ಸೆಟಲವಾಡ ಮತ್ತು ಶ್ರೀಕುಮಾರ ನಂತರ ಈಗ ಮಾಜಿ ಪೊಲೀಸ ಅಧಿಕಾರಿ ಸಂಜೀವ ಭಟ್ ಬಂಧನ !

೨೦೦೨ ಗುಜರಾತ ದಂಗೆಗಳ ಪ್ರಕರಣ

ಅಮಾಯಕರನ್ನು ಸಿಲುಕಿಸುವ ಪ್ರಯತ್ನ ಮಾಡಿರುವ ಆರೋಪ

ಮಾಜಿ ಐಪಿಎಸ್ ಅಧಿಕಾರಿ ಸಂಜೀವ ಭಟ್

ಕರ್ಣಾವತಿ (ಗುಜರಾತ ) – ೨೦೦೨ ರಲ್ಲಿ ನಡೆದ ಗುಜರಾತ ದಂಗೆಗಳ ಪ್ರಕರಣದಲ್ಲಿ ಅಹಮದಾಬಾದ್ ಪೊಲೀಸರ ಅಪರಾಧ ದಳದ ಮಾಜಿ ಐಪಿಎಸ್ ಅಧಿಕಾರಿ ಸಂಜೀವ ಭಟ್ ಇವರನ್ನು ಬಂಧಿಸಲಾಗಿದೆ. ಭಟ್ ಇವರು ಕಳೆದ ಕೆಲವು ಸಮಯದಿಂದ ಇನ್ನೊಂದು ಪ್ರಕರಣದಲ್ಲಿ ಪಾಲನ್ಪುರ ಕಾರಾಗೃಹದಲ್ಲಿದ್ದಾರೆ. ಅಲ್ಲಿಂದ ಅವರನ್ನು ಅಹಮದಾಬಾದ್ ಪೊಲೀಸರ ವಶಕ್ಕೆ ಒಪ್ಪಿಸಲಾಯಿತು. ಗುಜರಾತ ದಂಗೆ ಪ್ರಕರಣದಲ್ಲಿ ಅಮಾಯಕರನ್ನು ಸಿಲುಕಿಸುವ ಪ್ರಯತ್ನ ಮಾಡಿರುವ ಆರೋಪದಲ್ಲಿ ಬಂಧನ ನಡೆದಿದೆ ಎಂದು ಹೇಳಲಾಗುತ್ತಿದೆ. ಗುಜರಾತ್ ದಂಗೆಗಳ ಪ್ರಕರಣದಲ್ಲಿ ಸ್ವಯಂಘೋಷಿತ ಮಾನವಾಧಿಕಾರ ಕಾರ್ಯಕರ್ತೆ ತೀಸ್ತಾ ಸೆಟಲವಾಡ್ ಮತ್ತು ಮಾಜಿ ಡಿ.ಜಿ.ಪಿ ಆರ್ ಬಿ ಶ್ರೀಕುಮಾರ್ ಇವರನ್ನು ಇದಕ್ಕೂ ಮೊದಲು ಬಂಧಿಸಲಾಗಿತ್ತು.

೧. ಈ ದಂಗೆ ಪ್ರಕರಣದಲ್ಲಿ ಸ್ಥಾಪಿಸಲಾಗಿರುವ ವಿಶೇಷ ತನಿಖಾ ದಳವು ಪ್ರಧಾನಿ ನರೇಂದ್ರ ಮೋದಿ ಸಹಿತ ೬೯ ಜನರನ್ನು ನಿರ್ದೋಷಿಗಳೆಂದು ಘೋಷಿಸಿದೆ.

೨. ಇದರ ವಿರೋಧದಲ್ಲಿ ಸರ್ವೋಚ್ಚ ನ್ಯಾಯಾಲಯದಲ್ಲಿ ದಾಖಲಿಸಲಾಗಿರುವ ಮನವಿಯನ್ನು ನ್ಯಾಯಾಲಯ ತಳ್ಳಿ ಹಾಕಿದೆ.

೩. ಇದರ ನಂತರ ಈ ಪ್ರಕರಣದಲ್ಲಿ ಸೆಟಲವಾಡ್, ಶ್ರೀಕುಮಾರ ಮತ್ತು ಈಗ ಭಟ್ ಇವರನ್ನು ಬಂಧಿಸಲಾಗಿದೆ.

೪. ಈ ಮೂವರ ಮೇಲೆ ಭಾ.ದಂ.ಸಂ. ಕಲಂ ೪೬೮ (ಮೋಸ ಮಾಡುವ ಉದ್ದೇಶದಿಂದ ಸುಳ್ಳು ಹೇಳುವುದು), ಕಲಂ ೪೭೧ (ಉದ್ದೇಶಪೂರ್ವಕವಾಗಿ ಸುಳ್ಳು ದಾಖಲೆಗಳನ್ನು ತಯಾರಿಸುವುದು) ಕಲಂ ೧೯೪ (ಸುಳ್ಳು ಸಾಕ್ಷ್ಯ ನೀಡುವುದು ಅಥವಾ ತಯಾರಿಸುವುದು) ಅಡಿಯಲ್ಲಿ ಅಪರಾಧ ನೋಂದಾಯಿಸಲಾಗಿದೆ.