ತಮಿಳುನಾಡಿನ ದೇವಸ್ಥಾನಗಳಲ್ಲಿ ಪೂಜಾರಿಗಳನ್ನು ಸರಕಾರವು ನೇಮಕಾತಿ ಮಾಡುವ ನಿರ್ಣಯದ ವಿರುದ್ಧ ನ್ಯಾಯಾಲಯಕ್ಕೆ ಹೋಗುವೆನು ! – ಡಾ. ಸುಬ್ರಮಣ್ಯಂ ಸ್ವಾಮಿ

ಡಾ. ಸುಬ್ರಮಣ್ಯಂ ಸ್ವಾಮಿಯವರ ಹೊರತು ಹೆಚ್ಚಿನಂಶ ಹಿಂದೂ ಜನಪ್ರತಿನಿಧಿಗಳು ಹಿಂದೂ ದೇವಸ್ಥಾನಗಳಿಗಾಗಿ ಕಾನೂನುಬದ್ಧವಾಗಿ ಹೋರಾಡುವುದು ಕಂಡುಬರುತ್ತಿಲ್ಲ. ಇಂತಹ ನಿಷ್ಕ್ರಿಯ ಮತ್ತು ಧರ್ಮಾಭಿಮಾನವಿಲ್ಲದ ಜನಪ್ರತಿನಿಧಿಗಳನ್ನು ಚುನಾಯಿಸಿ ಕಳಿಸುವುದು ಹಿಂದೂಗಳಿಗೆ ನಾಚಿಕೆಗೇಡಿನ ಸಂಗತಿಯಾಗಿದೆ !

ನವದೆಹಲಿ – ತಮಿಳುನಾಡಿನಲ್ಲಿ ಅಧಿಕಾರದಲ್ಲಿರುವ ದ್ರವಿಡ ಮುನ್ನೆತ್ರ ಕಳಘಂ (ದ್ರವಿಡ ಪ್ರಗತಿ ಸಂಘ) ಪಕ್ಷದಿಂದ ದೇವಸ್ಥಾನಗಳಲ್ಲಿನ ಪೂಜಾರಿಗಳನ್ನು ಸರಕಾರಿ ಮಟ್ಟದಲ್ಲಿ ನೇಮಕಾತಿಯನ್ನು ಮಾಡುವ ಪ್ರಯತ್ನಗಳಾಗುತ್ತಿವೆ. ಇದನ್ನು ಭಾಜಪದ ಹಿರಿಯ ನೇತಾರ ಹಾಗೂ ಸಂಸದರಾದ ಡಾ. ಸುಬ್ರಮಣ್ಯಂ ಸ್ವಾಮಿ ಇವರು ವಿರೋಧಿಸಿದ್ದಾರೆ. ಈಗ ನ್ಯಾಯಾಲಯವು ಈ ನೇಮಕಾತಿಯನ್ನು ಸ್ಥಗಿತಗೊಳಿಸಿದೆ. ಈ ಹಿನ್ನೆಲೆಯಲ್ಲಿ ಭಾಜಪದ ಹಿರಿಯ ನೇತಾರ ಹಾಗೂ ಸಂಸದರಾದ ಡಾ. ಸುಬ್ರಮಣ್ಯಂ ಸ್ವಾಮಿ ಇವರು ಅಧಿಕಾರದಲ್ಲಿರುವ ದ್ರಮುಕವನ್ನು ಟ್ವೀಟ್ ಮೂಲಕ ಟೀಕಿಸಿದ್ದಾರೆ. ಡಾ. ಸ್ವಾಮಿಯವರು ಇದರ ಬಗ್ಗೆ ಮುಂದಿನಂತೆ ಹೇಳಿದ್ದಾರೆ – ‘2014 ನೇ ಇಸವಿಯಲ್ಲಿ ಸಭಾನಯಾಗಾರ ನಟರಾಜ ಮಂದಿರದ ಪ್ರಕರಣದಲ್ಲಿ ಸರ್ವೋಚ್ಚ ನ್ಯಾಯಾಲಯವು ಮುಖ್ಯಮಂತ್ರಿ ಸ್ಟಾಲಿನ್ ರಿಗೆ ಬುದ್ಧಿ ಕಲಿಸಿದೆ. ಇತ್ತೀಚೆಗೆ ದ್ರಮುಕದಿಂದ ದೇವಸ್ಥಾನಗಳ ಪೂಜಾರಿಗಳ ನೇಮಕಾತಿಯಲ್ಲಿ ಹಸ್ತಕ್ಷೇಪವಾಗಿರುವುದರಿಂದ ನನಗೆ ನ್ಯಾಯಾಲಯಕ್ಕೆ ಹೋಗುವುದು ಆವಶ್ಯಕವಾಗಿದೆ ಎಂದು ಹೇಳಿದ್ದಾರೆ.

