ತಮಿಳುನಾಡಿನಲ್ಲಿ ಕಳೆದ ೩೬ ವರ್ಷಗಳಲ್ಲಿ ಹಿಂದೂ ದೇವಾಲಯದ ೪೭೦೦೦ ಎಕರೆ ಭೂಮಿ ನಾಪತ್ತೆ !

ಭಕ್ತರು ನಿದ್ರಿಸುತ್ತಿರುವುದರಿಂದ ಜನ್ಮಹಿಂದುಗಳೇ ದೇವಾಲಯಗಳ ಭೂಮಿಯನ್ನು ಕಬಳಿಸುತ್ತಿರುವುದು ಶೋಭಿಸುವಂತಹದ್ದಲ್ಲ ! ದೇವಾಲಯಗಳು ಮತ್ತು ದೇವಾಲಯದ ಆಸ್ತಿಯನ್ನು ರಕ್ಷಿಸುವುದು ಸಹ ಭಕ್ತಿಯೇ ಆಗಿದೆ ಎಂದು ಹಿಂದೂಗಳು ಯಾವಾಗ ಅರಿತುಕೊಳ್ಳುವರು ?

ಭಗವಾನ್ ಶಿವನನ್ನು ಅವಮಾನಿಸುವಂತಹ ಆಕ್ಷೇಪಾರ್ಹ ಹೇಳಿಕೆಯ ವೀಡಿಯೊವನ್ನು ಇನ್‍ಸ್ಟಾಗ್ರಾಮ್ ನಲ್ಲಿ ಅಪಲೋಡ್ ಮಾಡಿದ ಭಾಗ್ಯನಗರದ ಇಬ್ಬರು ಹಿಂದೂಗಳು !

ವಿವಾದದ ಹಿನ್ನೆಲೆಯಲ್ಲಿ ವೀಡಿಯೊವನ್ನು ಇನ್‍ಸ್ಟಾಗ್ರಾಮ್‍ನಿಂದ ತೆಗೆದುಹಾಕಲಾಗಿದೆ. ಆದರೆ, ಗೋಶಾಮಹಲ ಮತದಾರ ಕ್ಷೇತ್ರದ ಬಿಜೆಪಿ ಶಾಸಕ ಟಿ. ರಾಜಾಸಿಂಹ ಇವರು ದೇವತೆಗಳನ್ನು ಅಪಮಾನಿಸುವವರ ವಿರುದ್ಧ ಕ್ರಮಕೈಗೊಳ್ಳಬೇಕೆಂದು ಒತ್ತಾಯಿಸಿ ಪೊಲೀಸರಿಗೆ ದೂರು ನೀಡಿದ್ದಾರೆ.

ವಾರಣಾಸಿಯಲ್ಲಿ ಗಂಗಾ ನದಿಯ ನೀರಿನ ಬಣ್ಣ ಹಸಿರಾಗಿದೆ ಎಂಬ ಬಗ್ಗೆ ವಿಚಾರಣೆಗೆ ಆದೇಶ

ಮಾಲಿನ್ಯದಿಂದ ಈ ರೀತಿಯ ಬದಲಾವಣೆ ಆಗಿದೆ, ಪ್ರತ್ಯೇಕವಾಗಿ ಹೇಳುವ ಆವಶ್ಯಕತೆ ಇಲ್ಲ ! ಮಾಲಿನ್ಯದಿಂದ ಪಂಚಮಹಾಭೂತಗಳಲ್ಲಿ ಆಗುತ್ತಿರುವ ಅನಿಷ್ಟ ಬದಲಾವಣೆಯನ್ನು ತಡೆಗಟ್ಟಲು ಪಂಚಮಹಾಭೂತಗಳು ತಮ್ಮ ರೌದ್ರ ಸ್ವರೂಪವನ್ನು ತೋರಿಸಲು ಪ್ರಾರಂಭಿಸಿದರೆ ಜಗತ್ತಿನಲ್ಲಿ ಏನಾಗಬಹುದು ಎಂದು ಊಹಿಸಿಕೊಳ್ಳಲೂ ಸಾಧ್ಯವಿಲ್ಲ !

ಹೂಗ್ಲಿ (ಬಂಗಾಲ) ದಲ್ಲಿ ರೋಗಿ ಶೇಖ್ ಇಸ್ಮಾಯಿಲ್‍ನು ಮೃತಪಟ್ಟಿದ್ದರಿಂದ ಮತಾಂಧರಿಂದ ವೈದ್ಯರ ಮೇಲೆ ಹಲ್ಲೆ

ಬಂಗಾಲವು ಮತ್ತೊಂದು ಬಾಂಗ್ಲಾದೇಶವಾಗುವ ಹಾದಿಯಲ್ಲಿ ಇರುವುದರಿಂದ ಇಂತಹ ಘಟನೆಗಳು ನಡೆಯುತ್ತಿವೆ. ಇದು ತೃಣಮೂಲ ಕಾಂಗ್ರೆಸ್‍ಅನ್ನು ಆರಿಸಿದಕ್ಕಾಗಿ ಹಿಂದೂಗಳಿಗೆ ಸಿಕ್ಕಿದ ಶಿಕ್ಷೆಯೇ ಎನ್ನಬಹುದು!

