ಮಲ್ಲಾಪುರಮ್ (ತಮಿಳುನಾಡು) ಇಲ್ಲಿಯ ಶ್ರೀತಲಸಾಯಾನಾ ಪೆರುಮಲ ಈ ಪುರಾತನ ದೇವಾಲಯದ ಪಕ್ಕದಲ್ಲಿ ಶೌಚಾಲಯಗಳನ್ನು ನಿರ್ಮಿಸುವ ಯೋಜನೆ !

 ಭಕ್ತರಿಂದ ತೀವ್ರ ವಿರೋಧ !

* ಹಿಂದೂಗಳೇ, ದೇವಾಲಯಗಳ ಸರಕಾರಿಕರಣದ ದುಷ್ಪರಿಣಾಮಗಳನ್ನು ತಿಳಿಯಿರಿ ! – ಸಂಪಾದಕರು

* ದೇವಾಲಯದ ಸರಕಾರಿಕರಣ ಮಾಡಿ ಮನಬಂದಂತೆ ಅದರ ಬಗ್ಗೆ ನಿರ್ಧಾರ ತೆಗೆದುಕೊಳ್ಳುವ ತಮಿಳುನಾಡಿನ ದ್ರಮುಕ ಸರಕಾರಕ್ಕೆ ನಿಷೇಧ ! ತಮಿಳುನಾಡಿನ ಹಿಂದೂಗಳು ಸಂಘಟಿತ ಮತ್ತು ನ್ಯಾಯಯುತ ಮಾರ್ಗದಲ್ಲಿ ಇದರ ವಿರುದ್ಧ ಹೋರಾಡಬೇಕು ! – ಸಂಪಾದಕರು  

* ಹಿಂದೂ ದೇವಾಲಯಗಳ ಸರಕಾರಿಕರಣವನ್ನು ತಡೆಗಟ್ಟಲು ಕೇಂದ್ರ ಸರಕಾರವು ರಾಷ್ಟ್ರೀಯ ಮಟ್ಟದಲ್ಲಿ ಕಾನೂನನ್ನು ನಿರ್ಮಿಸುವ ಅವಶ್ಯಕತೆಯಿದೆ ! ಹಿಂದೂ ಮತಗಳ ಬಲದ ಮೇಲೆ ಅಧಿಕಾರ ಗಳಿಸಿ 7 ವರ್ಷಗಳಾದರೂ ಈ ದಿಕ್ಕಿನಲ್ಲಿ ಏನೂ ಪ್ರಯತ್ನವಾಗದಿರುವುದು ಹಿಂದೂಗಳಿಗೆ ಅಪೇಕ್ಷಿತವಿಲ್ಲ ! – ಸಂಪಾದಕರು 

