ಬೆಂಗಳೂರು : ಹಿಂದೂ ಜನಜಾಗೃತಿ ಸಮಿತಿಯವತಿಯಿಂದ ಆಗಸ್ಟ್ ೧೫ ರಂದು ಅಂದರೆ ಸ್ವಾತಂತ್ರ್ಯ ದಿನದ ನಿಮಿತ್ತ ‘ರಾಷ್ಟ್ರಧ್ವಜದ ಗೌರವ ಕಾಪಾಡಿ !’ ಈ ಅಭಿಯಾನವನ್ನು ರಾಜ್ಯಾದ್ಯಂತ ನಡೆಸಲಾಯಿತು. ಅದಕ್ಕೆ ಅತ್ಯುತ್ತಮ ಬೆಂಬಲ ಸಿಕ್ಕಿತು. ಅದೇ ರೀತಿ ಈ ಅಭಿಯಾನವನ್ನು ವಿವಿಧ ಮಾರ್ಗಗಳಿಂದ ಪ್ರಸಾರ ಮಾಡಲಾಯಿತು. ಆ ಕುರಿತಾದ ಮಾಹಿತಿಯನ್ನು ಇಲ್ಲಿ ನೀಡುತ್ತಿದ್ದೇವೆ.
೧. ಪ್ಲಾಸ್ಟಿಕಿನ ರಾಷ್ಟ್ರಧ್ವಜದ ಬಳಕೆಯನ್ನು ನಿಷೇಧಿಸಲು ಆಡಳಿತಕ್ಕೆ ಮನವಿ : ಪ್ಲಾಸ್ಟಿಕಿನ ರಾಷ್ಟ್ರಧ್ವಜದ ಬಳಕೆಯನ್ನು ನಿಷೇಧಿಸಬೇಕು ಮತ್ತು ಅದರ ಗೌರವ ಕಾಪಾಡಬೇಕೆಂದು ಕಠಿಣ ಕಾನೂನು ಕ್ರಮಕೈಗೊಳ್ಳಬೇಕು, ಎಂಬುದಕ್ಕಾಗಿ ಹಿಂದೂ ಜನಜಾಗೃತಿ ಸಮಿತಿ ಸಹಿತ ಇತರ ಹಿಂದುತ್ವನಿಷ್ಠ ಸಂಘಟನೆಗಳೊಂದಿಗೆ ಸೇರಿ ಸರಕಾರಕ್ಕೆ ಮನವಿನೀಡಲಾಯಿತು. ಬೆಳಗಾವಿ, ಧಾರವಾಡ, ದಕ್ಷಿಣ ಕನ್ನಡ, ಬೆಂಗಳೂರು ಸೇರಿದಂತೆ ರಾಜ್ಯದ ಅನೇಕ ಜಿಲ್ಲೆಗಳಲ್ಲಿ ಸುಮಾರು ೧೯ ಜಿಲ್ಲಾಧಿಕಾರಿಗಳಿಗೆ, ೩೪ ತಹಶೀಲ್ದಾರರಿಗೆ, ೨೩ ಪೊಲೀಸ್ ಅಧಿಕಾರಿಗಳಿಗೆ ಕೆಲವು ಮಹಾನಗರಪಾಲಿಕೆ ಮತ್ತು ನಗರಸಭೆಗಳಿಗೆ ಮನವಿಯನ್ನು ನೀಡಲಾಯಿತು. ಅಲ್ಲದೇ ೧೦ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಮತ್ತು ೬೪ ಶಾಲಾ-ಕಾಲೇಜುಗಳಿಗೆ ಮನವಿಯನ್ನು ನೀಡಲಾಯಿತು.
