ಬೇಸಿಗೆ ಕಾಲದಲ್ಲಿ ನ್ಯಾಯಾಲಯಗಳಲ್ಲಿ ನ್ಯಾಯವಾದಿಗಳು ಕಪ್ಪು ಕೋಟು ಹಾಕುವುದು ಕಡ್ಡಾಯ ಮಾಡಬಾರದೆಂದು ಸರ್ವೋಚ್ಚ ನ್ಯಾಯಾಲಯದಲ್ಲಿ ಅರ್ಜಿ

  • ಇಂತಹ ಮನವಿ ಮಾಡಬೇಕಾಗುತ್ತದೆ ಎಂಬುದೇ ನಾಚಿಕೆಗೇಡಿನ ವಿಷಯ ! ಭಾರತದ ಹವಾಮಾನ ಮತ್ತು ಕಪ್ಪು ಕೋಟು ಒಂದುಕ್ಕೊಂದು ಪೂರಕವಿಲ್ಲ, ಈ ನಿಯಮವನ್ನು ಇಷ್ಟರೊಳಗೆ ರದ್ದು ಮಾಡಬೇಕಾಗಿತ್ತು. ಅದನ್ನು ಮಾಡದಿರುವುದು ಮೂರ್ಖತನವೇ ಆಗಿದೆ ! – ಸಂಪಾದಕರು

  • ಬ್ರಿಟಿಷರ ನಿಯಮಗಳಿಗನುಸಾರ ನಡೆಸಲಾಗುವ ಭಾರತೀಯ ವ್ಯವಸ್ಥೆಯು ಎಲ್ಲ ಪಕ್ಷಗಳ ಆಡಳಿತಗಾರರಿಗೆ ನಾಚಿಕೆಯ ಸಂಗತಿಯಾಗಿದೆ ! – ಸಂಪಾದಕೀಯ

ನವದೆಹಲಿ – ದೇಶದಲ್ಲಿನ ನ್ಯಾಯಾಲಯಗಳಲ್ಲಿ ಬೇಸಿಗೆ ಕಾಲಕ್ಕೆ ಕಪ್ಪು ಕೋಟು ಹಾಕದಿರಲು ಸವಲತ್ತು ಕೊಡಬೇಕು, ಎಂದು ಸರ್ವೋಚ್ಚ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಲಾಗಿದೆ. ‘ಬೇಸಿಗೆಯ ಕಾಲದಲ್ಲಿ ಕಪ್ಪು ಕೋಟು ಹಾಕಿಕೊಂಡು ನ್ಯಾಯಾಲಯದ ಕೆಲಸ ಮಾಡಲು ಅತ್ಯಂತ ಕಠಿಣವಾಗುತ್ತದೆ. ಆದ್ದರಿಂದ ರಾಜ್ಯ ಬಾರ ಕೌನ್ಸಲಿಂಗಗೆ ಈ ಬಗ್ಗೆ ಆದೇಶ ಕೊಡಬೇಕು’, ಎಂದು ಒತ್ತಾಯಿಸಲಾಗಿದೆ. ನ್ಯಾಯವಾದಿ ಶೈಲೆಂದ್ರ ಮಣಿ ತ್ರಿಪಾಠಿ ಇವರು ಈ ಅರ್ಜಿಯನ್ನು ಸಲ್ಲಿಸಿದ್ದಾರೆ.

ಅಡ್ವೊಕೇಟ್ ಆಕ್ಟ್ ೧೯೬೧ ಕ್ಕನುಸಾರ ಬಾರ್ ಕೌನ್ಸಿಲ್ ಇನ್ ಆಫ್ ಇಂಡಿಯಾದ ನಿಯಮಕ್ಕನುಸಾರ ನ್ಯಾಯಾಲಯದ ನ್ಯಾಯವಾದಿಗಳಿಗೆ ಡ್ರೆಸ್ ಕೋಡ್ ಇದೆ. ಅದರಲ್ಲಿ ನ್ಯಾಯಾಲಯದಲ್ಲಿ ನ್ಯಾಯವಾದಿಗಳು ಕಪ್ಪು ಕೋಟು, ಬಿಳಿ ಶರ್ಟು ಮತ್ತು ಕತ್ತಿನಲ್ಲಿ ಬಿಳಿಯ ಪಟ್ಟಿ ಕಟ್ಟಿಕೊಳ್ಳುವುದು ಆವಶ್ಯಕವಾಗಿದೆ. ಕಪ್ಪುಗೌನಅನ್ನು ಉಚ್ಚ ಮತ್ತು ಸರ್ವೋಚ್ಚ ನ್ಯಾಯಾಲಯದಲ್ಲಿ ಹಾಕಿಕೊಳ್ಳಬೇಕು.