ತೀರ್ಥಹಳ್ಳಿಯ ಬಳಿ ಅಕ್ರಮ ಗೋಮಾಂಸ ಸಾಗಾಟ, ಇಬ್ಬರು ಬಂಧನ

ಕರ್ನಾಟಕದಲ್ಲಿ ಗೋಹತ್ಯೆ ನಿಷೇಧ ಕಾನೂನು ಇರುವಾಗ ಗೋಹತ್ಯೆ ಆಗಿ ಗೋ ಮಾಂಸದ ಸಾಗಾಟ ಹೇಗೆ ಆಗುತ್ತದೆ ? ‘ಕಟುಕರಿಗೆ ಕಾನೂನಿನ ಭಯ ಇಲ್ಲವೇ ಅಥವಾ ಪೊಲೀಸರಿಂದ ಪ್ರಾಮಾಣಿಕವಾಗಿ ಕಾನೂನಿನ ಕಾರ್ಯಾಚರಣೆ ಆಗುತ್ತಿಲ್ಲವೇ ?’ ಇದನ್ನು ರಾಜ್ಯದ ಬಿಜೆಪಿ ಸರಕಾರವು ಕಂಡುಹಿಡಿಯಬೇಕು !

ತೀರ್ಥಹಳ್ಳಿ – ತಾಲೂಕಿನ ಆಗುಂಬೆ ಗಾಟಿಯ ಫಾರೆಸ್ಟ ಗೇಟ್ ಬಳಿ ೪೦೦ ಕೆಜಿ ಗೋಮಾಂಸ ಸಾಗಿಸುತ್ತಿದ್ದ ವಾಹನವನ್ನು ಪೊಲೀಸರು ತಡೆದು ಇರಫಾನ್ ಮತ್ತು ಮಹಮ್ಮದ ಈ ಮತಾಂಧರಿಬ್ಬರನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಇವರಿಬ್ಬರು ಮಂಗಳೂರಿನ ನಿವಾಸಿಗಳಾಗಿದ್ದಾರೆ. ಈ ಮತಾಂಧರು ವಾಹನದ ಮುಂಭಾಗದಲ್ಲಿ ಎದುರಿನ ಭಾಗದಲ್ಲಿ ತರಕಾರಿಗಳನ್ನು ಹಾಕಿ ಅದರ ಹಿಂದೆ ಗೋಮಾಂಸವನ್ನು ಹಾಕಿ ಸಾಗಿಸುತ್ತಿದ್ದರು. ಈ ವಾಹನವನ್ನು ವಿಶ್ವ ಹಿಂದೂ ಪರಿಷತ್ತು, ಬಜರಂಗದಳ ಕಾರ್ಯಕರ್ತರ ಮಾಹಿತಿ ಮೇರೆಗೆ ಈ ಸಾಗಾಣಿಕೆಯನ್ನು ಪೊಲೀಸರು ತಡೆಹಿಡಿದರು. (ಯಾವ ಮಾಹಿತಿಯು ಹಿಂದುತ್ವನಿಷ್ಠರಿಗೆ ಸಿಗುತ್ತದೆ, ಅದು ಎಲ್ಲಾ ವ್ಯವಸ್ಥೆಗಳನ್ನು ಹೊಂದಿರುವ ಪೊಲೀಸರಿಗೆ ಏಕೆ ಸಿಗುವುದಿಲ್ಲ ? ಅಥವಾ ಇದನ್ನು ಉದ್ದೇಶಪೂರ್ವಕವಾಗಿ ನಿರ್ಲಕ್ಷ ಮಾಡುತ್ತಾರೆಯೇ ? ಇದರ ಬಗ್ಗೆ ತನಿಖೆಯನ್ನು ರಾಜ್ಯದ ಬಿಜೆಪಿ ಸರಕಾರ ನಡೆಸಬೇಕು ! – ಸಂಪಾದಕರು)