೨. ‘ಆನ್‌ಲೈನ್ ಸಭೆ’ಗಳ ಆಯೋಜನೆ : ಸಮಿತಿಯವತಿಯಿಂದ ಇಡೀ ರಾಜ್ಯದಿಂದ ಸುಮಾರು ೧೧ ಕ್ಕೂ ಅಧಿಕ ಹಿಂದುತ್ವನಿಷ್ಠ ಸಂಘಟನೆಗಳ ಸಹಯೋಗದೊಂದಿಗೆ ಸುಮಾರು ೯ ಕ್ಕೂ ಅಧಿಕ ‘ಅನ್‌ಲೈನ್ ಸಭೆ’ಗಳ ಆಯೋಜನೆಯನ್ನು ಮಾಡಲಾಯಿತು. ಇದರಲ್ಲಿ ರಾಜ್ಯದ ಅನೇಕ ಧರ್ಮಪ್ರೇಮಿಗಳು ಅತ್ಯುತ್ತಮವಾಗಿ ಸ್ಪಂದಿಸಿದರು. ಅದೇ ರೀತಿ ಈ ಸಭೆಯ ನಂತರ ‘ರಾಷ್ಟ್ರಧ್ವಜದ ಗೌರವ ಕಾಪಾಡಿ !’ ಅಭಿಯಾನದಲ್ಲಿ ಎಲ್ಲರೂ ಸ್ವಯಂಸ್ಫೂರ್ತಿಯಿಂದ ಸಕ್ರಿಯವಾಗಿ ಪಾಲ್ಗೊಂಡರು.
೩. ಧರ್ಮಪ್ರೇಮಿಗಳು ಹಾಗೂ ಶಾಲಾ-ಮಹಾವಿದ್ಯಾಲಯಗಳಲ್ಲಿ ‘ಆನ್‌ಲೈನ್’ ವ್ಯಾಖ್ಯಾನ : ಸಮಿತಿಯು ರಾಜ್ಯಾದ್ಯಂತ ಸಮಾಜದ ಧರ್ಮಪ್ರೇಮಿಗಳಿಗೆ ಮತ್ತು ಶಾಲಾ-ಮಹಾವಿದ್ಯಾಲಯಗಳಲ್ಲಿ ರಾಷ್ಟ್ರಧ್ವಜದ ಗೌರವ ಕಾಪಾಡುವ ಮಹತ್ವವನ್ನು ತಿಳಿಸಲು ವ್ಯಾಖ್ಯಾನಗಳನ್ನು ಆಯೋಜಿಸಲಾಯಿತು. ಧರ್ಮಪ್ರೇಮಿಗಳಿಗಾಗಿ ಸುಮಾರು ೩೬ ಕ್ಕೂ ಅಧಿಕ ಆನ್‌ಲೈನ್ ಪ್ರವಚನಗಳ ಆಯೋಜನೆಯನ್ನು ಮಾಡಲಾಯಿತು. ಅಲ್ಲದೇ ೩೮೮ ಮತ್ತು ೪೨ ಶಾಲಾಕಾಲೇಜುಗಳಲ್ಲಿನ ‘ಆನ್‌ಲೈನ್’ ತರಗತಿಗಳ ಮೂಲಕ ೧ ಸಾವಿರದ ೩೦೯ ವಿದ್ಯಾರ್ಥಿಗಳಿಗೆ ರಾಷ್ಟ್ರಧ್ವಜದ ಗೌರವ ಕಾಪಾಡುವುದರ ಮಹತ್ವ ತಿಳಿಸಲಾಯಿತು.
೪. ಧರ್ಮಶಿಕ್ಷಣ ಫಲಕಗಳ ಮೂಲಕ ಪ್ರಸಾರ ರಾಜ್ಯಾದ್ಯಂತದ ಸಮಿತಿಯ ೨೧೪ ಕ್ಕೂ ಹೆಚ್ಚು ಫಲಕಗಳಲ್ಲಿ ರಾಷ್ಟ್ರಧ್ವಜದ ಗೌರವ ಕಾಪಾಡುವುದರ ವಿಷಯವನ್ನು ಬರೆಯಲಾಯಿತು.
೫. ರಾಜ್ಯಮಟ್ಟದ ದಿನಪತ್ರಿಕೆ, ಯೂಟ್ಯೂಬ್ ಮತ್ತು ದೂರಚಿತ್ರವಾಹಿನಿಗಳ ಮೂಲಕ ಪ್ರಸಾರ : ರಾಷ್ಟ್ರಧ್ವಜದ ಗೌರವ ಕಾಪಾಡುವ ಕುರಿತಾಗಿ ಸಮಿತಿಯು ನೀಡಿದ ಲೇಖನಗಳಿಗೆ ೩೭ ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮತ್ತು ರಾಜ್ಯಮಟ್ಟದ ದಿನಪತ್ರಿಕೆಗಳಲ್ಲಿ ಪ್ರಸಿದ್ಧಿ ನೀಡಲಾಯಿತು. ೧೦ ಯು-ಟ್ಯೂಬ್ ಮತ್ತು ದೂರಚಿತ್ರವಾಹಿನಿಗಳಲ್ಲಿ ‘ರಾಷ್ಟ್ರಧ್ವಜದ ಗೌರವ ಕಾಪಾಡಿ !’ ಈ ವಿಷಯದ ವಿಡಿಯೋ ಪ್ರಸಾರ ಮಾಡಲಾಯಿತು.
