ಭ್ರಷ್ಟಾಚಾರ ಪ್ರಕರಣದಲ್ಲಿ ಪಂಜಾಬಿನ ಆರೋಗ್ಯ ಸಚಿವರ ಬಂಧನ !

(ಮಧ್ಯದಲ್ಲಿ ಪಂಜಾಬಿನ ಆರೋಗ್ಯ ಸಚಿವ ವಿಜಯ ಸಿಂಗಲಾ)

ಅಮೃತಸರ (ಪಂಜಾಬ್) – ಭ್ರಷ್ಟಾಚಾರ ಪ್ರಕರಣದಲ್ಲಿ ಪಂಜಾಬಿನ ಆರೋಗ್ಯ ಸಚಿವ ವಿಜಯ ಸಿಂಗಲಾ ಅವರನ್ನು ಭ್ರಷ್ಟಾಚಾರ ನಿಗ್ರಹ ದಳ ಬಂಧಿಸಿದೆ. ಈ ಮೊದಲು ಸಿಂಗಲಾ ಇವರ ಮೇಲಿರುವ ಆರೋಪ ಸಾಬೀತಾಗಿದ್ದರಿಂದ ಪಂಜಾಬಿನ ಮುಖ್ಯಮಂತ್ರಿ ಭಗವಂತ್ ಸಿಂಗ್ ಮಾನ್ ಇವರು ಸಂಪುಟದಿಂದ ವಜಾಗೊಳಿಸಿದ್ದಾರೆ. ನೌಕರಿಯ ಗುತ್ತಿಗೆಯನ್ನು ನೀಡುವಾಗ ಸಿಂಗಲಾ ಅಧಿಕಾರಿಗಳಿಂದ ಶೇಕಡಾ ೧ ರಷ್ಟು `ಕಮಿಷನ್’ ಕೇಳಿದ್ದರು. ಈ ಪ್ರಕರಣದಲ್ಲಿ ಬಲವಾದ ಸಾಕ್ಷ್ಯಗಳು ಸಿಕ್ಕಿದ ನಂತರ, ಮುಖ್ಯಮಂತ್ರಿ ಮಾನ್ ಇವರು ಸಿಂಗಲಾ ವಿರುದ್ಧ ಪ್ರಕರಣ ದಾಖಲಿಸಲು ಆದೇಶಿಸಿದರು. ಮಾನ್ ಇವರು ಟ್ವೀಟ್ ಮೂಲಕ ಈ ಮಾಹಿತಿಯನ್ನು ನೀಡಿದ್ದಾರೆ.

ಸಂಪಾದಕೀಯ ನಿಲುವು

ಸರಕಾರವು ಇಂತಹವರನ್ನು ಬಂಧಿಸುವುದು ಮಾತ್ರವಲ್ಲ, ಅವರ ಆಸ್ತಿಯನ್ನು ಮುಟ್ಟುಗೋಲು ಮಾಡಬೇಕು !