ಇಬ್ಬರು ಯುವಕರು ಮದ್ಯಪಾನ ಮಾಡುತ್ತಾ ಶಿವಲಿಂಗದ ಮೇಲೆ ಬಿಯರ ಸುರಿಯುತ್ತಿರುವ ವಿಡಿಯೋ ಪ್ರಸಾರ

ಇಬ್ಬರು ಯುವಕರು ನದಿಯ ದಡದಲ್ಲಿ ಶಿವಲಿಂಗದ ಮೇಲೆ ಬಿಯರ ಸುರಿಯುತ್ತಿರುವುದು

ಈ ಮೇಲಿನ ಚಿತ್ರ ಪ್ರಕಟಿಸುವುದರ ಉದ್ದೇಶ ಯಾರ ಭಾವನೆಗಳಿಗೆ ನೋವನ್ನುಂಟುಮಾಡುವುದಾಗಿರದೆ ನಿಜ ಸ್ಥಿತಿ ತಿಳಿಸುವುದಾಗಿದೆ. – ಸಂಪಾದಕರು

ಚಂಡಿಗಡ – ಸಾಮಾಜಿಕ ಜಾಲತಾಣಗಳಲ್ಲಿ ಒಂದು ವಿಡಿಯೋ ಪ್ರಸಾರವಾಗುತ್ತಿದೆ. ಅದರಲ್ಲಿ ಇಬ್ಬರು ಯುವಕರು ನದಿಯ ದಡದಲ್ಲಿ ಮದ್ಯಪಾನ ಮಾಡುತ್ತಿದ್ದಾರೆ. ಇಲ್ಲಿ ಒಂದು ಶಿವಲಿಂಗವಿದೆ. ಆ ಶಿವಲಿಂಗದ ಮೇಲೆ ಈ ಯುವಕರು ಬಿಯರ ಸುರಿಯುತ್ತಿದ್ದಾರೆ ಮತ್ತು ಆ ವೇಳೆಯಲ್ಲಿ ಹಿನ್ನಲೆಗಾಯನ ಎಂದು ಭಗವಾನ ಶಿವನ ಕುರಿತು ಹಾಡುಗಳು ಕೇಳಿಬರುತ್ತಿದೆ. ಯುವಕರಲ್ಲಿ ಒಬ್ಬರು ಚಂಡಿಗಡದ ಸೆಕ್ಟರ ೨೬ ರ ನಿವಾಸಿಯಾಗಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹಿಂದೂ ಪರಿಷತ ಈ ಸಂಘಟನೆಯಿಂದ ಪೊಲೀಸ ಠಾಣೆ ಎದುರು ಪ್ರತಿಭಟನೆ ಮಾಡುವದಾಗಿ ಎಚ್ಚರಿಕೆ ನೀಡಿದೆ. ಈ ಸಂಘಟನೆಯ ಗಿರಿ ಪಂಚಾನನ ಮಾತನಾಡುತ್ತಾ, ನಾವು ದೇವತೆಗಳ ಅವಮಾನ ಸಹಿಸುವದಿಲ್ಲ. ತಪ್ಪಿತಸ್ಥರ ವಿರುದ್ಧ ಪೊಲೀಸರು ಕ್ರಮ ಕೈಗೊಳ್ಳದಿದ್ದರೆ ನಾವು ಬೀದಿಗಿಳಿದು ಪ್ರತಿಭಟನೆ ಮಾಡುತ್ತೇವೆ ಎಂದು ಹೇಳಿದರು.

ಪೊಲೀಸರು, ಈ ವಿಡಿಯೋ ಕುರಿತು ದೂರು ಬಂದಿದೆ. ನಮ್ಮ ಕಡೆಗೂ ಈ ವಿಡಿಯೋ ಬಂದಿದೆ. ಇದರ ಬಗ್ಗೆ ಸೈಬರ ಇಲಾಖೆಯಿಂದ ತನಿಖೆ ಮಾಡಲಾಗುತ್ತದೆ. ತನಿಖೆಯ ನಂತರ ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ಸಂಪಾದಕೀಯ ನಿಲುವು

* ಧರ್ಮನಿಂದೆಗೆ ಗಲ್ಲು ಶಿಕ್ಷೆಯಂತಹ ಕಟ್ಟುನಿಟ್ಟಿನ ಕಾನೂನು ಭಾರತದಲ್ಲಿ ಇಲ್ಲದಿರುವದರಿಂದ ಯಾರು ಬೇಕಾದರೂ ಹಿಂದೂ ಧರ್ಮದ ಅವಮಾನ ಮಾಡುತ್ತಾರೆ ಮತ್ತು ರಾಜಾರೋಷವಾಗಿರುತ್ತಾರೆ ! ಈಗಲಾದರೂ ಕೇಂದ್ರ ಸರಕಾರ ಇದನ್ನು ಗಂಭಿರವಾಗಿ ಪರಿಗಣಿಸಿ ಶೀಘ್ರವೇ ಕಾನೂನು ರೂಪಿಸಬೇಕು, ಎಂದು ಹಿಂದೂಗಳಿಗೆ ಅನಿಸುತ್ತದೆ !