೬. ಸಾಮಾಜಿಕ ಮಾಧ್ಯಮಗಳ ಮೂಲಕ ೧ ಲಕ್ಷ ೫೧ ಸಾವಿರದ ೩೭೧ ಜನರವರೆಗೆ ರಾಷ್ಟ್ರಧ್ವಜದ ಗೌರವ ಕಾಪಾಡುವ ವಿಷಯದಲ್ಲಿ ಲೇಖನ ಬರೆದು ವ್ಯಾಪಕ ಪ್ರಸಾರ ಮಾಡಲಾಯಿತು.
ಗಮನಾರ್ಹ ಅಂಶಗಳು
೧. ಮೈಸೂರು ಪೊಲೀಸ್ ಆಯುಕ್ತರಿಗೆ ಮನವಿಯನ್ನು ನೀಡಿದಾಗ ಅವರು ಸಮಿತಿಯ ಕಾರ್ಯಕರ್ತರಿಗೆ ಕುಳಿತುಕೊಳ್ಳಲು ಹೇಳಿ ಮನವಿಯನ್ನು ಓದಿದರು. ಅದನ್ನು ಓದಿದ ಅವರು ‘ಮನವಿ ಒಳ್ಳೆಯದಿದೆ ಮತ್ತು ಈ ತರಹದ ಜಾಗೃತಿ ಮೂಡಿಸುವುದು ಅಗತ್ಯವಿದೆ. ನೀವು ಈ ಕಾರ್ಯ ಮಾಡುತ್ತಿದ್ದೀರಿ. ನಿಮಗೆ ಅಭಿನಂದನೆ !” ಎಂದು ತಿಳಿಸಿದರು. ಅನಂತರ ಅವರು ತಕ್ಷಣವೇ ತಮ್ಮ ಆಪ್ತಸಹಾಯಕರನ್ನು ಕರೆದು ಮನವಿಗನುಸಾರ ತಕ್ಷಣವೇ ಕೃತಿಯನ್ನು ಮಾಡಬೇಕು ಎಂದು ಆದೇಶವನ್ನು ನೀಡಿದರು
೨. ದಕ್ಷಿಣಕನ್ನಡ ಜಿಲ್ಲೆಯಲ್ಲಿ ಓರ್ವ ಧರ್ಮಪ್ರೇಮಿಗಳು ನಮ್ಮ ಪರಿಚಯದ ಶಿಕ್ಷಕರಿಗೆ ಸ್ವಾತಂತ್ರ್ಯ ದಿನಾಚರಣೆಯ ಮಹತ್ವವನ್ನು ಹೇಳಿದಾಗ ಅವರು ೨ ‘ಆನ್‌ಲೈನ್’ ವ್ಯಾಖ್ಯಾನಗಳಿಗಾಗಿ ಆಮಂತ್ರಿಸಿದರು. ಈ ಮೂಲಕವೂ ಅನೇಕ ವಿದ್ಯಾರ್ಥಿಗಳಿಗೆ, ಪಾಲಕರಿಗೆ ಮತ್ತು ಶಿಕ್ಷಕರಿಗೆ ಸ್ವಾತಂತ್ರ್ಯದಿನ ಮತ್ತು ನಾಮಜಪ ಇವುಗಳ ಮಹತ್ವ ತಿಳಿಸಲಾಯಿತು. ಈ ಸಮಯದಲ್ಲಿ ಕೆಲವು ಪಾಲಕರು ‘ನಮಗೆ ಮತ್ತು ನಮ್ಮ ಮಕ್ಕಳಿಗೆ ಧರ್ಮಶಿಕ್ಷಣ ಬೇಕು’, ಎಂದು ಆಗ್ರಹಿಸಿದರು.
