ಪಟಿಯಾಲ (ಪಂಜಾಬ) ಇಲ್ಲಿಯ ಗುರು ಕಿ ಸರಾಯ ಎಂಬ ಸಿಖ್ ಧಾರ್ಮಿಕ ಸ್ಥಳವನ್ನು ಮಸಿದಿಯಾಗಿಸಿರುವ ಅನುಮಾನ !

ಇಲ್ಲಿಯ ಗುಜರಾನವಾಲಾ ಭಾಗದಲ್ಲಿ ಗುರು ಕಿ ಸರಾಯ ಎಂಬ ಧಾರ್ಮಿಕ ಸ್ಥಳವನ್ನು ಮಸೀದಿಯಾಗಿ ರೂಪಾಂತರಿಸಲಾಗಿದೆ ಎಂದು ಆರೋಪ ಹಿಂದೂಗಳಿಂದ ಮಾಡಲಾಗಿದೆ,ಆದರೆ ಮುಸಲ್ಮಾನರ ಹೇಳಿಕೆಯ ಪ್ರಕಾರ, ೭೫ ವರ್ಷಗಳ ಹಿಂದೆ ಇಲ್ಲಿ ಮಸೀದಿ ಇತ್ತು, ಈಗ ಕೇವಲ ಅದಕ್ಕೆ ಹೊಸ ಸ್ವರೂಪ ನೀಡಲಾಗಿದೆ.

ಪ್ರಭು ಶ್ರೀರಾಮಚಂದ್ರರ ಬಗ್ಗೆ ಆಕ್ಷೇಪಾರ್ಹ ಹೇಳಿಕೆ ನೀಡಿದ ಪ್ರಕರಣ ಆಧ್ಯಾಪಕಿಯನ್ನು ಕೆಲಸದಿಂದ ತೆಗೆದುಹಾಕಿದ ಪಂಜಾಬ ವಿಶ್ವವಿದ್ಯಾಲಯ !

ಇಲ್ಲಿನ ‘ಲವಲೀ ಪ್ರೊಫೆಶನಲ ಯುನಿವರ್ಸಿಟಿ’ ಎಂಬ ಖ್ಯಾತ ಖಾಸಗಿ ವಿಶ್ವವಿದ್ಯಾಲಯದ ಗುರಸಂಗ ಪ್ರೀತ ಕೌರ ಎಂಬ ಹೆಸರಿನ ಅಧ್ಯಾಪಕಿಯನ್ನು ಕೆಲಸದಿಂದ ತೆಗೆದುಹಾಕಲಾಯಿತು. ಗುರಸಂಗ ಪ್ರೀತರವರು ಪ್ರಭು ಶ್ರೀರಾಮನ ಬಗ್ಗೆ ಆಕ್ಷೇಪಾರ್ಹ ಹೇಳಿಕೆ ನೀಡಿದ್ದರಿಂದ ಹಿಂದೂಗಳು ಖಂಡಿಸಿದ ಬಳಿಕ ವಿಶ್ವವಿದ್ಯಾಲಯವು ಮೇಲಿನ ಕ್ರಮ ಕೈಗೊಂಡಿದೆ.

ಪಂಜಾಬಿನ ಮುಖ್ಯಮಂತ್ರಿ ಭಗವಂತ ಮಾನರವರ ಮೇಲೆ ಸಾರಾಯಿ ಕುಡಿದು ತಖ್ತ ಶ್ರೀ ದಮದಮಾ ಸಾಹಿಬಕ್ಕೆ ಭೇಟಿ ನೀಡಿರುವ ಆರೋಪ

ಪಂಜಾಬಿನ ಮುಖ್ಯಮಂತ್ರಿ ಭಗವಂತ ಮಾನರವರ ಮೇಲೆ ಬೈಸಾಖಿಯ (ವೈಶಾಖ ಮಾಸದ ಮೊದಲನೇ ದಿನ ಉತ್ತರ ಭಾರತದಲ್ಲಿ ಆಚರಿಸಲಾಗುವ ಉತ್ಸವ) ದಿನ ಸರಾಯಿ ಕುಡಿದು ತಖ್ತ ಶ್ರೀ ದಮದಮಾ ಸಾಹಿಬಕ್ಕೆ ಹೋಗಿರುವ ಆರೋಪವನ್ನು ಹೊರಿಸಲಾಗಿದೆ.

