‘ಭಗತ ಸಿಂಹ ಭಯೋತ್ಪಾದಕನಾಗಿದ್ದನು !’(ಅಂತೆ)

  • ಶಿರೋಮಣಿ ಅಕಾಲಿ ದಳ(ಅಮೃತಸರ)ದ ಶಾಸಕ ಸಿಮರನಜೀತ ಸಿಂಹ ಮಾನ ಇವರ ಹೇಳಿಕೆ

  • ಖಲಿಸ್ತಾನ ವಿಷಯದ ಕುರಿತು ಮಾತನಾಡಲು ಹಿಂಜರಿಯುವುದಿಲ್ಲ ಎಂದು ಹೇಳಿಕೆ !

ಚಂಡೀಗಡ – ‘ಭಗತಸಿಂಹ ಓರ್ವ ಯುವ ಬ್ರಿಟಿಶ್ ಅಧಿಕಾರಿ ಮತ್ತು ಅಮೃತಧಾರಿ ಸಿಖ್ ಹವಾಲ್ದಾರ ಚನ್ನನ್ ಸಿಂಹ ಇವರ ಹತ್ಯೆ ಮಾಡಿದ್ದನು. ‘ನ್ಯಾಶನಲ್ ಅಸೆಂಬ್ಲಿ’ಯಲ್ಲಿ ಬಾಂಬ್ ಕೂಡ ಎಸೆದಿದ್ದನು. ಈಗ ನೀವು ನನಗೆ ಹೇಳಿರಿ, ಭಗತಸಿಂಹ ಭಯೋತ್ಪಾದಕರಾಗಿದ್ದರೋ ಭಗತ ಆಗಿದ್ದರೋ ? ಜನರ ಹತ್ಯೆ ಮಾಡಿ ಸಂಸತ್ತಿನಲ್ಲಿ ಬಾಂಬ್ ಎಸೆಯುವುದು ನಾಚಿಕೆಪಡುವ ವಿಷಯವಲ್ಲವೇ ?’, ಎಂದು ಪಂಜಾಬನ ಸಂಗರೂರನ ನೂತನವಾಗಿ ಚುನಾಯಿತಗೊಂಡ ಶಾಸಕ ಮತ್ತು ಶಿರೋಮಣಿ ಅಕಾಲಿ ದಳ(ಅಮೃತಸರ)ದ ಮುಖಂಡ ಸಿಮರನಜೀತ ಸಿಂಹ ಮಾನ ಇವರು ಹೇಳಿಕೆ ನೀಡಿದರು. ಈ ಸಮಯದಲ್ಲಿ ಪತ್ರಕರ್ತರು ಅವರಿಗೆ ‘ಭಗತಸಿಂಹ ಆಂಗ್ಲರೊಂದಿಗೆ ಸ್ವಾತಂತ್ರ್ಯಕ್ಕಾಗಿ ಹೋರಾಡಿದರು’, ಎಂದು ಹೇಳಿದಾಗ, ಅವರು “ಇದು ನಿಮ್ಮ ವಿಚಾರಸರಣಿಯಾಗಿದೆ’, ಆದರೆ ಏನೇ ಆದರೂ, ಭಗತಸಿಂಹ ಭಯೋತ್ಪಾದಕನಾಗಿದ್ದಾನೆ”, ಎಂದು ಹೇಳಿದರು.

೧. ಸಿಮರನಜೀತ ಸಿಂಹ ಮಾನ ತಮ್ಮ ಮಾತನ್ನು ಮುಂದುವರಿಸುತ್ತಾ, ಸರ್ವೋಚ್ಚ ನ್ಯಾಯಾಲಯವು, ನೀವು ಖಲಿಸ್ತಾನದ ಬಗ್ಗೆ ಮಾತನಾಡಬಹುದು ಹಾಗೆಯೇ ಸಭೆಯನ್ನು ನಡೆಸಬಹುದು ಎಂದು ಹೇಳಿದೆ. ಖಲಿಸ್ತಾನದ ವಿಷಯದ ಕುರಿತು ಮಾತನಾಡಲು ಯಾವುದೇ ತೊಂದರೆಯಿಲ್ಲ ಎಂದು ಹೇಳಿದೆಯೆಂದು ತಿಳಿಸಿದರು.