೩. ಉಡುಪಿಯಲ್ಲಿ ಆಗಸ್ಟ್ ೧೫ ರ ಅಭಿಯಾನ ಸಂದರ್ಭದಲ್ಲಿ ಧರ್ಮಭಿಮಾನಿಗಳಿಗೆ ಸೇರಿಸಿ ‘ಆನ್‌ಲೈನ್’ ಸಭೆ ಮಾಡಲಾಯಿತು. ಅನಂತರ ೧೩ ಧರ್ಮಭಿಮಾನಿಗಳು ಸ್ವತಃ ನಿಯೋಜನೆ ಮಾಡಿ ಕೊಂಡು ಪೊಲೀಸರು, ತಹಶೀಲ್ದಾರರು, ಶಿಕ್ಷಣಾಧಿಕಾರಿಗಳು ಮತ್ತು ಶಾಲಾ-ಮಹಾವಿದ್ಯಾಲಗಳಿಗೆ ಮನವಿ ನೀಡಿದರು ಮತ್ತು ಶಾಲಾ ವಿದ್ಯಾರ್ಥಿಗಳಿಗಾಗಿ ಪ್ರವಚನವನ್ನು ನಿಯೋಜನೆ ಮಾಡಿದರು.
೪. ತುಮಕೂರಿನಲ್ಲಿ ಸಾಧನೆ ಸತ್ಸಂಗಕ್ಕೆ ಬರುವ ಧರ್ಮಪ್ರೇಮಿ ಶಿಕ್ಷಕಿಯೊಬ್ಬರು ತಮ್ಮ ಶಾಲೆಯಲ್ಲಿ ‘ಆನ್‌ಲೈನ್’ ಮೂಲಕ ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ಪ್ರವಚನದ ಆಯೋಜನೆ ಮಾಡಿದರು. ಇದಕ್ಕೆ ವಿದ್ಯಾರ್ಥಿಗಳಿಂದ ಅತ್ಯುತ್ತಮ ಬೆಂಬಲ ದೊರಕಿತು. ಈ ಸಮಯದಲ್ಲಿ ಕೆಲವು ಶಿಕ್ಷಕರು ‘ಯಾವುದೇ ಹಬ್ಬಹರಿದಿನ ಬಂದರು ನಮಗೆ ಮತ್ತು ಮಕ್ಕಳಿಗೂ ಆನ್‌ಲೈನ್ ಮೂಲಕ ಪ್ರವಚನ ನೀಡಬೇಕು’, ಎಂದು ಕೇಳಿಕೊಂಡರು.
೫. ‘ಅಖಿಲ ಭಾರತ ಗ್ರಾಹಕ ಪಂಚಾಯತ’ ಎನ್ನುವ ಸಂಘಟನೆಯವರು ಸಂಘಟನೆಯ ಸದಸ್ಯರಿಗೆ ‘ರಾಷ್ಟ್ರ ಧ್ವಜದ ಗೌರವ ಹೇಗೆ ಕಾಪಾಡುವುದು’ ಎಂಬುದರ ಬಗ್ಗೆ ವ್ಯಾಖ್ಯಾನದ ಆಯೋಜನೆ ಮಾಡಿದರು.
೬. ಬೆಂಗಳೂರು ಶ್ರೀ ಮಹಾಗಣಪತಿ ನಗರದ ‘ವಂದೇ ಮಾತರಂ ಸೇವಾ ಸಮಾಜ’ದ ಸಂಘಟನೆಯವರು ಹಿಂದೂ ಜನಜಾಗೃತಿ ಸಮಿತಿಯ ಕಾರ್ಯಕರ್ತರ ಮೂಲಕ ಧ್ವಜಾರೋಹಣ ಮಾಡಿಸಿದರು. ಈ ಸಂದರ್ಭದಲ್ಲಿ ಸಮಿತಿಯ ಕಾರ್ಯಕರ್ತರು ‘ಹಿಂದೂ ರಾಷ್ಟ್ರ’ ಬಗ್ಗೆ ವ್ಯಾಖ್ಯಾನ ನೀಡಿದರು. ಇದರಲ್ಲಿ ವಂದೇ ಮಾತರಂ ಸೇವಾ ಸಮಾಜ’ದ ೫೦ ಸದಸ್ಯರು ಸಹಭಾಗಿಯಾಗಿದ್ದರು.