ಸಭಾನಯಾಗಾರ ನಟರಾಜ ಮಂದಿರದ ಪ್ರಕರಣದಲ್ಲಿ ಏನಿದೆ?

1500 ವರ್ಷ ಪ್ರಾಚೀನವಾಗಿರುವ ಸಭಾನಯಾಗಾರ ನಟರಾಜ ಮಂದಿರದ (ಚಿದಂಬರಂ ನಟರಾಜರ್ ಮಂದಿರ) ದೀಕ್ಷಿತರ್ (ಪೂಜಾರಿ) ಇವರು ನೂರು ವರ್ಷಗಳಿಂದ ತಮ್ಮ ಧಾರ್ಮಿಕ ಅಧಿಕಾರಿಗಳಿಗಾಗಿ ಸಂಘರ್ಷ ಮಾಡಿದರು. ದೀಕ್ಷಿತರು ‘ದೇವಸ್ಥಾನದ ವ್ಯವಸ್ಥಾಪನೆಯು ಭಕ್ತರ ಕೈಯಲ್ಲಿರಬೇಕು’ ಎಂಬ ನ್ಯಾಯಬದ್ಧ ಬೇಡಿಕೆಗಾಗಿ ಆಗಿನ ಮದ್ರಾಸ್ ಪ್ರಾಂತ್ಯದ ಸರಕಾರದ ಮತ್ತು ಸ್ವಾತಂತ್ರ್ಯಾನಂತರದ ತಮಿಳುನಾಡು ಸರಕಾರದ ವಿರುದ್ಧ ನ್ಯಾಯಾಲಯದಲ್ಲಿ ದೀರ್ಘವಾದ ಹೋರಾಟ ನಡೆಸಿದರು. ಕೊನೆಯಲ್ಲಿ ದೀಕ್ಷಿತರಿಗೆ ಸರ್ವೋಚ್ಚ ನ್ಯಾಯಾಲಯದಿಂದ 2014ರಲ್ಲಿ ನ್ಯಾಯ ದೊರೆಯಿತು. ಸರ್ವೋಚ್ಚ ನ್ಯಾಯಾಲಯವು ತಮಿಳುನಾಡು ಸರಕಾರದ ವಿರುದ್ಧ ನಿರ್ಣಯವನ್ನು ನೀಡುತ್ತಾ ದೀಕ್ಷಿತರಿಗೆ ಮಂದಿರದ ಜವಾಬ್ದಾರಿಯನ್ನು ವಹಿಸಿತು. ಈ ಪ್ರಕರಣದಲ್ಲಿ ಭಾಜಪದ ಹಿರಿಯ ನೇತಾರ ಹಾಗೂ ಸಂಸದರಾದ ಡಾ. ಸುಬ್ರಮಣ್ಯಂ ಸ್ವಾಮಿ ಇವರು ಮಹತ್ವಪೂರ್ಣವಾದ ಭೂಮಿಕೆಯನ್ನು ನಿಭಾಯಿಸಿದ್ದರು.