ಸುವರ್ಣ ಮಂದಿರದ ಪ್ರವೇಶದ್ವಾರದಲ್ಲಿ ಖಡ್ಗ ಹಿಡಿದು ಘೋಷಣೆ ಕೂಗಿದ ಖಾಲಿಸ್ತಾನ ಬೆಂಬಲಿಗರು

ಇಂತಹ ದೇಶದ್ರೋಹಿ ಖಾಲಿಸ್ತಾನ ಬೆಂಬಲಿಗರನ್ನು ಹಿಡಿದು ಜೀವಾವಧಿ ಶಿಕ್ಷೆಗೆ ಗುರಿಪಡಿಸಬೇಕು, ಆಗ ಮಾತ್ರ ಇನ್ನಿತರರು ಈ ರೀತಿ ಮಾಡುವ ಮುಂಚೆ ಸ್ವಲ್ಪ ಯೋಚಿಸುತ್ತಾರೆ!

ಸಿಖ್ಖರು ದೇಶದ ಆರ್ಥವ್ಯವಸ್ಥೆಯ ಮೇಲೆ ನಿಯಂತ್ರಣವನ್ನು ಸಾಧಿಸಿದಾಗಲೇ ದೇಶದ ಮೇಲೆ ಸಿಖ್ಖರ ರಾಜ್ಯ ಬರುವುದು !

ಇಲ್ಲಿನ ಶ್ರೀ ಅಕಾಲ ತಖ್ತ ಸಾಹಿಬದ ಪ್ರಮುಖರಾದ ಜ್ಞಾನಿ ಹರಪ್ರೀತ ಸಿಂಹರವರು ಸಿಖ್ಖರಿಗೆ ಕರೆ ನೀಡಿದ್ದಾರೆ. ಅವರು ‘೧೯೪೭ರ ನಂತರ ಸಿಖ್ಖರನ್ನು ಬಗ್ಗುಬಡಿಯುವ ಧೋರಣೆಗಳನ್ನು ಅವಲಂಬಿಸಲಾಯಿತು.

ಭ್ರಷ್ಟಾಚಾರ ಪ್ರಕರಣದಲ್ಲಿ ಪಂಜಾಬಿನ ಆರೋಗ್ಯ ಸಚಿವರ ಬಂಧನ !

ಭ್ರಷ್ಟಾಚಾರ ಪ್ರಕರಣದಲ್ಲಿ ಪಂಜಾಬಿನ ಆರೋಗ್ಯ ಸಚಿವ ವಿಜಯ ಸಿಂಗಲಾ ಅವರನ್ನು ಭ್ರಷ್ಟಾಚಾರ ನಿಗ್ರಹ ದಳ ಬಂಧಿಸಿದೆ. ಈ ಮೊದಲು ಸಿಂಗಲಾ ಇವರ ಮೇಲಿರುವ ಆರೋಪ ಸಾಬೀತಾಗಿದ್ದರಿಂದ ಪಂಜಾಬಿನ ಮುಖ್ಯಮಂತ್ರಿ ಭಗವಂತ್ ಸಿಂಗ್ ಮಾನ್ ಇವರು ಸಂಪುಟದಿಂದ ವಜಾಗೊಳಿಸಿದ್ದಾರೆ.

ಪಂಜಾಬ್‌ನಲ್ಲಿ ಹನುಮಾನ್ ಚಾಲೀಸಾ ಪುಸ್ತಕಗಳನ್ನು ಬೆಂಕಿಗಾಹುತಿಗೈದ ಅಪರಿಚಿತ ವ್ಯಕ್ತಿಗಳು

ಹನುಮಾನ್ ಚಾಲೀಸಾ ಪುಸ್ತಕವನ್ನು ಅಪರಿಚಿತ ವ್ಯಕ್ತಿಗಳು ಸುಟ್ಟು ಹಾಕಿದ ಘಟನೆ ಇತ್ತೀಚೆಗೆ ನಡೆದಿದೆ. ಈ ಘಟನೆ ತಿಳಿಯುತ್ತಿದ್ದಂತೆಯೇ ಹಿಂದೂಗಳಿಂದ ಆಕ್ರೋಶ ವ್ಯಕ್ತವಾಯಿತು. ಇದನ್ನು ‘ದೈನಿಕ ಭಾಸ್ಕರ’ ಪತ್ರಿಕೆಯು ವರದಿ ಮಾಡಿದೆ.

