ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ಸಂಸ್ಕೃತ ಸಪ್ತಾಹದ ನಿಮಿತ್ತ ವಿಶೇಷ ‘ಟ್ವಿಟರ್ ಲೈವ್’ ಕಾರ್ಯಕ್ರಮದ ಆಯೋಜನೆ

ಇಡೀ ಪ್ರಪಂಚವು ಸಂಸ್ಕೃತದ ವೈಜ್ಞಾನಿಕತೆ ಮತ್ತು ಸಮೃದ್ಧಿಯತ್ತ ಆಕರ್ಷಿತವಾಗುತ್ತಿದೆ ! – ಆನಂದ ಜಖೋಟಿಯಾ, ಮಧ್ಯಪ್ರದೇಶ ಮತ್ತು ರಾಜಸ್ಥಾನ ರಾಜ್ಯ ಸಮನ್ವಯಕರು, ಹಿಂದೂ ಜನಜಾಗೃತಿ ಸಮಿತಿ

ನವ ದೆಹಲಿ : ‘ಸಂಸ್ಕೃತವು ಮೃತ ಭಾಷೆಯಾಗಿದೆ ಅಥವಾ ವ್ಯವಹಾರ ಮಾಡಲು ನಿರುಪಯುಕ್ತವಾಗಿದೆ’, ಎಂದು ಹೇಳುವುದು ತಪ್ಪಾಗಿದೆ. ಇಂದು ಜರ್ಮನಿಯ ೧೪ ಮತ್ತು ಬ್ರಿಟನ್‌ನ ೪ ವಿಶ್ವವಿದ್ಯಾಲಯಗಳಲ್ಲಿ ಸಂಸ್ಕೃತವನ್ನು ಕಲಿಸಲಾಗುತ್ತಿದೆ ಮತ್ತು ೧೭ ದೇಶಗಳಲ್ಲಿ ಸಂಸ್ಕೃತವನ್ನು ಅಧ್ಯಯನ ಮಾಡಲಾಗುತ್ತಿದೆ. ಸಂಸ್ಕೃತದ ವೈಜ್ಞಾನಿಕತೆ ಮತ್ತು ಸಮದ್ಧಿ ಇವುಗಳಿಂದ ಇಡೀ ಪ್ರಪಂಚವು ಅದರ ಕಡೆಗೆ ಆಕರ್ಷಿತವಾಗುತ್ತಿದೆ, ಎಂದು ಹಿಂದೂ ಜನಜಾಗೃತಿ ಸಮಿತಿಯ ಮಧ್ಯಪ್ರದೇಶ ಮತ್ತು ರಾಜಸ್ಥಾನ ರಾಜ್ಯ ಸಮನ್ವಯಕರಾದ ಶ್ರೀ. ಆನಂದ ಜಖೋಟಿಯಾ ಹೇಳಿದರು.

ಭಾರತ ಸರಕಾರದ ವತಿಯಿಂದ ‘ವಿಶ್ವ ಸಂಸ್ಕೃತ ದಿನ’ದಂದು ಸಂಸ್ಕೃತ ಸಪ್ತಾಹವನ್ನು ಆಯೋಜಿಸಲಾಗಿತ್ತು. ಈ ನಿಮಿತ್ತ ಹಿಂದೂ ಜನಜಾಗೃತಿ ಸಮಿತಿಯು ‘ಟ್ವಿಟರ್ ಲೈವ್’ ಅನ್ನು ಆಯೋಜಿಸಿತ್ತು. ಕಾರ್ಯಕ್ರಮವನ್ನು ಉದ್ದೇಶಿಸಿ ಶ್ರೀ. ಜಖೋಟಿಯಾ ಇವರು ಮಾತನಾಡುತ್ತಿದ್ದರು. ಈ ಕಾರ್ಯಕ್ರಮವನ್ನು ‘ಯೂ ಟ್ಯೂಬ್’ನಲ್ಲಿ ನೇರ ಪ್ರಸಾರ ಮಾಡಲಾಯಿತು.