ಮಲ್ಲಪುರಂ (ತಮಿಳುನಾಡು) – ತಮಿಳುನಾಡಿನ ಡಿಎಂಕೆ ಸರಕಾರವು ಹಲವಾರು ದೇವಾಲಯಗಳನ್ನು ಕಿತ್ತೊಗೆಯುವ ಪ್ರಕ್ರಿಯೆಯನ್ನು ಆರಂಭಿಸಿದೆ. ಈಗ ರಾಜ್ಯ ಸರಕಾರ ತಂಜಾವೂರು ಜಿಲ್ಲೆಯಲ್ಲಿರುವ ಮಲ್ಲಲಾಪುರಮ್‍ನ ಶ್ರೀತಲಸಾಯಾನಾ ಪೆರುಮಾಲ್ ದೇವಾಲಯದ ಬಳಿ ಶೌಚಾಲಯಗಳನ್ನು ನಿರ್ಮಿಸಲು ಯೋಜಿಸುತ್ತಿದೆ. ಈ ಶೌಚಾಲಯದಿಂದ ದೇವಾಲಯದ ಸುತ್ತಮುತ್ತ ಅಶುಚಿತ್ವದ ವಾತಾವರಣವು ಉಂಟಾಗಲಿದೆ ಮತ್ತು ದೇವಾಲಯದ ಪಾವಿತ್ರ್ಯವನ್ನು ಹಾಳುಮಾಡುತ್ತದೆ. ಭಕ್ತರ ಧಾರ್ಮಿಕ ಭಾವನೆಗಳಿಗೆ ನೋವಾಗಿರುವುದರಿಂದ ಶೌಚಾಲಯ ನಿರ್ಮಾಣದ ವಿರುದ್ಧ ಭಕ್ತರು ಪ್ರತಿಭಟನೆ ನಡೆಸಿದ್ದಾರೆ. ಈ ಸ್ಥಳದ ಪಂಚಾಯ್ತಿಯು ದೇವಾಲಯಕ್ಕೆ ಬರುವ ಭಕ್ತರ ಅನುಕೂಲಕ್ಕಾಗಿ ದೇವಸ್ಥಾನದ ಬಳಿ 6 ಶೌಚಾಲಯಗಳನ್ನು ನಿರ್ಮಿಸಲು 5 ಲಕ್ಷ ರೂಪಾಯಿ ಮೌಲ್ಯದ ಟೆಂಡರ್‍ಗಳನ್ನು ಆಹ್ವಾನಿಸಿದೆ. ‘ಹಿಂದೂ ರಿಲಿಜಿಯಸ್ ಆಂಡ್ ಚಾರಿಟೇಬಲ್ ಎಂಡೋಮೆಂಟ್’ ಖಾತೆಯು (ಹಿಂದೂ ದತ್ತಿ ಇಲಾಖೆ) ದೇವಸ್ಥಾನದಿಂದ ದೂರವಿರುವ ಸ್ಥಳದಲ್ಲಿ ಈ ಶೌಚಾಲಯಗಳನ್ನು ನಿರ್ಮಿಸದೇ ದೇವಸ್ಥಾನದ ಪಕ್ಕದಲ್ಲಿಯೇ ಶೌಚಾಲಯ ನಿರ್ಮಾಣವನ್ನು ಆರಂಭಿಸಿದೆ. ಸರಕಾರದ ಈ ಕ್ರಮವನ್ನು ವಿರೋಧಿಸಿ, ಸ್ಥಳೀಯರು ಮತ್ತು ಭಕ್ತರು ಶೌಚಾಲಯಗಳನ್ನು ದೇವಾಲಯದಿಂದ ದೂರ ನಿರ್ಮಿಸುವಂತೆ ಆಗ್ರಹಿಸಿದ್ದಾರೆ.

1. ದೇವಾಲಯದ ಪಕ್ಕದಲ್ಲಿ ಶೌಚಾಲಯಗಳನ್ನು ನಿರ್ಮಿಸುವುದರಿಂದ ಅಲ್ಲಿಂದ ಬರುವ ದುರ್ವಾಸನೆಯಿಂದಾಗಿ ದೇವಾಲಯದ ಪರಿಸರದ ಪಾವಿತ್ರ್ಯತೆ ನಾಶವಾಗುತ್ತದೆ ಅದೇ ರೀತಿ ದೇವಾಲಯದ ಪಕ್ಕದಲ್ಲಿರುವ ಬಾವಿಯ ಪವಿತ್ರ ನೀರನ್ನು ಸಹ ಕಲುಷಿತವಾಗಬಹುದು, ಎಂದು ಭಕ್ತರು ಹೇಳುತ್ತಾರೆ. ಈ ನಿರ್ಮಾಣಕ್ಕಾಗಿ ದೇವಾಲಯದ ಸುತ್ತಮುತ್ತಲಿನ ಅನೇಕ ಮರಗಳನ್ನು ಕಡಿಯಲಾಗಿದೆ. ಇದನ್ನು ಕೂಡಾ ಭಕ್ತರು ವಿರೋಧಿಸಿದ್ದಾರೆ.

