ಯೋಗವನ್ನು ಯಾವುದೇ ಒಂದು ವಿಶಿಷ್ಟ ಧರ್ಮಕ್ಕೆ ಜೋಡಿಸಬಾರದು ! – ಕೇಂದ್ರ ಗೃಹಸಚಿವ ರಾಜನಾಥ ಸಿಂಗ್

ಯೋಗವನ್ನು ಯಾವುದೇ ಒಂದು ವಿಶಿಷ್ಟವಾದ ಧರ್ಮಕ್ಕೆ ಜೋಡಿಸಬಾರದು. ಭಾರತ ಅಂತರರಾಷ್ಟ್ರೀಯ ಯೋಗದಿನಕ್ಕಾಗಿ ವಿಶ್ವ ಸಂಸ್ಥೆಯಲ್ಲಿ ಠರಾವ್ ಮಂಡಿಸಿದಾಗ ಅನೇಕ ಮುಸಲ್ಮಾನ ರಾಷ್ಟ್ರಗಳು ಸಹ ಅದಕ್ಕೆ ಬೆಂಬಲ ನೀಡಿದ್ದವು, ಎಂದು ಗೃಹಸಚಿವ ರಾಜನಾಥ ಸಿಂಗ್ ‘ಟ್ವೀಟ್ ಮಾಡಿದ್ದಾರೆ.

ಯೋಗಾಸನ ಮಾಡುವವರು ಸ್ವಾರ್ಥಿ ಹಾಗೂ ಆತ್ಮಕೇಂದ್ರಿತರಾಗುತ್ತಾರೆ ! – ಬ್ರಿಟೀಷ್ ವಿದ್ಯಾಪೀಠದ ಸಂಶೋಧನೆ

ಯೋಗಾಸನ ಮತ್ತು ಧ್ಯಾನ ಮಾಡುವವರು ಹೆಚ್ಚು ಗರ್ವಿಷ್ಠರು, ಸ್ವಾರ್ಥಿ ಹಾಗೂ ಆತ್ಮ ಕೇಂದ್ರಿತರಾಗಿರುತ್ತಾರೆ. ಅವರಿಗೆ ತಮ್ಮ ವಿಷಯ ಬಿಟ್ಟುಬೇರೆ ವಿಷಯವೆ ಹೊಳೆಯುವುದಿಲ್ಲ, ಎಂಬ ತಥಾಕಥಿತ ಸಂಶೋಧನೆಯನ್ನು ಬ್ರಿಟನ್ನಿನ ಸೌಥಂಪಟನ್‌ ವಿಶ್ವವಿದ್ಯಾಲಯದ ಸಂಶೋಧಕರು ಮಾಡಿದ್ದಾರೆ.

ಅಮೇರಿಕಾದ ಗುಪ್ತಚರ ಸಂಘಟನೆ ‘ಸಿ.ಐ.ಎ ಹೇಳಿಕೆ

ರಾಷ್ಟ್ರೀಯ ಸ್ವಯಂಸೇವಕ ಸಂಘವು ರಾಷ್ಟ್ರವಾದಿ ಸಂಘಟನೆಯಾಗಿದ್ದು ವಿಶ್ವ ಹಿಂದೂ ಪರಿಷತ್ತು ಮತ್ತು ಬಜರಂಗ ದಳವು ಧಾರ್ಮಿಕ ಉಗ್ರ ಸಂಘಟನೆಗಳಾಗಿವೆ ಎಂದು ಅಮೇರಿಕಾದ ಗುಪ್ತಚರ ಸಂಘಟನೆಯಾದ ‘ಸಿಐಎಯು ಹೇಳಿದೆ.

ಚೀನಾದಲ್ಲಿ ಮಸೀದಿಗಳ ಮೇಲೆ ರಾಷ್ಟ್ರಧ್ವಜವನ್ನು ಹಾರಿಸಿ ! – ಚೀನಾದಲ್ಲಿನ ಸರಕಾರಿ ಮುಸಲ್ಮಾನ ಸಂಘಟನೆಗಳ ಬೇಡಿಕೆ

ಚೀನಾದ ‘ಚೀನ್ ಇಸ್ಲಾಮಿಕ್‌ ಅಸೋಸಿಯೇಶನ್ ಈ ಸರಕಾರಿ ಮುಸಲ್ಮಾನ ಸಂಘಟನೆಯು ದೇಶದ ಎಲ್ಲ ಮಸೀದಿಗಳ ಮೇಲೆ ರಾಷ್ಟ್ರಧ್ವಜವನ್ನು ಹಾರಿಸಬೇಕು, ಎಂಬ ಬೇಡಿಕೆಯನ್ನು ಮಾಡಿದೆ, ಎಂದು ಈ ಸಂಘಟನೆಯು ಹೇಳಿದೆ.

