ಸಾಧಕರೇ, ‘ನನ್ನ ಆಧ್ಯಾತ್ಮಿಕ ಮಟ್ಟವು ಶೇ. ೬೦ ರಷ್ಟು ಆಗುತ್ತಿಲ್ಲ, ಎಂಬ ವಿಚಾರ ಮಾಡಿ ನಿರಾಶರಾಗದಿರಿ ‘ನಾನು ಖಂಡಿತವಾಗಿಯೂ ಆಧ್ಯಾತ್ಮಿಕ ಪ್ರಗತಿಯನ್ನು ಮಾಡಿಕೊಳ್ಳುವೆನು’ ಎಂದು ಮನಸ್ಸಿನಲ್ಲಿ ಬಿಂಬಿಸಲು ಸ್ವಯಂಸೂಚನೆಯನ್ನು ನೀಡಿ ಸಾಧನೆಯ ಪ್ರಯತ್ನವನ್ನು ಹೆಚ್ಚಿಸಿರಿ !

ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ

‘ಕೆಲವು ಸಾಧಕರಿಗೆ ‘ನನ್ನ ಆಧ್ಯಾತ್ಮಿಕ ಮಟ್ಟ ಶೇಕಡಾ ೬೦ ರಷ್ಟು ಏಕೆ ಆಗುತ್ತಿಲ್ಲ ? ಎಂದು ವಿಚಾರ ಮಾಡಿ ನಿರಾಶೆ ಬರುತ್ತದೆ. ಅಂತಹ ಸಾಧಕರು ಗಮನದಲ್ಲಿಡಬೇಕಾದ ಅಂಶವೆಂದರೆ, ‘ಶೇಕಡಾ ೬೦ ರಷ್ಟು ಆಧ್ಯಾತ್ಮಿಕ ಮಟ್ಟವನ್ನು ಪಡೆಯಲು ಪೂರ್ವಜನ್ಮದ ಸಾಧನೆ, ಸಂಚಿತ, ಪ್ರಾರಬ್ಧ, ಭಾವ,  ತಳಮಳ, ಕೆಟ್ಟ ಶಕ್ತಿಗಳ ತೊಂದರೆ, ಸ್ವಭಾವದೋಷ, ಅಹಂ, ಸಾಧನೆಗಾಗಿ ಇಡೀ ವರ್ಷದಲ್ಲಿ ಮಾಡಿದ ಪ್ರಯತ್ನ ಇತ್ಯಾದಿ ಅನೇಕ ಅಂಶಗಳು ಕಾರಣವಿರುತ್ತವೆ. ಒಬ್ಬ ಸಾಧಕನ ಪ್ರಾರಬ್ಧ ಹೆಚ್ಚು ಇದ್ದಲ್ಲಿ ಅವನ ಉನ್ನತಿಗೆ ಸಮಯ ತಗಲುತ್ತದೆ. ಏಕೆಂದರೆ ಪ್ರಾರಬ್ಧವನ್ನು ತೀರಿಸಲು ಅವನ ಸಾಧನೆಯು ಖರ್ಚಾಗುತ್ತದೆ. ಅವರೇನಾದರೂ ಒಂದು ವೇಳೆ ನಿರಪೇಕ್ಷವಾಗಿ ಹಾಗೂ ನಿರಂತರವಾಗಿ ಪ್ರಯತ್ನಿಸಿದರೆ ಖಂಡಿತವಾಗಿಯೂ ಸರಿಯಾದ ಸಮಯ ಬಂದಾಗ ಅವನ ಆಧ್ಯಾತ್ಮಿಕ ಪ್ರಗತಿಯಾಗುವುದು.

ಸಾಧಕರು ಆಧ್ಯಾತ್ಮಿಕ ಮಟ್ಟದ ವಿಚಾರದಿಂದ ನಿರಾಶರಾಗದೇ ಮುಂದಿನ ಪ್ರಯತ್ನಗಳನ್ನು ಮಾಡಬೇಕು.

೧. ‘ಇತರ ಸಾಧಕರಿಗೆ ಆಧ್ಯಾತ್ಮಿಕ ಪ್ರಗತಿ ಮಾಡಿಕೊಳ್ಳಲು ಸಾಧ್ಯವಿರುವಾಗ ನಾನೂ ಖಂಡಿತವಾಗಿ ಪ್ರಗತಿ ಮಾಡಿಕೊಳ್ಳಬಹುದು, ಎಂಬುದನ್ನು ಮನಸ್ಸಿನ ಮೇಲೆ ಬಿಂಬಿಸಲು ಸ್ವಯಂಸೂಚನೆ ನೀಡಿರಿ.

