ಅಯೋಧ್ಯೆ – ಶ್ರೀರಾಮ ಮಂದಿರ ಕಟ್ಟಿದ ನಂತರ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಅಯೋಧ್ಯೆಗೆ ಬರುತ್ತಿದ್ದಾರೆ. ಶ್ರೀರಾಮ ಮಂದಿರ ನೋಡುವುದಕ್ಕಾಗಿ ಪ್ರವಾಸಿಗರಲ್ಲಿ ಕಾತೂರತೆ ಹೆಚ್ಚಿರುವುದು ಕಂಡು ಬರುತ್ತಿದೆ. ಶ್ರೀರಾಮ ಮಂದಿರದ ತುಲನೆಯಲ್ಲಿ ಏಳು ಆಶ್ಚರ್ಯಗಳಲ್ಲಿನ ಒಂದಾಗಿರುವ ತಾಜ್ ಮಹಲ್‌ಗೆ ಕಡಿಮೆ ಪ್ರಮಾಣದಲ್ಲಿ ಪ್ರವಾಸಿಗರು ಭೇಟಿ ನೀಡುತ್ತಿದ್ದಾರೆ. ಶ್ರೀರಾಮ ಮಂದಿರದಲ್ಲಿ ಶ್ರೀರಾಮಲಲ್ಲಾನ ಮೂರ್ತಿಯ ಪ್ರತಿಷ್ಠಾಪನೆಯಾದ ನಂತರ ೯ ತಿಂಗಳಲ್ಲಿ ೪೭ ಕೋಟಿ ಜನರು ಭೇಟಿ ನೀಡಿದ್ದಾರೆ. (ಶ್ರೀ ರಾಮ ಮಂದಿರ ಇದು ರಾಷ್ಟ್ರಭಾವನೆ ಮತ್ತು ರಾಷ್ಟ್ರೀಯ ಗೌರವಕ್ಕೆ ಸಂಬಂಧಿಸಿದೆ, ಇದರದೇ ಇದು ಸಾಕ್ಷ ಇರಬಹುದು ! – ಸಂಪಾದಕರು) ಪ್ರವಾಸೋದ್ಯಮ ಇಲಾಖೆಯ ಅಂಕಿಅಂಶಗಳ ಪ್ರಕಾರ ತಾಜಮಹಲ್‌ಗೆ ಭೇಟಿ ನೀಡುವ ಭಾರತೀಯ ಪ್ರವಾಸಿಗರ ಸಂಖ್ಯೆ ಕಳೆದ ವರ್ಷದ ತುಲನೆಯಲ್ಲಿ ಈ ವರ್ಷ ೧ ಲಕ್ಷ ೯೩ ಸಾವಿರದ ೨೯೮ ರಷ್ಟು ಕಡಿಮೆಯಾಗಿದೆ.