‘ಔಷಧಿ’ ಹೆಸರಿನ ಆಯುರ್ವೇದ ಸಂಸ್ಥೆಯು ಕೇರಳ ಸರಕಾರದ ಸ್ವಾಮ್ಯದಲ್ಲಿರುವುದು ಬಹಿರಂಗ !

ಒಂದೆಡೆ ಕೇರಳದ ಕಮ್ಯುನಿಸ್ಟ್ ಪಕ್ಷವು ಗೋಹತ್ಯೆ ನಿಷೇಧವನ್ನು ವಿರೋಧಿಸುತ್ತದೆ ಮತ್ತು ಗೋಮಾಂಸದ ಸಮಾರಂಭವನ್ನು ಆಯೋಜಿಸುತ್ತದೆ. ಮತ್ತೊಂದೆಡೆ, ಅದೇ ಪಕ್ಷದ ಸರಕಾರದಿಂದ ಸರಕಾರಿ ಹಂತದಲ್ಲಿ ಸಗಣಿ ಗೋಮೂತ್ರದ ಉತ್ಪನ್ನಗಳನ್ನು ತಯಾರಿಸುವ ಸಂಸ್ಥೆಗಳನ್ನು ನಡೆಸುವ ಮೂಲಕ ಹಣವನ್ನು ಗಳಿಸಲಾಗುತ್ತದೆ ! ಹೀಗಿದ್ದರೆ, ಸರಕಾರವು ರಾಜ್ಯದಲ್ಲಿ ಗೋಹತ್ಯೆಯನ್ನು ಏಕೆ ನಿಷೇಧಿಸುವುದಿಲ್ಲ ?

ಸರಾಯಿಯ ಲೋಟವನ್ನು ಕೈಯಲ್ಲಿ ಹಿಡಿದುಕೊಂಡಿದ್ದ ಭಗವಾನ್ ಶಿವನ `ಸ್ಟಿಕರ್’ ಪ್ರಸಾರ ಮಾಡಿದ ಇನ್‍ಸ್ಟಾಗ್ರಾಮ್‍ನ ವಿರುದ್ಧ ದೂರು ದಾಖಲು

ಸಾಮಾಜಿಕ ಮಾಧ್ಯಮ ಇನ್‍ಸ್ಟಾಗ್ರಾಮ್ ಇದು ಭಗವಾನ್ ನ ಶಿವನ ಆಕ್ಷೇಪಾರ್ಹ ಸ್ಟಿಕ್ಕರ್’ ಅನ್ನು ಪ್ರಸಾರ ಮಾಡಿದೆ. ಇದರಿಂದಾಗಿ ಇನ್‍ಸ್ಟಾಗ್ರಾಮ್‍ನ ವಿರುದ್ಧ ದೆಹಲಿಯಲ್ಲಿನ ಧರ್ಮಾಭಿಮಾನಿ ಮನೀಷ ಸಿಂಹ ಇವರು ಧಾರ್ಮಿಕ ಭಾವನೆಗಳಿಗೆ ನೋಯಿಸಲಾಗಿದೆ ಎಂದು ಇನ್‍ಸ್ಟಾಗ್ರಾಮ್ ವಿರುದ್ಧ ಪೊಲೀಸರಲ್ಲಿ ದೂರು ನೀಡಿದ್ದಾರೆ. ಈ ನಿಟ್ಟಿನಲ್ಲಿ ಪ್ರಕರಣ ದಾಖಲಿಸಲಾಗಿದೆ.

ಕೊರೊನಾದಿಂದ ತೀರಿಕೊಂಡ ಹಿಂದೂ ವೃದ್ಧೆಯೊಬ್ಬರ ಶವವನ್ನು ಹೂಳಬೇಕೆಂದು ಮತಾಂತರಗೊಂಡ ಕ್ರೈಸ್ತ ಮಗನ ಬೇಡಿಕೆಯನ್ನು ತಿರಸ್ಕರಿಸಿ ಅಂತ್ಯಕ್ರಿಯೆ ನಡೆಸಿದ ಮೊಮ್ಮಗಳು !

ಕೊರೊನಾ ಸೋಂಕಿನಿಂದ ಮೃತಪಟ್ಟ ವೃದ್ಧ ಮಹಿಳೆಯೊಬ್ಬಳ ಅಂತ್ಯಕ್ರಿಯೆ ಮಾಡಲು ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡಿರುವ ಮಗನು ನಿರಾಕರಿಸಿದನೆಂದು ವೃದ್ಧೆಯ ಮೊಮ್ಮಗಳು ಜಾರ್ಖಂಡ್‍ನಿಂದ ೧೧೦೦ ಕಿ.ಮೀ ದೂರದಿಂದ ಬಂದು ಶವದ ಅಂತ್ಯಸಂಸ್ಕಾರ ಮಾಡಿರುವ ಘಟನೆ ಬೆಳಕಿಗೆ ಬಂದಿದೆ.

