ಆಫಘಾನಿಸ್ತಾನದ ಪುನರ್ನಿರ್ಮಾಣಕ್ಕಾಗಿ ತಾಲಿಬಾನ್‌ನ ವತಿಯಿಂದ ಚೀನಾಗೆ ಆಮಂತ್ರಣ!

‘ಕ್ರೌರ್ಯ, ವಿಶ್ವಾಸಘಾತ, ‘ಇತರರಿಗೆ ಅನ್ಯಾಯ ಮಾಡುವುದು ಇತ್ಯಾದಿಗಳಂತಹ ಸಮಾನ ‘ಗುಣಗಳಿರುವ ತಾಲಿಬಾನ್ ಹಾಗೂ ಚೀನಾ ಒಟ್ಟಾದರೆ ಅದರಲ್ಲಿ ಆಶ್ಚರ್ಯ ಪಡೆವಂತಹದ್ದೇನು? ಇವರಿಬ್ಬರ ಸ್ನೇಹ ಕೇವಲ ಭಾರತಕ್ಕಷ್ಟೇ ಅಲ್ಲ, ಜಾಗತಿಕ ಶಾಂತಿಗೆ ಅಪಾಯಕರವಾಗಿದೆ. ಇವರಿಬ್ಬರ ಸ್ನೇಹದಿಂದ ಭವಿಷ್ಯದಲ್ಲಿ ಬರಲಿರುವ ಸಂಕಟಗಳನ್ನು ಎದುರಿಸಲು ಈಗಿನಿಂದಲೇ ಸಿದ್ಧತೆಗಳನ್ನು ಮಾಡಿಟ್ಟುಕೊಳ್ಳಬೇಕು !

ಕಾಬುಲ್ (ಅಫಘಾನಿಸ್ತಾನ) – ಚೀನಾ ಒಂದು ದೊಡ್ಡ ಅರ್ಥವ್ಯವಸ್ಥೆ ಹಾಗೂ ಕ್ಷಮತೆಯಿರುವ ದೇಶವಾಗಿದೆ. ಚೀನಾವು ಅಫಘಾನಿಸ್ತಾನದಲ್ಲಿ ಶಾಂತತೆ ಹಾಗೂ ಹೆಚ್ಚಿಸಲು ರಚನಾತ್ಮಕ ಭೂಮಿಕೆಯನ್ನು ವಹಿಸಿದೆ. ನನಗೆ ಅನಿಸುತ್ತದೆ, ಚೀನಾವು ಅಪಘಾನಿಸ್ತಾನದ ಪುನರ್ವಸತಿ ಹಾಗೂ ಪುನರ್ನಿರ್ಮಾಣದಲ್ಲಿ ದೊಡ್ಡ ಭೂಮಿಕೆಯನ್ನು ವಹಿಸಿದೆ. ಆದ್ದರಿಂದ ಚೀನಾವು ದೇಶದ ಪುನರ್ನಿರ್ಮಾಣದಲ್ಲಿ ತುಂಬಾ ದೊಡ್ಡ ಭೂಮಿಕೆಯನ್ನು ವಹಿಸಬಹುದು. ಆದ್ದರಿಂದ ಚೀನಾವನ್ನು ದೇಶದ ಪುನರ್ನಿರ್ಮಾಣಕ್ಕಾಗಿ ಸ್ವಾಗತ ಎಂದು ತಾಲಿಬಾನ್‌ನ ವಕ್ತಾರಾದ ಸುಹೇಲ ಶಾಹೀನರವರು ಚೀನಾದ ಮಾಧ್ಯಮಗಳ ಮೂಲಕ ಹೇಳಿದ್ದಾರೆ. ಚೀನಾದ ವಿದೇಶಾಂಗ ವ್ಯವಹಾರಗಳ ಮಂತ್ರಿ ವಾಂಗರವರು ಕಳೆದ ತಿಂಗಳಿನಲ್ಲಿ ತಿಯಾನಜಿನನಲ್ಲಿ ತಾಲಿಬಾನ್‌ನ ಉಗ್ರಗಾಮಿ ಗುಂಪನ್ನು ಭೇಟಿಯಾಗಿದ್ದರು.

ಚೀನಾದ ವಿದೇಶಾಂಗ ಮಂತ್ರಿ ವಾಂಗರವರು ತಾಲಿಬಾನ್‌ಅನ್ನು ಬೆಂಬಲಿಸಿದ್ದಾರೆ. ಬ್ರಿಟೀಷ್ ವಿದೇಶಾಂಗ ಸಚಿವರಾದ ಡೊಮಿನಿಕ್ ತಾಬ್‌ರವರೊಂದಿಗೆ ದೂರವಾಣಿಯಲ್ಲಿ ಮಾತನಾಡುವಾಗ ವಾಂಗರವರು ನುಡಿದರು, ಜಗತ್ತು ಆಫಘಾನಿಸ್ತಾನಕ್ಕೆ ಮಾರ್ಗದರ್ಶನ ಹಾಗೂ ಬೆಂಬಲ ನೀಡಲಿ. ಅದರ ಮೇಲೆ ಹೆಚ್ಚು ಒತ್ತಡ ತರುವುದು ಬೇಡ, ಏಕೆಂದರೆ ಆಫಘಾನಿಸ್ತಾನದಲ್ಲಿ ಈಗ ಅಧಿಕಾರದ ಹಸ್ತಾಂತರ ನಡೆಯುತ್ತಿದೆ.