ಇಂಗ್ಲೆಂಡಿನಲ್ಲಿ “ಕ್ಷಮಾಶೀಲತೆ ಹಾಗೂ ವೈದ್ಯಕೀಯ ಚಿಕಿತ್ಸೆಯ ಮೇಲೆ ಪ್ರಾರಬ್ಧದ ಪ್ರಭಾವ ಎಂಬ ವಿಷಯದ ಅಂತರರಾಷ್ಟ್ರೀಯ ಪರಿಷತ್ತಿನಲ್ಲಿ ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದ ವತಿಯಿಂದ ಸಂಶೋಧನಾ ಪ್ರಬಂಧ ಮಂಡಣೆ !

‘ಕ್ಷಮಾಶೀಲತೆ ಹಾಗೂ ಅದರಿಂದ ಶಾರೀರಿಕ ಹಾಗೂ ಮಾನಸಿಕ ಮಟ್ಟದಲ್ಲಿ ಪ್ರಭಾವ ಈ ಸಂಶೋಧನಾ ಪ್ರಬಂಧದ ಲೇಖಕರು ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದ ಹರಿಕಾರ ಪರಾತ್ಪರ ಗುರು ಡಾ. ಜಯಂತ ಆಠವಲೆಯಾಗಿದ್ದಾರೆ. ಅವರಿಗೆ ವೈದ್ಯಕೀಯ ಚಿಕಿತ್ಸೆ ಹಾಗೂ ಮನೋರೋಗದ ಸಂಶೋಧನೆಯ ಮೇಲೆ ೨೫ ವರ್ಷಗಳ ಅನುಭವವಿದ್ದು, ಆಧ್ಯಾತ್ಮಿಕ ಸಂಶೋಧನೆಯಲ್ಲಿ ೩೬ ವರ್ಷಗಳಿಗಿಂತ ಹೆಚ್ಚು ಅನುಭವವಿದೆ.

ಹಾಫೀಜ್ ಸಯೀದನನ್ನು ಬೇರೆ ದೇಶಕ್ಕೆಕಳುಹಿಸಿ ! – ಪಾಕಿಸ್ತಾನಕ್ಕೆ ಚೀನಾದ ಸಲಹೆ

ಮುಂಬಯಿಯ ೨೬/೧೧ ರ ಉಗ್ರವಾದಿ ಆಕ್ರಮಣದ ಮುಖ್ಯ ರೂವಾರಿ ಹಾಫೀಜ ಸಯೀದನನ್ನು ಹೆಚ್ಚು ಸಮಯ ಪಾಕಿಸ್ತಾನದಲ್ಲಿಡದೆ ಪಶ್ಚಿಮ ಏಶ್ಯಾದ ದೇಶಕ್ಕೆ ಕಳುಹಿಸಬೇಕೆಂದು ಚೀನಾದ ರಾಷ್ಟ್ರಾಧ್ಯಕ್ಷ ಶೀ ಜಿನ್‌ಪಿಂಗ್ ಪಾಕಿಸ್ತಾನದ ಪ್ರಧಾನಮಂತ್ರಿ ಶಾಹಿದ್ ಖಕಾನ್ ಅಬ್ಬಾಸೀ ಇವರಿಗೆ ಸಲಹೆ ನೀಡಿದ್ದಾರೆ.

ಸದ್ಗುರು (ಸೌ.) ಅಂಜಲಿ ಗಾಡಗೀಳ ಇವರ ನೇತೃತ್ವದಲ್ಲಿ ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದಸಮೂಹದಿಂದ ಇಂಡೋನೇಶಿಯಾದಲ್ಲಿನ ಅಧ್ಯಯನದ ಪ್ರಯಾಣದ ವೃತ್ತಾಂತ

ಯಾವ ಸ್ಥಳದಲ್ಲಿ ಸಮುದ್ರಮಂಥನವು ಸಂಭವಿಸಿತೊ, ಆ ಭೂಭಾಗವೇ ಇಂದಿನ ಇಂಡೋನೇಶಿಯಾ ! ೧೫ ನೇ ಶತಮಾನದ ವರೆಗೆ ಇಂಡೋನೆಶಿಯಾದಲ್ಲಿ ಶ್ರೀವಿಜಯ, ಮಾತರಮ್, ಶೈಲೇಂದ್ರ, ಸಂಜಯಾ, ಮಜಪಾಹಿತರಂತಹ ಹಿಂದೂ ರಾಜರ ಆಳ್ವಿಕೆ ಇತ್ತು.

