ಸಿಖ್ಖರು ದೇಶದ ಆರ್ಥವ್ಯವಸ್ಥೆಯ ಮೇಲೆ ನಿಯಂತ್ರಣವನ್ನು ಸಾಧಿಸಿದಾಗಲೇ ದೇಶದ ಮೇಲೆ ಸಿಖ್ಖರ ರಾಜ್ಯ ಬರುವುದು !

ಶ್ರೀ ಅಕಾಲ ತಖ್ತ ಸಾಹಿಬದ ಪ್ರಮುಖರಾದ ಜ್ಞಾನಿ ಹರಪ್ರೀತ ಸಿಂಹರವರಿಂದ ಸಿಖ್ಖರಿಗೆ ಕರೆ

ಅಮೃತಸರ (ಪಂಜಾಬ) – ಇಲ್ಲಿನ ಶ್ರೀ ಅಕಾಲ ತಖ್ತ ಸಾಹಿಬದ ಪ್ರಮುಖರಾದ ಜ್ಞಾನಿ ಹರಪ್ರೀತ ಸಿಂಹರವರು ಸಿಖ್ಖರಿಗೆ ಕರೆ ನೀಡಿದ್ದಾರೆ. ಅವರು ‘೧೯೪೭ರ ನಂತರ ಸಿಖ್ಖರನ್ನು ಬಗ್ಗುಬಡಿಯುವ ಧೋರಣೆಗಳನ್ನು ಅವಲಂಬಿಸಲಾಯಿತು. ಧಾರ್ಮಿಕ ಹಾಗೂ ರಾಜಕೀಯ ಸ್ವರೂಪದಲ್ಲಿ ಸಿಖ್ಖರನ್ನು ದುರ್ಬಲಗೊಳಿಸಲಾಗಿದೆ. ಈಗ ಅವರು ಸಕ್ಷಮರಾಗಿ ದೇಶದ ಆರ್ಥವ್ಯವಸ್ಥೆಯ ಮೇಲೆ ನಿಯಂತ್ರಣ ಸಾಧಿಸಬೇಕು, ಆಗಲೇ ದೇಶದ ಮೇಲೆ ಸಿಖ್ಖರ ರಾಜ್ಯ ಬರುವುದು’ ಎಂದು ಹೇಳಿದ್ದಾರೆ. ಕಳೆದ ತಿಂಗಳು ಜ್ಞಾನಿ ಹರಪ್ರೀತ ಸಿಂಹರವರು ಸಿಖ್ಖರಿಗೆ ತಮ್ಮ ಬಳಿ ಪರವಾನಿಗೆ ಇರುವ ಆಧುನಿಕ ಶಸ್ತ್ರಗಳನ್ನು ಇಟ್ಟುಕೊಳ್ಳಲು ಕರೆ ನೀಡಿದ್ದರು.

ಅವರು ಮಾತನಾಡುತ್ತ ಸದ್ಯ ಕ್ರೈಸ್ತರ ಪ್ರಚಾರವು ಜೋರಾಗಿ ನಡೆಯುತ್ತಿದೆ. ಇದರ ಮೇಲೆ ಅಂಕುಶವನ್ನಿಡಲು ನಾವು ಸಂಘಟಿತವಾಗಿ ಮೈದಾನಕ್ಕೆ ಇಳಿಯಬೇಕಿದೆ. ಪ್ರತಿ ಊರುಗಳಿಗೆ ಹೋಗಿ ಧ್ವನಿ ಎತ್ತಬೇಕಿದೆ. ನಾವು ಧಾರ್ಮಿಕ ಸ್ವರೂಪದಲ್ಲಿ ಸಶಕ್ತರಾಗದಿದ್ದರೆ ಆರ್ಥಿಕ ರೂಪದಲ್ಲಿ ಶಕ್ತಿಶಾಲಿಯಾಗಲು ಸಾಧ್ಯವಿಲ್ಲ ಹಾಗೂ ಇದರಿಂದಾಗಿ ರಾಜಕೀಯ ಸ್ವರೂಪದಲ್ಲಿಯೂ ದುರ್ಬಲರಾಗಿರುತ್ತೇವೆ, ಎಂದು ಹೇಳಿದರು.

ಸಂಪಾದಕೀಯ ನಿಲುವು

ಪ್ರತಿಯೊಬ್ಬರಿಗೂ ಈ ದೇಶದ ಮೇಲೆ ತಮ್ಮ ಧರ್ಮದ ರಾಜ್ಯವಿರಬೇಕು ಎಂಬ ಕನಸು ಬೀಳುತ್ತಿದೆ. ಆದುದರಿಂದ ಹಿಂದೂಗಳು ತಮ್ಮ ಅಸ್ತಿತ್ವವನ್ನು ಉಳಿಸಿಕೊಳ್ಳಲು ಆದಷ್ಟು ಬೇಗ ಸಂಘಟಿತರಾಗಿ ಹಿಂದೂ ರಾಷ್ಟ್ರವನ್ನು ಸ್ಥಾಪಿಸಬೇಕು !