ಭಾರತದ ಜೊತೆಗಿನ ವ್ಯಾಪಾರೀ ಸಂಬಂಧ ಮುರಿದ ತಾಲಿಬಾನ

ಡ್ರೈ ಫ್ರೂಟ್ಸ್ ಇನ್ನೂ ದುಬಾರಿ ಆಗುವ ಸಾಧ್ಯತೆ

ಯಾವುದನ್ನು ತಾಲಿಬಾನರು ಮೊದಲು ಮಾಡಿತೋ ಅದನ್ನು ಭಾರತವು ಮಾಡುವ ಅವಶ್ಯಕತೆ ಇತ್ತು. ಭಾರತವು ತಾಲಿಬಾನನ್ನು ಎಲ್ಲ ಕಡೆಗಳಿಂದ ಇಕ್ಕಟ್ಟಿಗೆ ಸಿಲುಕಿಸಿ ಅದಕ್ಕೆ ಶಾಶ್ವತವಾದ ಪಾಠ ಕಲಿಸುವ ಅವಶ್ಯಕತೆ ಇದೆ – ಸಂಪಾದಕರು

ನವದೆಹಲಿ – ತಾಲಿಬಾನವು ಅಫ್ಘಾನಿಸ್ತಾನದ ಮೇಲೆ ಹಿಡಿತ ಸಾಧಿಸಿದ ನಂತರ ನಿಧಾನವಾಗಿ ತನ್ನ ಬಣ್ಣ ಬಯಲು ಮಾಡಲು ಆರಂಭಿಸಿದೆ. ತಾಲಿಬಾನವು ಭಾರತದ ಜೊತೆಗಿನ ವ್ಯಾಪಾರ ಸಂಬಂಧವನ್ನು ಮುರಿದಿದೆ, ಭಾರತದ ಜೊತೆ ಇರುವ ಎಲ್ಲಾ ರೀತಿಯ ಆಮದು-ರಫ್ತನ್ನು ಸಹ ನಿಲ್ಲಿಸಿದೆ, ಈ ಮಾಹಿತಿಯನ್ನು ‘ಫೆಡರೇಷನ್ ಆಫ್ ಇಂಡಿಯನ್ ಎಕ್ಸ್‌ಪೋರ್ಟ್ ಆರ್ಗನೈಸೇಶನ್’ನ ಮಹಾ ಸಂಚಾಲಕ ಡಾ. ಅಜಯ ಸಹಾಯಿ ಇವರು ನೀಡಿದ್ದಾರೆ.

೧. ವಾರ್ತಾ ಸಂಸ್ಥೆಗಳೊಂದಿಗೆ ಮಾತನಾಡುವಾಗ ಡಾ. ಸಹಯಿಯವರು, ಈ ಸಮಯದಲ್ಲಿ ತಾಲಿಬಾನ್ ಎಲ್ಲಾ ವಸ್ತುಗಳ ಸಾಗಾಣಿಕೆಯನ್ನು ನಿಲ್ಲಿಸಿದೆ, ಈ ಸಾಗಾಣಿಕೆಯು ಸರಾಗವಾಗಿ ನಡೆಸಲು ನಾವು ಅಫ್ಘಾನಿಸ್ತಾನದ ಪರಿಸ್ಥಿತಿಯ ಮೇಲೆ ನಿಗಾ ಇಟ್ಟಿದ್ದೇವೆ ಎಂದರು.

೨. ಭಾರತವು ಅಫ್ಘಾನಿಸ್ತಾನದ ಅತ್ಯಂತ ದೊಡ್ಡ ಪಾಲುದಾರ ಆಗಿದೆ. ಭಾರತವು ಅಫ್ಘಾನಿಸ್ತಾನಕ್ಕೆ ಸಕ್ಕರೆ, ಚಹಾ, ಕಾಫಿ, ಮಸಾಲೆ ಪದಾರ್ಥಗಳ ಸಹಿತ ಇತರ ವಸ್ತುಗಳನ್ನು ರಪ್ತು ಮಾಡುತ್ತದೆ, ಹಾಗೂ ಡ್ರೈ ಫ್ರೂಟ್ಸ್, ಈರುಳ್ಳಿ ಇತ್ಯಾದಿಗಳನ್ನು ದೊಡ್ಡಪ್ರಮಾಣದಲ್ಲಿ ಆಮದು ಮಾಡಿಕೊಳ್ಳುತ್ತದೆ. ಆದ್ದರಿಂದ ಪ್ರಸ್ತುತ ಪರಿಸ್ಥಿತಿಯಲ್ಲಿ ಡ್ರೈಫ್ರೂಟ್ಸ್‌ನ ಬೆಲೆ ಏರಿಕೆ ಆಗುವ ಸಾಧ್ಯತೆ ಇದೆ.