ಜಲಂಧರ (ಪಂಜಾಬ) ಇಲ್ಲಿ ಗೋಹತ್ಯೆ ಮಾಡಿ ಎಸೆದ ಹಸುವಿನ ತಲೆ ಪತ್ತೆಯಾಗಿದ್ದರಿಂದ ಉದ್ವಿಘ್ನ !

ವರಿಯಾಣಾ ಗ್ರಾಮದಲ್ಲಿ ೪ ಹಸುಗಳನ್ನು ಕೊಂದು ಅವುಗಳ ತಲೆಗಳನ್ನು ಎಸೆದಿರುವುದು ಪತ್ತೆಯಾಗಿದ್ದರಿಂದ ಬಿಗುವಿನ ವಾತಾವರಣ ನಿರ್ಮಣವಾಗಿದೆ. ಬಜರಂಗ ದಳ, ಶಿವಸೇನಾ ಹಾಗೂ ಹಿಂದು ಸಂಘಟನೆಗಳು ಇಲ್ಲಿ ರಸ್ತೆಯಲ್ಲಿ ಆಂದೋನಲ ಮಾಡಿದರು.

ಫಿರೋಜಪುರ (ಪಂಜಾಬ್) ಗಡಿಯಲ್ಲಿ ಪಾಕಿಸ್ತಾನದಿಂದ ಬಂದಿದ್ದ ಅಪಾರ ಪ್ರಮಾಣದಲ್ಲಿ ಶಸ್ತ್ರಾಸ್ತ್ರಗಳು ಪತ್ತೆ

ಗಡಿಯಲ್ಲಿ ಪಾಕಿಸ್ತಾನದಿಂದ ಕಳುಹಿಸಲಾದ ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ಗಡಿ ಭದ್ರತಾ ಪಡೆಯು ಮಾರ್ಚ್ ೧೦ ರಂದು ವಶಪಡಿಸಿಕೊಂಡಿವೆ. ಇವುಗಳಲ್ಲಿ ೫ ‘ಎಕೆ ೪೭’ ರೈಫಲ್‌ಗಳು, ೩ ಅಮೆರಿಕಾದ ‘ಕೋಲಟ್-೮’ ರೈಫಲ್‌ಗಳು, ೫ ಪಿಸ್ತೂಲುಗಳು, ೧೦ ಮ್ಯಾಗಜೀನ್‌ಗಳು ಮತ್ತು ದೊಡ್ಡ ಪ್ರಮಾಣದ ಜೀವಂತ ಮದ್ದುಗುಂಡುಗಳು ಸೇರಿವೆ.

ಪಂಜಾಬಿನ ಕಾಂಗ್ರೆಸ್ ಮುಖ್ಯಮಂತ್ರಿ ಚರಣಜೀತ ಸಿಂಗ ಚನ್ನೀ ಹಾಗೂ ಪ್ರದೇಶಾಧ್ಯಕ್ಷ ನವಜ್ಯೋತಸಿಂಗ ಸಿದ್ಧೂ ಸೋಲು !

ಪಂಜಾಬನಲ್ಲಿ ಆಢಳಿತಾರೂಢ ಕಾಂಗ್ರೆಸ ಹೀನಾಯವಾಗಿ ಸೋಲು ಕಂಡಿದೆ. ಜೊತೆಗೆ ರಾಜ್ಯದ ಮುಖ್ಯಮಂತ್ರಿ ಚರಣಜೀತ ಸಿಂಗ ಚನ್ನೀ ಹಾಗೂ ಕಾಂಗ್ರೆಸ್ಸಿನ ಪ್ರದೇಶಾಧ್ಯಕ್ಷ ನವಜ್ಯೋತಸಿಂಗ ಸಿದ್ಧೂರವರು ಸೋತಿದ್ದಾರೆ.