ಮೊಹಾಲಿ (ಪಂಜಾಬ) ಗ್ರೆನೇಡ ದಾಳಿ ಪ್ರಕರಣ ಖಲಿಸ್ತಾನಿ ಭಯೋತ್ಪಾದಕನ ಬಂಧನ

ಇಲ್ಲಿನ ಪಂಜಾಬ ಪೊಲೀಸರ ಗುಪ್ತಚರ ಇಲಾಖೆಯ ಕಚೇರಿಯಲ್ಲಿ ರಾಕೆಟ ಲಾಂಚರ ಮೂಲಕ ಗ್ರೆನೇಡ ಎಸೆದ ಆರೋಪದ ಮೆಲೆ ಖಲಿಸ್ತಾನಿ ಉಗ್ರ ನಿಶಾನ ಸಿಂಗನನ್ನು ಪೊಲೀಸರು ಬಂಧಿಸಿದ್ದಾರೆ. ಆತನಿಂದ ‘ರಾಕೆಟ ಪ್ರೊಪೆಲ್ಡ ಗ್ರೆನೇಡ ಲಾಂಚರ’ನ್ನು ಸಹ ವಶಪಡಿಸಿಕೊಳ್ಳಲಾಗಿದೆ.

ಪಂಜಾಬಿನಲ್ಲಿ ಶಿವಸೇನೆಯ (ಬಾಳ ಠಾಕರೆ) ಖಲಿಸ್ತಾನ ವಿರೋಧಿ ಮೆರವಣಿಗೆಯ ಮೇಲೆ ಖಲಿಸ್ತಾನ ಸಮರ್ಥಕರ ದಾಳಿ

ಶಿವಸೇನೆ (ಬಾಳ ಠಾಕರೆ) ಯು ಖಲಿಸ್ತಾನ ವಿರುದ್ಧ ‘ಖಲಿಸ್ತಾನ ಮುರ್ದಾಬಾದ’ ಎಂಬ ಮೆರವಣಿಗೆ ಆಯೋಜಿಸಿತ್ತು. ಅದರ ವಿರುದ್ಧ ಕೆಲವು ಸಿಖ್ಖರು ಖಲಿಸ್ತಾನ ಬೆಂಬಲಿಸಿ ಮೆರವಣಿಗೆ ನಡೆಸಿದರು. ಶಿವಸೇನೆಯ ಮೆರವಣಿಗೆಯಲ್ಲಿ ‘ಖಲಿಸ್ತಾನ ಮುರ್ದಾಬಾದ’ ಘೋಷಣೆಯಾದ ನಂತರ ಖಲಿಸ್ತಾನ ಪರ ಸಿಖ್ಖರು ತಮ್ಮ ಕತ್ತಿಗಳನ್ನು ಹಿಡಿದು ಅದರ ಮೇಲೆ ದಾಳಿ ಮಾಡಲು ಪ್ರಯತ್ನಿಸಿದರು.

ಪಟಿಯಾಲ (ಪಂಜಾಬ) ಇಲ್ಲಿಯ ಗುರು ಕಿ ಸರಾಯ ಎಂಬ ಸಿಖ್ ಧಾರ್ಮಿಕ ಸ್ಥಳವನ್ನು ಮಸಿದಿಯಾಗಿಸಿರುವ ಅನುಮಾನ !

ಇಲ್ಲಿಯ ಗುಜರಾನವಾಲಾ ಭಾಗದಲ್ಲಿ ಗುರು ಕಿ ಸರಾಯ ಎಂಬ ಧಾರ್ಮಿಕ ಸ್ಥಳವನ್ನು ಮಸೀದಿಯಾಗಿ ರೂಪಾಂತರಿಸಲಾಗಿದೆ ಎಂದು ಆರೋಪ ಹಿಂದೂಗಳಿಂದ ಮಾಡಲಾಗಿದೆ,ಆದರೆ ಮುಸಲ್ಮಾನರ ಹೇಳಿಕೆಯ ಪ್ರಕಾರ, ೭೫ ವರ್ಷಗಳ ಹಿಂದೆ ಇಲ್ಲಿ ಮಸೀದಿ ಇತ್ತು, ಈಗ ಕೇವಲ ಅದಕ್ಕೆ ಹೊಸ ಸ್ವರೂಪ ನೀಡಲಾಗಿದೆ.