. ‘ನಾನು ಸಾಧನೆಯಲ್ಲಿ ಎಲ್ಲಿ ಕಡಿಮೆ ಬೀಳುತ್ತಿದ್ದೇನೆ ?’ ಎಂಬುದರ ಬಗ್ಗೆ ತತ್ತ್ವನಿಷ್ಠನಾಗಿ ಅಧ್ಯಯನ ಮಾಡಬೇಕು. ಸಾಧನೆಯಲ್ಲಿ ತಮ್ಮ ಸಾಧಕ ಪರಿವಾರದವರಿಂದ ಹಾಗೂ ಸಹಸಾಧಕರಿಂದ ಸಹಾಯವನ್ನು ಪಡೆದುಕೊಳ್ಳಿರಿ. ವ್ಯಷ್ಟಿ ಸಾಧನೆಯ ವರದಿ ತೆಗೆದುಕೊಳ್ಳುವವರಿಗೆ ಹಾಗೂ ಜವಾಬ್ದಾರ ಸಾಧಕರಿಗೆ ‘ನನ್ನಸಾಧನೆ ಸರಿಯಾದ ದಿಕ್ಕಿನಲ್ಲಿ ಸಾಗುತ್ತಿದೆಯೇ?’ ಎಂಬುದನ್ನು ವಿಚಾರಿಸಿರಿ.

೩. ತಮ್ಮ ಸಂಪರ್ಕದಲ್ಲಿರುವ ಶೇಕಡಾ ೬೦ ಹಾಗೂ ಅದಕ್ಕಿಂತ ಹೆಚ್ಚು ಆಧ್ಯಾತ್ಮಿಕ ಮಟ್ಟವನ್ನು ಪಡೆದ ಸಾಧಕರಲ್ಲಿ ‘ಯಾವ ಗುಣವಿದೆ ಹಾಗೂ ಅವರು ಸ್ವಭಾವದೋಷ ಹಾಗೂ ಅಹಂ ನಿರ್ಮೂಲನೆಗೆ ಹೇಗೆ ಪ್ರಯತ್ನಿಸುತ್ತಿದ್ದಾರೆ ?’ ಎಂಬುದನ್ನು ಅರಿತುಕೊಂಡು ಆ ನಿಟ್ಟಿನಲ್ಲಿ ಸ್ವತಃ ಪ್ರಯತ್ನಿಸಿರಿ.

೪. ‘ಸನಾತನ ಪ್ರಭಾತದಲ್ಲಿ ಶೇಕಡಾ ೬೦ ಮತ್ತು ಅದಕ್ಕಿಂತ ಹೆಚ್ಚು ಆಧ್ಯಾತ್ಮಿಕ ಮಟ್ಟವನ್ನು ತಲುಪಿರುವ ಸಾಧಕರ ಗುಣವೈಶಿಷ್ಟ್ಯಗಳನ್ನು ಹಾಗೂ ಸಂತರ ಸಾಧನಾಯಾತ್ರೆಯ ಬಗ್ಗೆ ಲೇಖನಗಳನ್ನು ಪ್ರಕಟಿಸಲಾಗುತ್ತದೆ. ಅವುಗಳನ್ನು ಅಧ್ಯಯನ ಮಾಡಿ ಅವರಲ್ಲಿರುವ ಗುಣಗಳನ್ನು ತಮ್ಮಲ್ಲಿ ಅಳವಡಿಸಿಕೊಳ್ಳಲು ಪ್ರಯತ್ನಿಸಿರಿ. ಗುರುದೇವರ ಅಮೂಲ್ಯ ಮಾರ್ಗದರ್ಶನ ಲಭ್ಯವಾಗಿರುವುದರಿಂದಲೇ ಈ ಆಪತ್ಕಾಲದಲ್ಲಿಯೂ ಸಾಧಕರು ಪ್ರಗತಿಯು ಶೀಘ್ರಗತಿಯಲ್ಲಿ ಆಗುತ್ತಿದೆ. ಆದ್ದರಿಂದ ಸಾಧಕರೇ, ಪ್ರಗತಿಯ ಬಗ್ಗೆ ಚಿಂತಿಸ ಬೇಡಿರಿ, ಬದಲಾಗಿ ಶ್ರೀ ಗುರುದೇವರ ಮೇಲೆ ಶ್ರದ್ಧೆಯಿಟ್ಟುಕೊಂಡು ಪ್ರಯತ್ನಿಸಿರಿ !

– ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ, ಸನಾತನ ಆಶ್ರಮ, ರಾಮನಾಥಿ, ಗೋವಾ. (೨೧.೭.೨೦೨೦)