ಸುವರ್ಣ ಮಂದಿರದ ಪ್ರವೇಶದ್ವಾರದಲ್ಲಿ ಖಡ್ಗ ಹಿಡಿದು ಘೋಷಣೆ ಕೂಗಿದ ಖಾಲಿಸ್ತಾನ ಬೆಂಬಲಿಗರು

ಆಪರೇಷನ ಬ್ಲೂ ಸ್ಟಾರಗೆ ೩೮ ವರ್ಷಗಳು ಪೂರ್ಣ!

ಅಮೃತಸರ (ಪಂಜಾಬ) – ಭಾರತೀಯ ಸೇನೆಯು ೧೯೮೪ ರಲ್ಲಿ ಸುವರ್ಣ ಮಂದಿರದಲ್ಲಿ ಖಾಲಿಸ್ತಾನಿ ಭಯೋತ್ಪಾದಕರ ವಿರುದ್ಧ ` ಆಪರೇಷನ ಬ್ಲೂ ಸ್ಟಾರ’ ಅನ್ನು ಪ್ರಾರಂಭಿಸಿತ್ತು. ಅದಕ್ಕೆ ಜೂನ ೬ ರಂದು ೩೮ ವರ್ಷಗಳು ಪೂರ್ಣಗೊಂಡವು. ಆದ್ದರಿಂದ ಜೂನ ೬, ೨೦೨೨ ರಂದು, ಮಂದಿರದ ಪ್ರವೇಶದ್ವಾರದಲ್ಲಿ ಖಾಲಿಸ್ತಾನ ಬೆಂಬಲಿಗರು ಪೊಲೀಸರ ಸಮ್ಮುಖದಲ್ಲಿ ಘೋಷಣೆಗಳನ್ನು ಕೂಗಿದರು. ಕೈಯಲ್ಲಿ ಖಡ್ಗ ಹಿಡಿದು `ಖಾಲಿಸ್ತಾನ ಜಿಂದಾಬಾದ’ ಘೋಷಣೆ ಮಾಡಿದರು. ಇದರೊಂದಿಗೆ ಅಂದಿನ ಖಾಲಿಸ್ತಾನ ನಾಯಕ ಮತ್ತು ಭಯೋತ್ಪಾದಕ ಜರ್ನೈಲ್ ಭಿಂದ್ರನವಾಲೆಯ ಛಾಯಾಚಿತ್ರವುಳ್ಳ ಭಿತ್ತಿಪತ್ರಗಳು ಪ್ರದರ್ಶಿಸಲಾಯಿತು. ಈ ಸಮಯದಲ್ಲಿ ಜನರು ಸುವರ್ಣ ಮಂದಿರ ಪ್ರವೇಶಿಸಲು ಪ್ರಯತ್ನಿಸಿದರು; ಆದರೆ ಅವರನ್ನು ಪ್ರವೇಶದ್ವಾರದಲ್ಲಿಯೇ ನಿಲ್ಲಿಸಲಾಯಿತು. ಆಪರೇಷನ ಬ್ಲೂ ಸ್ಟಾರನಲ್ಲಿ ೮೩ ಸೈನಿಕರು ಜೀವ ಕಳೆದುಕೊಂಡರೆ ಮತ್ತು ೪೯೨ ಜನರ ಸಾವು ಸಂಭಿವಿಸಿತು.

ಸಂಪಾದಕೀಯ ನಿಲುವು

ಇಂತಹ ದೇಶದ್ರೋಹಿ ಖಾಲಿಸ್ತಾನ ಬೆಂಬಲಿಗರನ್ನು ಹಿಡಿದು ಜೀವಾವಧಿ ಶಿಕ್ಷೆಗೆ ಗುರಿಪಡಿಸಬೇಕು, ಆಗ ಮಾತ್ರ ಇನ್ನಿತರರು ಈ ರೀತಿ ಮಾಡುವ ಮುಂಚೆ ಸ್ವಲ್ಪ ಯೋಚಿಸುತ್ತಾರೆ!