ಸ್ವಾತಂತ್ರ್ಯ ಬಂತು; ಆದರೆ ಸುರಾಜ್ಯ(ಹಿಂದೂ ರಾಷ್ಟ್ರ) ತರಲು ನಮಗೆ ಸಂಘರ್ಷ ಮಾಡಬೇಕಾಗಲಿದೆ ! – ಮೋಹನ ಗೌಡ, ಕರ್ನಾಟಕ ರಾಜ್ಯ ವಕ್ತಾರರು, ಹಿಂದೂ ಜನಜಾಗೃತಿ ಸಮಿತಿ

ಶ್ರೀ. ಮೋಹನ ಗೌಡ

ಬೆಂಗಳೂರು – ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿತು; ಆದರೆ ಹಿಂದೂಗಳ ದೇವಸ್ಥಾನಗಳು ಸರಕಾರದಿಂದ ಮುಕ್ತ ಆಗಿಲ್ಲ. ಹಿಂದೂ ಮಕ್ಕಳಿಗೆ ಶಾಲೆಯಲ್ಲಿ ಮಹಾಭಾರತ, ರಾಮಾಯಣ ಹಾಗೂ ಭಗವತ್‌ಗೀತೆ ಕಲಿಸುವ ಸ್ವಾತಂತ್ರ್ಯವಿಲ್ಲ. ದೇಶದಲ್ಲಿ ಪ್ರಜಾಪ್ರಭುತ್ವದ ಹೆಸರಿನಲ್ಲಿ ಭ್ರಷ್ಟಾಚಾರ, ಲೂಟಿ ಹಾಗೂ ದೌರ್ಜನ್ಯ ನಡೆಯುತ್ತಿದೆ. ಲೋಕಮಾನ್ಯ ಬಾಲ ಗಂಗಾಧರ ತಿಲಕರು ‘ಸ್ವರಾಜ್ಯ ನನ್ನ ಜನ್ಮಸಿದ್ಧ ಹಕ್ಕು’, ಎಂದು ಹೇಳಿ ಆ ಸ್ವಾತಂತ್ರ್ಯವನ್ನು ಪಡೆಯಲು ಹೋರಾಡಿದರು. ಅನೇಕ ಕಾಂತ್ರಿಕಾರರು ಸ್ವರಾಜ್ಯಕ್ಕಾಗಿ ಬಲಿದಾನ ನೀಡಿದರು. ಸ್ವಾತಂತ್ರ್ಯವೀರ ಸಾವರಕರ ಇವರೂ ಕೂಡಾ ಹಿಂದೂ ರಾಷ್ಟ್ರದ ಕನಸು ನನಸಾಗಿಸಲು ಜೀವನವಿಡೀ ಸಂಘರ್ಷ ಮಾಡಿದರು. ಇವರೆಲ್ಲರಿಂದಲೇ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿತು; ಆದರೆ ಈಗ ಅದಕ್ಕಿಂತಲೂ ಮುಂದೆ ಸಾಗಿ ಸುರಾಜ್ಯವನ್ನು (ಹಿಂದೂ ರಾಷ್ಟ್ರ) ಸಾಕಾರಗೊಳಿಸಲು ನಮಗೆ ಸಂಘರ್ಷ ಮಾಡಬೇಕಾಗಲಿದೆ, ಆಗ ಮಾತ್ರ ನಾವು ಮುಂದಿನ ಪೀಳಿಗೆಗೆ ಆನಂದವನ್ನು ನೀಡಬಹುದು, ಎಂದು ಹಿಂದೂ ಜನಜಾಗೃತಿ ಸಮಿತಿಯ ಕರ್ನಾಟಕ ರಾಜ್ಯ ವಕ್ತಾರರಾದ ಶ್ರೀ. ಮೋಹನ ಗೌಡ ಇವರು ಹೇಳಿದರು. ಬೆಂಗಳೂರಿನ ಶ್ರೀ ಮಹಾಗಣಪತಿ ನಗರದಲ್ಲಿ ‘ವಂದೇ ಮಾತರಮ್ ಸಮಾಜ ಸೇವಾ ಸಮಿತಿ’ಯ ವತಿಯಿಂದ ಆಗಸ್ಟ್ ೧೫, ೨೦೨೧ ರಂದು ಧ್ವಜಾರೋಹಣದ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯೆಂದು ಶ್ರೀ. ಮೋಹನ ಗೌಡ ಇವರು ಉಪಸ್ಥಿತರಿದ್ದರು. ಅವರ ಹಸ್ತದಿಂದ ಧ್ವಜಾರೋಹಣ ಮಾಡಲಾಯಿತು. ‘ವಂದೇ ಮಾತರಮ್ ಸಮಾಜ ಸೇವಾ ಸಮಿತಿಯ ಶ್ರೀ. ರವಿ ಇವರು ಈ ಕಾರ್ಯಕ್ರಮದ ಸೂತ್ರ ಸಂಚಾಲನೆಯನ್ನು ಮಾಡಿದರು. ಈ ಕಾರ್ಯಕ್ರಮದಲ್ಲಿ ‘ವಂದೇ ಮಾತರಮ್ ಸಮಾಜ ಸೇವಾ ಸಮಿತಿ’ಯ ಸದಸ್ಯರು ಹಾಗೂ ಮಹಿಳೆಯರು ಉಪಸ್ಥಿತರಿದ್ದರು.

ಈ ಪ್ರಸಂಗದಲ್ಲಿ ‘ವಂದೇ ಮಾತರಮ್ ಸಮಾಜ ಸೇವಾ ಸಮಿತಿಯ ಶ್ರೀ. ನಟರಾಜ ಬಿ. ಅವರು ಮಾತನಾಡುತ್ತಾ, “ದೇಶದಲ್ಲಿ ಇಸ್ಲಾಮಿಕ್ ಭಯೋತ್ಪಾದನೆ, ಲವ್ ಜಿಹಾದ್‌ನಂತಹ ಘಟನೆಗಳು ತುಂಬಾ ನಡೆಯುತ್ತಿದೆ. ಇದರ ಮೇಲೆ ನಾವು ಕಡಿವಾಣ ಹಾಕಲು ಪ್ರಯತ್ನ ಮಾಡಬೇಕಿದೆ”ಎಂದರು. ಅದೇ ರೀತಿ ದೇಶದಲ್ಲಿನ ಹಿಂದೂಗಳ ಜನಸಂಖ್ಯೆ ಕಡಿಮೆ ಆಗುತ್ತಿರುವ ಬಗ್ಗೆ ಶ್ರೀ. ನಟರಾಜ ಬಿ. ಇವರು ಕಳವಳ ವ್ಯಕ್ತಪಡಿಸಿದರು.