ಸದಾ ಪಾಕಿಸ್ತಾನಕ್ಕೆ ಹೋಗುವ ಕಾಂಗ್ರೆಸ್ಸಿನಿಂದ ವಜಾಗೊಳಿಸಲ್ಪಟ್ಟ ಮಣಿಶಂಕರ ಅಯ್ಯರ್ ಇವರು ಅಲ್ಲಿನ ಹಿಂದೂಗಳಿಗೆ ಸಹಾಯ ಮಾಡುವ ಬಗ್ಗೆ ಮಾತನಾಡುವರೆ ? ಹಿಂದೂಗಳ ಮೇಲಿನ ದೌರ್ಜನ್ಯದ ವಿರುದ್ಧ ಅವರು ಏಕೆ ಧ್ವನಿಯೆತ್ತುವುದಿಲ್ಲ ?

ಪಾಕಿಸ್ತಾನದ ಶಿಕಾರಪುರದಲ್ಲಿನ ಪೊಲೀಸ್ ಠಾಣೆಯ ಪೊಲೀಸರು ಚುನ್ನೀಲಾಲ ಎಂಬ ಹಿಂದೂ ವ್ಯಾಪಾರಿಯ ತಲೆ ಬೋಳಿಸಿದರು, ಅವನ ಮೀಸೆ ಕತ್ತರಿಸಿದರು ಹಾಗೂ ಕಣ್ಣಿನ ಹುಬ್ಬುಗಳನ್ನು ಸಹ ಕತ್ತರಿಸಿದ ಘಟನೆ ಬೆಳಕಿಗೆ ಬಂದಿದೆ. ಪಾಕಿಸ್ತಾನದಲ್ಲಿ ಮಾನವಹಕ್ಕುಗಳಿಗಾಗಿ ಕಾರ್ಯ ಮಾಡುವ ಶ್ರೀ. ಕಪಿಲ ದೇವ ಇವರು ‘ಟ್ವಿಟ್ ಮೂಲಕ ಈ ಮಾಹಿತಿ ನೀಡಿದ್ದಾರೆ.

ಇಸ್ಲಾಮೀ ದೇಶ ಈಜಿಪ್ತ್‌ನಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಬುರ್ಖಾ ಧರಿಸಲು ಬರಲಿದೆ ನಿರ್ಬಂಧ !

ಈಜಿಪ್ತ್‌ನಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಹಾಗೂ ಸರಕಾರಿ ಕಾರ್ಯಾಲಯಗಳಲ್ಲಿ ಕೆಲಸ ಮಾಡುವಾಗ ಮುಸಲ್ಮಾನ ಮಹಿಳೆಯರು ಬುರ್ಖಾ ಧರಿಸುವುದಕ್ಕೆ ನಿರ್ಬಂಧ ಹೇರಲಾಗುವುದು. ಈಜಿಪ್ತ್‌ನ ಸಂಸತ್‌ನಲ್ಲಿ ಈ ವಿಷಯದಲ್ಲಿ ಕಾನೂನು ರೂಪಿಸಲಿದೆ.

ಗೋಮಾಂಸದ ಗುಣಮಟ್ಟ ಹೆಚ್ಚಿಸಲು ಗೋಹತ್ಯೆಯ ಮೊದಲು ಗೋವುಗಳಿಗೆ ಕುರಾನ್ ಕೇಳಿಸಬೇಕು – ಮಲೇಶಿಯಾದ ಕೇಲಾಂತನ ರಾಜ್ಯ ಸರಕಾರ

ಒಬ್ಬ ಸರಕಾರಿ ಅಧಿಕಾರಿಯ ಮಾಹಿತಿಗನುಸಾರ ಕುರಾನಿನ ಆಯತೆಗಳನ್ನು ಕೇಳಿಸಿದ ನಂತರ ಗೋವುಗಳಿಗೆ ಶಾಂತಿ ಲಭಿಸುವುದು ಮತ್ತು ಅದರ ಮಾಂಸದ ಗುಣ ಮಟ್ಟ ಸುಧಾರಿಸುತ್ತದೆ ಎಂದು ಕೇಲಾಂತನ ರಾಜ್ಯ ಕಾರ್ಯಕಾರಿ ಪರಿಷತ್ತಿನ ಸದಸ್ಯರು ಮತ್ತು ಕೃಷಿಸಚಿವರಾದ ಅಬ್ದುಲ ಮತನಾವಿ ಇವರು ಈ ಸಲಹೆಯನ್ನು ನೀಡಿದ್ದಾರೆ.