ಶ್ರೀ. ಜಖೋಟಿಯಾ ತಮ್ಮ ಮಾತನ್ನು ಮುಂದುವರೆಸುತ್ತಾ, “ಸಂಸ್ಕೃತ ಸ್ವರಗಳು ಮತ್ತು ವ್ಯಂಜನಗಳು ನಮ್ಮ ಶರೀರವಿಜ್ಞಾನಕ್ಕೆ ಸಂಬಂಧಿಸಿವೆ. ಸ್ವರ ಮತ್ತು ವ್ಯಂಜನವನ್ನು ಗಮನವಿಟ್ಟು ಉಚ್ಚರಿಸಿದರೆ ಅದರಿಂದ ಹೊರಸೂಸುವ ಲಹರಿಗಳು ದೇಹದ ನಿರ್ದಿಷ್ಟ ಭಾಗದಿಂದ ಒಂದು ಕ್ರಮದಿಂದ ಹೊರಬರುವುದನ್ನು ನಾವು ಅನುಭವಿಸಬಹುದು. ಸಂಸ್ಕೃತದಲ್ಲಿ ಸಮೃದ್ಧ ಶಬ್ದಭಂಡಾರವಿದೆ, ಅದು ಬೇರೆ ಯಾವುದೇ ಭಾಷೆಯಲ್ಲಿ ಕಂಡುಬರುವುದಿಲ್ಲ. ಈ ಶಬ್ದಭಂಡಾರವು ವ್ಯಕ್ತಿಗೆ ತಮ್ಮ ಭಾವನೆಗಳನ್ನು ವ್ಯಕ್ತಪಡಿಸಲು ಕಲಿಸುತ್ತದೆ. ನಾವು ಶ್ರೀರಾಮರಕ್ಷಾ, ಶ್ರೀವಿಷ್ಣುಸಹಸ್ರನಾಮದಂತಹ ಸಂಸ್ಕೃತ ಶ್ಲೋಕಗಳನ್ನು ಉಚ್ಚರಿಸುವಾಗ, ಲಯಬದ್ಧವಾಗಿ, ಸಂಸ್ಕೃತ ಶಬ್ದಗಳಿಂದ ಹೊರಹೊಮ್ಮುವ ಶಕ್ತಿ, ಚೇತನಾ, ಉತ್ಸಾಹ ಮತ್ತು ಪ್ರಕಟವಾಗುವ ಭಾವವನ್ನು ನಾವು ಅನುಭವಿಸುತ್ತೇವೆ. ಬೇರೆ ಯಾವುದೇ ಭಾಷೆಗೆ ಇಂತಹ ವೈಭವವಿದೆಯೇ ? ಅದಕ್ಕಾಗಿಯೇ ಸಂಸ್ಕೃತವನ್ನು ‘ದೇವವಾಣಿ’ ಅಥವಾ ‘ಭಾಷೆಗಳ ಜನನಿ’ ಎಂದು ಕರೆಯಲಾಗುತ್ತದೆ. ಜನರು ತಮ್ಮ ದೈನಂದಿನ ವ್ಯವಹಾರಗಳಲ್ಲಿ ಸಂಸ್ಕೃತವನ್ನು ಅನುಸರಿಸಿ ಋಷಿಮುನಿಗಳು ಬರೆದಿರುವ ವಿವಿಧ ವಿಷಯಗಳ ಪ್ರಾಚೀನ ಶಾಸ್ತ್ರಗಳನ್ನು ಅಧ್ಯಯನ ಮಾಡಿ ಭಾರತವನ್ನು ವಿಶ್ವಗುರುವಿನ ಸ್ಥಾನದಲ್ಲಿ ಆರೂಢಗೊಳಿಸಬೇಕು.” ಎಂದು ಹೇಳಿದರು.

ಕಾರ್ಯಕ್ರಮವನ್ನು ವೀಕ್ಷಿಸಲು ಯೂಟ್ಯೂಬ್ ಲಿಂಕ್ : https://bit.ly/3y4P349