೨. ಮಾನ ಇವರ ಹೇಳಿಕೆಯ ಬಗ್ಗೆ ಆಮ ಆದ್ಮಿ ಪಕ್ಷವು ಆಕ್ಷೇಪಣೆಯನ್ನು ವ್ಯಕ್ತಪಡಿಸಿದೆ. ಅವರ ಈ ಹೇಳಿಕೆ ಅಪಮಾನಾಸ್ಪದ ಮತ್ತು ನಾಚಿಕೆಗೇಡು ಆಗಿದೆಯೆಂದು ಪಕ್ಷವು ಹೇಳಿದೆ, ಹಾಗೆಯೇ ಕ್ಯಾಬಿನೆಟ ಮಂತ್ರಿ ಗುರಮೀತ ಸಿಂಹ ಇವರು ‘ಮಾನ ಕ್ಷಮೆಯಾಚಿಸಬೇಕು’, ಎಂದು ಒತ್ತಾಯಿಸಿದ್ದಾರೆ.

ಸಂಪಾದಕೀಯ ನಿಲುವು

ಪಂಜಾಬನ ಖಲಿಸ್ತಾನಿ ಮಾನಸಿಕತೆಯ ಸಿಖ್ ಮುಖಂಡರು ಈಗ ಬಹಿರಂಗವಾಗಿ ಈ ರೀತಿ ಹೇಳಿಕೆ ನೀಡುತ್ತಿದ್ದಾರೆ. ಇದು ಮುಂಬರುವ ದೊಡ್ಡ ಸಂಕಟದ ಸೂಚನೆಯಾಗಿದೆ. ಕೇಂದ್ರ ಸರಕಾರ ಇದರ ಮೇಲೆ ಈಗಲೇ ಗಮನಹರಿಸಿ ಕ್ರಮ ಜರುಗಿಸುವ ಆವಶ್ಯಕತೆಯಿದೆ !

ಯಾರಾದರೂ ರಾಜಕೀಯ ಮುಖಂಡರ ವಿರುದ್ಧ ಮಾತನಾಡಿದರೆ, ತಕ್ಷಣವೇ ಸಂಬಂಧಿಸಿದವರ ವಿರುದ್ಧ ದೂರು ದಾಖಲಿಸಿ, ಆ ಕ್ಷಣವೇ ಬಂಧಿಸಲಾಗುತ್ತದೆ, ದತ್ವಿರುದ್ಧ ವಿನಾಕಾರಣ ಯಾರೂ ಕ್ರಾಂತಿಕಾರರನ್ನು ‘ಭಯೋತ್ಪಾದಕ’ ಎಂದು ಹೇಳಿದರೂ ಸಂಬಂಧಪಟ್ಟವರ ಮೇಲೆ ಯಾವುದೇ ಕ್ರಮ ಜರುಗಿಸುವುದಿಲ್ಲ ! ಇದು ಇಲ್ಲಿಯ ವರೆಗಿನ ಎಲ್ಲ ಸರಕಾರಗಳಿಗೆ ನಾಚಿಕೆಗೇಡು ! ಕ್ರಾಂತಿಕಾರರನ್ನು ಈ ರೀತಿ ಅಪಮಾನ ಮಾಡುವ ಜನಪ್ರತಿನಿಧಿ ಮತ್ತು ಅದನ್ನು ಸಹಿಸಿಕೊಳ್ಳುವ ಸರಕಾರ ಕೃತಘ್ನವೇ ಆಗಿರುತ್ತದೆ ! ಜನರು ಇಂತಹವರನ್ನು ನ್ಯಾಯೋಚಿತ ಮಾರ್ಗದಿಂದ ಪಾಠ ಕಲಿಸಬೇಕು !