ಸಾಧಕರೇ, ‘ತಮ್ಮ ಆಧ್ಯಾತ್ಮಿಕ ಮಟ್ಟ ಹೆಚ್ಚಾಗಬೇಕು, ಎಂಬ ವಿಚಾರವೂ ಸ್ವೇಚ್ಛೆಯೇ ಆಗಿರುವುದರಿಂದ ಆ ವಿಚಾರಗಳಲ್ಲಿ ಸಿಲುಕದೇ ‘ಭಾವ ಮತ್ತು ತಳಮಳ’ವನ್ನು ಹೆಚ್ಚಿಸಿ ಸಾಧನೆಯ ಆನಂದವನ್ನು ಪಡೆಯಿರಿ !

ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ

‘ಕೆಲವು ಸಾಧಕರಿಗೆ ‘ತಮ್ಮ ಆಧ್ಯಾತ್ಮಿಕ ಮಟ್ಟವು ಆದಷ್ಟು ಬೇಗನೆ ಶೇ. ೬೦ ರಷ್ಟು ಆಗಬೇಕು, ಎಂದೆನಿಸುತ್ತದೆ. ಈ ಅಪೇಕ್ಷೆಯಿಂದಾಗಿ ಅವರ ಮನಸ್ಸಿನಲ್ಲಿನ ನಕಾರಾತ್ಮಕ ವಿಚಾರಗಳು ಹೆಚ್ಚಾಗುತ್ತವೆ ಮತ್ತು ಸಾಧನೆಗಾಗಿ ಅಪೇಕ್ಷಿತ ಪ್ರಯತ್ನವಾಗುವುದಿಲ್ಲ. ‘ನಮ್ಮ ಮಟ್ಟವು ಹೆಚ್ಚಾಗಬೇಕು, ಎಂಬುದು ಸಹ ಸ್ವೇಚ್ಛೆಯೇ ಆಗಿದ್ದು ಇಂತಹ ಇಚ್ಛೆಯನ್ನು ಮನಸ್ಸಿನಲ್ಲಿಟ್ಟುಕೊಂಡು ಸೇವೆ ಅಥವಾ ಸಾಧನೆ ಮಾಡಿದರೆ ಮನಸ್ಸಿನಲ್ಲಿ ಅಪೇಕ್ಷೆಗಳ ವಿಚಾರಗಳು ಹೆಚ್ಚಾಗುತ್ತವೆ. ಈ ವಿಚಾರಗಳಲ್ಲಿ ಸಿಲುಕುವುದರಿಂದ ಸಾಧಕರ ಕಲಿಯುವ ಸ್ಥಿತಿಯು ಕಡಿಮೆಯಾಗುತ್ತದೆ ಮತ್ತು ಭಗವಂತನು ಪ್ರತಿಕ್ಷಣ ಏನೆಲ್ಲ ಕಲಿಸುತ್ತಿದ್ದಾನೆ ಎಂಬುದನ್ನು ಕಲಿಯುವುದರಿಂದ ವಂಚಿತನಾಗುತ್ತಾನೆ. ‘ನನ್ನ ಮಟ್ಟವು ಶೇ. ೬೦ ರಷ್ಟಾಗಬೇಕು, ಎಂಬ ಸ್ವೇಚ್ಛೆಯು ಕಡಿಮೆಯಾದ ನಂತರವೇ ‘ದೇವರು ಶೇ. ೬೦ ರಷ್ಟು ಆಧ್ಯಾತ್ಮಿಕ ಮಟ್ಟದವರೆಗೆ ಕರೆದುಕೊಂಡು ಹೋಗುತ್ತಾನೆ, ಇದರ ಅನುಭವವನ್ನು ಬಹಳಷ್ಟು ಸಾಧಕರು ಪಡೆದಿದ್ದಾರೆ. ಆದುದರಿಂದ ಸಾಧಕರು ಈ ವಿಚಾರಗಳಲ್ಲಿ ಸಿಲುಕದೇ ವ್ಯಷ್ಟಿ ಸಾಧನೆಗಾಗಿ ಆವಶ್ಯಕವಾಗಿರುವ ‘ಭಾವ ಮತ್ತು ಸಮಷ್ಟಿ ಸಾಧನೆಗಾಗಿ ಆವಶ್ಯಕವಾಗಿರುವ ‘ತಳಮಳ ಈ ಗುಣಗಳು ನಮ್ಮಲ್ಲಿ ಹೆಚ್ಚುತ್ತಿವೆಯಲ್ಲ? ಎಂದು ನಿರೀಕ್ಷಣೆ ಮಾಡಬೇಕು ಮತ್ತು ಅದಕ್ಕಾಗಿ ಜೋರಾಗಿ ಪ್ರಯತ್ನಿಸಬೇಕು.