ಪ್ರಭು ಶ್ರೀರಾಮಚಂದ್ರರ ಬಗ್ಗೆ ಆಕ್ಷೇಪಾರ್ಹ ಹೇಳಿಕೆ ನೀಡಿದ ಪ್ರಕರಣ ಆಧ್ಯಾಪಕಿಯನ್ನು ಕೆಲಸದಿಂದ ತೆಗೆದುಹಾಕಿದ ಪಂಜಾಬ ವಿಶ್ವವಿದ್ಯಾಲಯ !

ಇಲ್ಲಿನ ‘ಲವಲೀ ಪ್ರೊಫೆಶನಲ ಯುನಿವರ್ಸಿಟಿ’ ಎಂಬ ಖ್ಯಾತ ಖಾಸಗಿ ವಿಶ್ವವಿದ್ಯಾಲಯದ ಗುರಸಂಗ ಪ್ರೀತ ಕೌರ ಎಂಬ ಹೆಸರಿನ ಅಧ್ಯಾಪಕಿಯನ್ನು ಕೆಲಸದಿಂದ ತೆಗೆದುಹಾಕಲಾಯಿತು. ಗುರಸಂಗ ಪ್ರೀತರವರು ಪ್ರಭು ಶ್ರೀರಾಮನ ಬಗ್ಗೆ ಆಕ್ಷೇಪಾರ್ಹ ಹೇಳಿಕೆ ನೀಡಿದ್ದರಿಂದ ಹಿಂದೂಗಳು ಖಂಡಿಸಿದ ಬಳಿಕ ವಿಶ್ವವಿದ್ಯಾಲಯವು ಮೇಲಿನ ಕ್ರಮ ಕೈಗೊಂಡಿದೆ.

ಪಂಜಾಬಿನ ಮುಖ್ಯಮಂತ್ರಿ ಭಗವಂತ ಮಾನರವರ ಮೇಲೆ ಸಾರಾಯಿ ಕುಡಿದು ತಖ್ತ ಶ್ರೀ ದಮದಮಾ ಸಾಹಿಬಕ್ಕೆ ಭೇಟಿ ನೀಡಿರುವ ಆರೋಪ

ಪಂಜಾಬಿನ ಮುಖ್ಯಮಂತ್ರಿ ಭಗವಂತ ಮಾನರವರ ಮೇಲೆ ಬೈಸಾಖಿಯ (ವೈಶಾಖ ಮಾಸದ ಮೊದಲನೇ ದಿನ ಉತ್ತರ ಭಾರತದಲ್ಲಿ ಆಚರಿಸಲಾಗುವ ಉತ್ಸವ) ದಿನ ಸರಾಯಿ ಕುಡಿದು ತಖ್ತ ಶ್ರೀ ದಮದಮಾ ಸಾಹಿಬಕ್ಕೆ ಹೋಗಿರುವ ಆರೋಪವನ್ನು ಹೊರಿಸಲಾಗಿದೆ.

ಜಲಂಧರ (ಪಂಜಾಬ) ಇಲ್ಲಿ ಗೋಹತ್ಯೆ ಮಾಡಿ ಎಸೆದ ಹಸುವಿನ ತಲೆ ಪತ್ತೆಯಾಗಿದ್ದರಿಂದ ಉದ್ವಿಘ್ನ !

ವರಿಯಾಣಾ ಗ್ರಾಮದಲ್ಲಿ ೪ ಹಸುಗಳನ್ನು ಕೊಂದು ಅವುಗಳ ತಲೆಗಳನ್ನು ಎಸೆದಿರುವುದು ಪತ್ತೆಯಾಗಿದ್ದರಿಂದ ಬಿಗುವಿನ ವಾತಾವರಣ ನಿರ್ಮಣವಾಗಿದೆ. ಬಜರಂಗ ದಳ, ಶಿವಸೇನಾ ಹಾಗೂ ಹಿಂದು ಸಂಘಟನೆಗಳು ಇಲ್ಲಿ ರಸ್ತೆಯಲ್ಲಿ ಆಂದೋನಲ ಮಾಡಿದರು.