ಶ್ರೀಕೃಷ್ಣ ಜಯಂತಿಯ ನಿಮಿತ್ತ ಶ್ರೀನಗರದಲ್ಲಿ ನಡೆಸಲಾದ ಮೆರವಣಿಗೆ !

ಅನುಚ್ಛೇದ ೩೭೦ ತೆಗೆದುಹಾಕಿದ ನಂತರ ಪ್ರಥಮ ಬಾರಿಗೆ ಮೆರವಣಿಗೆಯ ಆಯೋಜನೆ

ಶ್ರೀನಗರ (ಜಮ್ಮು – ಕಾಶ್ಮೀರ) – ನಗರದಲ್ಲಿ ಶ್ರೀಕೃಷ್ಣ ಜಯಂತಿಯ ನಿಮಿತ್ತ ಮೆರವಣಿಗೆಯನ್ನು ನಡೆಸಲಾಯಿತು. ಆ ಮೆರವಣಿಗೆಯಲ್ಲಿ ವಿವಿಧ ಚಿತ್ರ ರಥಗಳು ಇದ್ದವು. ಇಂತಹ ಮೆರವಣಿಗೆಯಲ್ಲಿ ದೊಡ್ಡ ಪ್ರಮಾಣದಲ್ಲಿ ಹಿಂದೂಗಳು ಸಹಭಾಗಿಯಾಗಿದ್ದರು. ಅನುಚ್ಛೇದ ೩೭೦ ರದ್ದಾದ ನಂತರ ಹಿಂದೂಗಳು ಪ್ರಥಮ ಬಾರಿಗೆ ಶ್ರೀಕೃಷ್ಣ ಜಯಂತಿಯ ನಿಮಿತ್ತ ಇಷ್ಟು ದೊಡ್ಡ ಪ್ರಮಾಣದಲ್ಲಿ ಲಾಲ್ ಚೌಕ್ ನಲ್ಲಿ ಮೆರವಣಿಗೆ ನಡೆಸಿದರು. ಆ ಸಮಯದಲ್ಲಿ ಭದ್ರತಾ ದಳದಿಂದ ಸಂರಕ್ಷಣೆಯನ್ನು ಸಹ ಒದಗಿಸಲಾಗಿತ್ತು. ನಗರದ ಹಬ್ಬಾ ಕದಲ್ ಸ್ಥಳದಿಂದ ಹೊರಟಿದ್ದ ಈ ಮೆರವಣಿಗೆಯು ಗಣಪತಿಯಾರ ಮಂದಿರ ಮಾರ್ಗವಾಗಿ ಲಾಲ್ ಚೌಕಕ್ಕೆ ತಲುಪಿತು ಮತ್ತು ನಂತರ ಅದೇ ಮಂದಿರದ ಕಡೆಗೆ ಹಿಂತಿರುಗಿತು. ಮೆರವಣಿಗೆಯಲ್ಲಿ ಪುರುಷರು, ಸ್ತ್ರೀಯರು ಹಾಗೂ ಮಕ್ಕಳು ಸಹಭಾಗಿಯಾಗಿದ್ದರು. ಮೆರವಣಿಗೆಯಲ್ಲಿ ನೃತ್ಯವನ್ನು ಮಾಡಲಾಯಿತು ಹಾಗೂ ಜನರಿಗೆ ಸಿಹಿಯನ್ನು ಹಂಚಲಾಯಿತು.