2. ಶೌಚಾಲಯವನ್ನು ನಿರ್ಮಿಸಲು ಆಪ್ಷೇಪಿಸುತ್ತಾ ಸ್ಥಳೀಯರು ಮತ್ತು ಇತರ ಹಿಂದೂ ಭಕ್ತರು ಚೆಂಗಲಪಟ್ಟು ಜಿಲ್ಲೆಯ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದಾರೆ. ಅವರು ಈ ಮನವಿಯಲ್ಲಿ, “ಜಿಲ್ಲಾ ಧಿಕಾರಿ ವೈಯಕ್ತಿಕವಾಗಿ ಸ್ಥಳಕ್ಕೆ ಭೇಟಿ ನೀಡಬೇಕು ಮತ್ತು ಅವರ ಮಾರ್ಗದರ್ಶನದಲ್ಲಿ ದೇವಾಲಯಗಳು, ಪುರಾತನ ಬಾವಿಗಳು ಮತ್ತು ಕುಡಿಯುವ ನೀರಿನ ಟ್ಯಾಂಕ್‍ಗಳಿಂದ ದೂರದಲ್ಲಿ ಈ ಶೌಚಾಲಯವನ್ನು ನಿರ್ಮಿಸಬೇಕು. ಜಿಲ್ಲಾಧಿಕಾರಿಯು ಈ ಸುಧಾರಣೆಯನ್ನು ಮಾಡಿ ಈ ಪುರಾತನ ದೇವಾಲಯದ ಪಾವಿತ್ರ್ಯತೆಯನ್ನು ಕಾಪಾಡಲು ಮತ್ತು ದೇವಾಲಯದ ಸುತ್ತಲಿನ ಪ್ರಕೃತಿಯನ್ನು ಪುನಃಸ್ಥಾಪಿಸಲು ಸುಧಾರಣೆಗಳನ್ನು ಮಾಡಲಿದೆ ಎಂದು ನಾವು ಭಾವಿಸುತ್ತೇವೆ” ಎಮದು ಹೇಳಿದೆ.

3. ಮಲ್ಲಾಪುರಮ್ ಪಟ್ಟಣದ ಮಧ್ಯದಲ್ಲಿ ಶ್ರೀತಲಸಾಯಾನಾ ಪೆರುಮಲ್ ಈ ಪುರಾತನ ದೇವಾಲಯವಾಗಿದೆ. ಈ ಸ್ಥಳದಲ್ಲಿ ಅರ್ಜುನ ತಪಸ್ಸು ಮಾಡಿದ್ದರು. ವೈಷ್ಣವ ಪಂಥದ ಪ್ರಕಾರ ವಿವರಿಸಿದ 108 ದಿವ್ಯ ದೇಸಮ್(ಪವಿತ್ರ ಸ್ಥಳಗಳು) ಪೈಕಿ ಈ ದೇವಾಲಯ 63 ನೇ ದಿವ್ಯ ದೇಸಮ್ ಆಗಿದೆ.

4. ವೈಷ್ಣವ ಪಂಥದ ಪ್ರಕಾರ, ಭಗವಾನ ವಿಷ್ಣುವಿನ ಭಕ್ತಿಯನ್ನು ಮಾಡುವ ಸಂತರು ಈ ದಿವ್ಯ ದೇಸಮ್‍ಅನ್ನು ಹೇಳಿದ್ದಾರೆ. ಈ ಜನರಿಗೆ `ಅಝವಾರ್’ ಎಂಬ ಬಿರುದು ಇದೆ. ಅಂತಹ ಹನ್ನೆರಡು `ಅ ಝವಾರ್’ (ಸಂತರು) ಭಗವಾನ್ ವಿಷ್ಣುವಿನ 108 ದಿವ್ಯ ದೇಸಮ್‍ಗಳನ್ನು ಹೇಳಿದ್ದಾರೆ. ಇವುಗಳಲ್ಲಿ ಮಲ್ಲಲಾಪುರಮ್‍ನಲ್ಲಿನ ಶ್ರೀತಲಸಾಯಾನಾ ಪೆರುಮಲ್ ದೇವಾಲಯ ಅತ್ಯಂತ ಪವಿತ್ರ ತೀರ್ಥಸ್ಥಳವೆಂದು ಪರಿಗಣಿಸಲಾಗಿದೆ. ಈ ಸ್ಥಳದಲ್ಲಿ ಕೇವಲ ತಮಿಳುನಾಡು ಅಷ್ಟೇ ಅಲ್ಲ, ಭಾರತದಾದ್ಯಂತದ ಹಿಂದೂ ಭಕ್ತರು ದರ್ಶನಕ್ಕಾಗಿ ಬರುತ್ತಾರೆ.