ಯಾವುದಾದರೂ ವಸ್ತುವಿನ ಮೇಲೆ ಶೀಘ್ರಗತಿಯಿಂದ ಆಧ್ಯಾತ್ಮಿಕ ಸ್ತರದಲ್ಲಿ ಉಪಾಯ ಮಾಡುವ ಪದ್ಧತಿ

ಸದ್ಗುರು (ಡಾ.) ಮುಕುಲ ಗಾಡಗೀಳ

ಯಾವುದಾದರೂ ವಸ್ತುವಿನ ಮೇಲಿನ ತೊಂದರೆದಾಯಕ ಸ್ಪಂದನಗಳ ಆವರಣವನ್ನು ತೆಗೆಯಲು ಆ ವಸ್ತುವಿನ ಅಂಚಿನ ಎದುರಿನಿಂದ ಮುಷ್ಟಿಯಿಂದ ಆವರಣವನ್ನು ತೆಗೆಯಿರಿ ಮತ್ತು ತದನಂತರ ವಸ್ತುವಿನ ಅಂಚಿನ ಎದುರು ಅಂಗೈಯನ್ನು ಇಟ್ಟು ಆಧ್ಯಾತ್ಮಿಕ ಉಪಾಯವನ್ನು ಮಾಡಿರಿ !

‘ಒಮ್ಮೆ ಶ್ರೀಸತ್‍ಶಕ್ತಿ (ಸೌ.) ಬಿಂದಾ ಸಿಂಗಬಾಳ ಇವರು ಯಜ್ಞಕ್ಕಾಗಿ ಉಟ್ಟುಕೊಳ್ಳುವ ಸೀರೆಯಲ್ಲಿ ತೊಂದರೆದಾಯಕ ಸ್ಪಂದನಗಳು ಹೊರ ಸೂಸುತ್ತಿರುವುದು ಅವರ ಗಮನಕ್ಕೆ ಬಂದಿತು. (ಸಮಷ್ಟಿ ಸಾಧನೆಯನ್ನು ಮಾಡುವವರ ಮೇಲೆ ಅನೇಕ ಸಲ ಕೆಟ್ಟ ಶಕ್ತಿಗಳು ಆಕ್ರಮಣಗಳನ್ನು ಮಾಡುತ್ತವೆ. ಆದುದರಿಂದ ಅವರ ವಸ್ತುವಿನಲ್ಲಿ ತೊಂದರೆದಾಯಕ ಸ್ಪಂದನಗಳು ಇರುತ್ತವೆ.) ಅವರು ನನಗೆ ಆ ಸೀರೆಯನ್ನು ಆಧ್ಯಾತ್ಮಿಕ ಸ್ತರದಲ್ಲಿ ಉಪಾಯ ಮಾಡಿ ತೊಂದರೆದಾಯಕ ಸ್ಪಂದನಗಳನ್ನು ನಿವಾರಿಸಿ ಕೊಡಲು ಹೇಳಿದರು. ಆ ಸೀರೆಯನ್ನು ಉಪಾಯ ಮಾಡಲು ಕೈಯಲ್ಲಿ ಹಿಡಿದಾಗ ಕೂಡಲೇ ನನಗೆ ದೇವರು ‘ಆ ಸೀರೆಯ ಮೇಲೆ ಕೈಯಿಟ್ಟು ಉಪಾಯ ಮಾಡುವುದಕ್ಕಿಂತ ಆ ಸೀರೆಯ ಅಂಚಿನ ಎದುರಿಗೆ ಕೈಯಿಟ್ಟು ಉಪಾಯ ಮಾಡೋಣ’, ಎನ್ನುವ ವಿಚಾರವನ್ನು ನೀಡಿದನು. ಯಾವುದೇ ವಸ್ತುವಿನಿಂದ ತೊಂದರೆದಾಯಕ ಅಥವಾ ಒಳ್ಳೆಯ ಸ್ಪಂದನಗಳು ಪ್ರಕ್ಷೇಪಿಸಲ್ಪಡುತ್ತಿರುವಾಗ ಅದು ಆ ವಸ್ತುವಿನ ಅಂಚಿನಿಂದ ಅತ್ಯಧಿಕ ಪ್ರಮಾಣದಲ್ಲಿ ಪ್ರಕ್ಷೇಪಿಸಲ್ಪಡುತ್ತದೆ. ಆದುದರಿಂದ ಆ ವಸ್ತುವಿನ ಅಂಚಿನ ಮೇಲೆ ಉಪಾಯವನ್ನು ಮಾಡಿದಾಗ ಅದರಿಂದ ಅತ್ಯಧಿಕ ಪ್ರಮಾಣದಲ್ಲಿ ಪರಿಣಾಮವಾಗುತ್ತದೆ. ಉಪಾಯ ಮಾಡುವುದರ ಹಿಂದಿರುವ ಶಾಸ್ತ್ರ ಗಮನಕ್ಕೆ ಬಂದಾಗ, ನಾನು ಅದರಂತೆ ಸೀರೆಯ ಮೇಲೆ ಉಪಾಯ ಮಾಡಿದೆನು ಮತ್ತು ನಿಜವಾಗಿಯೂ ಅದರ ಪರಿಣಾಮ ಶೀಘ್ರವಾಗಿ ಆಯಿತು.