ಅಮೃತಸರದಲ್ಲಿ ಗಡಿ ಭದ್ರತಾ ದಳದ ಕೇಂದ್ರ ಕಚೇರಿಯಲ್ಲಿ ಓರ್ವ ಸೈನಿಕನಿಂದ ಸಹವರ್ತಿ ಸೈನಿಕರ ಮೇಲೆ ನಡೆಸಿರುವ ಗುಂಡಿನ ದಾಳಿಯಲ್ಲಿ ೪ ಜನ ಸೈನಿಕರು ಸಾವನ್ನಪ್ಪಿದ್ದರೆ ಇಬ್ಬರಿಗೆ ಗಾಯ

ಗಡಿ ಭದ್ರತಾ ದಳದ ಕೇಂದ್ರ ಕಚೇರಿಯಲ್ಲಿ ಮಾರ್ಚ್ ೬ ರಂದು ಬೆಳಿಗ್ಗೆ ಊಟದ ಕೋಣೆಯಲ್ಲಿ ೧೪೪ ಬಟಾಲಿಯನ್ ಸೈನಿಕರು ತಿಂಡಿ ತಿನ್ನುತ್ತಿದ್ದರು. ಆ ಸಮಯದಲ್ಲಿ ಓರ್ವ ಸೈನಿಕನು ಸಿಟ್ಟಿನಿಂದ ಮನಬಂದಂತೆ ಗುಂಡಿನ ದಾಳಿ ನಡೆಸಿದನು.

ಕಾಂಗ್ರೆಸ ವಿಭಜನೆಯ ಸಮಯದಲ್ಲಿ ಹಾಗೂ ೧೯೬೫ ಹಾಗೂ ೧೯೭೧ ರ ಯುದ್ಧದ ಸಮಯದಲ್ಲಿ ಗುರುನಾನಕರ ತಪೋಭೂಮಿಯನ್ನು ಭಾರತದೊಳಗೆ ತರುವ ಅವಕಾಶವನ್ನು ಕಳೆದುಕೊಂಡಿತು ! – ಪ್ರಧಾನಮಂತ್ರಿ ಮೋದಿ

೧೯೪೭ರಲ್ಲಿ ಭಾರತದ ವಿಭಜನೆಯ ಸಮಯದಲ್ಲಿ ಕಾಂಗ್ರೆಸ್ಸಿನ ಕೈಯ್ಯಲ್ಲಿ ದೇಶವಿದ್ದಾಗ ಪಂಜಾಬಿನ ಗಡಿಯಿಂದ ಕೇವಲ ೬ ಕಿಲೋಮೀಟರ ಅಂತರದಲ್ಲಿ ಪಾಕಿಸ್ತಾನದಲ್ಲಿರುವ ‘ಗುರುನಾನಕ’ರ ತಪೋಭೂಮಿಯನ್ನು ಭಾರತಕ್ಕೆ ಇರಬೇಕು ಎಂಬುದು ಅವರ ಗಮನಕ್ಕೆ ಬರಲಿಲ್ಲ.

ಪಂಜಾಬಿನಲ್ಲಿ ಚುನಾವಣಾ ಪ್ರಚಾರದ ಸಮಯದಲ್ಲಿ ಸುಮಾರು 312 ಕೋಟಿ ರೂಪಾಯಿಗಳ ಅಮಲು ಪದಾರ್ಥಗಳನ್ನು ಜಪ್ತು ಮಾಡಲಾಗಿದೆ

ಇಷ್ಟು ದೊಡ್ಡ ಪ್ರಮಾಣದಲ್ಲಿ ಅಮಲು ಪದಾರ್ಥಗಳನ್ನು ಹಿಡಿದರೆ, ಇನ್ನೂ ಹಿಡಿಯದಿರುವ ಅಮಲು ಪದಾರ್ಥಗಳ ಮೌಲ್ಯವು ಎಷ್ಟಿರಬಹುದು ಮತ್ತು ಅದರ ಪ್ರಮಾಣ ಎಷ್ಟಿರಬಹುದು ಎಂಬುದರ ವಿಚಾರ ಮಾಡದಿದ್ದರೆ ಒಳ್ಳೆಯದು !

ಮತಾಂತರದ ವಿರುದ್ಧ ಕಾನೂನು ಮಾಡುವುದು ಅತ್ಯಗತ್ಯ ! – ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್

ಹಿಂದೂಗಳಲ್ಲಿ ಹಿಂದುತ್ವದ ಬಗ್ಗೆ ಆಗುತ್ತಿರುವ ಜಾಗೃತಿಯಿಂದಲೇ ಕೇಜ್ರಿವಾಲ್ ಇವರಿಗೆ ಮತಾಂತರ ನಿಷೇಧ ಕಾನೂನಿನ ಮಹತ್ವವನ್ನು ಗಮನಕ್ಕೆ ಬಂದಿದೆ, ಎಂಬುದು ಗಮನದಲ್ಲಿಟ್ಟುಕೊಳ್ಳಿ