ಪಂಜಾಬ ವಿಧಾನಸಭೆಯಲ್ಲಿ ಅಗ್ನಿಪಥ ಯೋಜನೆಯ ವಿರೋಧದಲ್ಲಿ ಠರಾವು ಸಮ್ಮತ !

ಭಾಜಪದ ವಿರೋಧ

ಚಂಡೀಗಢ – ಯುವಕರಿಗೆ ಸೈನ್ಯದಲ್ಲಿ ಸೇರಿಕೊಳ್ಳುವ ಅವಕಾಶ ಕಲ್ಪಿಸಿರುವ ಕೇಂದ್ರ ಸರಕಾರದ ಆಗ್ನಿಪಥ ಯೋಜನೆಯ ವಿರೋಧದಲ್ಲಿ ಪಂಜಾಬ ವಿಧಾನಸಭೆಯಲ್ಲಿ ಜೂನ್ ೩೦ ರಂದು ಒಂದು ಠರಾವು ಮಂಡಿಸಲಾಯಿತು. ಭಾಜಪದ ಶಾಸಕರಾದ ಅಶ್ವಿನ ಶರ್ಮಾ ಮತ್ತು ಜಂಗಿಲಾಲ ಮಹಾರಾಜ ಇವರು ಈ ಠರಾವಿನ ವಿರೋಧದಲ್ಲೀ ಮತದಾನ ಮಾಡಿದರು. ಕೇಂದ್ರ ಸರಕಾರ ಈ ಯೋಜನೆ ತಕ್ಷಣ ಹಿಂಪಡೆಯಬೇಕು ಎಂದು ವಿಧಾನಸಭೆಯ ವಿರೋಧಿ ಪಕ್ಷದ ನಾಯಕ ಮತ್ತು ಕಾಂಗ್ರೆಸ್ ಶಾಸಕ ಪ್ರತಾಪ ಸಿಂಗ ಬಾಜವಾ ಇವರು ಒತ್ತಾಯಿಸಿದರು. ಅಕಾಲಿ ದಳದ ಶಾಸಕ ಮನಪ್ರಿತ ಸಿಂಹ ಆಯಾಲಿ ಇವರು ಠರಾವಿಗೆ ಬೆಂಬಲ ಸೂಚಿಸಿದರು.

ಮುಖ್ಯಮಂತ್ರಿ ಭಗವಂತ ಮಾನ ಇವರು ಠರಾವು ಮಂಡಿಸಿದರು. ಈ ಯೋಜನೆ ದೇಶದ ಹಿತವಿರೋಧಿ ಆಗಿದೆ, ಎಂದು ಆರೋಪಿಸಿರುವ ಭಗವಂತ ಮಾನ ಇವರು ಆದಷ್ಟು ಬೇಗನೆ ಪ್ರಧಾನಿ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ ಶಾಹ ಇವರ ಮುಂದೆ ಈ ಸೂತ್ರಗಳು ಮಂಡಿಸುವೆ ಎಂದು, ಹೇಳಿದರು.