ನಾನು ಮಡಚಿದ ಸೀರೆಯ ಒಟ್ಟಾಗಿರುವ ಅಂಚಿನ ಎದುರು ೧ ರಿಂದ ೨ ಸೆಂ.ಮೀ. ಅಂತರದಲ್ಲಿ ನನ್ನ ಅಂಗೈಯನ್ನು ಹಿಡಿದುಕೊಂಡು ೫ ನಿಮಿಷಗಳವರೆಗೆ ಧ್ಯಾನವನ್ನು ಮಾಡಿದಾಗ, ಆ ಸೀರೆಯಿಂದ ತೊಂದರೆದಾಯಕ ಸ್ಪಂದನಗಳು ಪ್ರಕ್ಷೇಪಿಸಲ್ಪಡುವುದು ನಿಂತಿತು. ತದನಂತರ ಆ ಸೀರೆಯಿಂದ ಒಳ್ಳೆಯ ಸ್ಪಂದನಗಳು ಪ್ರಕ್ಷೇಪಿಸಲ್ಪಡುತ್ತಿರುವುದು ಗಮನಕ್ಕೆ ಬಂದಿತು ಮತ್ತು ಅದನ್ನು ‘ಯುನಿವರ್ಸಲ್ ಔರಾ ಸ್ಕ್ಯಾನರ್ (ಯು.ಎ.ಎಸ್.)’ ಈ ಉಪಕರಣದ ಮೂಲಕ ಪರೀಕ್ಷಣೆ ಮಾಡಿದಾಗಲೂ ದೃಢಪಟ್ಟಿತು. ಅದರ ನಿರೀಕ್ಷಣೆಯನ್ನೂ ಇಲ್ಲಿ ನೀಡಿದ ಕೋಷ್ಟಕದಲ್ಲಿ ನೀಡಲಾಗಿದೆ.

ತದನಂತರ ಮತ್ತೊಂದು ಅಂಶ ಗಮನಕ್ಕೆ ಬಂದಿತು, ‘ಯಾವುದೇ ವಸ್ತುವಿನ ಮೇಲಿನ ತೊಂದರೆದಾಯಕ ಸ್ಪಂದನಗಳ ಆವರಣವನ್ನು ದೂರಗೊಳಿಸಲು ಆ ವಸ್ತುವಿನ ಅಂಚಿನ ಎದುರಿನಿಂದ ಮುಷ್ಟಿಯಿಂದ ಆವರಣವನ್ನು ತೆಗೆದರೆ ಆ ವಸ್ತುವಿನ ಮೇಲಿರುವ ಆವರಣವು ಶೀಘ್ರವಾಗಿ ದೂರವಾಗುತ್ತದೆ. ತದನಂತರ ಆ ವಸ್ತುವಿನ ಅಂಚಿನ ಎದುರು ಅಂಗೈ ಹಿಡಿದುಕೊಂಡು ಆಧ್ಯಾತ್ಮಿಕ ಉಪಾಯವನ್ನು ಮಾಡಿದಾಗ ಅದರಲ್ಲಿ ಬೇಗನೆ ಒಳ್ಳೆಯ ಸ್ಪಂದನಗಳು ಬರುತ್ತವೆ’. – (ಸದ್ಗುರು) ಡಾ. ಮುಕುಲ ಗಾಡಗೀಳ, ಸನಾತನ ಆಶ್ರಮ, ರಾಮನಾಥಿ, ಗೋವಾ (೧೨. ೭. ೨೦೨೧)

* ಕೆಟ್ಟ ಶಕ್ತಿ: ವಾತಾವರಣದಲ್ಲಿ ಉತ್ತಮ ಹಾಗೂ ಕೆಟ್ಟ ಎರಡೂ ಶಕ್ತಿಗಳು ಕಾರ್ಯನಿರತವಾಗಿರುತ್ತವೆ. ಒಳ್ಳೆಯ ಶಕ್ತಿ ಒಳ್ಳೆಯ ಕಾರ್ಯಕ್ಕಾಗಿ ಮಾನವನಿಗೆ ಸಹಾಯ ಮಾಡುತ್ತವೆ ಹಾಗೂ ಕೆಟ್ಟ ಶಕ್ತಿಗಳು ಅವನಿಗೆ ತೊಂದರೆ ಕೊಡುತ್ತವೆ. ಹಿಂದಿನ ಕಾಲದಲ್ಲಿ ಋಷಿಮುನಿಗಳ ಯಜ್ಞಗಳಲ್ಲಿ ರಾಕ್ಷಸರು ವಿಘ್ನಗಳನ್ನು ತಂದಿರುವ ಅನೇಕ ಕಥೆಗಳು ವೇದ -ಪುರಾಣಗಳಲ್ಲಿ ಇರುತ್ತವೆ. ‘ಅಥರ್ವವೇದದಲ್ಲಿ ಅನೇಕ ಕಡೆಗಳಲ್ಲಿ ಕೆಟ್ಟ ಶಕ್ತಿ. ಉದಾ. ಅಸುರರು, ರಾಕ್ಷಸರು, ಪಿಶಾಚಿ ಇವರ ಪ್ರತಿಬಂಧದ ಮಂತ್ರಗಳನ್ನು ಹೇಳಲಾಗಿದೆ. ಕೆಟ್ಟ ಶಕ್ತಿಗಳ ತೊಂದರೆಯ ನಿವಾರಣೆಗಾಗಿ ವಿವಿಧ ಆಧ್ಯಾತ್ಮಿಕ ಉಪಾಯಗಳನ್ನು ವೇದ ಮತ್ತು ಧರ್ಮಗ್ರಂಥಗಳಲ್ಲಿ ಹೇಳಲಾಗಿದೆ.