ಸಾಧನೆಯನ್ನು ಯೋಗ್ಯ ರೀತಿಯಲ್ಲಿ ಮಾಡಿದರೆ ಶೇ. ೬೦ ರಷ್ಟು ಆಧ್ಯಾತ್ಮಿಕ ಮಟ್ಟವು ಪ್ರಾಪ್ತವಾಗಲೇಬೇಕು ! – ಪರಾತ್ಪರ ಗುರು ಡಾ. ಆಠವಲೆ

(ಪರಾತ್ಪರ ಗುರು) ಡಾ. ಜಯಂತ ಬಾಳಾಜಿ ಆಠವಲೆ

‘ಅಭ್ಯಾಸ ಮಾಡಿದರೆ, ಪರೀಕ್ಷೆಯಲ್ಲಿ ಉತ್ತೀರ್ಣರಾಗಲೇಬೇಕು. ಅದರಂತೆ ಸಾಧನೆಯನ್ನು ಯೋಗ್ಯ ರೀತಿಯಲ್ಲಿ ಮಾಡಿದರೆ, ಶೇ. ೬೦ ರಷ್ಟು ಆಧ್ಯಾತ್ಮಿಕ ಮಟ್ಟವು ಪ್ರಾಪ್ತವಾಗಲೇಬೇಕು. ಇದರಲ್ಲಿ ಯಾವುದೇ ಆಶ್ಚರ್ಯವಿಲ್ಲ. ಪ್ರಗತಿಯ ವಿಚಾರಗಳಿಗಿಂತ ಪ್ರಯತ್ನಗಳ ದಿಶೆಯು ಯೋಗ್ಯವಿರಬೇಕು. ಸಾಧನೆಯನ್ನು ಮಾಡಲು ಸಾತತ್ಯದಿಂದ ಮತ್ತು ನಿರಪೇಕ್ಷವಾಗಿ ಪ್ರಯತ್ನಿಸಿದರೆ ಸಾಧನೆಯಲ್ಲಿನ ಆನಂದವನ್ನು ಅನುಭವಿಸಲು ಸಾಧ್ಯವಾಗುತ್ತದೆ. ಸಾಧಕರು ಆಶ್ರಮದಲ್ಲಿ ಅಥವಾ ಪ್ರಸಾರದಲ್ಲಿ ಒಂದೇ ರೀತಿಯ ಸೇವೆ ಮಾಡುವುದು ಬಾಹ್ಯ ದೃಷ್ಟಿಗೆ ಕಂಡು ಬಂದರೂ, ಆ ಸೇವೆಯು ಹೆಚ್ಚೆಚ್ಚು ಪರಿಪೂರ್ಣ, ಭಾವಪೂರ್ಣ ಮತ್ತು ಅಹಂರಹಿತವಾಗುತ್ತಾ ಹೋದರೆ, ಅವರ ಪ್ರಗತಿಯಾಗುತ್ತದೆ !

– (ಪರಾತ್ಪರ ಗುರು) ಡಾ. ಆಠವಲೆ

– ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ, ಸನಾತನ ಆಶ್ರಮ, ರಾಮನಾಥಿ, ಗೋವಾ. (೨೧.೭.೨೦೨೦)