿಂದ ಮಾಡಿದರೆ ಪುಣ್ಯ ಸಿಗುವುದು, ಎಂದೆನಿಸಿತು. ಆ ವಿಶ್ವಸ್ಥರು ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರ ಹಸ್ತದಿಂದ ದೇವಸ್ಥಾನಕ್ಕೆ ಅರ್ಪಣೆಯನ್ನು ನೀಡಿದರು. – ಶ್ರೀ. ವಿನಾಯಕ ಶಾನಭಾಗ, ಬೆಂಗಳೂರು, ಕರ್ನಾಟಕ. (೨೬.೭.೨೦೨೧)

ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಇವರು ಗೋವಾದ ರಾಮನಾಥಿಯಲ್ಲಿ ಪೂಜೆಯನ್ನು ಆರಂಭಿಸುವುದು ಮತ್ತು ಅದೇ ಸಮಯದಲ್ಲಿ ಶ್ರೀ ವೈದ್ಯನಾಥೇಶ್ವರ ಶಿವಲಿಂಗನ ಬದಿಗೆ ಇಟ್ಟಿರುವ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರ ದಿನನಿತ್ಯದ ಪೂಜೆಯಲ್ಲಿನ ಸ್ಪಟಿಕದ ಶಿವಲಿಂಗದ ಮೇಲೆ ಅರ್ಚಕರು ಇಟ್ಟಿದ್ದ ಹೂವು ಕೆಳಗೆ ಬೀಳುವುದು

‘ಗುರುಪೂರ್ಣಿಮೆಯ ದಿನ ಬೆಳಗ್ಗೆ ೧೧ ಗಂಟೆಗೆ ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಇವರು ಗೋವಾದ ರಾಮನಾಥಿಯಲ್ಲಿನ ಸನಾತನದ ಆಶ್ರಮದಲ್ಲಿ ಸಪ್ತರ್ಷಿಗಳ ಆಜ್ಞೆಯಂತೆ ಸಿದ್ಧಪಡಿಸಿದ ಪ್ರಭು ಶ್ರೀರಾಮ, ಭಗವಾನ ಶ್ರೀಕೃಷ್ಣ, ಪರಾತ್ಪರ ಗುರು ಡಾ. ಆಠವಲೆ ಮತ್ತು ನಮಸ್ಕಾರದ ಮುದ್ರೆಯಲ್ಲಿ ಕುಳಿತುಕೊಂಡಿರುವ ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಮತ್ತು ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರ ಚಿತ್ರದ ಪೂಜೆಯನ್ನು ಆರಂಭಿಸಿದರು. ಅದೇ ಸಮಯದಲ್ಲಿ ಅರೆಯೂರಿನಲ್ಲಿನ ಶ್ರೀ ವೈದ್ಯನಾಥೇಶ್ವರ ಶಿವಲಿಂಗದ ಬದಿಗೆ ಇಟ್ಟಿರುವ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರ ದಿನನಿತ್ಯದ ಪೂಜೆಯಲ್ಲಿನ ಸ್ಪಟಿಕದ ಶಿವಲಿಂಗದ ಮೇಲೆ ಅರ್ಚಕರು ಇಟ್ಟಿದ ಹೂವು ಕೆಳಗೆ ಬಿದ್ದಿತು. (‘ಪರಾತ್ಪರ ಗುರು ಡಾ. ಆಠವಲೆಯವರು ಶ್ರೀವಿಷ್ಣುವಿನ ಅಂಶಾವತಾರರಾಗಿದ್ದಾರೆ, ಎಂದು ಸಪ್ತರ್ಷಿಗಳು ಜೀವನಾಡಿಪಟ್ಟಿಯಿಂದ ಅರಿವು ಮಾಡಿ ಕೊಟ್ಟರು. ‘ಶ್ರೀವಿಷ್ಣುಸ್ವರೂಪ ಗುರುದೇವರ ಚಿತ್ರವಿರುವ ಪ್ರತಿಮೆಯ ಪೂಜೆ ನಡೆಯುತ್ತಿರುವಾಗ ಶಿವಲಿಂಗದ ಮೇಲಿನ ಹೂವು ಕೆಳಗೆ ಬೀಳುವುದು, ಇದು ‘ಹರಿ (ಶ್ರೀವಿಷ್ಣು) ಮತ್ತು ಹರ (ಶಂಕರ) ಒಂದೇ ಆಗಿದ್ದಾರೆ, ಎಂಬುದನ್ನು ತೋರಿಸುತ್ತದೆ. – ಸಂಕಲನಕಾರರು) – ಶ್ರೀ. ವಿನಾಯಕ ಶಾನಭಾಗ, ಬೆಂಗಳೂರು, ಕರ್ನಾಟಕ. (೨೬.೭.೨೦೨೧)

* ಸೂಕ್ಷ್ಮ : ಪ್ರತ್ಯಕ್ಷ ಕಾಣುವ ಅವಯವಗಳಾದ ಮೂಗು, ಕಿವಿ, ಕಣ್ಣುಗಳು, ನಾಲಿಗೆ ಮತ್ತು ಚರ್ಮ ಇವು ಪಂಚಜ್ಞಾನೇಂದ್ರಿಯಗಳಾಗಿವೆ. ಈ ಪಂಚಜ್ಞಾನೇಂದ್ರಿಯಗಳು, ಮನಸ್ಸು ಮತ್ತು ಬುದ್ಧಿ ಇವುಗಳ ಆಚೆಗಿನ ಎಂದರೆ ಸೂಕ್ಷ್ಮ. ಸಾಧನೆಯಲ್ಲಿ ಪ್ರಗತಿ ಮಾಡಿಕೊಂಡ ಕೆಲವು ವ್ಯಕ್ತಿಗಳಿಗೆ ಈ ಸೂಕ್ಷ್ಮ ಸಂವೇದನೆಯ ಅರಿವಾಗುತ್ತದೆ. ಈ ಸೂಕ್ಷ್ಮ ಜ್ಞಾನದ ಬಗ್ಗೆ ವಿವಿಧ ಧರ್ಮಗ್ರಂಥಗಳಲ್ಲಿ ಉಲ್ಲೇಖವಿದೆ.

ಅನುಭೂತಿ : ಇಲ್ಲಿ ನೀಡಿದ ಅನುಭೂತಿಗಳು ‘ಭಾವವಿದ್ದಲ್ಲಿ ದೇವ ಎಂಬಂತೆ ಸಾಧಕರ/ಸದ್ಗುರುಗಳ ವೈಯಕ್ತಿಕ ಅನುಭೂತಿಯಾಗಿದ್ದು ಅದು ಎಲ್ಲರಿಗೂ ಬರುತ್ತದೆ ಎಂದೇನಿಲ್ಲ. – ಸಂಪಾದಕರು