ಭೋಪಾಲ್ ನಗರದ ಮೊಘಲ್ ಕಾಲದ ‘ಲಾಲಘಾಟಿ’ ಮತ್ತು ‘ಹಲಾಲಪುರ’ ಹೆಸರುಗಳನ್ನು ಬದಲಾಯಿಸಿ ! – ಸಂಸದೆ ಸಾಧ್ವಿ ಪ್ರಜ್ಞಾ ಸಿಂಗ್ ಅವರ ಬೇಡಿಕೆ

ಬಿಜೆಪಿ ಸಂಸದೆ ಪ್ರಜ್ಞಾ ಸಿಂಗ್ ಠಾಕೂರ್ ಅವರು ನಗರದ ಎರಡು ಬಸ್ ನಿಲ್ದಾಣಗಳಾದ ಲಾಲಘಾಟಿ ಮತ್ತು ಹಲಾಲಪುರಗಳ ಹೆಸರನ್ನು ಬದಲಾಯಿಸುವಂತೆ ಒತ್ತಾಯಿಸಿದ್ದಾರೆ. ಅವರು ರಾಜ್ಯದ ಮುಖ್ಯಮಂತ್ರಿ ಶಿವರಾಜ ಸಿಂಹ ಚೌಹಾನ ಮತ್ತು ಪುರಸಭಾ ಆಯುಕ್ತರಿಗೆ ಪತ್ರ ಬರೆದು ಹೆಸರನ್ನು ಬದಲಾಯಿಸುವಂತೆ ಒತ್ತಾಯಿಸಿದ್ದಾರೆ.

ಖಲಿಸ್ತಾನಿ ಭಯೋತ್ಪಾದಕ ಭಿಂದ್ರನವಾಲೆಯನ್ನು ‘ಹುತಾತ್ಮ’ ಎಂದು ಕರೆದಿದ್ದಕ್ಕಾಗಿ ಕ್ರಿಕೆಟಿಗ ಹರಭಜನ್ ಸಿಂಗ್‍ರಿಂದ ಕ್ಷಮೆಯಾಚನೆ

ಖಲಿಸ್ತಾನಿ ಭಯೋತ್ಪಾದಕ ಜರ್ನಲ್‍ಸಿಂಗ್ ಭಿಂದ್ರನವಾಲೆ ಅವರ ಮೃತ್ಯುದಿನದ ನಿಮಿತ್ತ ಶ್ರದ್ಧಾಂಜಲಿ ನೀಡುವ ಪೋಸ್ಟನ್ನು ಮಾಡಿದ್ದರಿಂದ ಭಾರತದ ಮಾಜಿ ಕ್ರಿಕೆಟಿಗ ಹರಭಜನ್ ಸಿಂಗ್ ಕ್ಷಮೆಯಾಚಿಸಿದ್ದಾರೆ. ಶ್ರದ್ಧಾಂಜಲಿ ಸಲ್ಲಿಸಿದ ನಂತರ ಹರಭಜನ್ ಸಿಂಗ್ ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಟೀಕೆಗೆ ಗುರಿಯಾದರು. ಹರಭಜನ್ ಭಿಂದ್ರನವಾಲೆಯನ್ನು ‘ಹುತಾತ್ಮ’ ಎಂದು ಕರೆದಿದ್ದರು.

ದೇಶದಲ್ಲಿ ದೊಡ್ಡ ಭಯೋತ್ಪಾದಕ ದಾಳಿ ನಡೆಸಲು ಸಂಚು ರೂಪಿಸಲಾಗುತ್ತಿದೆ ! – ಎನ್.ಐ.ಎ.

ದೇಶದಲ್ಲಿ ೨೬/೧೧ ನಂತಹ ದೊಡ್ಡ ಭಯೋತ್ಪಾದಕ ದಾಳಿ ನಡೆಸುವ ಸಂಚು ರೂಪಿಸಲಾಗುತ್ತಿದೆ, ಎಂಬ ಮಾಹಿತಿಯನ್ನು ನೀಡುವ ದೂರವಾಣಿ ಕರೆ ಬಂದಿರುವುದಾಗಿ ರಾಷ್ಟ್ರೀಯ ತನಿಖಾ ದಳ (ಎನ್.ಐ.ಎ.)ವು ಹೇಳಿದೆ. ಹಾಗಾಗಿ ಈ ಪ್ರಕರಣದಲ್ಲಿ ತನಿಖೆಯನ್ನು ಪ್ರಾರಂಭಿಸಲಾಗಿದೆ. ಈ ದೂರವಾಣಿ ಕರೆಯು ಬಂಗಾಳದ ರಣಘಾಟ್‍ನಿಂದ ಬಂದಿರುವುದು ಬೆಳಕಿಗೆ ಬಂದಿದೆ.