ಮಥುರಾದಲ್ಲಿ ಮದ್ಯ ಹಾಗೂ ಮಾಂಸ ಮಾರಾಟದ ಮೇಲೆ ಸರಕಾರದಿಂದ ನಿರ್ಬಂಧ

ಆ ಉದ್ಯಮದವರು ಹಾಲು ಮಾರಾಟ ಮಾಡಲಿ ! ಮುಖ್ಯಮಂತ್ರಿ ಯೋಗಿ ಆದಿತ್ಯನಾಥರ ಸಲಹೆ

ದೇಶದಲ್ಲಿ ಪ್ರತಿಯೊಂದು ತೀರ್ಥಸ್ಥಾನದಲ್ಲಿಯೂ ಈ ರೀತಿ ನಿರ್ಬಂಧ ಹೇರುವ ಆದೇಶವನ್ನು ಕೇಂದ್ರ ಸರಕಾರವು ನೀಡಲಿ ಎಂದು ಹಿಂದೂಗಳಿಗೆ ಅನಿಸುತ್ತದೆ ! ಉತ್ತರಪ್ರದೇಶ ಸರಕಾರಕ್ಕೆ ಮಾಡಲು ಸಾಧ್ಯವಿರುವಂತಹ ವಿಷಯವು ಕೇಂದ್ರ ಸರಕಾರಕ್ಕೆ, ಹಾಗೂ ಅನ್ಯ ಭಾಜಪ ಆಡಳಿತವಿರುವ ರಾಜ್ಯಗಳಿಗೂ ಸಹಜವಾಗಿ ಸಾಧ್ಯವಿದೆ, ಎಂಬುದರಲ್ಲಿ ಅನುಮಾನವೇ ಇಲ್ಲ !

ಮಥುರಾ (ಉತ್ತರಪ್ರದೇಶ) – ಉತ್ತರಪ್ರದೇಶದ ಮುಖ್ಯಮಂತ್ರಿಗಳಾದ ಯೋಗಿ ಆದಿತ್ಯನಾಥರು ಮಥುರಾದಲ್ಲಿ ಮಧ್ಯ ಹಾಗೂ ಮಾಂಸದ ಮಾರಾಟದ ಮೇಲೆ ಸಂಪೂರ್ಣವಾಗಿ ನಿರ್ಬಂಧ ಹೇರುವಂತೆ ಆದೇಶ ನೀಡಿದ್ದಾರೆ. ಆಗಸ್ಟ್ ೩೦ ರಿಂದ ಈ ಆದೇಶವು ಅನ್ವಯವಾಗಲಿದೆ. ಮುಖ್ಯಮಂತ್ರಿ ಯೋಗಿ ಆದಿತ್ಯನಾಥರು ಇಲ್ಲಿ ‘ಕೃಷ್ಣೋತ್ಸವ ೨೦೨೧ ಎಂಬ ಶ್ರೀಕೃಷ್ಣ ಜಯಂತಿಯ ನಿಮಿತ್ತ ಆಯೋಜಿಸಲಾದ ವಿಶೇಷ ಕಾರ್ಯಕ್ರಮದಲ್ಲಿ ಈ ಮಾಹಿತಿಯನ್ನು ನೀಡಿದರು.

೧. ತಮ್ಮ ಭಾಷಣದಲ್ಲಿ ಯೋಗಿ ಆದಿತ್ಯನಾಥರು ಮುಂದಿನಂತೆ ನುಡಿದರು, ಮಾಂಸ ಹಾಗೂ ಮಧ್ಯದ ಅಂಗಡಿಗಳಿರುವವರು ಈಗ ಹಾಲು ಮಾರಾಟ ಮಾಡಿ ಮಥುರೆಗೆ ಮತ್ತೊಮ್ಮೆ ಹಳೆಯ ಪರಿಚಯ ಮಾಡಿಕೊಡಲಿ. ಮಥುರೆಯು ಹಿಂದೆ ಉತ್ತಮ ಮಟ್ಟದ ಹಾಲು ಉತ್ಪಾದಕ ನಗರವೆಂದು ಗುರುತಿಸಲ್ಪಡುತ್ತಿತ್ತು.

೨. ಯೋಗಿ ಆದಿತ್ಯನಾಥರು ಭಗವಾನ್ ಶ್ರೀಕೃಷ್ಣನ ಬಳಿ ಕೊರೊನಾ ವೈರಾಣುವನ್ನು ನಾಶ ಮಾಡಲು ಪ್ರಾರ್ಥನೆ ಮಾಡಿದರು. (ಎಷ್ಟು ಆಡಳಿತಗಾರರು ಈ ರೀತಿಯ ಪ್ರಾರ್ಥನೆ ಮಾಡುತ್ತಾರೆ ? – ಸಂಪಾದಕರು) ‘ನಾವು ಆಧುನಿಕ ತಂತ್ರಜ್ಞಾನ ಹಾಗೂ ಸಂಸ್ಕೃತಿ, ಹಾಗೂ ಅಧ್ಯಾತ್ಮದ ಸುಗಮ ಸಂಗಮ ಮಾಡಿ ಮಥುರೆಯ ಈ ಬೃಜ ಪ್ರದೇಶವನ್ನು ವಿಕಾಸಗೊಳಿಸಲು ಪ್ರಯತ್ನಿಸಲಿದ್ದೇವೆ, ಎಂದು ಯೋಗಿ ಆದಿತ್ಯನಾಥರು ಹೇಳಿದರು.