ಸಾಧಕರೇ, ತಮ್ಮನ್ನು ಶೇ. ೬೦ ಮಟ್ಟದ ಅಥವಾ ಅದಕ್ಕಿಂತಲೂ ಹೆಚ್ಚು ಆಧ್ಯಾತ್ಮಿಕ ಮಟ್ಟ ಇರುವ ಸಾಧಕರೊಂದಿಗೆ ತುಲನೆಯನ್ನು ಮಾಡಿ ನಿರಾಶರಾಗುವ ಬದಲು ಆ ಸಾಧಕರಿಂದ ಕಲಿಯಲು ಪ್ರಯತ್ನಿಸಿ !

ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ

‘ಕೆಲವು ಸಾಧಕರ ಮನಸ್ಸಿನಲ್ಲಿ ‘ಆ ಸಾಧಕರ ಆಧ್ಯಾತ್ಮಿಕ ಪ್ರಗತಿಯಾಗಿದೆ. ಅವರಿಗಿಂತ ನಾನು ಹೆಚ್ಚು ಸೇವೆಯನ್ನು ಮಾಡುತ್ತೇನೆ; ಆದರೆ ನನ್ನ ಆಧ್ಯಾತ್ಮಿಕ ಪ್ರಗತಿ ಇನ್ನೂ ಆಗಿಲ್ಲ, ಎಂಬ ವಿಚಾರಗಳು ಇರುತ್ತವೆ. ಆದ್ದರಿಂದ ಅವರಿಗೆ ನಿರಾಶೆಯಾಗುತ್ತದೆ.

೧. ಆಧ್ಯಾತ್ಮಿಕ ಪ್ರಗತಿಗಾಗಿ ಸಮಷ್ಟಿ ಸೇವೆಯೊಂದಿಗೆ ಇತರ ಘಟಕಗಳೂ ಕಾರಣವಾಗಿರುತ್ತದೆ

ಆಧ್ಯಾತ್ಮಿಕ ಪ್ರಗತಿ ಆಗುವಲ್ಲಿ ‘ಸೇವಾಭಾವ ಇದೊಂದು ಘಟಕವಿದ್ದರೂ ಆ ಸಾಧಕರ ಪೂರ್ವಜನ್ಮದ ಸಾಧನೆ, ಸಂಚಿತ, ಪ್ರಾರಬ್ಧ, ಭಾವ, ತಳಮಳ, ಕೆಟ್ಟ ಶಕ್ತಿಗಳ ತೊಂದರೆ, ಸ್ವಭಾವದೋಷ, ಅಹಂ, ವರ್ಷವಿಡೀ ಸಾಧನೆಯ ಪ್ರಯತ್ನ, ಇತ್ಯಾದಿ ಘಟಕಗಳೂ ಕಾರಣವಾಗಿರುತ್ತವೆ. ಅದೇ ರೀತಿ ಆತನ ಪ್ರಾರಬ್ಧದ ತೀವ್ರತೆಯೂ ಕಡಿಮೆ ಇರುತ್ತದೆ. ಆದ್ದರಿಂದ ಆತನ ಆಧ್ಯಾತ್ಮಿಕ ಉನ್ನತಿ ವೇಗವಾಗಿ ಆಗುತ್ತದೆ.

ಹೆಚ್ಚಿನ ಸಾಧಕರಿಗೆ ತೀವ್ರವಾದ ಶಾರೀರಿಕ ಮತ್ತು ಆಧ್ಯಾತ್ಮಿಕ ತೊಂದರೆಗಳಿದ್ದರೆ ಅವರು ಸೇವೆಯನ್ನು ಮಾಡಲು ಸಾಧ್ಯವಿಲ್ಲ; ಆದರೆ ಅವರ ಅಂತರ್ಮನಸ್ಸಿನಲ್ಲಿ ಉತ್ತಮ ಸಾಧನೆ ನಡೆಯುತ್ತಿದ್ದರೆ ಅದು ಶ್ರೀ ಗುರುಗಳವರೆಗೆ ತಲುಪುತ್ತದೆ ಮತ್ತು ಆತನ ಆಧ್ಯಾತ್ಮಿಕ ಪ್ರಗತಿ ಆಗುತ್ತದೆ. ವಯಸ್ಸಿನಿಂದ ಸಮಷ್ಟಿ ಸೇವೆಯನ್ನು ಮಾಡಲು ಸಾಧ್ಯವಾಗದಿರುವ; ಆದರೆ ಭಗವಂತನ ಪ್ರಾಪ್ತಿಗಾಗಿ ಆಂತರಿಕ ಭಾವದಿಂದ ಶೇ. ೬೦ ಮತ್ತು ಅದಕ್ಕಿಂತಲೂ ಹೆಚ್ಚು ಆಧ್ಯಾತ್ಮಿಕ ಮಟ್ಟ ತಲುಪಿರುವ, ಅದೇ ರೀತಿ ಸಂತ ಪದವಿಯನ್ನು ತಲುಪಿರುವ ಅನೇಕ ಸಾಧಕರು ಸನಾತನ ಸಂಸ್ಥೆಯಲ್ಲಿ ಇದ್ದಾರೆ.

೨. ಸಾಧಕರೇ, ಆಧ್ಯಾತ್ಮಿಕ ಪ್ರಗತಿ ಆಗಿರುವ ಸಾಧಕರಿಂದ ಕಲಿಯಿರಿ !

‘ಕಾರ್ಯವಲ್ಲ ಸಾಧಕರು ಸಾಧನೆಗಾಗಿ ಮಾಡಿದ ಪ್ರಯತ್ನದಿಂದ ಅವರ ಪ್ರಗತಿಗೆ ಸಹಾಯವಾಗುತ್ತದೆ, ಎಂದು ಪರಾತ್ಪರ ಗುರು ಡಾಕ್ಟರರು ಹೇಳಿದ್ದಾರೆ. ತಮ್ಮ ತುಲನೆಯನ್ನು ಇತರರೊಂದಿಗೆ ಮಾಡಿ ದುಃಖ ಪಡುವ ಬದಲು ‘ಆಧ್ಯಾತ್ಮಿಕ ಪ್ರಗತಿ ಆಗಿರುವ ಸಾಧಕರಲ್ಲಿ ಯಾವ ಗುಣಗಳು ಇವೆ ? ಅವರು ಸಾಧನೆಗಾಗಿ ಹೇಗೆ ಪ್ರಯತ್ನ ಮಾಡುತ್ತಿರುತ್ತಾರೆ ?, ಎಂಬುದನ್ನು ಗಮನದಲ್ಲಿಟ್ಟುಕೊಂಡು ಆ ದೃಷ್ಟಿಯಿಂದ ಮನಃಪೂರ್ವಕವಾಗಿ ಪ್ರಯತ್ನಿಸಬೇಕು.

– ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ, ಸನಾತನ ಆಶ್ರಮ, ರಾಮನಾಥಿ, ಗೋವಾ. (೨೧.೭.೨೦೨೦)